News Kadaba Desk

ನಡುಮಜಲು: ಶ್ರೀ ಹೊಸಮ್ಮ‌ ದೇವಿ ಕೊಡಮಣಿತ್ತಾಯ ಮತ್ತು ವಿಷ್ಣುಮೂರ್ತಿ ದೈವಸ್ಥಾನ ► ಇಂದಿನಿಂದ (ಮಾರ್ಚ್ 13 ರಿಂದ 22) ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಮಹೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಮಾ.13. ಮರ್ದಾಳ 102 ನೆಕ್ಕಿಲಾಡಿ ಗ್ರಾಮದ ನಡುಮಜಲು ಶ್ರೀ ಹೊಸಮ್ಮ ದೇವಿ ಕೊಡಮಣಿತ್ತಾಯ ಮತ್ತು ವಿಷ್ಣುಮೂರ್ತಿ ದೈವಸ್ಥಾನದಲ್ಲಿ 1ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ವರ್ಷಾವಧಿ ಮಹೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಇಂದು (ಮಾ.13 ರಿಂದ 22ರ ವರೆಗೆ) ನಡುಮಜಲು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಲಿದೆ. ಮಾ.13ರಂದು ಪ್ರಾರ್ಥನೆ, ಉಗ್ರಾಣ ಮುಹೂರ್ತ ಹಸಿರು ಹೊರೆಕಾಣಿಕೆ ಸಮರ್ಪಣೆ ಕಲಶ ಪೂಜೆ, ಗಣಪತಿ ಹೋಮ ನಡೆಯಲಿದೆ. ಬಳಿಕ ಸಾಮೂಹಿಕ ಶ್ರೀ ಸತ್ಯನಾರಾಯಣ […]

ನಡುಮಜಲು: ಶ್ರೀ ಹೊಸಮ್ಮ‌ ದೇವಿ ಕೊಡಮಣಿತ್ತಾಯ ಮತ್ತು ವಿಷ್ಣುಮೂರ್ತಿ ದೈವಸ್ಥಾನ ► ಇಂದಿನಿಂದ (ಮಾರ್ಚ್ 13 ರಿಂದ 22) ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಮಹೋತ್ಸವ Read More »

ಕರಾವಳಿ

ಬಹರೈನ್ ಕೆ.ಸಿ.ಎಫ್ ವತಿಯಿಂದ ಬೃಹತ್ ಆಧ್ಯಾತ್ಮಿಕ ಮಜ್ಲಿಸ್ ► ಝೈನುಲ್ ಉಲಮಾ ಮಾಣಿ ಉಸ್ತಾದರಿಗೆ ಸನ್ಮಾನ ಸಮಾರಂಭ

(ನ್ಯೂಸ್ ಕಡಬ) newskadaba.com ಬಹರೈನ್, ಮಾ.13. ಕೆ.ಸಿ.ಎಫ್ ಬಹರೈನ್ ವತಿಯಿಂದ ಬೃಹತ್ ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಝೈನುಲ್ ಉಲಮಾ ಮಾಣಿ ಉಸ್ತಾದರಿಗೆ ಅಭಿನಂದನಾ ಸಮಾರಂಭವು ಮನಾಮ ಐ.ಸಿ.ಎಫ್ ಸುನ್ನೀ ಸೆಂಟರ್ ಹಾಲ್ ನಲ್ಲಿ ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಅಧ್ಯಕ್ಷರಾದ ಫಾರೂಕ್ ಎಸ್.ಎಂ. ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಝೈನುಲ್ ಉಲಮಾ ಮಾಣಿ ಉಸ್ತಾದರ ದುಃಅ ದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿಯ ಸಂಘಟನಾ ಕಾರ್ಯದರ್ಶಿ ಸಮದ್ ಉಜಿರೆ ಬೆಟ್ಟುರವರು ಖಿರಾಅತ್ ಪಠಿಸಿದರು. ಸ್ವಾಗತ ಭಾಷಣವನ್ನು ಮಾಡಿದ ರಾಷ್ಟ್ರೀಯ ಸಮಿತಿಯ

ಬಹರೈನ್ ಕೆ.ಸಿ.ಎಫ್ ವತಿಯಿಂದ ಬೃಹತ್ ಆಧ್ಯಾತ್ಮಿಕ ಮಜ್ಲಿಸ್ ► ಝೈನುಲ್ ಉಲಮಾ ಮಾಣಿ ಉಸ್ತಾದರಿಗೆ ಸನ್ಮಾನ ಸಮಾರಂಭ Read More »

ಅಂತರ್ರಾಷ್ಟ್ರೀಯ ನ್ಯೂಸ್

ಕಂಬಳದ ವಿರುದ್ಧ ಪೇಟಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ► ಕಂಬಳ ನಿಷೇಧ ಹೋರಾಟಕ್ಕೆ ಪೇಟಾಗೆ ಹಿನ್ನಡೆ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ.13. ಕಂಬಳ ನಿಷೇಧಿಸಬೇಕೆಂಬ ಪ್ರಾಣಿ ದಯಾ ಸಂಘ (ಪೇಟಾ)ದ ಹೋರಾಟಕ್ಕೆ ಹಿನ್ನಡೆಯಾಗಿದ್ದು, ಪೇಟಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಕಂಬಳ ಪರವಾದ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸುಪ್ರಿಂ ಕೋರ್ಟ್‌ಗೆ ಮಾಹಿತಿ ನೀಡಿತ್ತು. ಈ ಹಿನ್ನಲೆಯಲ್ಲಿ ಪೇಟಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಈ ಹಿಂದಿನ ಅರ್ಜಿಯನ್ನು ಮುಂದುವರಿಸಲು ಸಾಧ್ಯವಿಲ್ಲ. ಬೇಕಿದ್ದರೆ ನೂತನ ಕಾನೂನನ್ನು ಪ್ರಶ್ನಿಸಿ ಹೊಸದಾಗಿ ಮನವಿ ಸಲ್ಲಿಸಿ ಎಂದು ಪೇಟಾಗೆ ನಿರ್ದೇಶನ ನೀಡಿ

ಕಂಬಳದ ವಿರುದ್ಧ ಪೇಟಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ► ಕಂಬಳ ನಿಷೇಧ ಹೋರಾಟಕ್ಕೆ ಪೇಟಾಗೆ ಹಿನ್ನಡೆ Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: 2009 ರಲ್ಲಿ ನಡೆದಿದ್ದ ಪಬ್ ದಾಳಿ ಪ್ರಕರಣ ► ಮುತಾಲಿಕ್ ಸೇರಿ 26 ಮಂದಿ ಆರೋಪಿಗಳು ಖುಲಾಸೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.13. 2009ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಪಬ್ ದಾಳಿ ಪ್ರಕರಣ ಸಂಬಂಧಿಸಿದಂತೆ ದಕ್ಷಿಣ ಕನ್ನಡ 3ನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಸಾಕ್ಷ್ಯಾಧಾರದ ಕೊರತೆಯಿಂದಾಗಿ ಎಲ್ಲಾ 26 ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದೆ. ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ 2009 ರ ಜನವರಿ 24ರಂದು ನಡೆದಿದ್ದ ಪಬ್ ದಾಳಿ ಪ್ರಕರಣದ ಬಗ್ಗೆ ಸುದೀರ್ಘ ವಿಚಾರಣೆಯ ಬಳಿಕ ಸಾಕ್ಷ್ಯಾಧಾರ ಕೊರತೆಯಿಂದಾಗಿ ಪ್ರಮುಖ ಆರೋಪಿಗಳಾದ ಪ್ರಮೋದ್ ಮುತಾಲಿಕ್, ಪ್ರಸಾದ್ ಅತ್ತಾವರ, ಸುಭಾಸ್ ಪಡೀಲ್, ದಿನಕರ ಶೆಟ್ಟಿ ಸೇರಿದಂತೆ

ಮಂಗಳೂರು: 2009 ರಲ್ಲಿ ನಡೆದಿದ್ದ ಪಬ್ ದಾಳಿ ಪ್ರಕರಣ ► ಮುತಾಲಿಕ್ ಸೇರಿ 26 ಮಂದಿ ಆರೋಪಿಗಳು ಖುಲಾಸೆ Read More »

ಕರಾವಳಿ

ರಸ್ತೆ ಒತ್ತುವರಿ ತೆರವಿಗೆ ನೀಡಿದ ನೋಟೀಸ್ ಗೆ ತಡೆಯಾಜ್ಞೆ ► ಐತ್ತೂರು ಕೇನ್ಯ ನಿವಾಸಿಗಳಿಂದ ಪ್ರತಿಭಟನೆಯ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.12. ಐತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇನ್ಯ ಮನೆ ನಿವೇಶನಗಳಿಗೆ ಹೋಗುವ ರಸ್ತೆಯನ್ನು ಸ್ಥಳೀಯರೊಬ್ಬರು ಒತ್ತುವರಿ ಮಾಡಿಕೊಂಡಿದ್ದು, ಇದರ ತೆರವಿಗೆ ಗ್ರಾಮ ಪಂಚಾಯಿತಿ ನೋಟೀಸ್ ನೀಡದರೆ, ಸತ್ಯಾಸತ್ಯತೆ ತಿಳಿಯದ ತಾಲೂಕು ಪಂಚಾಯಿತಿಯವರು ನೋಟೀಸ್ ಗೆ ತಡೆಯಾಜ್ಞೆ ನೀಡಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕೇನ್ಯ ನಿವಾಸಿಗಳು ಎಚ್ಚರಿಸಿದ್ದಾರೆ. ಸೋಮವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೇನ್ಯ ಮನೆ ನಿವೇಶನದ ನಾಗರೀಕರ ಪರವಾಗಿ ಇಲ್ಲಿನ ರಶ್ಮಿ ಎಂಬವರು ಮಾತನಾಡಿ, ಕೇನ್ಯ ಎಂಬಲ್ಲಿ 51 ನಾಗರೀಕರಿಗೆ

ರಸ್ತೆ ಒತ್ತುವರಿ ತೆರವಿಗೆ ನೀಡಿದ ನೋಟೀಸ್ ಗೆ ತಡೆಯಾಜ್ಞೆ ► ಐತ್ತೂರು ಕೇನ್ಯ ನಿವಾಸಿಗಳಿಂದ ಪ್ರತಿಭಟನೆಯ ಎಚ್ಚರಿಕೆ Read More »

ಕರಾವಳಿ

ವಿದ್ಯುತ್ ಸಮಸ್ಯೆಯ ವಿರುದ್ಧ ರಾಮಕುಂಜದಲ್ಲಿ ದೊಂದಿ ಮೆರವಣಿಗೆಯ ಮೂಲಕ ಪ್ರತಿಭಟನೆ ► ಮೇಣದ ಬತ್ತಿ ಉರಿಸಿ ಓದುವ ಮೂಲಕ ವಿಶಿಷ್ಠವಾಗಿ ಪ್ರತಿಭಟಿಸಿದ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಕಡಬ, ಮಾ.12. ಬಹುದಿನಗಳಿಂದ ಕಾಡುತ್ತಿರುವ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ಆಗ್ರಹಿಸಿ ರಾಮಕುಂಜದ ಗೋಳಿತ್ತಡಿಯಿಂದ ಆತೂರು ಸಿ.ಎ. ಬ್ಯಾಂಕಿನವರೆಗೆ ದೊಂದಿ ಮೆರವಣಿಗೆಯ ಮೂಲಕ ಪ್ರತಿಭಟನೆಯು ಸೋಮವಾರ ರಾತ್ರಿ ನಡೆಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕ, ಬಿಜೆಪಿ ಮುಖಂಡ ಕಿಶೋರ್ ಶಿರಾಡಿ ಮಾತನಾಡಿ, ದಿನದ 24 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ನೀಡುತ್ತೇವೆ ಎಂದು ಜಾಹೀರಾತಿನಲ್ಲಿ ಹೇಳುವ ಸಚಿವರು ಮಾತು ಉಳಿಸಿಕೊಳ್ಳದೆ ಭ್ರಷ್ಟರಾಗಿದ್ದಾರೆ. ಇಂತಹ ಲಜ್ಜೆಗೆಟ್ಟ ಸರಕಾರ ತೊಳಗಿದರೆ ಮಾತ್ರ ಜನಸಾಮಾನ್ಯರು ನೆಮ್ಮದಿಯಿಂದ

ವಿದ್ಯುತ್ ಸಮಸ್ಯೆಯ ವಿರುದ್ಧ ರಾಮಕುಂಜದಲ್ಲಿ ದೊಂದಿ ಮೆರವಣಿಗೆಯ ಮೂಲಕ ಪ್ರತಿಭಟನೆ ► ಮೇಣದ ಬತ್ತಿ ಉರಿಸಿ ಓದುವ ಮೂಲಕ ವಿಶಿಷ್ಠವಾಗಿ ಪ್ರತಿಭಟಿಸಿದ ವಿದ್ಯಾರ್ಥಿಗಳು Read More »

ಕರಾವಳಿ

ಪಡುಬಿದ್ರೆ: ಖಾಸಗಿ ಬಸ್ಸುಗಳ ನಡುವಿನ ಪೈಪೋಟಿ ► ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಬಸ್ – ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಪಡುಬಿದ್ರೆ, ಮಾ.12. ಖಾಸಗಿ ಬಸ್ಸುಗಳೆಡರಡರ ನಡುವಿನ ಪೈಪೋಟಿಯಿಂದಾಗಿ ಎಕ್ಸ್‌ಪ್ರೆಸ್‌ ಬಸ್ಸೊಂದು ಮಗುಚಿ ಬಿದ್ದ ಘಟನೆ ಉಡುಪಿ – ಮಂಗಳೂರು ಹೆದ್ದಾರಿಯ ಹೆಜಮಾಡಿ ಟೋಲ್ ಗೇಟ್ ಬಳಿ ಸೋಮವಾರದಂದು ನಡೆದಿದೆ. ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ರಾಜ್ ಕುಮಾರ್ ಹೆಸರಿನ ಖಾಸಗಿ ಎಕ್ಸ್‌ಪ್ರೆಸ್‌ ಬಸ್ ಮುಂದಿನ ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಿರು ಸೇತುವೆಯ ಬಳಿ ಮಗುಚಿ ಬಿದ್ದಿದೆ. ಘಟನೆಯಲ್ಲಿ ಚಾಲಕ, ನಿರ್ವಾಹಕ ಸೇರಿದಂತೆ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು

ಪಡುಬಿದ್ರೆ: ಖಾಸಗಿ ಬಸ್ಸುಗಳ ನಡುವಿನ ಪೈಪೋಟಿ ► ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಬಸ್ – ಹಲವರಿಗೆ ಗಾಯ Read More »

ಕರಾವಳಿ

ನೀವು ಅಂತಿಮ ಪರೀಕ್ಷೆ ಬರೆಯಲು ಸಿದ್ಧರಾಗಿದ್ದೀರಾ…? ► ಪರೀಕ್ಷೆಗಾಗಿ ಪೂರ್ವ ಸಿದ್ಧತೆ ಹೇಗೆ ಮತ್ತು ಯಾಕೆ…?

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಮಾ.12.  ಪರೀಕ್ಷೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನ ಘಟ್ಟದಲ್ಲಿ ಮಹತ್ತರವಾದ ಮೈಲುಗಲ್ಲು. ಪ್ರತಿಯೊಬ್ಬ ಹೆತ್ತವರೂ ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಲಿ ಎಂದು ಆಶಿಸುವುದು ಸಹಜ. ಜೀವನದ ಪರೀಕ್ಷೆಯಲ್ಲಿ ಈಜಾಡಿ ಜಯಿಸಬೇಕಾದರೆ, ವಿದ್ಯಾಭ್ಯಾಸದ ಹಂತದ ಎಸ್.ಎಲ್.ಎಲ್.ಸಿ. ಮತ್ತು ಪಿ.ಯು.ಸಿ  ಪರೀಕ್ಷೆಯನ್ನು ವಿದ್ಯಾರ್ಥಿಗಳು ಚೆನ್ನಾಗಿ ಮಾಡಲೇಬೇಕಾದ ಅನಿವಾರ್ಯತೆ ಇದೆ. ಚೆನ್ನಾಗಿ ಮಾಡುವುದು ಎಂದರೆ ಬರೀ ಹೆಚ್ಚು ಮಾರ್ಕ್ ತೆಗೆದುಕೊಳ್ಳುವುದು ಎಂದಲ್ಲ. ಯಾವರೀತಿ ತನ್ನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಪರೀಕ್ಷೆಯ ಸಮಯದಲ್ಲಿ ತೊಡಗಿಸಿಕೊಳ್ಳುತ್ತಾನೆ

ನೀವು ಅಂತಿಮ ಪರೀಕ್ಷೆ ಬರೆಯಲು ಸಿದ್ಧರಾಗಿದ್ದೀರಾ…? ► ಪರೀಕ್ಷೆಗಾಗಿ ಪೂರ್ವ ಸಿದ್ಧತೆ ಹೇಗೆ ಮತ್ತು ಯಾಕೆ…? Read More »

ವಿಶೇಷ ಲೇಖನಗಳು

ಸುಳ್ಯಪದವು: ಆತ್ಮಹತ್ಯೆಗೆ ಯತ್ನಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.12. ಶುಕ್ರವಾರದಂದು ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿ ಚಿಂತಾಜನಕ ಸ್ಥಿತಿಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಸುಳ್ಯಪದವು ನಿವಾಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಭಾನುವಾರದಂದು ನಡೆದಿದೆ. ಮೃತ ವಿದ್ಯಾರ್ಥಿಯನ್ನು ಕರ್ನಾಟಕ – ಕೇರಳ ಗಡಿ ಭಾಗದ ಪಡುವನ್ನೂರು ಗ್ರಾಮದ ಸುಳ್ಯಪದವು ಸಮೀಪದ ನೆಟ್ಟಣಿಗೆ ನಿವಾಸಿ ನಾಗರಾಜ ಮಣಿಯಾಣಿ ಎಂಬವರ ಪುತ್ರ ಪಡುವನ್ನೂರು ಗ್ರಾಮದ ಸರ್ವೋದಯ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಚರಣ್ ರಾಜ್ ಎಂದು ಗುರುತಿಸಲಾಗಿದೆ. ಮಾರ್ಚ್ 09 ರಂದು ಬೆಳಿಗ್ಗಿನ ಜಾವ

ಸುಳ್ಯಪದವು: ಆತ್ಮಹತ್ಯೆಗೆ ಯತ್ನಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮೃತ್ಯು Read More »

ಕರಾವಳಿ

96 ರ ಅಜ್ಜಿಗೆ 10 ನೇ ತರಗತಿ ಪಾಸ್ ಆಗುವಾಸೆ ► ಕಲಿಕೆಗೆ ವಯಸ್ಸು ಅಡ್ಡಿಯಿಲ್ಲ ಎಂದು ಸಾಬೀತುಪಡಿಸಿದ ಕಲ್ಯಾಣಿ ಅಮ್ಮ

(ನ್ಯೂಸ್ ಕಡಬ) newskadaba.com ಕಾಸರಗೋಡು, ಮಾ.12. ಬಾಲ್ಯದಲ್ಲಿ ಶಿಕ್ಷಣ ಪಡೆಯದಿದ್ದರೂ, ಎಳೆಯ ವಯಸ್ಸಿನಲ್ಲಿ ಶಿಕ್ಷಣವನ್ನು ಪಡೆಯಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿ ವೃದ್ಧೆಯೋರ್ವರು ಇದೀಗ ಅಕ್ಷರಾಭ್ಯಾಸವನ್ನು ಮಾಡುತ್ತಿದ್ದಾರೆ. ಕೇರಳದ ಪಾಲ್ಘಾಟ್ ಜಿಲ್ಲೆಯ ಮುಟ್ಟಂ ನಿವಾಸಿ ದಿ| ಕೃಷ್ಣ ಪಿಳ್ಳೈ ಎಂಬವರ ಪತ್ನಿ 96 ರ ಹರೆಯದ ಕಲ್ಯಾಣಿ ಅಮ್ಮ ತನ್ನ ಬಾಲ್ಯದಲ್ಲಿ ನಾಲ್ಕನೇ ತರಗತಿಗರ ತಿಲಾಂಜಲಿ ಇಟ್ಟಿದ್ದರು‌. ನಂತರದ‌ ದಿನಗಳಲ್ಲಿ ಅಕ್ಷರಗಳನ್ನು ಹಾಗೂ ಮಗ್ಗಿಯನ್ನು ಕಲಿತಿದ್ದರೂ ಮದುವೆಯ ನಂತರ ಸಂಸಾರದ ಹೊರೆಯನ್ನು ತಲೆಮೇಲೆ ಎಳೆದುಕೊಂಡು ಕಲಿಕೆಯ ಆಸೆಗೆ ತಣ್ಣೀರು ಬಿದ್ದಿತ್ತು.

96 ರ ಅಜ್ಜಿಗೆ 10 ನೇ ತರಗತಿ ಪಾಸ್ ಆಗುವಾಸೆ ► ಕಲಿಕೆಗೆ ವಯಸ್ಸು ಅಡ್ಡಿಯಿಲ್ಲ ಎಂದು ಸಾಬೀತುಪಡಿಸಿದ ಕಲ್ಯಾಣಿ ಅಮ್ಮ Read More »

ರಾಷ್ಟ್ರೀಯ ನ್ಯೂಸ್
Scroll to Top