News Kadaba Desk

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿಯಾಗಿ ► ಆಶಾ ಲಕ್ಷ್ಮಣ್ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಮೇ.03. ದ.ಕ.ಜಿಲ್ಲಾ ಕಾಂಗ್ರೆಸ್ ಇದರ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿಯನ್ನಾಗಿ ತಾ.ಪಂ.ಸದಸ್ಯೆ ಆಶಾ ಲಕ್ಷ್ಮಣ್ ರನ್ನು ನೇಮಕಗೊಳಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಇತರ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಪಿ.ಧರಣೇಂದ್ರ ಕುಮಾರ್ ರವರು ಆದೇಶಿಸಿದ್ದಾರೆ. ರಾಷ್ಟ್ರೀಯ ಹಾಗೂ ರಾಜ್ಯ ಕಾಂಗ್ರೆಸ್ ವರಿಷ್ಠರ ನಿರ್ದೇಶನದ ಮೇರೆಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ರಘು ಮತ್ತು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡರ […]

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿಯಾಗಿ ► ಆಶಾ ಲಕ್ಷ್ಮಣ್ ನೇಮಕ Read More »

ಕರಾವಳಿ

ಮೂಡಿಗೆರೆ: ಇನ್ನೋವಾ – ಲಾರಿ ಢಿಕ್ಕಿ ► ಮಂಗಳೂರಿನ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಮೇ.03. ಇನ್ನೋವಾ ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮಂಗಳೂರಿನ ಮಹಿಳೆಯರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಅಪರಾಹ್ನ ಮೂಡಿಗೆರೆಯಲ್ಲಿ‌ ಸಂಭವಿಸಿದೆ. ಮೃತರನ್ನು ಮಂಗಳೂರು ತಾಲೂಕಿನ ನಾಟೆಕಲ್ ನಿವಾಸಿಗಳಾದ ಅಸ್ಮಾ (50) ಹಾಗೂ ಸೌದಾ (48) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಆರು ಮಂದಿ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಟೆಕಲ್‌ ನಿವಾಸಿ ಇಸ್ಮಾಯಿಲ್ ಎಂಬವರು ತನ್ನ ಕುಟುಂಬ ಸಮೇತ ಬಾಡಿಗೆ ಇನ್ನೋವಾದಲ್ಲಿ ತೆರಳುತ್ತಿದ್ದಾಗ ಮೂಡಿಗೆರೆಯ ಕೃಷ್ಣಾಪುರ ಎಂಬಲ್ಲಿ

ಮೂಡಿಗೆರೆ: ಇನ್ನೋವಾ – ಲಾರಿ ಢಿಕ್ಕಿ ► ಮಂಗಳೂರಿನ ಇಬ್ಬರು ಮೃತ್ಯು Read More »

ಕರಾವಳಿ

ವಿಧಾನಸಭಾ ಚುನಾವಣಾ ಹಿನ್ನೆಲೆ ► ಕಡಬ ಪೇಟೆಯಲ್ಲಿ ಬಿಎಸ್ಎಫ್ ಯೋಧರಿಂದ ಪಥ ಸಂಚಲನ

(ನ್ಯೂಸ್ ಕಡಬ) newskadaba.com ಕಡಬ, ಮೇ‌.03. ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಕಡಬ ಮುಖ್ಯ ಪೇಟೆಯಲ್ಲಿ ಬಿಎಸ್ಎಫ್ ಪಡೆ ಹಾಗೂ ಕಡಬ ಪೊಲೀಸರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕಡಬ ಮುಖ್ಯ ಪೇಟೆಯಿಂದ ಬಾಜಿನಡಿ ವರೆಗೆ ಪಥ ಸಂಚಲನ ನಡೆಸಿ ನಿರ್ಭಯವಾಗಿ ಮತದಾನ ನಡೆಸಲು ಜಾಗೃತಿ ಮೂಡಿಸಲಾಯಿತು. ಪಥ ಸಂಚಲನದಲ್ಲಿ ಬಿಎಸ್ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಭಾಗೀರಥ್ ಬಿಷ್ಣೋಯ್ ಹಾಗೂ ಸಿಬ್ಬಂದಿಗಳು, ಕಡಬ ಠಾಣಾ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ವಿಧಾನಸಭಾ ಚುನಾವಣಾ ಹಿನ್ನೆಲೆ ► ಕಡಬ ಪೇಟೆಯಲ್ಲಿ ಬಿಎಸ್ಎಫ್ ಯೋಧರಿಂದ ಪಥ ಸಂಚಲನ Read More »

ಕರಾವಳಿ

ಹೃದಯಾಘಾತ: ಕಡಬ ಮೆಸ್ಕಾಂ ಜೆಇ ಪಂಚಾಕ್ಷರಿ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಮೇ.03. ಇಲ್ಲಿನ ಮೆಸ್ಕಾಂ ಕಛೇರಿಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ‌ ಪಂಚಾಕ್ಷರಿ ಹೃದಯಾಘಾತದಿಂದ ನಿಧನರಾದರು. ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ನಿವಾಸಿಯಾಗಿದ್ದ ಇವರು ಲೈನ್ ಮ್ಯಾನ್ ಆಗಿ ಮೆಸ್ಕಾಂ ಇಲಾಖೆಗೆ ಕರ್ತವ್ಯಕ್ಕೆ ಹಾಜರಾಗಿ ಪದೋನ್ನತಿಗೊಂಡು ಜೆಇಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಪ್ಪಿನಂಗಡಿ ಹಾಗೂ ಆಲಂಕಾರಿನಲ್ಲಿ ಪ್ರಭಾರ ಜೆಇಯಾಗಿ ಕರ್ತವ್ಯ ನಿರ್ವಹಿಸಿ, ಪ್ರಸಕ್ತ ಕಡಬದ ಪವರ್ ಸ್ಟೇಷನ್ ನಲ್ಲಿ ಜೆಇಯಾಗಿ ಸೇವೆಯಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರರಿಬ್ಬರನ್ನು ಅಗಲಿದ್ದಾರೆ.

ಹೃದಯಾಘಾತ: ಕಡಬ ಮೆಸ್ಕಾಂ ಜೆಇ ಪಂಚಾಕ್ಷರಿ ನಿಧನ Read More »

ಕರಾವಳಿ

ಪತ್ನಿಯೊಂದಿಗೆ ಕೃಷ್ಣ ಮಠಕ್ಕೆ ಭೇಟಿ ನೀಡಿದ ಇಂಧನ ಸಚಿವ ► ಈ ಸಲ ಧರ್ಮ ಮತ್ತು ಅಧರ್ಮದ ನಡುವಿನ ಚುನಾವಣೆ: ಡಿಕೆಶಿ

(ನ್ಯೂಸ್ ಕಡಬ) newskadaba.com ಉಡುಪಿ, ಮೇ.03. ಈ ಬಾರಿ ಧರ್ಮ ಮತ್ತು ಅಧರ್ಮದ ನಡುವಿನ ಚುನಾವಣೆಯಾಗಿದ್ದು, ಧರ್ಮವು ಜಯಿಸಲಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು. ತನ್ನ ಧರ್ಮಪತ್ನಿಯ ಜೊತೆಗೆ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದ, ನಮ್ಮದು ಧರ್ಮ – ಬಿಜೆಪಿಯದ್ದು ಅಧರ್ಮವಾಗಿದೆ. ಮಠಕ್ಕೆ ಬರುವುದು ಬಿಡುವುದು ಅವರವರ ವೈಯಕ್ತಿಕ ವಿಚಾರವಾಗಿದ್ದು, ಸಿದ್ದರಾಮಯ್ಯ ಮಠಕ್ಕೆ ಬರಲಿಲ್ಲ ಎನ್ನುವ ಆರೋಪಕ್ಕೆ ಉತ್ತರಿಸಿದ ಸಚಿವರು, ಮಠಕ್ಕೆ ಬರದಿದ್ದರೂ ಮುಜರಾಯಿ ಇಲಾಖೆಯನ್ನು ಮುಚ್ಚಲಿಲ್ಲವಲ್ಲ. ಮಠಕ್ಕೆ

ಪತ್ನಿಯೊಂದಿಗೆ ಕೃಷ್ಣ ಮಠಕ್ಕೆ ಭೇಟಿ ನೀಡಿದ ಇಂಧನ ಸಚಿವ ► ಈ ಸಲ ಧರ್ಮ ಮತ್ತು ಅಧರ್ಮದ ನಡುವಿನ ಚುನಾವಣೆ: ಡಿಕೆಶಿ Read More »

ಕರಾವಳಿ

ಕಡಬ ಪರಿಸರದಲ್ಲಿ ಮುಂದುವರಿದ ದನಗಳ್ಳರ‌ ಅಟ್ಟಹಾಸ ► ಮರ್ಧಾಳದಲ್ಲಿ ರಸ್ತೆ ಬದಿಯಲ್ಲಿನ ದನ ಕಳ್ಳತನಕ್ಕೆ ವಿಫಲ ಯತ್ನ

(ನ್ಯೂಸ್ ಕಡಬ) newskadaba.com ಕಡಬ, ಮೇ.03. ಕೆಲ ಸಮಯಗಳಿಂದ ಶಾಂತವಾಗಿದ್ದ ಕಡಬದಲ್ಲಿ ದನಗಳ್ಳರ ಅಟ್ಟಹಾಸ ಮುಂದುವರಿದಿದ್ದು, ಬುಧವಾರ ರಾತ್ರಿ ಮರ್ಧಾಳದಲ್ಲಿ ದನಗಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ಮರ್ಧಾಳ ಮುಖ್ಯ ಪೇಟೆಯ ಸರಕಾರಿ ಶಾಲಾ ಮುಂಭಾಗದಲ್ಲಿ ಮಲಗಿದ್ದ ದನಗಳನ್ನು ಬುಧವಾರ ರಾತ್ರಿ ಎರಡು ಗಂಟೆಯ ಸುಮಾರಿಗೆ ಸ್ಕಾರ್ಪಿಯೋದಲ್ಲಿ ಬಂದ ತಂಡವೊಂದು ಎತ್ತಿ ಕಾರಿನೊಳಗಡೆ ಹಾಕುತ್ತಿದ್ದಾಗ ಶಬ್ದ ಕೇಳಿ ಎಚ್ಚರಗೊಂಡ ಸ್ಥಳೀಯ ವ್ಯಕ್ತಿಯೋರ್ವರು ಮನೆಯಿಂದ ಹೊರಬಂದರೆನ್ನಲಾಗಿದೆ‌. ಈ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಬೊಬ್ಬೆ ಹೊಡೆದು ಓಡಿಸಿದ ಕಳ್ಳರು ದೊಡ್ಡ ಕಲ್ಲೊಂದನ್ನು

ಕಡಬ ಪರಿಸರದಲ್ಲಿ ಮುಂದುವರಿದ ದನಗಳ್ಳರ‌ ಅಟ್ಟಹಾಸ ► ಮರ್ಧಾಳದಲ್ಲಿ ರಸ್ತೆ ಬದಿಯಲ್ಲಿನ ದನ ಕಳ್ಳತನಕ್ಕೆ ವಿಫಲ ಯತ್ನ Read More »

ಕರಾವಳಿ

ಬೆಳ್ತಂಗಡಿ: ಮಾತೃ ಪಕ್ಷದ ‘ಕೈ’ ಹಿಡಿದ ಬಿಜೆಪಿ ಮುಖಂಡ ► ಕಾಂಗ್ರೆಸ್ ಸೇರಿದ ಮರು ಕ್ಷಣವೇ ಸ್ಪೋಟಕ ಮಾಹಿತಿ ನೀಡಿದ ಗಂಗಾಧರ ಗೌಡ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.03. ಬಿಜೆಪಿ ಪಾಳಯದಲ್ಲಿ ಸಕ್ರಿಯರಾಗಿದ್ದ ಹಿರಿಯ ಮುಖಂಡ ಗಂಗಾಧರ ಗೌಡ ಬುಧವಾರದಂದು ಬೆಳ್ತಂಗಡಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸಮ್ಮುಖದಲ್ಲಿ ಮಾತೃ ಪಕ್ಷದ ಕೈ ಹಿಡಿದಿದ್ದಾರೆ. ಈ ಸಲ ಬೆಳ್ತಂಗಡಿಯಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದ ಬಿಜೆಪಿಗೆ ಇದರಿಂದಾಗಿ ದೊಡ್ಡ ಆಘಾತವೊಂದು ಎದುರಾಗಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗಂಗಾಧರ ಗೌಡ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ

ಬೆಳ್ತಂಗಡಿ: ಮಾತೃ ಪಕ್ಷದ ‘ಕೈ’ ಹಿಡಿದ ಬಿಜೆಪಿ ಮುಖಂಡ ► ಕಾಂಗ್ರೆಸ್ ಸೇರಿದ ಮರು ಕ್ಷಣವೇ ಸ್ಪೋಟಕ ಮಾಹಿತಿ ನೀಡಿದ ಗಂಗಾಧರ ಗೌಡ Read More »

ಕರಾವಳಿ

ವಿಜೃಂಭಣೆಯಿಂದ ನಡೆಯುತ್ತಿರುವ ಇಚಿಲಂಪಾಡಿ ಸಂತ ಜಾರ್ಜ್ ಚರ್ಚ್‌ನ ವಾರ್ಷಿಕ ಹಬ್ಬ ► ಉರುಳು ಸೇವೆ, ಮೊಣಕಾಲು ನಡಿಗೆ ಸೇರಿದಂತೆ ಹಲವು ಹರಕೆಗಳ ಕಾರಣಿಕ ಕ್ಷೇತ್ರ

(ನ್ಯೂಸ್ ಕಡಬ) newskadaba.com ಕಡಬ, ಮೇ.03. ಜಾರ್ಜಿಯನ್ ತೀರ್ಥಾಟನಾ ಕೇಂದ್ರವೆಂದೇ ಪ್ರಖ್ಯಾತಿ ಪಡೆದ ಇಚಿಲಂಪಾಡಿಯ ಸಂತ ಜಾರ್ಜ್ ಆರ್ಥಡಾಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬವು ಮೇ ತಿಂಗಳು ಒಂದನೇ ತಾರೀಖಿನಂದು ದಿವ್ಯ ಬಲಿಪೂಜೆ ಹಾಗೂ ಧ್ವಜಾರೋಹಣದೊಂದಿಗೆ ಆರಂಭಗೊಂಡಿದ್ದು, ಏಳನೇ ತಾರೀಖಿನಂದು ಸಮಾಪನಾ ಆಶೀರ್ವಾದದೊಂದಿಗೆ ಕೊನೆಗೊಳ್ಳಲಿದೆ. ವಿಶೇಷ ಕಾರಣಿಕ ಸ್ಥಳವಾದ ಸಂತ ಜಾರ್ಜ್ ಚರ್ಚ್ ಜಾತ್ರೆಗೆ ಜಾತಿ, ಮತ, ವರ್ಣ ಎಂಬ ಭೇದ ಭಾವವಿಲ್ಲದೇ ಸಾವಿರಾರು ಜನರು ಭಾಗವಹಿಸುವುದು ವಾಡಿಕೆ. ಇಲ್ಲಿ ಉರುಳು ಸೇವೆ, ಮೊಣಕಾಲಿನ ನಡಿಗೆ, ಶಿಲುಬೆ,

ವಿಜೃಂಭಣೆಯಿಂದ ನಡೆಯುತ್ತಿರುವ ಇಚಿಲಂಪಾಡಿ ಸಂತ ಜಾರ್ಜ್ ಚರ್ಚ್‌ನ ವಾರ್ಷಿಕ ಹಬ್ಬ ► ಉರುಳು ಸೇವೆ, ಮೊಣಕಾಲು ನಡಿಗೆ ಸೇರಿದಂತೆ ಹಲವು ಹರಕೆಗಳ ಕಾರಣಿಕ ಕ್ಷೇತ್ರ Read More »

ಕರಾವಳಿ

ಬಂಟ್ವಾಳ: ಕಮರಿಗೆ ಉರುಳಿದ ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿ ► ಚಾಲಕ ಮೃತ್ಯು, ಕ್ಲೀನರ್ ಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮೇ.03. ಕೆಂಪು ಕಲ್ಲು ಸಾಗಾಟದ ಲಾರಿಯೊಂದು ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ ಚಾಲಕ ಮೃತಪಟ್ಟು, ಕ್ಲೀನರ್ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಪಚ್ಚಿನಡ್ಕ ಸಮೀಪದ ಕಲ್ಪನೆ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಮೃತ ಚಾಲಕನನ್ನು ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ನಿವಾಸಿ ಪುತ್ತುಮೋನು ಎಂಬವರ ಪುತ್ರ ಅಶ್ರಫ್ (35) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕ್ಲೀನರ್ ಮಚ್ಚಿನಡ್ಕದ ಶೇಕಬ್ಬ ಬ್ಯಾರಿ ಎಂಬವರ ಪುತ್ರ ಅಬ್ದುಲ್ ಕರೀಂ(40) ಗಾಯಗೊಂಡಿದ್ದು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಂಟ್ವಾಳ: ಕಮರಿಗೆ ಉರುಳಿದ ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿ ► ಚಾಲಕ ಮೃತ್ಯು, ಕ್ಲೀನರ್ ಗೆ ಗಾಯ Read More »

ಕರಾವಳಿ

ನಕಲಿ ಪಾಸ್‌ಪೋರ್ಟ್ ಜಾಲ ಪ್ರಕರಣ ► ಓರ್ವ ಆರೋಪಿಯನ್ನು ಕೈಬಿಟ್ಟ ಸಿಬಿಐ ನ್ಯಾಯಾಲಯ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.02. ನಕಲಿ ಪಾಸ್‌ಪೋರ್ಟ್ ಜಾಲಕ್ಕೆ ಸಂಬಂಧಿಸಿ 20 ಮಂದಿ ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣದಿಂದ ಓರ್ವ ಆರೋಪಿಯನ್ನು ಸಿಬಿಐ ನ್ಯಾಯಾಲಯವು ಕೈಬಿಟ್ಟಿದೆ. 2015 ರಲ್ಲಿ ನಕಲಿ ಪಾಸ್‌ಪೋರ್ಟ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಚೆನ್ನೈನ ಸಿಬಿಐ ಪೊಲೀಸರು 20 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮಂಗಳೂರು, ಹುಬ್ಬಳ್ಳಿಯ ಪಾಸ್‌ಪೋರ್ಟ್ ಇಲಾಖೆಯ ಇಬ್ಬರು ಅಧಿಕಾರಿಗಳು ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದರು. 2016 ರಲ್ಲಿ ಕೇರಳದ ಕಾಸರಗೋಡಿನ ಇಬ್ರಾಹಿಂ ಮೊಹಿನ್ ಎಂಬಾತನನ್ನು ಬಂಧಿಸಲಾಗಿತ್ತು. ಈ ಪ್ರಕರಣದ

ನಕಲಿ ಪಾಸ್‌ಪೋರ್ಟ್ ಜಾಲ ಪ್ರಕರಣ ► ಓರ್ವ ಆರೋಪಿಯನ್ನು ಕೈಬಿಟ್ಟ ಸಿಬಿಐ ನ್ಯಾಯಾಲಯ Read More »

ಕರಾವಳಿ
Scroll to Top