News Kadaba Desk

ಬಂಟ್ವಾಳ: ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ► ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮೇ.06. ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಶನಿವಾರದಂದು ಬಂಧಿಸಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಇಜ್ಜಾ ಗ್ರಾಮದ ಅಗ್ರಹಾರ ನಿವಾಸಿ ಶಶಿಧರ್(19) ಎಂದು ಗುರುತಿಸಲಾಗಿದೆ. ಆರೋಪಿಯು ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ಬಾಲಕಿಯ ಷೋಷಕರು ನೀಡಿದ್ದ ದೂರಿನಂತೆ ಬಂಟ್ವಾಳ ಪೊಲೀಸರು ಆರೋಪಿಯನ್ನು ಶನಿವಾರದಂದು ಬಂಧಿಸಿ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಟ್ವಾಳ: ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ► ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ Read More »

ಕರಾವಳಿ

ಬಂಟ್ವಾಳ: ವಾಹನ ಚಾಲಕರ ದರೋಡೆಗೆ ಹೊಂಚು ► ಖಾರದ ಪುಡಿ, ಆಯುಧಗಳ ಸಮೇತ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.06. ದರೋಡೆಗೈಯಲು ಹೊಂಚು ಹಾಕಿ ಕುಳಿತಿದ್ದ ಆರು ಮಂದಿ ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಚಾಕು, ಕಬ್ಬಿಣದ ರಾಡ್ ಹಾಗೂ ಖಾರದ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಉಳ್ಳಾಲ ಮಿಲ್ಲತ್ ನಗರದ ಫಲಾಲ್ ಮಂಝಿಲ್‌ ನಿವಾಸಿ ಮಹಮ್ಮದ್ ಅರ್ಪಾಜ್(19) ಹಾಗೂ ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಮಹಮ್ಮದ್ ಸುಹೈಲ್(27) ಎಂದು ಗುರುತಿಸಲಾಗಿದೆ. ಶುಕ್ರವಾರ ತಡರಾತ್ರಿ ಫರಂಗಿಪೇಟೆ, ಮಾರಿಪಳ್ಳ ಪರಿಸರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ರೊಟ್ಟಿಗುಡ್ಡೆ ಎಂಬಲ್ಲಿ ಆರು ಮಂದಿಯ

ಬಂಟ್ವಾಳ: ವಾಹನ ಚಾಲಕರ ದರೋಡೆಗೆ ಹೊಂಚು ► ಖಾರದ ಪುಡಿ, ಆಯುಧಗಳ ಸಮೇತ ಇಬ್ಬರ ಬಂಧನ Read More »

ಕರಾವಳಿ

ಅಭಿವೃದ್ಧಿ ಕಾಣದ ಪದವು – ಕೆದ್ದೋಟೆ – ಕುಂತೂರು ಕಚ್ಚಾ ರಸ್ತೆ ► ಮುಂದಿನ ಹೆಜ್ಜೆಯ ಬಗ್ಗೆ ಸಭೆ ಸೇರಿದ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಕಡಬ, ಮೇ.06. ಕಳೆದ ಹಲವು ವರ್ಷಗಳಿಂದ ಬೇಡಿಕೆಯಾದ ಪದವಿನಿಂದ ಕೆದ್ದೋಟೆ – ಇಡಾಳ – ಕುಂಟ್ಯಾನ ಮೂಲಕ ಕುಂತೂರಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ಕಚ್ಚಾ ರಸ್ತೆಯನ್ನು ದುರಸ್ಥಿ ಮಾಡದ ವಿಚಾರದಲ್ಲಿ ಇಡೀ ಗ್ರಾಮಸ್ಥರಿಗೆ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕೆದ್ದೋಟೆ ಶ್ರೀ ರಾಮ ಭಜನಾ ಮಂದಿರದಲ್ಲಿ ಗ್ರಾಮಸ್ಥರ ಸಭೆಯು ಶನಿವಾರ ನಡೆಯಿತು. ಗ್ರಾಮೀಣ ಯುವಕರು ರಸ್ತೆ ಅಭಿವೃದ್ಧಿಯ ವಿಚಾರದಲ್ಲಿ ವಾಟ್ಸಪ್ ಗ್ರೂಪ್ ರಚಿಸಿಕೊಂಡು ಚರ್ಚಿಸಿ ಕೊನೆಗೆ ಶನಿವಾರ ರಾತ್ರಿ ಸಭೆ ಕರೆದಿದ್ದರು.

ಅಭಿವೃದ್ಧಿ ಕಾಣದ ಪದವು – ಕೆದ್ದೋಟೆ – ಕುಂತೂರು ಕಚ್ಚಾ ರಸ್ತೆ ► ಮುಂದಿನ ಹೆಜ್ಜೆಯ ಬಗ್ಗೆ ಸಭೆ ಸೇರಿದ ಗ್ರಾಮಸ್ಥರು Read More »

ಕರಾವಳಿ

ರಾಜ್ಯದಲ್ಲಿ ಬಿಜೆಪಿ ಪಕ್ಷವು ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯಲಿದೆ ► ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.06. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ನೀರಿಲ್ಲದ ಮೀನಿನಂತೆ ಒದ್ದಾಡುತ್ತಿದ್ದು, ಮೇ 12 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬರಲಿದೆ ಎಂದು ಪ್ರಚಾರ ಪಡಿಸಿ ಮತದಾರರನ್ನು ಅತಂತ್ರರನ್ನಾಗಿಸುವ ಪ್ರಯತ್ನ ನಡೆಯುತ್ತಿದ್ದು, ರಾಜ್ಯದಲ್ಲಿ ಆಡಳಿತ

ರಾಜ್ಯದಲ್ಲಿ ಬಿಜೆಪಿ ಪಕ್ಷವು ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯಲಿದೆ ► ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ Read More »

ಕರಾವಳಿ

ಅಡ್ಡಹೊಳೆ: ಸೈಂಟ್ ಜಾರ್ಜ್ ಜಾಕೋಬೈಟ್ ಸಿರಿಯನ್ ಚರ್ಚ್‌ನ ► ಇಂದು ಮತ್ತು ನಾಳೆ ಸಂತ ಜಾರ್ಜರ ಸ್ಮರಣೆ ಹಬ್ಬ

(ನ್ಯೂಸ್ ಕಡಬ) newskadaba.com ಕಡಬ, ಮೇ.05. ಅಡ್ಡಹೊಳೆ‌ ಸೈಂಟ್ ಜಾರ್ಜ್ ಜಾಕೋಬೈಟ್ ಸಿರಿಯನ್ ಚರ್ಚ್‌ನಲ್ಲಿ ಸಂತ ಜಾರ್ಜರ ಸ್ಮರಣೆ ಹಬ್ಬವು ಇಂದು (ಮೇ 05) ಆರಂಭಗೊಂಡಿದ್ದು, ಭಾನುವಾರ ಅಪರಾಹ್ನ ಸಮಾಪನಗೊಳ್ಳಲಿದೆ. ಇಂದು ಪೂರ್ವಾಹ್ನ‌ 7 ಗಂಟೆಗೆ ಪ್ರಭಾತ ಪ್ರಾರ್ಥನೆಯೊಂದಿಗೆ ಆರಂಭಗೊಂಡಿದ್ದು, ದಿವ್ಯ ಬಲಿಪೂಜೆ, ಹಾಗೂ ಧ್ವಜಾರೋಹಣ ನೆರವೇರಿದೆ. ಸಂಜೆ 06.30 ಕ್ಕೆ ಸಂಧ್ಯಾ ಪ್ರಾರ್ಥನೆ ನಡೆಯಲಿದ್ದು, ರಾತ್ರಿ 8 ಗಂಟೆಗೆ ಅಡ್ಡಹೊಳೆ ಮಲಂಕರ ಚರ್ಚಿಗೆ ವರ್ಣರಂಜಿತ ಮೆರವಣಿಗೆ ನಡೆಯಲಿದೆ. ಮೇ 06 ರಂದು ಪೂರ್ವಾಹ್ನ 8 ಗಂಟೆಗೆ

ಅಡ್ಡಹೊಳೆ: ಸೈಂಟ್ ಜಾರ್ಜ್ ಜಾಕೋಬೈಟ್ ಸಿರಿಯನ್ ಚರ್ಚ್‌ನ ► ಇಂದು ಮತ್ತು ನಾಳೆ ಸಂತ ಜಾರ್ಜರ ಸ್ಮರಣೆ ಹಬ್ಬ Read More »

ಕರಾವಳಿ

ಶಾಸಕ ಅಂಗಾರರ ಮುಖವನ್ನೇ ನೋಡಿಲ್ಲ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ► ಕಾಂಗ್ರೆಸ್‌ನ ದಬ್ಬಾಳಿಕೆ ನೀತಿಯನ್ನು ತೋರಿಸುತ್ತದೆ: ಬಿಜೆಪಿ ಮುಖಂಡ ಮುಳಿಯ ಕೇಶವ ಭಟ್

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.05. ಇಂಧನ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ಅವರು ಸುಳ್ಯ ಶಾಸಕ ಎಸ್.ಅಂಗಾರ ಮುಖವನ್ನೇ ನಾನು ಕಂಡಿಲ್ಲ ಎಂದು ಏಕವಚನದಲ್ಲಿ ಕೀಳಾಗಿ ಮಾತನ್ನಾಡಿದ್ದು, ಇದು ಕಾಂಗ್ರೆಸ್ಸಿನ ದಬ್ಬಾಳಿಕೆ ನೀತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಸುಳ್ಯ ಮಂಡಲ ಸಮಿತಿ ಮಾಧ್ಯಮ ಪ್ರಮುಖರಾದ ಮುಳಿಯ ಕೇಶವ ಭಟ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದ ಶಾಸಕರನ್ನು ಮೆಟ್ಟಿ ನಿಲ್ಲುವ ಕಾಂಗ್ರೆಸ್ಸಿನ ಇಂತಹ ಪ್ರವೃತ್ತಿಯನ್ನು ನಾವು ಖಂಡಿಸುತ್ತೇವೆ. ದಲಿತ ವರ್ಗದವರನ್ನು ಕಾಂಗ್ರೆಸ್‌ನವರು ಎಷ್ಟು

ಶಾಸಕ ಅಂಗಾರರ ಮುಖವನ್ನೇ ನೋಡಿಲ್ಲ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ► ಕಾಂಗ್ರೆಸ್‌ನ ದಬ್ಬಾಳಿಕೆ ನೀತಿಯನ್ನು ತೋರಿಸುತ್ತದೆ: ಬಿಜೆಪಿ ಮುಖಂಡ ಮುಳಿಯ ಕೇಶವ ಭಟ್ Read More »

ಕರಾವಳಿ

ವಿಧಾನಸಭಾ ಚುನಾವಣಾ ಹಿನ್ನೆಲೆ ► ಮೇ 12 ರಂದು ಎಲ್ಲಾ ಸರಕಾರಿ, ಖಾಸಗಿ ನೌಕರರಿಗೆ ವೇತನ ಸಹಿತ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.05. ವಿಧಾನಸಭಾ ಚುನಾವಣೆಯು ಮೇ 12 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಮೇ 12 ರಂದು ಎಲ್ಲಾ ಸರಕಾರಿ, ಖಾಸಗಿ ನೌಕರರಿಗೆ ವೇತನ ಸಹಿತ ರಜೆ ನೀಡುವಂತೆ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಿ ಕಚೇರಿಗಳಿಗೆ, ಶಾಲಾ -ಕಾಲೇಜುಗಳಿಗೆ, ಸಂಘ -ಸಂಸ್ಥೆಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ ಮೇ 12 ರಂದು ವೇತನ ಸಹಿತ ರಜೆ ಘೋಷಿಸಿದೆ. ಮೇ 15

ವಿಧಾನಸಭಾ ಚುನಾವಣಾ ಹಿನ್ನೆಲೆ ► ಮೇ 12 ರಂದು ಎಲ್ಲಾ ಸರಕಾರಿ, ಖಾಸಗಿ ನೌಕರರಿಗೆ ವೇತನ ಸಹಿತ ರಜೆ ಘೋಷಣೆ Read More »

ಕರ್ನಾಟಕ

ಭ್ರಷ್ಟಾಚಾರ ಮಾಡಿ ಬಂದವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ ► ಕಡಬದಲ್ಲಿ ನಡೆದ ಜೆಡಿಎಸ್ – ಬಿಎಸ್ಪಿ ಸಭೆಯಲ್ಲಿ ಬಿಎಸ್ಪಿ ಅಭ್ಯರ್ಥಿ ರಘು ಧರ್ಮಸೇನಾ

(ನ್ಯೂಸ್ ಕಡಬ) newskadaba.com ಕಡಬ, ಮೇ.04. ಭ್ರಷ್ಟಾಚಾರ ಮಾಡಿ ಬಂದವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ರಘು ಧರ್ಮಸೇನಾ ಹೇಳಿದರು. ಅವರು ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಕಡಬದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಶುಕ್ರವಾರ ಅಪರಾಹ್ನ ನಡೆದ ಜಾತ್ಯತೀತ ಜನತಾದಳ ಹಾಗೂ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ರಾಷ್ಟ್ರೀಯ ಪಕ್ಷಗಳು ಜನರನ್ನು ವಿವಿಧ ಆಮಿಷಗಳ ಮೂಲಕ ಹಾದಿ ತಪ್ಪಿಸಲು ಯತ್ನಿಸುತ್ತಿದೆ‌. ಜನರು ಯಾವುದೇ ಆಮಿಷಗಳಿಗೆ

ಭ್ರಷ್ಟಾಚಾರ ಮಾಡಿ ಬಂದವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ ► ಕಡಬದಲ್ಲಿ ನಡೆದ ಜೆಡಿಎಸ್ – ಬಿಎಸ್ಪಿ ಸಭೆಯಲ್ಲಿ ಬಿಎಸ್ಪಿ ಅಭ್ಯರ್ಥಿ ರಘು ಧರ್ಮಸೇನಾ Read More »

ಕರಾವಳಿ

ಬಿಜೆಪಿ ಪ್ರಣಾಳಿಕೆ ಬಿಡುಗಡೆ ► ರೈತರು, ಮಹಿಳೆಯರಿಗೆ ಹಲವು ಆಶ್ವಾಸನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ‌.04. ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿಯು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ರೈತರು, ಮಹಿಳೆಯರಿಗೆ ಹಲವು ಆಶ್ವಾಸನೆಗಳನ್ನು ನೀಡಿದೆ. ಶುಕ್ರವಾರದಂದು ರಾಜ್ಯ ರಾಜಧಾನಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ 1 ಲಕ್ಷ ರೂಪಾಯಿವರೆಗಿನ ಕೃಷಿ ಸಾಲ ಮತ್ತು ನೇಕಾರರ 1 ಲಕ್ಷ ರೂಪಾಯಿ ಸಾಲ ಮನ್ನಾ, ವಿವಾಹ ಮಂಗಳ ಯೋಜನೆ ಯಲ್ಲಿ ಬಡ ಯುವತಿಗೆ 25,000 ರೂ ಮತ್ತು 2.5 ಗ್ರಾಂ ಚಿನ್ನಾಭರಣ, ಸ್ತ್ರೀ ಶಕ್ತಿ ಸದಸ್ಯೆಯರಿಗೆ 2

ಬಿಜೆಪಿ ಪ್ರಣಾಳಿಕೆ ಬಿಡುಗಡೆ ► ರೈತರು, ಮಹಿಳೆಯರಿಗೆ ಹಲವು ಆಶ್ವಾಸನೆ Read More »

ಕರ್ನಾಟಕ

ಜಯನಗರ ಶಾಸಕ ಹೃದಯಾಘಾತದಿಂದ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.04. ಕಳೆದ ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಜಯನಗರ ಶಾಸಕ, ಬಿಜೆಪಿ ಅಭ್ಯರ್ಥಿ ಬಿ.ಎನ್.ವಿಜಯ ಕುಮಾರ್(60) ಶುಕ್ರವಾರ ಮುಂಜಾವ ನಿಧನರಾದರು. ಗುರುವಾರದಂದು ಚುನಾವಣಾ ಪ್ರಚಾರದ ವೇಳೆ ಕುಸಿದು ಆಸ್ಪತ್ರೆಗೆ ದಾಖಲಾಗಿದ್ದ ಅವರ ಹೃದಯ ಬಡಿತ ಹಾಗೂ ರಕ್ತದೊತ್ತಡದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಒಂದು ಗಂಟೆಯ ಸುಮಾರಿಗೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ಜಯನಗರದ ಹಾಲಿ ಬಿಜೆಪಿ ಶಾಸಕರಾಗಿದ್ದ ವಿಜಯ ಕುಮಾರ್ ಅವರು ಜಯನಗರ

ಜಯನಗರ ಶಾಸಕ ಹೃದಯಾಘಾತದಿಂದ ವಿಧಿವಶ Read More »

ಕರಾವಳಿ
Scroll to Top