ಆಲಂಕಾರು: ಪಾರ್ಸೆಲ್ ನಲ್ಲಿ ಸ್ಮಾರ್ಟ್ ಫೋನ್ ಬದಲಿಗೆ ಸಿಹಿತಿಂಡಿ ಮತ್ತು ದೇವರ ಮೂರ್ತಿ ಕಳುಹಿಸಿ ವಂಚನೆ ► ಯುವತಿಯ ಮಾತಿಗೆ ಮರುಳಾಗಿ ಮೋಸ ಹೋದ ಕಾಲೇಜು ವಿದ್ಯಾರ್ಥಿ
(ನ್ಯೂಸ್ ಕಡಬ) newskadaba.com ಕಡಬ, ಫೆ.23. ಕಂಪೆನಿಯ ಪ್ರಚಾರಾರ್ಥವಾಗಿ ನಡೆದ ಅದೃಷ್ಟ ಶಾಲಿಗಳ ಆಯ್ಕೆಯಲ್ಲಿ ನಿಮ್ಮ ಮೊಬೈಲ್ ನಂಬರ್ ಬಹುಮಾನದ ರೂಪದಲ್ಲಿ ಸ್ಮಾರ್ಟ್ ಫೋನನ್ನು ಗೆದ್ದಿದೆ ಎಂದು ಗ್ರಾಹಕರನ್ನು ನಂಬಿಸಿ ಸಿಹಿತಿಂಡಿಯನ್ನು ಕಳುಹಿಸಿದ ಘಟನೆ ಆಲಂಕಾರಿನಲ್ಲಿ ಕಂಡುಬಂದಿದೆ. ಪೆರಾಬೆ ಗ್ರಾಮದ ಮಾಪಲ ನಿವಾಸಿ ಕಾಲೇಜು ಯುವಕನ ಮೊಬೈಲ್ ಗೆ ಒಂದು ವಾರದ ಹಿಂದೆ ಕರೆಯೊಂದು ಬಂದಿದ್ದು, ಬೆಂಗಳೂರಿನ HHM ಮಾರ್ಕೆಟಿಂಗ್ ಕಂಪೆನಿಯ ಪ್ರಚಾರಾರ್ಥವಾಗಿ ನಮ್ಮ ಕಂಪೆನಿಯು ನಡೆಸಿದ ಅದೃಷ್ಟಶಾಲಿಗಳ ಆಯ್ಕೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಬಹುಮಾನವನ್ನು ಗೆದ್ದುಕೊಂಡಿದೆ. […]









