News Kadaba Desk

ಪ್ರತ್ಯೇಕ ತುಳುವ ರಾಜ್ಯದ ಬೇಡಿಕೆಯೊಂದಿಗೆ ನೂತನ ಪಕ್ಷ ಅಸ್ತಿತ್ವಕ್ಕೆ ► ಪುತ್ತೂರು ವಿಧಾನಸಭಾ ಕ್ಷೇತ್ರದ ಸಸಂತ್ರ ತುಳುನಾಡು ಪಕ್ಷದ ಅಭ್ಯರ್ಥಿಯಾಗಿ ವಿದ್ಯಾಶ್ರೀ ಎಸ್. ಕಣಕ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.15. ಪ್ರತ್ಯೇಕ ತುಳುವ ರಾಜ್ಯದ ಬೇಡಿಕೆಯೊಂದಿಗೆ ಸಸಂತ್ರ ತುಳುನಾಡು ಪಕ್ಷ ಉದಯಿಸಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ವಿದ್ಯಾಶ್ರೀ ಎಸ್‌. ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ಸ್ಥಾಪಕಾಧ್ಯಕ್ಷ ಶೈಲೇಶ್‌ ಆರ್‌. ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮಂತ ತುಳುನಾಡಿನ ಸಂಪನ್ಮೂಲವನ್ನು ತುಳುನಾಡಿನ ಪ್ರಗತಿಗೆ ವಿನಿಯೋಗಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳು ತುಳು ಭಾಷೆಗೆ ಸ್ಥಾನಮಾನ ನೀಡಲು ವಿಫಲವಾಗಿದ್ದು, ಎತ್ತಿನಹೊಳೆ ಯೋಜನೆಯ ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಅನುಮೋದನೆ ನೀಡಿ ಪ್ರತಿಭಟನೆಯ ನಾಟಕ ಮಾಡುತ್ತಿವೆ. ರಾಷ್ಟ್ರೀಯ ಪಕ್ಷಗಳು ತುಳುನಾಡಿನ ನೆಲ, […]

ಪ್ರತ್ಯೇಕ ತುಳುವ ರಾಜ್ಯದ ಬೇಡಿಕೆಯೊಂದಿಗೆ ನೂತನ ಪಕ್ಷ ಅಸ್ತಿತ್ವಕ್ಕೆ ► ಪುತ್ತೂರು ವಿಧಾನಸಭಾ ಕ್ಷೇತ್ರದ ಸಸಂತ್ರ ತುಳುನಾಡು ಪಕ್ಷದ ಅಭ್ಯರ್ಥಿಯಾಗಿ ವಿದ್ಯಾಶ್ರೀ ಎಸ್. ಕಣಕ್ಕೆ Read More »

ಕರಾವಳಿ

ಲಾಯಿಲ: ಬೈಕ್ ಸ್ಕಿಡ್ ► ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ.15. ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಎಂಬಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ. ಮೃತ ಸವಾರನನ್ನು ಬೆಳ್ತಂಗಡಿ ಕೋರ್ಟ್ ರಸ್ತೆಯ ನಿವಾಸಿ, ಲಾಯಿಲದ ಬ್ರದರ್ಸ್ ಗ್ಯಾರೇಜಿನ ಮಾಲಕ ಮುಹಮ್ಮದ್ ಹನೀಫ್ (48) ಎಂದು ಗುರುತಿಸಲಾಗಿದೆ. ಅವರು ಶನಿವಾರ ತಡರಾತ್ರಿ ತನ್ನ ಸ್ನೇಹಿತನೊಬ್ಬನನ್ನು ಆತನ ಮನೆಗೆ ಬಿಟ್ಟು ಹಿಂದಿರುಗುತ್ತಿದ್ದಾಗ ಲಾಯಿಲ ಗ್ರಾಮದ ಪಡ್ಲಾಡಿ ಸಮೀಪದ ಅಗಳಿ ಎಂಮಬಲ್ಲಿಗೆ ತಲುಪಿದಾಗ ಬೈಕ್‌ ಸ್ಕಿಡ್ ಆಗಿ

ಲಾಯಿಲ: ಬೈಕ್ ಸ್ಕಿಡ್ ► ಸವಾರ ಮೃತ್ಯು Read More »

ಕರಾವಳಿ

ಕೋಡಿಂಬಾಳ: ಕಿರು ಸೇತುವೆಯಿಂದ ಕೆಳಗೆ ಬಿದ್ದ ಸ್ವಿಫ್ಟ್ ಕಾರು ► ಕಾರು ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಕಡಬ, ಎ.15. ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರೊಂದು ಕಿರು ಸೇತುವೆಯಿಂದ ಕೆಳಗೆ ಬಿದ್ದ ಘಟನೆ ಭಾನುವಾರ ಬೆಳಿಗ್ಗೆ ಪಂಜ – ಕಡಬ ರಸ್ತೆಯ ಕೋಡಿಂಬಾಳ ಸಮೀಪದ ಅಜ್ಜಿಕಟ್ಟೆಯಲ್ಲಿ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಕೋಡಿಂಬಾಳದ ಉಂಡಿಲ ನಿವಾಸಿ ಕೃಷ್ಣ ಭಟ್ ಎಂಬವರ ಪುತ್ರ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕೋಡಿಂಬಾಳದಿಂದ ಕಡಬ ಕಡೆಗೆ ಆಗಮಿಸುತ್ತಿದ್ದ ವೇಳೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ

ಕೋಡಿಂಬಾಳ: ಕಿರು ಸೇತುವೆಯಿಂದ ಕೆಳಗೆ ಬಿದ್ದ ಸ್ವಿಫ್ಟ್ ಕಾರು ► ಕಾರು ಚಾಲಕ ಅಪಾಯದಿಂದ ಪಾರು Read More »

ಕರಾವಳಿ

ಕಥುವಾ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ವಿಶ್ವದಲ್ಲೆಡೆ ಮಿಡಿದ ಕಂಬನಿ ► ನಾಳೆ (ಎ.16) ಮಂಗಳೂರು ಸಮಾನ ಮನಸ್ಕರ ಸಂಘಟನೆಯಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಮೊಂಬತ್ತಿ ಸ್ಮರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.15. ಇತ್ತೀಚೆಗೆ ಎಂಟು ಮಂದಿ ನರ ರಾಕ್ಷಸರು ಜಮ್ಮು ಕಾಶ್ಮೀರದ ಕಥುವಾದ ಎಂಟು ವರ್ಷದ ಬಾಲಕಿಯನ್ನು ಕ್ರೂರವಾಗಿ ಅತ್ಯಾಚಾರ ನಡೆಸಿದ್ದಲ್ಲದೆ ಬರ್ಬರವಾಗಿ ಹತ್ಯೆಗೈದ ಪ್ರಕರಣವನ್ನು ಖಂಡಿಸಿ ಮಂಗಳೂರಿನ ವಿವಿಧ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಎಪ್ರಿಲ್ 16 ರಂದು ಸಂಜೆ 06.30 ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಮೊಂಬತ್ತಿ ಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಸಮಾನ ಮನಸ್ಕರ ಸಭೆಯನ್ನುದ್ದೇಶಿಸಿ ಸಾಮಾಜಿಕ ಕಾರ್ಯಕರ್ತರಾದ ವಿದ್ಯಾ ದಿನಕರ್, ಸೈಫ್ ಸುಲ್ತಾನ್, ರಾಷ್ಟ್ರೀಯ ವಿಚಾರವಾದಿ

ಕಥುವಾ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ವಿಶ್ವದಲ್ಲೆಡೆ ಮಿಡಿದ ಕಂಬನಿ ► ನಾಳೆ (ಎ.16) ಮಂಗಳೂರು ಸಮಾನ ಮನಸ್ಕರ ಸಂಘಟನೆಯಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಮೊಂಬತ್ತಿ ಸ್ಮರಣೆ Read More »

ಕರಾವಳಿ

ಪಂಜಿಕಲ್ಲು ಪದವು: ಜುಗಾರಿ ಅಡ್ಡೆಗೆ ದಾಳಿ ► ಎಂಟು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.14. ಅಕ್ರಮ ಜುಗಾರಿ ಅಡ್ಡೆಗೆ ದಾಳಿ ನಡೆಸಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದು, 5060 ರೂಪಾಯಿ, ಎರಡು ಸ್ಕೂಟರ್ ಹಾಗೂ ಐದು ಮೊಬೈಲ್ ಗಳನ್ನು ವಶಪಡಿಸಿಕೊಂಡ ಘಟನೆ ಠಾಣಾ ವ್ಯಾಪ್ತಿಯ ಪಂಜಿಕಲ್ಲುಪದವು ಎಂಬಲ್ಲಿ ಶುಕ್ರವಾರದಂದು ನಡೆದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣ ವ್ಯಾಪ್ತಿಯ ಪಂಜಿಕಲ್ಲುಪದವಿನ ಮಬ್ಬರಿಯ ಬೈಲು ಎಂಬಲ್ಲಿ ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಎಸ್ಪಿ ಡಾ.ರವಿಕಾಂತೇಗೌಡರವರ ನಿರ್ದೆಶನದಲ್ಲಿ ಬಂಟ್ವಾಳ ಗ್ರಾಮಾಂತರ

ಪಂಜಿಕಲ್ಲು ಪದವು: ಜುಗಾರಿ ಅಡ್ಡೆಗೆ ದಾಳಿ ► ಎಂಟು ಮಂದಿಯ ಬಂಧನ Read More »

ಕರಾವಳಿ

ನಕ್ಸಲ್ ಸೂಕ್ಷ್ಮ ಪ್ರದೇಶವಾದ ಬಿಳಿನೆಲೆ, ಕೈಕಂಬಗಳಿಗೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ ► ಸಾರ್ವಜನಿಕರೊಂದಿಗೆ ಸಂವಾದ

(ನ್ಯೂಸ್ ಕಡಬ) newskadaba.com ಕಡಬ, ಎ.13. ನಕ್ಸಲ್ ಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ವಿವಿಧೆಡೆಯ ಗ್ರಾಮೀಣ ಪ್ರದೇಶಗಳ ಮತಗಟ್ಟೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಶುಕ್ರವಾರದಂದು ಜಂಟಿಯಾಗಿ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ನಕ್ಸಲ್ ಸೂಕ್ಷ್ಮ ಪ್ರದೇಶಗಳಾದ ಕೊಣಾಜೆ, ಕೊಂಬಾರು, ಬಿಳಿನೆಲೆ ಹಾಗೂ ಕೈಕಂಬ ಮತಗಟ್ಟೆಗಳಿಗೆ‌ ಭೇಟಿ‌ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮುಂಬರುವ ವಿಧಾನಸಭಾ ಚುನಾವಣೆಯು ಸುಗಮ ರೀತಿಯಲ್ಲಿ ನಡೆಯಲು ಸರ್ವ ಸಿದ್ಧತೆಗಳನ್ನು ಏರ್ಪಡಿಸಲಾಗಿದೆ.

ನಕ್ಸಲ್ ಸೂಕ್ಷ್ಮ ಪ್ರದೇಶವಾದ ಬಿಳಿನೆಲೆ, ಕೈಕಂಬಗಳಿಗೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ ► ಸಾರ್ವಜನಿಕರೊಂದಿಗೆ ಸಂವಾದ Read More »

ಕರಾವಳಿ

ಸುಳ್ಯ: ಇಂಜಿನಿಯರಿಂಗ್ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಳ್ಯ, ಎ.13. ಇಲ್ಲಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಪ್ರಥಮ ಬಿ.ಇ. ವಿದ್ಯಾರ್ಥಿನಿ, ಬೆಟ್ಟಂಪಾಡಿ ನಿವಾಸಿ ವಿಶ್ವನಾಥ ಆಚಾರ್ಯ ಎಂಬವರ ಪುತ್ರಿ ಶಿವಾನಿ ಎನ್.ವಿ‌. ಎಂದು ಗುರುತಿಸಲಾಗಿದೆ. ಈಕೆ ಗುರುವಾರದಂದು ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಪುತ್ತೂರು ಪೊಲೀಸರು

ಸುಳ್ಯ: ಇಂಜಿನಿಯರಿಂಗ್ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ Read More »

ಕರಾವಳಿ

ಕಡಬ: ಮನೆಯ ಪರಿಸರ ಸ್ವಚ್ಛತೆಗೆ ಹಾಕಿದ ಬೆಂಕಿಗೆ ಹುಣಸೆ ಮರ ಆಹುತಿ ► ಅಗ್ನಿಶಾಮಕ ದಳದವರ ಆಗಮನದಿಂದ ತಪ್ಪಿತು ಸಂಭಾವ್ಯ ಅನಾಹುತ

(ನ್ಯೂಸ್ ಕಡಬ) newskadaba.com ಕಡಬ, ಎ.13. ಮನೆಯ ಪಕ್ಕದಲ್ಲಿ ಕಾಡುಹುಲ್ಲುಗಳು ಬೆಳೆದಿರುವುದನ್ನು ಉರಿಸಲೆಂದು ಹಾಕಿದ ಬೆಂಕಿಯು ಮರಕ್ಕೆ ಹಿಡಿದಿದ್ದು, ಬಳಿಕ ಪುತ್ತೂರು ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿದ ಘಟನೆ ಶುಕ್ರವಾರದಂದು ಬೆಳಿಗ್ಗೆ ನಡೆದಿದೆ. ಎರಡು ದಿನಗಳ ಹಿಂದೆ ಪರಿಸರವನ್ನು ಸ್ವಚ್ಚಗೊಳಿಸಲೆಂದು ಹಾಕಿದ ಬೆಂಕಿಯು ಹುಣಸೆ ಮರಕ್ಕೆ ಹಿಡಿದಿದ್ದು, ಆ ಬಳಿಕ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿದ್ದರು. ಆದರೆ ಶುಕ್ರವಾರದಂದು ಬೆಳಿಗ್ಗೆ ಮರದಲ್ಲಿ ಬೆಂಕಿ‌ ಕಾಣಿಸಿಕೊಂಡಿದ್ದು, ಬಳಿಕ ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಎರಡನೇ ಬಾರಿಗೆ

ಕಡಬ: ಮನೆಯ ಪರಿಸರ ಸ್ವಚ್ಛತೆಗೆ ಹಾಕಿದ ಬೆಂಕಿಗೆ ಹುಣಸೆ ಮರ ಆಹುತಿ ► ಅಗ್ನಿಶಾಮಕ ದಳದವರ ಆಗಮನದಿಂದ ತಪ್ಪಿತು ಸಂಭಾವ್ಯ ಅನಾಹುತ Read More »

ಕರಾವಳಿ

ಸ್ವಚ್ಛ ಗ್ರಾಮ ಖ್ಯಾತಿಯ ಕಡಬದಲ್ಲಿ ಮರೀಚಿಕೆಯಾದ ಸ್ವಚ್ಚತೆ ► ರಸ್ತೆಯಲ್ಲೇ ಹರಿಯುತ್ತಿದೆ ಹೊಟೇಲ್ ಗಳ ಹೊಲಸು ನೀರು

(ನ್ಯೂಸ್ ಕಡಬ) newskadaba.com ಕಡಬ, ಎ.12. ಕಡಬ ಪೇಟೆಯಲ್ಲಿ ಹೊಟೇಲ್ ಗಳ ದ್ರವ ತಾಜ್ಯ ಹರಿಯುವ ಪೈಪ್ ಒಡೆದು ಹೊಲಸು ನೀರು ರಸ್ತೆಯ ಬದಿಯಲ್ಲಿ ಉಕ್ಕಿ ಹರಿಯುತ್ತಿರುವ ಪರಿಣಾಮ ವಿಪರೀತ ದುರ್ವಾಸನೆ ಬೀರುತ್ತಿದ್ದು, ಸ್ಥಳೀಯ ವರ್ತಕರು ಹಾಗೂ ಸಾರ್ವಜನಿಕರು ಪಂಚಾಯತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಡಬ ಪೇಟೆಯ ಹೊಟೇಲ್ ಗಳು ಹಾಗೂ ರೆಸ್ಟೋರೆಂಟ್ ಗಳ ದ್ರವತ್ಯಾಜ್ಯವನ್ನು ದ್ರವತ್ಯಾಜ್ಯ ವಿಲೇವಾರಿ ಘಟಕಕ್ಕೆ ಹರಿಸಲು ಅಳವಡಿಸಲಾಗಿರುವ ಪೈಪ್ ಒಡೆದ ಪರಿಣಾಮ ಕಳೆದ ಆರು ದಿನಗಳಿಂದ ದುರ್ಗಂಧಪೂರಿತ ಹೊಲಸು ನೀರು ರಸ್ತೆಯ ಪಕ್ಕದಲ್ಲಿಯೇ

ಸ್ವಚ್ಛ ಗ್ರಾಮ ಖ್ಯಾತಿಯ ಕಡಬದಲ್ಲಿ ಮರೀಚಿಕೆಯಾದ ಸ್ವಚ್ಚತೆ ► ರಸ್ತೆಯಲ್ಲೇ ಹರಿಯುತ್ತಿದೆ ಹೊಟೇಲ್ ಗಳ ಹೊಲಸು ನೀರು Read More »

ಕರಾವಳಿ

ನಾಳೆ (ಎ.13) ‘ಜೋಗಿಬೆಟ್ಟು ನಿಲಯ’ ಗೃಹಪ್ರವೇಶ

(ನ್ಯೂಸ್ ಕಡಬ) newskadaba.com ಕಡಬ, ಎ.12. ಇಲ್ಲಿನ ಕೋಡಿಂಬಾಳ ಸಮೀಪದ ಜೋಗಿಬೆಟ್ಟು ಎಂಬಲ್ಲಿ ಕಳೆದ ಮಾರ್ಚ್ 23 ನೇ ಶುಕ್ರವಾರದಂದು ಕಾರಣಾಂತರಗಳಿಂದ ಮುಂದೂಡಲಾಗಿದ್ದ ‘ಜೋಗಿಬೆಟ್ಟು ನಿಲಯ’ ಗೃಹಪ್ರವೇಶವು ಎಪ್ರಿಲ್ 13 ಶುಕ್ರವಾರದಂದು ನಡೆಯಲಿದೆ. ಆಮಂತ್ರಣ ಸಿಗದ ಬಂಧು – ಮಿತ್ರರು ಇದೇ ಆಮಂತ್ರಣವೆಂದು ಪರಿಗಣಿಸಿ ಆಗಮಿಸಿ ಶುಭಾಶೀರ್ವದಿಸಬೇಕೆಂದು ಮಾಲಕರಾದ ನಾರಾಯಣ ಗೌಡರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448100502 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ನಾಳೆ (ಎ.13) ‘ಜೋಗಿಬೆಟ್ಟು ನಿಲಯ’ ಗೃಹಪ್ರವೇಶ Read More »

ಕರಾವಳಿ
Scroll to Top