News Kadaba Desk

ಕುಂತೂರು: ಹೋಟೇಲ್‌ಗಳಿಗೆ ನುಗ್ಗಿದ ಕಳ್ಳರು ► ಚಿಲ್ಲರೆ ದುಡ್ಡಿನೊಂದಿಗೆ ಹರಿಕೆ‌ ಡಬ್ಬಿಯನ್ನು ಹೊತ್ತೊಯ್ದ ಕಳ್ಳರು

(ನ್ಯೂಸ್ ಕಡಬ) newskadaba.com ಕಡಬ, ಮಾ.22. ಠಾಣಾ ವ್ಯಾಪ್ತಿಯ ಕುಂತೂರು ಎಂಬಲ್ಲಿ ಹೊಟೇಲ್ ಗಳಿಗೆ ನುಗ್ಗಿರುವ ಪುಡಿಗಳ್ಳರು ತಮ್ಮ‌ ಕೈಚಳಕವನ್ನು ತೋರಿಸಿದ ಘಟನೆ ಬುಧವಾರ ರಾತ್ರಿ ವರದಿಯಾಗಿದೆ. ಕುಂತೂರು ಪೇಟೆಯಲ್ಲಿರುವ ನಾಸಿರ್ ಎಂಬವರಿಗೆ ಸೇರಿದ ಹೊಟೇಲ್ ಗೆ ನುಗ್ಗಿದ ಕಳ್ಳರು ಸುಮಾರು ಹತ್ತು ಸಾವಿರದಷ್ಟು ನಗದು ಹಾಗೂ ಹರಿಕೆ ಡಬ್ಬಿಗಳನ್ನು ದೋಚಿದ್ದಾರೆ. ಪಕ್ಕದಲ್ಲಿನ ಮತ್ತೊಂದು ಹೊಟೇಲಿನಲ್ಲೂ ತಮ್ಮ ಕೈಚಳಕವನ್ನು ತೋರಿಸಿರುವ ಕಳ್ಳರು ಸಿಗರೇಟ್ ಪ್ಯಾಕೆಟ್ ಸೇರಿದಂತೆ ಚಿಲ್ಲರೆ ಹಣವನ್ನು ಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಘಟನೆ […]

ಕುಂತೂರು: ಹೋಟೇಲ್‌ಗಳಿಗೆ ನುಗ್ಗಿದ ಕಳ್ಳರು ► ಚಿಲ್ಲರೆ ದುಡ್ಡಿನೊಂದಿಗೆ ಹರಿಕೆ‌ ಡಬ್ಬಿಯನ್ನು ಹೊತ್ತೊಯ್ದ ಕಳ್ಳರು Read More »

ಕರಾವಳಿ

ನೆಕ್ಕಿಲಾಡಿ: ಅತ್ಯಾಚಾರ ಪ್ರಕರಣದ ಆರೋಪಿ ಬಂಧನ ► ಸುಮಾರು ಹದಿನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.22. ಸುಮಾರು 14 ವರ್ಷಗಳ ಹಿಂದೆ ಅತ್ಯಾಚಾರ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ಗುರುವಾರದಂದು ನಡೆದಿದೆ. ಬಂಧಿತ ಆರೋಪಿಯನ್ನು 34ನೇ ನೆಕ್ಕಿಲಾಡಿ ಗ್ರಾಮದ ಬೀತಲಪ್ಪು ನಿವಾಸಿ ಹಿತೇಶ್ ಎಂದು ಗುರುತಿಸಲಾಗಿದೆ. 2004 ರಲ್ಲಿ ಉಪ್ಪಿನಂಗಡಿ ಸಮೀಪದ ಕರಾಯ ಎಂಬಲ್ಲಿ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದನೆನ್ನಲಾಗಿದೆ. ಆ ಬಳಿಕ ಆರೋಪಿಯು ಹೆಸರು ಬದಲಾಯಿಸಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ನೆನ್ನಲಾಗಿದ್ದು, ಗುರುವಾರದಂದು ಖಚಿತ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ಪೊಲೀಸರು

ನೆಕ್ಕಿಲಾಡಿ: ಅತ್ಯಾಚಾರ ಪ್ರಕರಣದ ಆರೋಪಿ ಬಂಧನ ► ಸುಮಾರು ಹದಿನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ Read More »

ಕರಾವಳಿ

ಶಿಕ್ಷಣಕ್ಕಾಗಿ RTE ಕಾಯ್ದೆಯಡಿ ಅರ್ಜಿ ಸಲ್ಲಿಸಲು ಬಾಕಿಯಿರುವ ಪೋಷಕರಿಗೆ ಸಿಹಿ ಸುದ್ದಿ ► ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.22. ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳನ್ನು ಶಾಲೆಗೆ ಸೇರಿಸಲು ಸಾಧ್ಯವಾಗದೇ ಇರುವ ಪೋಷಕರಿಗೆ ಸಿಹಿ ಸುದ್ದಿಯೊಂದು ದೊರೆತಿದ್ದು, ಅರ್ಜಿ ಸಲ್ಲಿಕೆಯ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. 2018-19 ನೇ ಸಾಲಿನಲ್ಲಿ RTE ಅಡಿ ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ 1.44 ಲಕ್ಷ ಸೀಟುಗಳನ್ನು ಕಾಯ್ದಿರಿಸಲಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಶೇ.25 ರಷ್ಟು ಸೀಟುಗಳಿಗೆ ಉಚಿತವಾಗಿ ಪ್ರವೇಶ ನೀಡುವ ಬಗ್ಗೆ ಆರ್ ಟಿಇ ವೇಳಾಪಟ್ಟಿಯನ್ನು ಪ್ರಕಟಿಸಿ, ಫೆಬ್ರವರಿ 20 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿತ್ತು. ಮಾರ್ಚ್

ಶಿಕ್ಷಣಕ್ಕಾಗಿ RTE ಕಾಯ್ದೆಯಡಿ ಅರ್ಜಿ ಸಲ್ಲಿಸಲು ಬಾಕಿಯಿರುವ ಪೋಷಕರಿಗೆ ಸಿಹಿ ಸುದ್ದಿ ► ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ Read More »

ಕರ್ನಾಟಕ

ಇಚಿಲಂಪಾಡಿ: ಮನೆಗೆ ನುಗ್ಗಿ ಬೆದರಿಸಿ ನಗ, ನಗದು ದರೋಡೆಗೈದ ಆಗಂತುಕರ ತಂಡ ► ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದರೋಡೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.21. ಮನೆಗೆ ನುಗ್ಗಿದ ತಂಡವೊಂದು ಮನೆಯಲ್ಲಿದ್ದವರನ್ನು ಚಾಕು, ಚೂರಿ, ಪಿಸ್ತೂಲ್ ತೋರಿಸಿ ಬೆದರಿಸಿ ನಗ- ನಗದು ದರೋಡೆ ಮಾಡಿದ ಘಟನೆ ಇಚಿಲಂಪಾಡಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಇಚಿಲಂಪಾಡಿ ಗ್ರಾಮದ ಮಾನಡ್ಕ ನಿವಾಸಿ ನಿವೃತ್ತ ಸೈನಿಕ ನಾರಾಯಣ ಪಿಳ್ಳೆ ಎಂಬವರ ಮನೆಗೆ ನುಗ್ಗಿದ ಇಬ್ಬರು ಆಗಂತುಕರು ಮನೆಯವರನ್ನು ಬೆದರಿಸಿ 35,000 ನಗದು ಹಾಗೂ 8 ಪವನ್ ಚಿನ್ನ, 2 ಮೊಬೈಲ್ ದೋಚಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ನಾರಾಯಣ ಪಿಳ್ಳೆ ಮತ್ತು ಅವರ

ಇಚಿಲಂಪಾಡಿ: ಮನೆಗೆ ನುಗ್ಗಿ ಬೆದರಿಸಿ ನಗ, ನಗದು ದರೋಡೆಗೈದ ಆಗಂತುಕರ ತಂಡ ► ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದರೋಡೆ Read More »

ಕರಾವಳಿ

ಹೆಬ್ರಿ: ಪಾದಚಾರಿ ದಂಪತಿಗೆ ಢಿಕ್ಕಿ ಹೊಡೆದ ಕಾರು ► ಪತಿ ಮೃತ್ಯು, ಪತ್ನಿ ಗಂಭೀರ

(ನ್ಯೂಸ್ ಕಡಬ) newskadaba.com ಕಾರ್ಕಳ, ಮಾ.21. ಕಾರೊಂದು ಪಾದಚಾರಿಯೋರ್ವರಿಗೆ ಢಿಕ್ಕಿಯಾದುದರ ಪರಿಣಾಮ ಪಾದಚಾರಿ ಮೃತಪಟ್ಟು, ಅವರ ಪತ್ನಿ ಗಂಭೀರ ನಡೆಸಿದ ಘಟನೆ ಹೆಬ್ರಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಮೃತರನ್ನು ಹೆಬ್ರಿ ಸಮೀಪದ ಶಿವಪುರ ನಿವಾಸಿ ಸದಾನಂದ ಶೆಟ್ಟಿ(52) ಎಂದು ಗುರುತಿಸಲಾಗಿದೆ. ಸದಾನಂದರವರ ಪತ್ನಿ ಶೀಲ(35) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅತೀ ವೇಗವಾಗಿ ಹಾಗೂ ಅಜಾಗರೂಕತೆಯಿಂದಾಗಿ ಕಾರ್ಕಳದಿಂದ ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆಬ್ರಿ ಸಮೀಪದ ವರಂಗ ಎಂಬಲ್ಲಿ ಪಾದಚಾರಿ ದಂಪತಿಗೆ ಢಿಕ್ಕಿ

ಹೆಬ್ರಿ: ಪಾದಚಾರಿ ದಂಪತಿಗೆ ಢಿಕ್ಕಿ ಹೊಡೆದ ಕಾರು ► ಪತಿ ಮೃತ್ಯು, ಪತ್ನಿ ಗಂಭೀರ Read More »

ಕರಾವಳಿ

ಬೆಳ್ಳಾರೆ: ಯುವಕ ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮಾ.21. ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆ ಸಮೀಪದ ಅಯ್ಯನಕಟ್ಟೆ ಎಂಬಲ್ಲಿ ಬುಧವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಅಯ್ಯನಕಟ್ಟೆ ನಿವಾಸಿ ಶಾಫಿ ಎಂದು ಗುರುತಿಸಲಾಗಿದೆ. ಉದ್ಯೋಗಕ್ಕೆಂದು ಬೆಂಗಳೂರಿಗೆ ತೆರಳಿದ್ದ ಈತ ಮಂಗಳವಾರದಂದು ಊರಿಗೆ ಬಂದಿದ್ದನೆನ್ನಲಾಗಿದ್ದು, ಬುಧವಾರ ಮಧ್ಯಾಹ್ನವಾದರೂ ಹೊರ ಬರದೆ ಇದ್ದುದರಿಂದ ಕಿಟಕಿಯ ಮೂಲಕ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಶಾಫಿ ಇತ್ತೀಚೆಗೆ ಯಮಹಾ ಎಫ್ ಝಡ್ ಬೈಕನ್ನು ಖರೀದಿಸಿದ್ದು, ಅದಕ್ಕಾಗಿ ಸಾಲ‌ ನೀಡಿದವರು ಕೇಳುತ್ತಿದ್ದರೆನ್ನಲಾಗಿದೆ.

ಬೆಳ್ಳಾರೆ: ಯುವಕ ನೇಣುಬಿಗಿದು ಆತ್ಮಹತ್ಯೆ Read More »

ಕರಾವಳಿ

ಮತ್ತೆ ಮುಂದೂಡಲ್ಪಟ್ಟ ನೂತನ ಕಡಬ ತಾಲೂಕು ಉದ್ಘಾಟನೆ ► ಕಾರಣವೇನು ಗೊತ್ತೇ…?

(ನ್ಯೂಸ್ ಕಡಬ) newskadaba.com ಕಡಬ, ಮಾ.21. ನಾಳೆ ಮಾ.22 ರಂದು ನಡೆಯಬೇಕಿದ್ದ ಕಡಬ ತಾಲೂಕು ಉದ್ಘಾಟನಾ ಕಾರ್ಯಕ್ರಮವು ಕೆಲವು ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದೆ ಎಂದು ಕಡಬ ಜಿ.ಪಂ.ಸದಸ್ಯ ಪಿ. ಪಿ. ವರ್ಗೀಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ಒಂದು ಬಾರಿ ದಿನ‌ ನಿಗದಿಯಾಗಿದ್ದರೂ ಕಾರಣಾಂತರಗಳಿಂದಾಗಿ ಮುಂದೂಡಲಾಗಿತ್ತು. ಆದರೆ ಈ ಬಾರಿಯೂ ಮುಂದೂಡಲಾಗಿದ್ದು, ಕಡಬ ಪರಿಸರದ ಜನತೆಗೆ ಇದರಿಂದಾಗಿ ನಿರಾಶೆ ಕಾದಿದೆ. ಮಾರ್ಚ್ ತಿಂಗಳೊಳಗಾಗಿ ಅಧಿಕೃತವಾಗಿ ಉದ್ಘಾಟನೆಗೆ ದಿನ ನಿಗದಿ ಪಡಿಸಲಾಗುವುದು ಎಂದು ಪಿ.ಪಿ. ವರ್ಗೀಸ್ ತಿಳಿಸಿದ್ದಾರೆ.

ಮತ್ತೆ ಮುಂದೂಡಲ್ಪಟ್ಟ ನೂತನ ಕಡಬ ತಾಲೂಕು ಉದ್ಘಾಟನೆ ► ಕಾರಣವೇನು ಗೊತ್ತೇ…? Read More »

ಕರಾವಳಿ

ಬಿಜೆಪಿಯು ಜನರನ್ನು ವಂಚಿಸಿ ಅಧಿಕಾರ ಹಿಡಿಯುತ್ತಿದೆ: ರಾಹುಲ್ ಗಾಂಧಿ ► ಮಂದಿರ, ಮಸೀದಿ, ಚರ್ಚುಗಳಿಗೆ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.21. ಹಿಂಸೆ ಮತ್ತು ಹಣ ಬಲದ ಮೂಲಕ ಬಿಜೆಪಿಯು ಅಧಿಕಾರವನ್ನು ಹಿಡಿಯುತ್ತಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಅವರು ಮಂಗಳವಾರದಂದು ಮಂಗಳೂರಿನ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆಸಿದ ಜನಾಶೀರ್ವಾದ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಬಿಜೆಪಿಯು ಹಣಕೊಟ್ಟು ನಾಯಕರನ್ನು ಖರೀದಿಸಿ ಮೇಘಾಲಯ, ಮಣಿಪುರ, ಗೋವಾಗಳಲ್ಲಿ ಅಧಿಕಾರ ನಡೆಸುತ್ತಿದೆ. ಅಧಿಕಾರಕ್ಕಾಗಿ ಸುಳ್ಳು ಹೇಳುತ್ತಾ ಬಿಜೆಪಿಯು ಜನರನ್ನು ವಂಚಿಸುತ್ತಿದ್ದು, ಕಾಂಗ್ರೆಸ್ ಸತ್ಯದ ಹಾದಿಯಲ್ಲಿ ಸಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷದ

ಬಿಜೆಪಿಯು ಜನರನ್ನು ವಂಚಿಸಿ ಅಧಿಕಾರ ಹಿಡಿಯುತ್ತಿದೆ: ರಾಹುಲ್ ಗಾಂಧಿ ► ಮಂದಿರ, ಮಸೀದಿ, ಚರ್ಚುಗಳಿಗೆ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷ Read More »

ಕರಾವಳಿ

ಬೈಕುಗಳಿಗೆ 50 ರೂ., ಕಾರುಗಳಿಗೆ 200 ರೂ., ಇದು ಯಾವುದೋ ಟೋಲ್ ದುಡ್ಡಲ್ಲ ► ಪೆರಿಯಶಾಂತಿಯಲ್ಲಿ ಮರ ತೆರವಿನ ನೆಪದಲ್ಲಿ ಹಗಲು ದರೋಡೆಯ ವೀಡಿಯೋ ವೈರಲ್

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.21. ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೆರಿಯಶಾಂತಿ ಎಂಬಲ್ಲಿ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಯುವಕರ ತಂಡವೊಂದು ಹಣ ಸಂಗ್ರಹಿಸಿದ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪೆರಿಯಶಾಂತಿ ಎಂಬಲ್ಲಿ ಸೋಮವಾರ ಸಂಜೆ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಬೃಹತ್ ಮರವೊಂದು ರಸ್ತೆಗೆ ಅಡ್ಡವಾಗಿ ಮುರಿದು ಬಿದ್ದಿದ್ದು, ಈ ಮರವನ್ನು ತೆರವುಗೊಳಿಸಿದ ಕೆಲವು ಮುಸ್ಲಿಂ ಯುವಕರು, ಅದೇ ರಸ್ತೆಯಲ್ಲಿ ಬರುತ್ತಿದ್ದ ಅನೇಕ ವಾಹನ ಚಾಲಕರಿಂದ ಹೆಚ್ಚುವರಿ ಹಣ ಸಂಗ್ರಹಣೆ ಮಾಡಿದ್ದಾರೆ.

ಬೈಕುಗಳಿಗೆ 50 ರೂ., ಕಾರುಗಳಿಗೆ 200 ರೂ., ಇದು ಯಾವುದೋ ಟೋಲ್ ದುಡ್ಡಲ್ಲ ► ಪೆರಿಯಶಾಂತಿಯಲ್ಲಿ ಮರ ತೆರವಿನ ನೆಪದಲ್ಲಿ ಹಗಲು ದರೋಡೆಯ ವೀಡಿಯೋ ವೈರಲ್ Read More »

ಕರಾವಳಿ

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ ► “ಎಗ್ರಿಕಲ್ಚರಿಸ್ಟ್” ಫೇಸ್‍ಬುಕ್ ಗುಂಪಿನಿಂದ ರಾಜಕೀಯ ಪಕ್ಷಗಳಿಗೆ ಮನವಿ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.20. ಅನೇಕ ವರ್ಷಗಳಿಂದ ಸರಕಾರಗಳು ರೈತರಿಗೆ ಸಾಲಮನ್ನಾ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದರೂ, ರೈತರ ಅನೇಕ ಬೇಡಿಕೆಗಳು ಇನ್ನೂ ಬಾಕಿಯಾಗಿವೆ. ಅದು ಜನಪ್ರತಿನಿಧಿಗಳನ್ನು ತಲಪದೇ ಇದ್ದುದರಿಂದ ಎಗ್ರಿಕಲ್ಚರಿಸ್ಟ್ ಫೇಸ್‌ಬುಕ್‌ ಗುಂಪು ಯುವ ರೈತರು ಹಾಗೂ ರೈತರ ಜೊತೆ ಸಂವಹನ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ರೈತರ ಬೇಡಿಕೆಯನ್ನು ಪರಿಗಣಿಸಿ ಮುಂದೆ ಬರುವ ಸರಕಾರಗಳು ಜಾರಿ ಮಾಡಬೇಕೆಂದು ಹಾಗೂ ವಿವಿಧ ಪಕ್ಷಗಳು ಈ ಕುರಿತು ಮುಂಬರುವ ಚುನಾವಣೆಯ ದೃಷ್ಟಿಯಿಂದ ತಮ್ಮ ಪ್ರಣಾಳಿಕೆಯಲ್ಲಿ ಅದನ್ನು

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ ► “ಎಗ್ರಿಕಲ್ಚರಿಸ್ಟ್” ಫೇಸ್‍ಬುಕ್ ಗುಂಪಿನಿಂದ ರಾಜಕೀಯ ಪಕ್ಷಗಳಿಗೆ ಮನವಿ Read More »

ಕರಾವಳಿ
Scroll to Top