News Kadaba Desk

ಮಾಣಿ: ಮೊದಲ ಮಳೆಗೆ ಕೆಎಸ್ಸಾರ್ಟಿಸಿ ಬಸ್ ಪಲ್ಟಿ ► ಗರ್ಭಿಣಿ ಮಹಿಳೆ ಸೇರಿ ಇಬ್ಬರು ಗಂಭೀರ, ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ಮಾ.14. ಸರ್ಕಾರಿ ಬಸ್ಸೊಂದು ಚಾಲಕನ ನಿಯಂತ್ರಣ ಕಳೆದು ರಸ್ತೆ ಬದಿಗೆ ಉರುಳಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಾಣಿಯಲ್ಲಿ ಸಂಭವಿಸಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಗರ್ಭಿಣಿ ಮಹಿಳೆ ಸೇರಿದಂತೆ ಇಬ್ಬರು ಗಾಯಗೊಂಡಿದ್ದು, ಹತ್ತಕ್ಕೂ ಅಧಿಕ ಮಂದಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಚಾಲಕನ ನಿಯಂತ್ರಣ ಕಳೆದು ರಸ್ತೆಗೆ ಉರುಳಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು […]

ಮಾಣಿ: ಮೊದಲ ಮಳೆಗೆ ಕೆಎಸ್ಸಾರ್ಟಿಸಿ ಬಸ್ ಪಲ್ಟಿ ► ಗರ್ಭಿಣಿ ಮಹಿಳೆ ಸೇರಿ ಇಬ್ಬರು ಗಂಭೀರ, ಹಲವರಿಗೆ ಗಾಯ Read More »

ಕರಾವಳಿ

ಕಡಬ ಸೇರಿದಂತೆ ಕರಾವಳಿಯ ಹಲವೆಡೆ ಭಾರೀ ಗುಡುಗು ► ಕಾದು ಕೆಂಪಾಗಿದ್ದ ಇಳೆಗೆ ತಂಪೆರೆದ ಮಳೆ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.14. ಕೇರಳ ಹಾಗೂ ಲಕ್ಷದ್ವೀಪಗಳಲ್ಲಿನ ಚಂಡಮಾರುತದ ಪರಿಣಾಮವಾಗಿ ಕಡಬ, ಪುತ್ತೂರು ಸೇರಿದಂತೆ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಬುಧವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣದಿಂದಿದ್ದು, ಸಂಜೆಯಾಗುತ್ತಲೇ ಭಾರೀ ಮಳೆಯಾಗಿದೆ. ಕಡಬ, ಪುತ್ತೂರು, ಉಪ್ಪಿನಂಗಡಿ, ಬೆಳ್ಳಾರೆ, ಸುಳ್ಯ ಸೇರಿದಂತೆ ಹಲವೆಡೆ ಗುಡುಗು ಮಿಂಚಿನೊಂದಿಗೆ ಭಾರೀ ಮಳೆಯಾಗಿದ್ದು, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಪರದಾಡುವಂತಾಯಿತು. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಂಭವವಿದ್ದು, ಅರಬ್ಬೀ ಸಮುದ್ರದ ಆಗ್ನೇಯ ಭಾಗ

ಕಡಬ ಸೇರಿದಂತೆ ಕರಾವಳಿಯ ಹಲವೆಡೆ ಭಾರೀ ಗುಡುಗು ► ಕಾದು ಕೆಂಪಾಗಿದ್ದ ಇಳೆಗೆ ತಂಪೆರೆದ ಮಳೆ Read More »

ಕರಾವಳಿ

ಚಂಡಮಾರುತದಿಂದಾಗಿ ಹವಾಮಾನ ವೈಪರೀತ್ಯದ ಹಿನ್ನೆಲೆ ► ಸುಳ್ಯ ಪರಿಸರದಲ್ಲಿ ಗುಡುಗು ಮಿಶ್ರಿತ ಭಾರೀ ಮಳೆ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಸುಳ್ಯ, ಮಾ.14. ಕೇರಳ ಹಾಗೂ ಲಕ್ಷದ್ವೀಪಗಳಲ್ಲಿನ ಚಂಡಮಾರುತದ ಪರಿಣಾಮವಾಗಿ ಕರಾವಳಿ ಪ್ರದೇಶಗಳ ಅಲ್ಲಲ್ಲಿ ಮಳೆಯಾಗಿದ್ದು, ಸುಳ್ಯ ಪರಿಸರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಬುಧವಾರ ಸಂಜೆ ಸಮಯದಲ್ಲಿ ಗುಡುಗು ಮಿಂಚಿನೊಂದಿಗೆ ಭಾರೀ ಮಳೆಯಾಗಿದ್ದು, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಪರದಾಡುವಂತಾಯಿತು. ಕಡಬ ಪರಿಸರದಲ್ಲಿ ಬುಧವಾರ ಅಪರಾಹ್ನದಿಂದ ಮೋಡ ಕವಿದ ವಾತಾವರಣ ಕಂಡುಬಂದಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಂಭವವಿದ್ದು, ಅರಬ್ಬೀ ಸಮುದ್ರದ ಆಗ್ನೇಯ ಭಾಗ ಮಾಲ್ಡೀವ್ಸ್ ಕರಾವಳಿ

ಚಂಡಮಾರುತದಿಂದಾಗಿ ಹವಾಮಾನ ವೈಪರೀತ್ಯದ ಹಿನ್ನೆಲೆ ► ಸುಳ್ಯ ಪರಿಸರದಲ್ಲಿ ಗುಡುಗು ಮಿಶ್ರಿತ ಭಾರೀ ಮಳೆ Read More »

ಕರಾವಳಿ

ಕೈಕಂಬ: ಭಾಗ್ಯ ರಕ್ಷಿತಾರಣ್ಯದಲ್ಲಿ ಕಾಡ್ಗಿಚ್ಚು ► ಎಕರೆ ಗಟ್ಟಲೆ ಅರಣ್ಯ ಬೆಂಕಿಗಾಹುತಿ

(ನ್ಯೂಸ್ ಕಡಬ) newskadaba.com ಕಡಬ, ಮಾ.14. ಕೈಕಂಬ ಸಮೀಪದ ಭಾಗ್ಯ ರಕ್ಷಿತಾರಣ್ಯದಲ್ಲಿ ಮಂಗಳವಾರದಿಂದ ಕಾಡ್ಗಿಚ್ಚು ಹರಡಿದ್ದು, ಎಕರೆಗಟ್ಟಲೆ ಅರಣ್ಯ ಭೂಮಿ ಬೆಂಕಿಗಾಹುತಿಯಾಗಿವೆ. ಹೆದ್ದಾರಿಯಿಂದ ಏಳೆಂಟು ಕಿಲೋಮೀಟರ್ ದೂರದಲ್ಲಿರುವ ಭಾಗ್ಯ ರಕ್ಷಿತಾರಣ್ಯದ ಮೂಲೆಮನೆ ಎಂಬಲ್ಲಿ ಮಂಗಳವಾರದಂದು ಆರಂಭವಾದ ಕಾಡ್ಗಿಚ್ಚನ್ನು ರಾತ್ರಿ ವೇಳೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಊರವರ ಸಹಕಾರದೊಂದಿಗೆ ಹತೋಟಿಗೆ ತಂದಿದ್ದರೆನ್ನಲಾಗಿದೆ. ಬುಧವಾರದಂದು ಬೆಳಗ್ಗಿನ ಜಾವ ಕಾಡ್ಗಿಚ್ಚು ಮುಂದುವರಿದಿದ್ದು, ಎಕರೆಗಟ್ಟಲೆ ಪ್ರದೇಶ ಬೆಂಕಿಗೆ ಆಹುತಿಯಾಗಿವೆ. 40 ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಊರವರು ಬೆಂಕಿ ನಂದಿಸುವ

ಕೈಕಂಬ: ಭಾಗ್ಯ ರಕ್ಷಿತಾರಣ್ಯದಲ್ಲಿ ಕಾಡ್ಗಿಚ್ಚು ► ಎಕರೆ ಗಟ್ಟಲೆ ಅರಣ್ಯ ಬೆಂಕಿಗಾಹುತಿ Read More »

ಕರಾವಳಿ

ಕುಂತೂರು: ಬೈಕ್ ಸ್ಕಿಡ್ ಆಗಿ ಪಲ್ಟಿ ► ಬಾಲಕ ಗಂಭೀರ, ಸವಾರ ಪಾರು

(ನ್ಯೂಸ್ ಕಡಬ) newskadaba.com ಕಡಬ, ಮಾ.14. ಬೈಕೊಂದು ಸ್ಕಿಡ್ ಆಗಿ ಉರುಳಿ ಬಿದ್ದ ಪರಿಣಾಮ ಬಾಲಕನೋರ್ವ ಗಂಭೀರ ಗಾಯಗೊಂಡ ಘಟನೆ ಕುಂತೂರಿನ ಪೆರಾಬೆ ಎಂಬಲ್ಲಿ ಬುಧವಾರದಂದು ನಡೆದಿದೆ. ಗಾಯಾಳು ಬಾಲಕನನ್ನು ಪೆರಾಬೆ ಗ್ರಾಮದ ಪಾಲೆಚಾರು ನಿವಾಸಿ ವಿಶ್ವನಾಥ ಗೌಡ ಎಂಬವರ ಪುತ್ರ ಪೆರಾಬೆ ಶಾಲೆಯ ಒಂದನೇ ತರಗತಿಯ ಬಾಲಕ ಜಯಕುಮಾರ್ ಎಂದು ಗುರುತಿಸಲಾಗಿದೆ. ಈತ ತನ್ನ ತಂದೆಯೊಂದಿಗೆ ಬುಧವಾರದಂದು ಶಾಲೆಗೆ ಆಗಮಿಸುತ್ತಿದ್ದಾಗ ಪೆರಾಬೆ ಬಳಿ ಬೈಕ್ ಸ್ಕಿಡ್ ಆಗಿ ದಿರ್ಘಟನೆ ಸಂಭವಿಸಿದೆ. ಗಾಯಾಳುಗಳಿಗೆ ಕಡಬ ಸಮುದಾಯ ಆಸ್ಪತ್ರೆಯಲ್ಲಿ

ಕುಂತೂರು: ಬೈಕ್ ಸ್ಕಿಡ್ ಆಗಿ ಪಲ್ಟಿ ► ಬಾಲಕ ಗಂಭೀರ, ಸವಾರ ಪಾರು Read More »

ಕರಾವಳಿ

ಬೆಳ್ತಂಗಡಿ: ಆಕಾಶದಿಂದ ಭೂಮಿಗೆ ಬಿದ್ದ ಪ್ಯಾರಾಚೂಟ್ ಇದ್ದ ಯಂತ್ರ ► ಸ್ಥಳೀಯರಲ್ಲಿ ಆತಂಕ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ.14. ಆಕಾಶದಿಂದ ಪ್ಯಾರಾಚೂಟ್ ಇರುವಂತಹ ಯಂತ್ರವೊಂದು ಭೂಮಿಗೆ ಬಿದ್ದು, ಸ್ಥಳೀಯರನ್ನು ಆತಂಕಗೊಳಿಸಿದ ಘಟನೆ ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಸಮೀಪದ ಇರ್ವತ್ತೂರು ಎಂಬಲ್ಲಿ ನಡೆದಿದೆ. ಎಡ್ತೂರಿನ ಕೃಷಿಕ ನಿರಂಜನ್ ಜೈನ್ ಎಂಬವರು ನೀರು ಬಿಡಲೆಂದು ತೋಟಕ್ಕೆ ತೆರಳಿದಾಗ ಪ್ಯಾರಾಚೂಟ್ ಇರುವ ಯಂತ್ರವೊಂದು ಕಂಡುಬಂದಿದೆ. ವಾಹನದ ಬ್ಯಾಟರಿಯನ್ನು ಹೋಲುವ ಈ ಯಂತ್ರದ ಜತೆಗೆ ಪುಟ್ಟ ಪ್ಯಾರಾಚೂಟ್ ಕೂಡಾ ಅಳವಡಿಸಲಾಗಿದ್ದು, ಅದರ ಪಕ್ಕದಲ್ಲೇ ತಯಾರಿಕಾ ಕಂಪನಿಯ ಹೆಸರನ್ನು ಬರೆಯಲಾಗಿತ್ತು. ಕೆಲಕಾಲ

ಬೆಳ್ತಂಗಡಿ: ಆಕಾಶದಿಂದ ಭೂಮಿಗೆ ಬಿದ್ದ ಪ್ಯಾರಾಚೂಟ್ ಇದ್ದ ಯಂತ್ರ ► ಸ್ಥಳೀಯರಲ್ಲಿ ಆತಂಕ Read More »

ಕರಾವಳಿ

ನಕ್ಸಲರ ಅಟ್ಟಹಾಸಕ್ಕೆ ಒಂಭತ್ತು ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮ ► ಇಬ್ಬರ ಸ್ಥಿತಿ ಚಿಂತಾಜನಕ

(ನ್ಯೂಸ್ ಕಡಬ) newskadaba.com ಛತ್ತೀಸ್ ಘಢ, ಮಾ.13. ರಾಷ್ಟ್ರೀಯ ಭದ್ರತಾ ಪಡೆಗಳು ಛತ್ತೀಸ್ ಘಡದಲ್ಲಿ 10 ನಕ್ಸಲರನ್ನು ಕೊಂದು ಹಾಕಿದ ಕೆಲವೇ ದಿನಗಳಲ್ಲಿ ನಕ್ಸಲರ ಅಟ್ಟಹಾಸ ಮಿತಿಮೀರಿದ್ದು, ಮಂಗಳವಾರದಂದು ನಕ್ಸಲರು ನಡೆಸಿದ ದಾಳಿಗೆ 8 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯ ಕಿಸ್ತಾರಾಂ ನಿಂದ ಪಲೋಡಿ ಕ್ಯಾಂಪ್ ಗೆ ತೆರಳುತ್ತಿದ್ದ ಸ್ಫೋಟಕ ಸಂರಕ್ಷಣಾ ವಾಹನ (ಎಂಪಿವಿ) ದ ಮೇಲೆ ದಾಳಿ ನಡೆಸಿದ್ದರಿಂದಾಗಿ ಒಂಭತ್ತು ಮಂದಿ ಸಿಆರ್‌ಪಿಎಫ್ ಯೋಧರು ಮೃತಪಟ್ಟಿದ್ದು, ಮೂವರು ಯೋಧರು ಗಂಭೀರ

ನಕ್ಸಲರ ಅಟ್ಟಹಾಸಕ್ಕೆ ಒಂಭತ್ತು ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮ ► ಇಬ್ಬರ ಸ್ಥಿತಿ ಚಿಂತಾಜನಕ Read More »

ರಾಷ್ಟ್ರೀಯ ನ್ಯೂಸ್

ಪದವು: ಆಟೋರಿಕ್ಷಾ ಪಲ್ಟಿ ► ನಾಲ್ವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಮಾ.13. ಆಟೋ ರಿಕ್ಷಾವೊಂದು ಚರಂಡಿಗಿಳಿದು ಪಲ್ಟಿಯಾದುದರಿಂದ ನಾಲ್ವರು ಗಾಯಗೊಂಡ ಘಟನೆ ಉಪ್ಪಿನಂಗಡಿ – ಕಡಬ ರಸ್ತೆಯ ಪದವು ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಪದವು ನಿಂದ ಆಲಂಕಾರು ಕಡೆಗೆ ತೆರಳುತ್ತಿದ್ದ ರಿಕ್ಷಾ ಎರ್ಮಾಳ ಎಂಬಲ್ಲಿಗೆ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗಿಳಿದು ಪಕ್ಕದಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದು, ಉಳಿದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಪದವು: ಆಟೋರಿಕ್ಷಾ ಪಲ್ಟಿ ► ನಾಲ್ವರಿಗೆ ಗಾಯ Read More »

ಕರಾವಳಿ

ಶಾಂತಿನಗರ: ಅಡಿಕೆ ಕಳವು ಆರೋಪಿಯ ಬಂಧನ ► ಉಂಡ ಮನೆಗೇ ದ್ರೋಹ ಬಗೆದ ಆರೋಪಿ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.13. ತಾನು ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಮನೆಯಿಂದಲೇ ಅಡಿಕೆಯನ್ನು ಕಳವುಗೈದ ಘಟನೆ ಕೋಡಿಂಬಾಡಿ ಗ್ರಾಮದ ಶಾಂತಿನಗರದಲ್ಲಿ ನಡೆದಿದ್ದು ಆರೋಪಿ ಚಾಲಕನನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ ಘಟನೆ ಸೋಮವಾರದಂದು ನಡೆದಿದೆ. ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು ವಾಮದಪದವು ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ. ಈತ ಪುತ್ತೂರಿನ ಹೊಟೇಲ್ ಉದ್ಯಮಿ ಕೋಡಿಂಬಾಡಿ ಗ್ರಾಮದ ಶಾಂತಿನಗರ‌ ನಿವಾಸಿ ಸುದೇಶ್ ಶೆಟ್ಟಿಯವರ ಮನೆಯಿಂದ ಸುಮಾರು 68 ಸಾವಿರ ರೂ. ಮೌಲ್ಯದ 280 ಕೆ.ಜಿ. ಅಡಿಕೆಯನ್ನು

ಶಾಂತಿನಗರ: ಅಡಿಕೆ ಕಳವು ಆರೋಪಿಯ ಬಂಧನ ► ಉಂಡ ಮನೆಗೇ ದ್ರೋಹ ಬಗೆದ ಆರೋಪಿ Read More »

ಕರಾವಳಿ

12 ದಿನಗಳ ಹಸುಗೂಸನ್ನು ಬೆಂಕಿಯಲ್ಲಿ ಸುಟ್ಟು ಕೊಂದ ಪಾಪಿ ತಾಯಿ ► ಕಾರಣ ತಿಳಿದರೆ ನೀವು ಬೆಚ್ಚಿ ಬೀಳುತ್ತೀರಾ…

(ನ್ಯೂಸ್ ಕಡಬ) newskadaba.com ಭಟ್ಕಳ, ಮಾ.13. ಕೇವಲ 12 ದಿನದ ಹಸುಗೂಸನ್ನು ತಾಯಿಯೇ ಬೆಂಕಿ ಹಚ್ಚಿ ಸುಟ್ಟು ಹಾಕಿದ ಹೃದಯ ವಿದ್ರಾವಕ ಘಟನೆಯೊಂದು ಭಟ್ಕಳದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಾಪಿ ತಾಯಿಯನ್ನು ಭಟ್ಕಳ ತಾಲೂಕಿನ ವೆಂಕಟಾಪುರ ನಿವಾಸಿ ಯಶೋಧಾ ಎಂದು ಗುರುತಿಸಲಾಗಿದೆ. ಈಕೆಯನ್ನು ಮೂರೂವರೆ ವರ್ಷಗಳ ಹಿಂದೆ ಭಟ್ಕಳದ ಬೆಳ್ನಿ ಎಂಬಲ್ಲಿನ ಗೋಪಾಲ್ ಮೊಗೇರ್ ಎಂಬವರ ಜೊತೆಗೆ ವಿವಾಹ ಮಾಡಿಕೊಡಲಾಗಿತ್ತು. ಹೆರಿಗೆಗೆಂದು ತನ್ನ ತವರು ಮನೆಯಾದ ವೆಂಕಟಾಪುರಕ್ಕೆ ತೆರಳಿದ್ದ ಯಶೋಧಾ, ಮಗು ಹೆಣ್ಣೆಂಬ ಕಾರಣಕ್ಕೆ ಹೆರಿಗೆಯಾಗಿ

12 ದಿನಗಳ ಹಸುಗೂಸನ್ನು ಬೆಂಕಿಯಲ್ಲಿ ಸುಟ್ಟು ಕೊಂದ ಪಾಪಿ ತಾಯಿ ► ಕಾರಣ ತಿಳಿದರೆ ನೀವು ಬೆಚ್ಚಿ ಬೀಳುತ್ತೀರಾ… Read More »

ಕರ್ನಾಟಕ
Scroll to Top