News Kadaba Desk

ಬಹುತೇಕ ಎಟಿಎಂ ಗಳಲ್ಲಿ ಕಂಡುಬರುತ್ತಿದೆ ನೋ ಕ್ಯಾಶ್ ಬೋರ್ಡ್ ► ಚುನಾವಣೆ ಸಮೀಪಿಸುತ್ತಿದ್ದಂತೆ ಶುರುವಾಯಿತು ನೋಟುಗಳ ಕೊರತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.07. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನಗದು ಹಣ ಸಂಗ್ರಹ ಜೋರಾಗಿದ್ದು, ಬಹುತೇಕ ಎಟಿಎಂಗಳಲ್ಲಿ ನೋಕ್ಯಾಶ್ ಬೋರ್ಡ್ ಕಾಣಿಸುತ್ತಿವೆ. ಇದರ ಪರಿಣಾಮವಾಗಿ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳ ಎಟಿಎಂ ಗಳಲ್ಲಿ ನೋಟುಗಳ ಕೊರತೆ ಸೃಷ್ಟಿಯಾಗಿದ್ದು, ಒಂದು ವಾರದಿಂದ ಬ್ಯಾಂಕ್ ಗಳ ನಗದು ವಿಭಾಗದಲ್ಲಿ ಹಣ ವಿತ್ ಡ್ರಾ ಪ್ರಮಾಣ ಏರಿದೆ. ಹಾಗಾಗಿ ರಾಜ್ಯದ ಹಲವು ಭಾಗಗಳಲ್ಲಿ ಜನ ನಗದು ಹಣಕ್ಕಾಗಿ ಪರದಾಡುತ್ತಿದ್ದಾರೆ. ನಾನಾ ರಾಜಕೀಯ ಪಕ್ಷಗಳ ಸಭೆ, ಸಮಾರಂಭಗಳಿಗೆ ಹಣ […]

ಬಹುತೇಕ ಎಟಿಎಂ ಗಳಲ್ಲಿ ಕಂಡುಬರುತ್ತಿದೆ ನೋ ಕ್ಯಾಶ್ ಬೋರ್ಡ್ ► ಚುನಾವಣೆ ಸಮೀಪಿಸುತ್ತಿದ್ದಂತೆ ಶುರುವಾಯಿತು ನೋಟುಗಳ ಕೊರತೆ Read More »

ಕರ್ನಾಟಕ

ಕೊಂಬಾರು: ಕಾಡಾನೆ ದಾಳಿಗೆ ಓರ್ವ ಮೃತ್ಯು ► ಇನ್ನೋರ್ವನಿಗೆ ಗಾಯ, ಮತ್ತೋರ್ವ ಪಾರು

(ನ್ಯೂಸ್ ಕಡಬ) newskadaba.com ಕಡಬ, ಮಾ.07. ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಂಬಾರು ಎಂಬಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಮೃತನನ್ನು ರೈಲ್ವೇ ಕಾರ್ಮಿಕ ಮಧುರೈ ನಿವಾಸಿ ರಂಜಿತ್ (52) ಹಾಗೂ ಗಾಯಾಳುವನ್ನು ಲಕ್ಷ್ಮಣ್ ಎಂದು ಗುರುತಿಸಲಾಗಿದೆ. ಇವರು ಕೊಂಬಾರು ಗ್ರಾಮದ ಆನೇಕಲ್ ರೈಲ್ವೆ ಸೇತುವೆಯ ಬಳಿ ಸೇತುವೆ ಕಾಮಗಾರಿಗೆಂದು ಆಗಮಿಸಿದ್ದು, ಮಂಗಳವಾರ ರಾತ್ರಿ ಶೆಡ್ ನಿಂದ ಹೊರಬಂದು ಮಲಗಿದ್ದರೆನ್ನಲಾಗಿದೆ. ತಡರಾತ್ರಿ ಕಾಡಾನೆ ಬಂದು ತಿವಿದು ಓರ್ವನನ್ನು

ಕೊಂಬಾರು: ಕಾಡಾನೆ ದಾಳಿಗೆ ಓರ್ವ ಮೃತ್ಯು ► ಇನ್ನೋರ್ವನಿಗೆ ಗಾಯ, ಮತ್ತೋರ್ವ ಪಾರು Read More »

ಕರಾವಳಿ

ತಾನೇ ಸಾಕಿದಾ ಗಿಣಿ, ಹದ್ದಾಗಿ ಚುಚ್ಚಿತಲ್ಲೋ…! ► ತಾನೇ ಕಟ್ಟಿ ಬೆಳೆಸಿದ ಪಕ್ಷದಿಂದ ಉಪೇಂದ್ರ ಉಚ್ಚಾಟನೆ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.07. ಕೆಲವೇ ತಿಂಗಳುಗಳ ಹಿಂದೆ ತಾನೇ ಕಟ್ಟಿ ಬೆಳೆಸಿ ಅಸ್ತಿತ್ವಕ್ಕೆ ತಂದ ಚಿತ್ರನಟ ಉಪೇಂದ್ರ ನೇತೃತ್ವದ ಕರ್ನಾಟಕ ಪ್ರಜ್ಞಾವಂತರ ಜನತಾ ಪಾರ್ಟಿ (ಕೆ.ಪಿ.ಜೆ.ಪಿ) ಪಕ್ಷದಿಂದ ಇದೀಗ ಸಂಸ್ಥಾಪಕ ಉಪೇಂದ್ರ ಅವರನ್ನೇ ಉಚ್ಚಾಟಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎನ್ನಲಾಗಿದ್ದು, ಇದೀಗ ಉಪೇಂದ್ರ ರವರೇ ಪಕ್ಷದಿಂದ ಹೊರಬರುವ ಆಲೋಚನೆ ಮಾಡಿದ್ದಾರೆ. ಕೆಪಿಜೆಪಿ ಪಕ್ಷವು ಸಹ ಸಂಸ್ಥಾಪಕ ಮಹೇಶ್ ಗೌಡ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದ್ದು, ಮಹೇಶ್ ಗೌಡ ಜತೆಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಷಯದಲ್ಲಿ ನನ್ನ

ತಾನೇ ಸಾಕಿದಾ ಗಿಣಿ, ಹದ್ದಾಗಿ ಚುಚ್ಚಿತಲ್ಲೋ…! ► ತಾನೇ ಕಟ್ಟಿ ಬೆಳೆಸಿದ ಪಕ್ಷದಿಂದ ಉಪೇಂದ್ರ ಉಚ್ಚಾಟನೆ…? Read More »

ಕರ್ನಾಟಕ

ಕಾಂಪೋಸ್ಟ್ ಪೈಪ್ ಅವ್ಯವಹಾರ ಆರೋಪಿ ರೋಹಿತ್ ನ ವಂಚನೆ ಬಯಲುಗೊಳಿಸಿದ ಎಸಿಬಿ ಪೊಲೀಸರು ► ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ವಂಚನೆ, ಮರ್ಧಾಳದಲ್ಲಿ ರಿಪೇರಿಗೆ ಕೊಟ್ಟಿದ್ದ ಲ್ಯಾಪ್‌ಟಾಪ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.06. ಗ್ರಾ.ಪಂ.ಗಳಿಗೆ ಕಾಂಪೋಸ್ಟ್ ಪೈಪು ಖರೀದಿಯಲ್ಲಿ ಅವ್ಯವಹಾರ ನಡೆಸಿರುವ ಆರೋಪದಲ್ಲಿ ಜಿಲ್ಲಾ ಎಸಿಬಿ ತಂಡದ ಕಸ್ಟಡಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಸ್ವಚ್ಚತಾ ಆಂದೋಲನದ ಜಿಲ್ಲಾ ಸಮನ್ವಯ ಅಧಿಕಾರಿ ರೋಹಿತ್ ಈಗಾಗಲೇ ಏಳು ಗ್ರಾ.ಪಂ.ಗಳಲ್ಲಿ ಅವ್ಯವಹಾರ ನಡೆಸಿದ್ದು, ಇನ್ನೂ ಹಲವು ಕಡೆಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಎಸಿಬಿ ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ತಿಳಿಸಿದ್ದಾರೆ. ಮಾ.5 ಮತ್ತು 6 ರಂದು ತಾಲೂಕಿನ ಕುಟ್ರುಪ್ಪಾಡಿ, ಪೆರಾಬೆ, ಬಿಳಿನೆಲೆ, ಕೊಯಿಲ ಅಲ್ಲದೆ ಕೋಡಿಂಬಾಡಿ ಗ್ರಾ.ಪಂ.ಗಳಲ್ಲಿ

ಕಾಂಪೋಸ್ಟ್ ಪೈಪ್ ಅವ್ಯವಹಾರ ಆರೋಪಿ ರೋಹಿತ್ ನ ವಂಚನೆ ಬಯಲುಗೊಳಿಸಿದ ಎಸಿಬಿ ಪೊಲೀಸರು ► ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ವಂಚನೆ, ಮರ್ಧಾಳದಲ್ಲಿ ರಿಪೇರಿಗೆ ಕೊಟ್ಟಿದ್ದ ಲ್ಯಾಪ್‌ಟಾಪ್ ವಶಕ್ಕೆ Read More »

ಕರಾವಳಿ

ಕುಂಟುತ್ತಾ ಸಾಗುತ್ತಿರುವ ಗೋಳಿತ್ತಡಿ – ನೆಲ್ಯೊಟ್ಟು ರಸ್ತೆಯ ಮರು ಡಾಮರೀಕರಣ ಕಾಮಗಾರಿ ► ಹರಡಿಕೊಂಡಿರುವ ಜಲ್ಲಿಕಲ್ಲುಗಳನ್ನು ತಪ್ಪಿಸಲು ಹೋಗಿ ಚರಂಡಿಗಿಳಿದ ಕಾರು

(ನ್ಯೂಸ್ ಕಡಬ) newskadaba.com ಕಡಬ, ಮಾ.06. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಳಿತ್ತಡಿಯಿಂದ ನೆಲ್ಯೊಟ್ಟು ಸಂಪರ್ಕ ರಸ್ತೆಯ ಮರು ಡಾಮರೀಕರಣ ನಡೆಯುತ್ತಿದ್ದು, ಕಾಮಗಾರಿಯು ಕುಂಟುತ್ತಾ ಸಾಗುತ್ತಿರುವುದರಿಂದ ಅಪಾಯವನ್ನು ಆಹ್ವಾನಿಸುತ್ತಿದೆ. ಮಂಗಳವಾರದಂದು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಓಮ್ನಿ ಕಾರೊಂದು ಚರಂಡಿಗೆ ಬಿದ್ದಿದ್ದು, ಕಾರಿನೊಳಗಿದ್ದ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕಾಮಗಾರಿ ಡಿಸೆಂಬರ್ ನಲ್ಲಿ ಆರಂಭಗೊಂಡ ಬಳಿಕ ನಿಧಾನಗತಿಯಲ್ಲಿ ಸಾಗುತ್ತಿದ್ದು, ಜಲ್ಲಿಕಲ್ಲು ಹರವಿಕೊಂಡು ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಜಲ್ಲಿಕಲ್ಲಿನಿಂದ ವಾಹನಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಹೋಗಿ

ಕುಂಟುತ್ತಾ ಸಾಗುತ್ತಿರುವ ಗೋಳಿತ್ತಡಿ – ನೆಲ್ಯೊಟ್ಟು ರಸ್ತೆಯ ಮರು ಡಾಮರೀಕರಣ ಕಾಮಗಾರಿ ► ಹರಡಿಕೊಂಡಿರುವ ಜಲ್ಲಿಕಲ್ಲುಗಳನ್ನು ತಪ್ಪಿಸಲು ಹೋಗಿ ಚರಂಡಿಗಿಳಿದ ಕಾರು Read More »

ಕರಾವಳಿ

ಉಪ್ಪಿನಂಗಡಿ: ರಸ್ತೆ ಕಾಮಗಾರಿ ವೇಳೆ ನೀರಿನ ಪೈಪಿಗೆ ಹಾನಿ ► ವಾರ ಕಳೆದರೂ ಪೈಪ್ ಸರಿಪಡಿಸದಿದ್ದಕ್ಕೆ ಆಕ್ರೋಶಗೊಂಡ ಊರವರಿಂದ ಕಾಮಗಾರಿಗೆ ತಡೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.06. 34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಬೊಳಂತಿಲ- ದರ್ಬೆ ರಸ್ತೆ ಕಾಮಗಾರಿಯ ವೇಳೆ ಪೈಪ್ಗಳು ಒಡೆದು ಹೋಗಿದ್ದನ್ನು ವಾರ ಕಳೆದರೂ ಸರಿಪಡಿಸಲು ಮುಂದಾಗದ ಗುತ್ತಿಗೆದಾರರ ವಿರುದ್ಧ ಆಕ್ರೋಶಗೊಂಡ ಪಾಥರ್ನ ನಿವಾಸಿಗಳು ಕಾಮಗಾರಿಯನ್ನು ತಡೆಹಿಡಿದ ಘಟನೆ ಮಂಗಳವಾರ ನಡೆದಿದ್ದು, ಪೈಪ್ ಲೈನ್ ದುರಸ್ತಿಪಡಿಸಲು ಗುತ್ತಿಗೆದಾರರು ನೇಮಿಸಿದ ವ್ಯಕ್ತಿ ಧರ್ಮ ಬೇಧ ಮಾಡುತ್ತಿರುವುದೇ ಈ ಸಮಸ್ಯೆಗೆ ಮೂಲ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಾರದಿಂದ ನೀರಿಲ್ಲದೆ ಕಂಗೆಟ್ಟ ಪಾಥರ್ನ ಜನತೆ ಮಂಗಳವಾರ ರಸ್ತೆ ಕಾಮಗಾರಿಗೆ

ಉಪ್ಪಿನಂಗಡಿ: ರಸ್ತೆ ಕಾಮಗಾರಿ ವೇಳೆ ನೀರಿನ ಪೈಪಿಗೆ ಹಾನಿ ► ವಾರ ಕಳೆದರೂ ಪೈಪ್ ಸರಿಪಡಿಸದಿದ್ದಕ್ಕೆ ಆಕ್ರೋಶಗೊಂಡ ಊರವರಿಂದ ಕಾಮಗಾರಿಗೆ ತಡೆ Read More »

ಕರಾವಳಿ

ಮಂಗಳೂರಿನಲ್ಲೂ ಆರಂಭವಾಯಿತು ‘ಇಂದಿರಾ ಕ್ಯಾಂಟೀನ್’ ► ನಗರದ ಐದು ಕಡೆಗಳಲ್ಲಿ ಪ್ರಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.06. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ಕೊನೆಗೂ ಮಂಗಳೂರಿನಲ್ಲೂ ಆರಂಭವಾಗಿದ್ದು, ಮಂಗಳವಾರದಂದು ಆಹಾರ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು. ದಿನಂಪ್ರತಿ 500 ಮಂದಿಗೆ ಊಟ, ತಿಂಡಿ ವಿತರಣೆ ನಡೆಯಲಿದ್ದು, ಬೆಳಗ್ಗೆ, ಮಧ್ಯಾಹ್ನ, ರಾತ್ರಿಯ ತಿಂಡಿ-ಊಟ ಬೇಕಾದವರು ಕೂಪನ್ ಪಡೆಯಬೇಕು. ಕೇಸರಿ ಬಾತ್, ಖಾರಾ ಬಾತ್, ಇಡ್ಲಿ ಉಪಹಾರದಲ್ಲಿ ಸೇರಿವೆ. ಉಪಹಾರಕ್ಕೆ 5 ರೂ, ಊಟಕ್ಕೆ ತಲಾ 10 ರೂ. ನಿಗದಿಗೊಳಿಸಲಾಗಿದೆ. ನೆಹರೂ ಮೈದಾನ, ಉರ್ವ, ಕಾವೂರು, ಪಂಪ್ ವೆಲ್

ಮಂಗಳೂರಿನಲ್ಲೂ ಆರಂಭವಾಯಿತು ‘ಇಂದಿರಾ ಕ್ಯಾಂಟೀನ್’ ► ನಗರದ ಐದು ಕಡೆಗಳಲ್ಲಿ ಪ್ರಾರಂಭ Read More »

ಕರಾವಳಿ

ತುಂಬೆ: ಬೈಕಿಗೆ ಢಿಕ್ಕಿ ಹೊಡೆದ ಲಾರಿ ► ಸವಾರ ಮೃತ್ಯು, ಸಹ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.06. ಲಾರಿಯೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆಯಲ್ಲಿ ಮಂಗಳವಾರದಂದು ನಡೆದಿದೆ. ಮೃತ ಬೈಕ್ ಸವಾರನನ್ನು ಕೃಷ್ಣಾಪುರ ನಿವಾಸಿ ಗಝಲ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಸಹ ಸವಾರ ಜಾವೀದ್ ನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಬೈಕ್ ನಲ್ಲಿ ಬಿ.ಸಿ.ರೋಡ್ ಕಡೆಗೆ ಹೋಗುತ್ತಿದ್ದ ವೇಳೆ ರಾಮಲ್ ಕಟ್ಟೆ ಸಮೀಪ ಲಾರಿ ಹಿಂಬದಿಯಿಂದ ಢಿಕ್ಕಿ

ತುಂಬೆ: ಬೈಕಿಗೆ ಢಿಕ್ಕಿ ಹೊಡೆದ ಲಾರಿ ► ಸವಾರ ಮೃತ್ಯು, ಸಹ ಸವಾರ ಗಂಭೀರ Read More »

ಕರಾವಳಿ

ವಿಚಿತ್ರ ಖಾಯಿಲೆಯಿಂದ ಪರದಾಡುತ್ತಿರುವ ಇರ್ಫಾನ್ ಖಾನ್ ► ತನ್ನ ಖಾಯಿಲೆಯ ಬಗ್ಗೆ ಈ ಬಾಲಿವುಡ್ ನಟ ಹೇಳಿದ್ದೇನು ಗೊತ್ತೇ‌.‌.?

(ನ್ಯೂಸ್ ಕಡಬ) newskadaba.com ಮುಂಬೈ, ಮಾ.06. ತಾನು ವಿಚಿತ್ರವಾಗಿರುವ ಅಪರೂಪದ ರೋಗಕ್ಕೆ ತುತ್ತಾಗಿದ್ದು, ರೋಗ ನಿರ್ಧರಿಸಲು ಇನ್ನಷ್ಟು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಿದ್ದೇನೆ ಎಂದು ಸಿನೆಮಾ ನಟ ಇರ್ಫಾನ್ ಖಾನ್ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಇರ್ಫಾನ್ ಖಾನ್ ಜಾಂಡೀಸ್ (ಹಳದಿ ಕಾಮಾಲೆ) ರೋಗದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಟ್ವೀಟ್ ಮಾಡಿರುವ ಇರ್ಫಾನ್ ಖಾನ್ ತನ್ನನ್ನು ಬಾಧಿಸಿರುವ ಖಾಯಿಲೆಯು ಕಾಮಾಲೆಯಲ್ಲ. ಅದೊಂದು ಅಪರೂಪದ ಕಾಯಿಲೆಯಾಗಿದ್ದು, ರೋಗ ನಿರ್ಧರಿಸಲು ಇನ್ನಷ್ಟು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಿದ್ದೇನೆ. ಆದರೆ ತಾನು

ವಿಚಿತ್ರ ಖಾಯಿಲೆಯಿಂದ ಪರದಾಡುತ್ತಿರುವ ಇರ್ಫಾನ್ ಖಾನ್ ► ತನ್ನ ಖಾಯಿಲೆಯ ಬಗ್ಗೆ ಈ ಬಾಲಿವುಡ್ ನಟ ಹೇಳಿದ್ದೇನು ಗೊತ್ತೇ‌.‌.? Read More »

ರಾಷ್ಟ್ರೀಯ ನ್ಯೂಸ್

ನಿಮ್ಮ ಮೊಬೈಲ್ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಲ್ಲವೆ..? ► ಹಾಗಾದರೆ ಕಾದಿದೆ ಸಂಕಷ್ಟ…!

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ.06. ಇಲ್ಲಿಯವರೆಗೆ ಆಧಾರ್ ನೊಂದಿಗೆ ಶೇ. 80ರಷ್ಟು ಖಾತೆಗಳ ಜೋಡಣೆ ಹಾಗು ಶೇ. 60ರಷ್ಟು ಮೊಬೈಲ್-ಆಧಾರ್ ಜೋಡಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ಕೊನೆ ದಿನವಾಗಿದೆ ಎಂದು ಯುಐಡಿಎಐ ತಿಳಿಸಿದೆ. ಕಪ್ಪುಹಣವನ್ನು ತಡೆಯುವ ಉದ್ದೇಶದಿಂದ ಪಾನ್ ಮತ್ತು ಆಧಾರ್ ಜೋಡಣೆಯನ್ನು ಆದಾಯ ಇಲಾಖೆಯು ಕಡ್ಡಾಯಗೊಳಿಸಿದ್ದು, ಮಾರ್ಚ್ 31 ಕೊನೆಯ ದಿನವಾಗಿದೆ. ಇದುವರೆಗೆ ಸುಮಾರು 87 ಕೋಟಿ ಬ್ಯಾಂಕ್ ಖಾತೆಗಳನ್ನು ಆಧಾರ್ ನೊಂದಿಗೆ ಜೋಡಣೆ ಮಾಡಲಾಗಿದ್ದು,

ನಿಮ್ಮ ಮೊಬೈಲ್ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಲ್ಲವೆ..? ► ಹಾಗಾದರೆ ಕಾದಿದೆ ಸಂಕಷ್ಟ…! Read More »

ರಾಷ್ಟ್ರೀಯ ನ್ಯೂಸ್
Scroll to Top