ಕಡಬ ಪ್ರಾ.ಕೃ.ಪ.ಸ.ಸಂಘದಲ್ಲಿ ನವೋದಯ ಸದಸ್ಯರಿಗೆ ಸಮವಸ್ತ್ರ ಸೀರೆ ವಿತರಣೆ ► ಸೀರೆಯಿಂದ ಸಮಾನತೆ ಮಾತ್ರವಲ್ಲ, ಹೃದಯ ವೈಶಾಲ್ಯತೆಯು ಬೇಕು: ಶಾಸಕ ಅಂಗಾರ
(ನ್ಯೂಸ್ ಕಡಬ) newskadaba.com ಕಡಬ, ಮಾ.03. ಸ್ವಸಹಾಯ ಸಂಘಗಳು ಸ್ವಾವಲಂಬಿ ಬದುಕಿನೊಂದಿಗೆ ದೇಶದ ಅಭಿವೃದ್ದಿಗೆ ಪ್ರಮುಖ ಪಾತ್ರ ವಹಿಸುತ್ತಿವೆ. ಸಂಘಗಳ ಮಹಿಳಾ ಸದಸ್ಯರು ಕೇವಲ ಒಂದೇ ರೀತಿಯ ಸೀರೆ ಉಡುವುದರಿಂದ ಸಮಾನತೆ ಬರಲು ಸಾಧ್ಯವಿಲ್ಲ, ಹೃದಯ ವೈಶಾಲ್ಯತೆಯಿಂದ ಮೇಲು ಕೀಳು ಭಾವನೆ ತೊರೆದು ಸಮಾನತೆ ತೋರುವ ಕೆಲಸ ಕೂಡ ಆಗಬೇಕು ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು. ಅವರು ಕಡಬ ಪ್ರಾ.ಕೃ.ಸ.ಸಂಘದ ಸಭಾಂಗಣದಲ್ಲಿ ಸಂಘದ ಸಹಯೋಗದೊಂದಿಗೆ ಮಂಗಳೂರು ನವೋದಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನವೋದಯ ಸ್ವಸಹಾಯ ಸಂಘದ ಮಹಿಳಾ […]










