News Kadaba Desk

ನೆಟ್ಟಣ: ಕುಸಿದು ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಫೆ.13. ಕೂಲಿ‌ಕೆಲಸದ ನಿಮಿತ್ತ ಜಿಲ್ಲೆಗೆ ಆಗಮಿಸಿ ಟೆಂಟ್ ಹಾಕಿ ವಾಸ್ತವ್ಯವಿದ್ದ ವ್ಯಕ್ತಿಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ನೆಟ್ಟಣದಲ್ಲಿ ಮಂಗಳವಾರದಂದು ನಡೆದಿದೆ. ಮೃತರನ್ನು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹಳಗೂಡು ಹೋಬಳಿ ನಿವಾಸಿ ಮನೋಹರ್(80) ಎಂದು ಗುರುತಿಸಲಾಗಿದೆ. ಇವರು ತನ್ನ ಕುಟುಂಬಿಕರೊಂದಿಗೆ ನೆಟ್ಟಣದಲ್ಲಿ ಟೆಂಟ್ ಹಾಕಿ ವಾಸ್ತವ್ಯದಲ್ಲಿದ್ದು, ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆನ್ನಲಾಗಿದೆ. ಮಂಗಳವಾರದಂದು ಕುಸಿದು ಬಿದ್ದ ಅವರನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು. ಈ ಬಗ್ಗೆ […]

ನೆಟ್ಟಣ: ಕುಸಿದು ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ

ರಾಜ್ಯದ ಆರೂವರೆ ಕೋಟಿ ಜನರು ನನ್ನ ಆಸ್ತಿಯಾಗಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ► ದೇಶದ ಆರನೇ ಶ್ರೀಮಂತ ಮುಖ್ಯಮಂತ್ರಿ ಎಂಬ ಸಮೀಕ್ಷೆಗೆ ಪ್ರತ್ಯುತ್ತರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.13. ನಾನು ದೇಶದ ಆರನೇ ಶ್ರೀಮಂತ ಮುಖ್ಯಮಂತ್ರಿಯಾಗಿದ್ದು, 13 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದೇನೆ ಎಂದು ಸಮೀಕ್ಷೆಯೊಂದು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮದು ಅವಿಭಕ್ತ ಕುಟುಂಬವಾಗಿದ್ದು, ಒಟ್ಟು ಆಸ್ತಿಯ ಲೆಕ್ಕ ಇದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅವಿಭಕ್ತ ಕುಟುಂಬದ ಒಟ್ಟು ಆಸ್ತಿಯನ್ನು ಘೋಷಿಸಿದ್ದೆ. ಅಣ್ಣ ತಮ್ಮಂದಿರ ಎಲ್ಲ ಆಸ್ತಿಯ ವಿವರವನ್ನೂ ಚುನಾವಣೆ ಆಯೋಗಕ್ಕೆ ಸಲ್ಲಿಸಲಾಗಿತ್ತು. ಅಣ್ಣನ ನಿಧನದ ಬಳಿಕ ನಾನೇ ಮನೆಯ ಯಜಮಾನನಾಗಿದ್ದು, ಈಗ ಕುಟುಂಬದ

ರಾಜ್ಯದ ಆರೂವರೆ ಕೋಟಿ ಜನರು ನನ್ನ ಆಸ್ತಿಯಾಗಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ► ದೇಶದ ಆರನೇ ಶ್ರೀಮಂತ ಮುಖ್ಯಮಂತ್ರಿ ಎಂಬ ಸಮೀಕ್ಷೆಗೆ ಪ್ರತ್ಯುತ್ತರ Read More »

ಕರ್ನಾಟಕ

ಪದವು: ಕುಮಾರಧಾರಾ ನದಿಗೆ ಸ್ನಾನಕ್ಕಿಳಿದು ಸುಸ್ತಾದ 8 ಮಂದಿ ಬಾಲಕರನ್ನು ರಕ್ಷಿಸಿದ ಸ್ಥಳೀಯರು ► ಊರವರ ಸಮಯಪ್ರಜ್ಞೆಯಿಂದಾಗಿ ತಪ್ಪಿತು ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com ಕಡಬ, ಫೆ.13. ಸ್ನಾನಕ್ಕೆಂದು ನದಿಗೆ ಇಳಿದಿದ್ದ ಎಂಟು ಮಂದಿ ಬಾಲಕರು ಹಿಂತಿರುಗಿ ಬರಲಾಗದೆ ಒದ್ದಾಡುತ್ತಿದ್ದಾಗ ಸ್ಥಳೀಯರು ರಕ್ಷಿಸಿದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದ ಘಟನೆ ಮಂಗಳವಾರದಂದು ಕುಂತೂರಿನಲ್ಲಿ ನಡೆದಿದೆ. ಹತ್ತನೇ ತರಗತಿಯ ಎಂಟು ಮಂದಿ ಬಾಲಕರು ಸ್ನಾನ ಮಾಡುವ ಸಲುವಾಗಿ ಪದವು ಸಮೀಪದ ಉರುಂಬಿ ಎಂಬಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಗೆ‌ ಇಳಿದಿದ್ದರು. ನದಿ ನೀರಿನಲ್ಲಿ ಆಟವಾಡುತ್ತಾ ಮುಂದೆ ಸಾಗಿದ ಬಾಲಕರು ನದಿಯ ಮಧ್ಯ ಭಾಗಕ್ಕೆ ತಲುಪಿದಾಗ ಸುಸ್ತಾಗಿದ್ದು, ಈಜುವ ಪರಿಸ್ಥಿತಿಯಲ್ಲಿ ಇರಲಿಲ್ಲವೆನ್ನಲಾಗಿದೆ. ಇವರು

ಪದವು: ಕುಮಾರಧಾರಾ ನದಿಗೆ ಸ್ನಾನಕ್ಕಿಳಿದು ಸುಸ್ತಾದ 8 ಮಂದಿ ಬಾಲಕರನ್ನು ರಕ್ಷಿಸಿದ ಸ್ಥಳೀಯರು ► ಊರವರ ಸಮಯಪ್ರಜ್ಞೆಯಿಂದಾಗಿ ತಪ್ಪಿತು ಭಾರೀ ಅನಾಹುತ Read More »

ಕರಾವಳಿ

ಅರಂತೋಡು: ಶಾಲಾ ಬಸ್ ಢಿಕ್ಕಿ ಹೊಡೆದು 6 ವರ್ಷದ ಬಾಲಕಿ ಮೃತ್ಯು ► ಬಸ್ಸಿನಿಂದ ಇಳಿದು ಟಿಫಿನ್ ಪಡೆಯುತ್ತಿದ್ದಾಗ ಘಟನೆ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ.13. ಶಾಲಾ ಬಸ್ಸೊಂದು ಢಿಕ್ಕಿ ಹೊಡೆದು ಆರು ವರ್ಷ ವಯಸ್ಸಿನ ಬಾಲಕಿ ಮೃತಪಟ್ಟ ಘಟನೆ ಸುಳ್ಯ ಸಮೀಪದ ಅರಂತೋಡಿನಲ್ಲಿ ಸೋಮವಾರ ಸಂಜೆ ನಡೆದಿದೆ. ಮೃತ ಬಾಲಕಿಯನ್ನು ಸುಳ್ಯ ತಾಲೂಕು ಅರಂತೋಡು ಗ್ರಾಮದ ಬಿಳಿಯಾರು ನಿವಾಸಿ ಅಪ್ಪಕುಂಜಿ ಎಂಬವರ ಪುತ್ರಿ, ಕೆವಿಜಿ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ ಆಗ್ನೇಯ ಬಾಲು(6) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಬಾಲಕಿ ಸ್ಕೂಲ್ ಬಸ್ಸಿನಿಂದ ಇಳಿದಿದ್ದು ಆ ಸಮಯ ಆಕೆಯ ಟಿಫಿನ್ ಬಾಕ್ಸ್ ಬಸ್ಸಿನಲ್ಲಿ ಉಳಿದಿದ್ದರಿಂದ ಅದನ್ನ

ಅರಂತೋಡು: ಶಾಲಾ ಬಸ್ ಢಿಕ್ಕಿ ಹೊಡೆದು 6 ವರ್ಷದ ಬಾಲಕಿ ಮೃತ್ಯು ► ಬಸ್ಸಿನಿಂದ ಇಳಿದು ಟಿಫಿನ್ ಪಡೆಯುತ್ತಿದ್ದಾಗ ಘಟನೆ Read More »

ಕರಾವಳಿ

ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ಸ್ಫೋಟ ► ಐವರು ಮೃತ್ಯು, ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕೊಚ್ಚಿ, ಫೆ.13. ಕೇರಳದ ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ನಿಲ್ಲಿಸಲಾಗಿದ್ದ ಒಎನ್ ಜಿಸಿ ಸಂಸ್ಥೆಗೆ ಸೇರಿದ ಡ್ರಿಲ್ ಶಿಪ್ ‘ಸಾಗರ್ ಭೂಷಣ್’ ನೌಕೆಯ ಇಂಧನ ಟ್ಯಾಂಕರ್ ನಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 5 ಮಂದಿ ಮೃತಪಟ್ಟು ಕನಿಷ್ಠ 11 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಂಗಳವಾರ ಬೆಳಗ್ಗೆ ಸಾಗರ್ ಭೂಷಣ್ ನೌಕೆ ದುರಸ್ತಿಗಾಗಿ ಕೊಚ್ಚಿ ಬಂದರಿನಲ್ಲಿ ಲಂಗರು ಹಾಕಿತ್ತು. ನೌಕೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲೇ ಇಂಧನ ಟ್ಯಾಂಕ್ ಬಳಿ ಸ್ಫೋಟ ಸಂಭವಿಸಿದ್ದು,

ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ಸ್ಫೋಟ ► ಐವರು ಮೃತ್ಯು, ಹಲವರಿಗೆ ಗಾಯ Read More »

ರಾಷ್ಟ್ರೀಯ ನ್ಯೂಸ್

ಅವಲಕ್ಕಿ ಗಂಟಲಲ್ಲಿ ಸಿಲುಕಿ 3 ವರ್ಷದ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಫೆ.13. ಅವಲಕ್ಕಿ ಗಂಟಲಲ್ಲಿ ಸಿಲುಕಿ 3 ವರ್ಷದ ಮಗುವೊಂದು ಮೃತಪಟ್ಟಿರುವ ಘಟನೆ‌ ಚಿಕ್ಕಮಗಳೂರಿನಲ್ಲಿ ಸೋಮವಾರದಂದು ನಡೆದಿದೆ. ಮೃತ ಬಾಲಕನನ್ನು ಚಿಕ್ಕಮಗಳೂರಿನ ಮೂಗ್ತಿಹಳ್ಳಿ ಸಮೀಪದ ನಿವಾಸಿ ದುರ್ಗಾ ಪ್ರಸಾದ್ ಎಂಬವರ ಪುತ್ರ ಅನೀಶ್ (3) ಎಂದು ಗುರುತಿಸಲಾಗಿದೆ.‌ಅನೀಶ್ ನನ್ನು ಮನೆಯಲ್ಲಿ ಅವಲಕ್ಕಿ ತಿನ್ನುವಾಗ ಗಂಟಲಲ್ಲಿ ಸಿಲುಕಿದ್ದರಿಂದ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಉಸಿರುಗಟ್ಟಿ ಮಗು ಮೃತಪಟ್ಟರೆನ್ನಲಾಗಿದೆ.

ಅವಲಕ್ಕಿ ಗಂಟಲಲ್ಲಿ ಸಿಲುಕಿ 3 ವರ್ಷದ ಮಗು ಮೃತ್ಯು Read More »

ಕರ್ನಾಟಕ

ಮೃತ ದೀಪಕ್ ಸಹೋದರನಿಗೆ ಸಿದ್ಧವಾಯಿತು ಸರಕಾರಿ ನೌಕರಿಯ ಆಫರ್ ► ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯಿಂದ ಮಾನವೀಯ ನೆಲೆಯಲ್ಲಿ ಉದ್ಯೋಗ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.13. ಇತ್ತೀಚೆಗೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಸುರತ್ಕಲ್ ನ ದೀಪಕ್ ರಾವ್ ಕುಟುಂಬದ ಜೀವನಕ್ಕೆ ಕೇಂದ್ರ ಸರ್ಕಾರ ಆಧಾರವಾಗಿ ನಿಲ್ಲಲು ಮುಂದಾಗಿದ್ದು, ದೀಪಕ್ ಸೋದರ ಸತೀಶ್ ಗೆ ಕೇಂದ್ರ ಸರಕಾರಿ ಸ್ವಾಮ್ಯದ ಕುದುರೆಮುಖ ಕಬ್ಬಿಣ ಅದಿರು ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಆಫರ್ ಬಂದಿದೆ. ಹುಟ್ಟಿನಿಂದಲೇ ಮಾತೂ ಬರದ, ಕಿವಿಯೂ ಕೇಳದ 28 ರ ಹರೆಯದ ಅನಕ್ಷರಸ್ಥ ಸತೀಶ್ ನಿಗೆ ಪಣಂಬೂರಿನಲ್ಲಿರುವ ಕೆಐಒಸಿಎಲ್ ಕಂಪನಿಯಲ್ಲಿ ಮಾನವೀಯ ನೆಲೆಯಲ್ಲಿ ಕೆಲಸ ನೀಡಲು ಆಫರ್ ನೀಡಲಾಗಿದೆ.

ಮೃತ ದೀಪಕ್ ಸಹೋದರನಿಗೆ ಸಿದ್ಧವಾಯಿತು ಸರಕಾರಿ ನೌಕರಿಯ ಆಫರ್ ► ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯಿಂದ ಮಾನವೀಯ ನೆಲೆಯಲ್ಲಿ ಉದ್ಯೋಗ Read More »

ಕರಾವಳಿ

ನಿಮ್ಮಿಂದ 10 ರೂ. ನಾಣ್ಯ ತೆಗೆದುಕೊಳ್ಳುತ್ತಿಲ್ಲವೇ..? ► ಈಗಲೇ 14440 ಗೆ ಕರೆ ಮಾಡಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.12. ವ್ಯಾಪಾರಿಗಳು, ಗ್ರಾಹಕರಲ್ಲಿ ತೀವ್ರ ಗೊಂದಲ ಸೃಷ್ಟಿಸಿ ನಿರಾಕರಣೆಗೆ ಕಾರಣವಾಗುತ್ತಿರುವ ಹತ್ತು ರೂ. ನಾಣ್ಯಗಳು ಚಾಲ್ತಿಯಲ್ಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಾರ್ವಜನಿಕರ ಮೊಬೈಲ್ ಫೋನ್ ಗಳಿಗೆ ಸಂದೇಶ ಕಳುಹಿಸಿ ಗೊಂದಲ ನಿವಾರಿಸುವ ಅಭಿಯಾನ ಕೈಗೊಂಡಿದೆ. 10 ರೂಪಾಯಿ ನಾಣ್ಯವು ರೂಪಾಯಿ ಚಿಹ್ನೆ ಸಹಿತ ಮತ್ತು ರಹಿತವಾಗಿ ಚಲಾವಣೆಯಲ್ಲಿವೆ. ಭಯ ಪಡದೆ ಅವುಗಳನ್ನು ಸ್ವೀಕರಿಸಿ. ಹೆಚ್ಚಿನ ಮಾಹಿತಿಗಾಗಿ 14440ಗೆ ಮಿಸ್ಡ್ ಕಾಲ್ ಕೊಡಿ ಎಂದು ಆರ್ಬಿಐನಿಂದ ಮೊಬೈಲ್ ಫೋನ್ ಗಳಿಗೆ

ನಿಮ್ಮಿಂದ 10 ರೂ. ನಾಣ್ಯ ತೆಗೆದುಕೊಳ್ಳುತ್ತಿಲ್ಲವೇ..? ► ಈಗಲೇ 14440 ಗೆ ಕರೆ ಮಾಡಿ Read More »

ರಾಷ್ಟ್ರೀಯ ನ್ಯೂಸ್

ಬಂಟ್ವಾಳ: ನಕಲಿ ದಾಖಲೆ ಸೃಷ್ಟಿಸಿ 70 ಲಕ್ಷಕ್ಕೂ ಅಧಿಕ ಹಣ ಬ್ಯಾಂಕಿಗೆ ವಂಚನೆ ► ಉಂಡ ಮನೆಗೇ ದ್ರೋಹ ಬಗೆದ ಬ್ಯಾಂಕ್ ಮ್ಯಾನೇಜರ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.12. ಬ್ಯಾಂಕ್ ಮ್ಯಾನೇಜರೋರ್ವರೇ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ.ಗಳನ್ನು ಸಾಲವಾಗಿ ತೆಗೆದು ವಂಚಿಸುವ ಮೂಲಕ ಉಂಡ ಮನೆಗೇ ದ್ರೋಹ ಬಗೆದ ಘಟನೆ ಬುದ್ಧಿವಂತರ ಜಿಲ್ಲೆಯಾದ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಬೆಳಕಿಗೆ ಬಂದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಡಿಕೇಟ್ ಬ್ಯಾಂಕ್ ವಗ್ಗ ಶಾಖೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಶಾಖಾ ಮ್ಯಾನೇಜರ್ ತಮಿಳುನಾಡು ಮೂಲದ ಟಿ. ದುರೈ ಎಂಬಾತ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಬಂಗಾರದ ಅಡಮಾನ ಸಾಲ ಮತ್ತು

ಬಂಟ್ವಾಳ: ನಕಲಿ ದಾಖಲೆ ಸೃಷ್ಟಿಸಿ 70 ಲಕ್ಷಕ್ಕೂ ಅಧಿಕ ಹಣ ಬ್ಯಾಂಕಿಗೆ ವಂಚನೆ ► ಉಂಡ ಮನೆಗೇ ದ್ರೋಹ ಬಗೆದ ಬ್ಯಾಂಕ್ ಮ್ಯಾನೇಜರ್ Read More »

ಕರಾವಳಿ

ಕಣ್ಣು ಮಿಟುಕಿಸಿ ರಾತ್ರಿ ಬೆಳಗಾಗುವುದರೊಳಗೆ ದಾಖಲೆ ಸೃಷ್ಟಿಸಿದ ಮಲಯಾಳಿ ಹುಡುಗಿ ► ಪ್ರೇಮಿಗಳಲ್ಲಿ ಕಿಚ್ಚು ಎಬ್ಬಿಸಿದೆ ಸಿನಿಮಾ ಹಾಡೊಂದರ ದೃಶ್ಯ

(ನ್ಯೂಸ್ ಕಡಬ) newskadaba.com ಕೇರಳ, ಫೆ.12. ‘ಒರು ಅಡಾರ್ ಲವ್’ (Oru adaar love) ಎಂಬ ಮಲೆಯಾಳಂ ಸಿನಿಮಾದ ಒಂದು ಹಾಡಿನಿಂದ ರಾತ್ರಿ ಬೆಳೆಗಾಗುವುದರೊಳಗೆ ಮಲಯಾಳಿ ಹುಡುಗಿಯೋರ್ವಳು ಇಂಟರ್ ನೆಟ್ ಸ್ಟಾರ್ ಆಗಿ ಮಿಂಚಿದ್ದಾಳೆ. ಮಾರ್ಚ್ 03 ಕ್ಕೆ ಬಿಡುಗಡೆಯಾಗಲಿರುವ ‘ಒರು ಅಡಾರ್ ಲವ್’ ಮಲಯಾಳಂ ಚಿತ್ರದ 18ರ ಹರೆಯದ ಯುವತಿ ಪ್ರಿಯಾ ಪ್ರಕಾಶ್ ವಾರಿಯರ್ ಳ ಕಣ್ ಮಿಟುಕಿಗೆ ಎಲ್ಲರೂ ಸೋತಿದ್ದಾರೆ. ಪ್ರೇಮಿಗಳ ದಿನ ಹತ್ತಿರವಿರುವಾಗ ಈ ಚಿತ್ರದ ನವಿರಾದ ದೃಶ್ಯವೊಂದು ಪ್ರೇಮಿಗಳಲ್ಲಿ ಕಿಚ್ಚು ಎಬ್ಬಿಸಿದೆ. ಒಂದು

ಕಣ್ಣು ಮಿಟುಕಿಸಿ ರಾತ್ರಿ ಬೆಳಗಾಗುವುದರೊಳಗೆ ದಾಖಲೆ ಸೃಷ್ಟಿಸಿದ ಮಲಯಾಳಿ ಹುಡುಗಿ ► ಪ್ರೇಮಿಗಳಲ್ಲಿ ಕಿಚ್ಚು ಎಬ್ಬಿಸಿದೆ ಸಿನಿಮಾ ಹಾಡೊಂದರ ದೃಶ್ಯ Read More »

ರಾಷ್ಟ್ರೀಯ ನ್ಯೂಸ್
Scroll to Top