News Kadaba Desk

ಕಲ್ಲಾಜೆ: ಕೆಎಸ್ಸಾರ್ಟಿಸಿ ಬಸ್ – ಟಾಟಾ ವೆಂಚರ್ ಪರಸ್ಪರ ಢಿಕ್ಕಿ ► ಓರ್ವ ಮಹಿಳೆ ಗಂಭೀರ, ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಜು.17. ಕೆಎಸ್ಸಾರ್ಟಿಸಿ ಎಕ್ಸ್‌ಪ್ರೆಸ್‌ ಬಸ್ ಹಾಗೂ ಟಾಟಾ ವೆಂಚರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮಹಿಳೆ ಗಂಭೀರ ಗಾಯಗೊಂಡು, ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಎಂಬಲ್ಲಿ ಮಂಗಳವಾರದಂದು ಸಂಭವಿಸಿದೆ‌. ಭಟ್ಕಳ ಮೂಲದ ಕುಟುಂಬವೊಂದು ಟಾಟಾ ವೆಂಚರ್ ವಾಹನದಲ್ಲಿ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದಾಗ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ ಕಲ್ಲಾಜೆ ತಿರುವಿನಲ್ಲಿ ಪರಸ್ಪರ […]

ಕಲ್ಲಾಜೆ: ಕೆಎಸ್ಸಾರ್ಟಿಸಿ ಬಸ್ – ಟಾಟಾ ವೆಂಚರ್ ಪರಸ್ಪರ ಢಿಕ್ಕಿ ► ಓರ್ವ ಮಹಿಳೆ ಗಂಭೀರ, ಹಲವರಿಗೆ ಗಾಯ Read More »

ಕರಾವಳಿ

ಉಪ್ಪಿನಂಗಡಿ: ದಂಪತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು.17. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರದಂದು ಉಪ್ಪಿನಂಗಡಿಯಲ್ಲಿ ನಡೆದಿದೆ. ಮೃತ ದಂಪತಿಯನ್ನು ಬಾರ್ಯ ಗ್ರಾಮದ ಪಿಳಿಗೂಡು ನಿವಾಸಿ ಸಂಜೀವ ಪೂಜಾರಿ (60) ಹಾಗೂ ಸೀತಾ (59) ಎಂದು ಗುರುತಿಸಲಾಗಿದೆ. ಸಂಜೀವ ಪೂಜಾರಿಯವರು ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿ ಕೆಲಸಕ್ಕೆ ಹೋಗಲು ಅಸಮರ್ಥರಾಗಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮನನೊಂದ ದಂಪತಿ ಸೋಮವಾರದಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಪ್ಪಿನಂಗಡಿ: ದಂಪತಿ ಆತ್ಮಹತ್ಯೆ Read More »

ಕರಾವಳಿ

ನೆಲ್ಯಾಡಿ: ವಿವಾಹಿತ ಮಹಿಳೆ ಹಾಗೂ ಮಕ್ಕಳಿಬ್ಬರ ಅಪಹರಣ ► ಆರೋಪಿ ಕಡಬ ನಿವಾಸಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜು.16. ವಿವಾಹಿತ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಅಪಹರಿಸಿಕೊಂಡು ಹೋಗಿದ್ದ ಪ್ರಕರಣವನ್ನು ಭೇದಿಸಿರುವ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೂಜಿಬಾಳ್ತಿಲ ಗ್ರಾಮದ ಕೈಪನಡ್ಕ ನಿವಾಸಿ ತೊಮಸ್. ಪಿ.ಕೆ. ಎಂಬವರ ಪುತ್ರ ಅನಿಲ್ ಎಂದು ಗುರುತಿಸಲಾಗಿದೆ. ನೆಲ್ಯಾಡಿ ಮೂಲದ ಮಹಿಳೆಯು ಜುಲೈ 11 ರಂದು ತನ್ನ ಇಬ್ಬರು ಮಕ್ಕಳನ್ನು ವಿಟ್ಲ ಸಮೀಪದ ಶಾಲೆಯೊಂದಕ್ಕೆ ಸೇರಿಸಲೆಂದು ತೆರಳಿದ್ದ ವೇಳೆ ಆರೋಪಿಯು ಮಕ್ಕಳ ಸಹಿತ ಮಹಿಳೆಯನ್ನು ಅಪಹರಿಸಿದ್ದಾನೆಂದು ಮಹಿಳೆಯ ಪತಿ ರಾಜೇಶ್ ಕಡಬ

ನೆಲ್ಯಾಡಿ: ವಿವಾಹಿತ ಮಹಿಳೆ ಹಾಗೂ ಮಕ್ಕಳಿಬ್ಬರ ಅಪಹರಣ ► ಆರೋಪಿ ಕಡಬ ನಿವಾಸಿಯ ಬಂಧನ Read More »

ಕರಾವಳಿ

ಹೊಸ್ಮಠ: ತಗ್ಗಿದ ನೀರಿನ ಪ್ರಮಾಣ ► ವಾರದ ನಂತರ ಸಂಚಾರ ಮುಕ್ತವಾದ ‘ಮುಳುಗು ಸೇತುವೆ’

(ನ್ಯೂಸ್ ಕಡಬ) newskadaba.com ಕಡಬ, ಜು.15. ಮುಳುಗು ಸೇತುವೆಯೆಂದೇ ಖ್ಯಾತಿ ಪಡೆದಿರುವ ಹೊಸ್ಮಠ ಸೇತುವೆಯ ಮೇಲೆ ಭಾನುವಾರ ಸಂಜೆ ನೀರಿನ ಹರಿವು ಇಳಿದ ಕಾರಣ ವಾರದ ನಂತರ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ ಒಂದು ವಾರದಿಂದ ಸೇತುವೆಯ ಮೇಲೆ ನೀರಿನ ಹರಿವು ಒಂದೇ ರೀತಿಯಲ್ಲಿ ಇದ್ದುದರಿಂದ ಸಂಚಾರಕ್ಕೆ ತಡೆಯುಂಟಾಗಿತ್ತು. ಇದರಿಂದಾಗಿ ಉಪ್ಪಿನಂಗಡಿ ಹಾಗೂ ಕಡಬ ಕಡೆಗೆ ತೆರಳುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಹಳೆಯ ಮುಳುಗು ಸೇತುವೆಯ ಪಕ್ಕದಲ್ಲೇ

ಹೊಸ್ಮಠ: ತಗ್ಗಿದ ನೀರಿನ ಪ್ರಮಾಣ ► ವಾರದ ನಂತರ ಸಂಚಾರ ಮುಕ್ತವಾದ ‘ಮುಳುಗು ಸೇತುವೆ’ Read More »

ಕರಾವಳಿ

ಪಂಜ: ಕೆಎಸ್ಸಾರ್ಟಿಸಿ ಬಸ್ – ಸ್ವಿಫ್ಟ್ ಡಿಸೈರ್ ಕಾರು ಢಿಕ್ಕಿ ► ಓರ್ವ ಗಂಭೀರ, ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಪಂಜ, ಜು.15. ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ವಿಫ್ಟ್ ಡಿಸೈರ್ ಕಾರು‌ನಡುವೆ ಪರಸ್ಪರ ಢಿಕ್ಕಿಯುಂಟಾದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಪಂಜದಲ್ಲಿ ನಡೆದಿದೆ. ಗಾಯಾಳು ಚಾಲಕನನ್ನು ಕಲ್ಮಕಾರಿನ ಅಂಜನಕಜೆ ನಿವಾಸಿ ರಾಮಣ್ಣ ಗೌಡರ ಪುತ್ರ ಗಿರೀಶ್ ಎಂದು ಗುರುತಿಸಲಾಗಿದೆ. ಇವರು ಸುಬ್ರಹ್ಮಣ್ಯದ ಮೋಹನ್‌ದಾಸ್ ರೈಯವರಿಗೆ ಸೇರಿದ ಟೂರಿಸ್ಟ್ ಡಿಸೈರ್ ಕಾರಿನಲ್ಲಿ ಬಾಡಿಗೆಗೆಂದು ತೆರಳುತ್ತಿದ್ದ ವೇಳೆ ಪಂಜದ ಕೃಷ್ಣನಗರ ಎಂಬಲ್ಲಿ ಕಡಬದಿಂದ ಸುಳ್ಯಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ.

ಪಂಜ: ಕೆಎಸ್ಸಾರ್ಟಿಸಿ ಬಸ್ – ಸ್ವಿಫ್ಟ್ ಡಿಸೈರ್ ಕಾರು ಢಿಕ್ಕಿ ► ಓರ್ವ ಗಂಭೀರ, ಹಲವರಿಗೆ ಗಾಯ Read More »

ಕರಾವಳಿ

ಆತೂರು ಪರಿಸರದಲ್ಲಿ ಭಾರೀ ಸುಂಟರಗಾಳಿ ► ರಸ್ತೆಗಡ್ಡವಾಗಿ ಬಿದ್ದ ಮರಗಳು – ಸಂಚಾರದಲ್ಲಿ ವ್ಯತ್ಯಯ

(ನ್ಯೂಸ್ ಕಡಬ) newskadaba.com ಕಡಬ, ಜು.14. ಅತೂರು ಪರಿಸರದಲ್ಲಿ ಬೀಸಿದ ಭಾರೀ ಸುಂಟರಗಾಳಿಗೆ ಹಲವು ಮರಗಳು ಧರಾಶಾಹಿಯಾಗಿ ರಸ್ತೆ ಸಂಚಾರಕ್ಕೆ ತಡೆಯಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಪರಿಸರದ ಗೋಳಿತ್ತಡಿ, ನೇಲ್ಯೊಟ್ಟು, ಅಂಬಾ, ಆಯಿಷಾ ಸ್ಕೂಲ್ ಹಾಗೂ ಕುಂಡಾಜೆ ಪರಿಸರದಲ್ಲಿ ಬೀಸಿದ ಭಾರೀ ಗಾಳಿಗೆ ಹಲವು ಮರಗಳು ನೆಲಕ್ಕುರುಳಿವೆ. ಪರಿಣಾಮ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ತಡೆಯುಂಟಾಗಿ ಸಂಚಾರದಲ್ಲಿ ಕೆಲಕಾಲ ವ್ಯತ್ಯಯವಾಯಿತು. ತಕ್ಷಣವೇ ಸ್ಥಳೀಯ ಯುವಕರು ಸೇರಿ ರಸ್ತೆಯಲ್ಲಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

ಆತೂರು ಪರಿಸರದಲ್ಲಿ ಭಾರೀ ಸುಂಟರಗಾಳಿ ► ರಸ್ತೆಗಡ್ಡವಾಗಿ ಬಿದ್ದ ಮರಗಳು – ಸಂಚಾರದಲ್ಲಿ ವ್ಯತ್ಯಯ Read More »

ಕರಾವಳಿ

ಆರನೇ ದಿನಕ್ಕೆ‌ಕಾಲಿಟ್ಟ ಹೊಸ್ಮಠ ಸೇತುವೆ ಮುಳುಗಡೆ ► ದ್ವಿಚಕ್ರ ವಾಹನ ಸವಾರರಿಗೆ ಸಹಾಯದ ನೆಪದಲ್ಲಿ ಬಲಾತ್ಕಾರದ ಹಣ ವಸೂಲಿ ► ಕಂಡೂ ಕಾಣದಂತಿರುವ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಜು.15. ಮುಳುಗು ಸೇತುವೆಯೆಂದೇ ಖ್ಯಾತಿ ಪಡೆದಿರುವ ಹೊಸ್ಮಠ ಸೇತುವೆಯು ಮುಳುಗಡೆಗೊಂಡು ಆರನೇ ದಿನಕ್ಕೆ ಕಾಲಿಟ್ಟಿದೆ. ಸೇತುವೆಯ ಮೇಲೆ ನೀರಿನ ಹರಿವು ಒಂದೇ ರೀತಿಯಲ್ಲಿದ್ದು, ನೀರಿನ ಹರಿವು ಕಡಿಮೆಯಾಗಬಹುದೆಂಬ ಆಶಾಭಾವನೆಯಲ್ಲಿ ಸೇತುವೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಕಾಯುತ್ತಿದ್ದಾರೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಹಳೆಯ ಮುಳುಗು ಸೇತುವೆಯ ಪಕ್ಕದಲ್ಲೇ ಹೊ ಸೇತುವೆಯೊಂದು ನಿರ್ಮಾಣವಾಗುತ್ತಿದ್ದು, ಕಾಮಗಾರಿ ಕೊನೆಯ ಹಂತದಲ್ಲಿದೆ. ಇದರೆಡೆಯಲ್ಲಿ ಸ್ಥಳೀಯ ವ್ಯಕ್ತಿಯೋರ್ವರು ನೂತನ ಸೇತುವೆಯ ಮೇಲೆ ಮರದ ಹಲಗೆಯೊಂದನ್ನಿಟ್ಟು ದ್ವಿಚಕ್ರ ವಾಹನಗಳನ್ನು ಸಾಗಿಸಿ ಪ್ರತಿಯೊಂದು

ಆರನೇ ದಿನಕ್ಕೆ‌ಕಾಲಿಟ್ಟ ಹೊಸ್ಮಠ ಸೇತುವೆ ಮುಳುಗಡೆ ► ದ್ವಿಚಕ್ರ ವಾಹನ ಸವಾರರಿಗೆ ಸಹಾಯದ ನೆಪದಲ್ಲಿ ಬಲಾತ್ಕಾರದ ಹಣ ವಸೂಲಿ ► ಕಂಡೂ ಕಾಣದಂತಿರುವ ಪೊಲೀಸರು Read More »

ಕರಾವಳಿ

ನೆಲ್ಯಾಡಿ: ವಿದ್ಯುತ್ ಆಘಾತಕ್ಕೊಳಗಾಗಿ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು.13. ವಿದ್ಯುತ್ ಆಘಾತಕ್ಕೊಳಗಾಗಿ ಯುವಕನೋರ್ವ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಇಲ್ಲಿನ ಲಾವತ್ತಡ್ಕದಲ್ಲಿ ನಡೆದಿದೆ. ಮೃತ ಯುವಕನನ್ನು ಕೌಕ್ರಾಡಿ ಗ್ರಾಮದ ಮುಡಿಬೈಲು ನಿವಾಸಿ ಅಲ್ಫೋನ್ಸಾ ಡಿಸೋಜ ಹಾಗೂ ಎಲಿಝಾ ಡಿಸೋಜ ದಂಪತಿಯ ದ್ವಿತೀಯ ಪುತ್ರ ಜೋಸೆಫ್ ಡಿಸೋಜ (26) ಎಂದು ಗುರುತಿಸಲಾಗಿದೆ. ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ವೃತ್ತಿ ನಿರ್ವಹಿಸುತ್ತಿದ್ದ ಜೋಸೆಫ್ ಇಂದು ಸಂಜೆ ಲಾವತ್ತಡ್ಕದ ಮನೆಯೊಂದರಲ್ಲಿ ಕೆಲಸದಲ್ಲಿದ್ದಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.

ನೆಲ್ಯಾಡಿ: ವಿದ್ಯುತ್ ಆಘಾತಕ್ಕೊಳಗಾಗಿ ಯುವಕ ಮೃತ್ಯು Read More »

ಕರಾವಳಿ

ಹಾಲು‌ ಖರೀದಿದಾರರಿಗೆ ಸಿಹಿ ಸುದ್ದಿ ► ಇಂದು ನಂದಿನಿ ಹಾಲು ಖರೀದಿಸಿದರೆ 180 ಮಿ.ಲೀ ‘ತೃಪ್ತಿ’ ಹಾಲು ಉಚಿತ

(ನ್ಯೂಸ್ ಕಡಬ) newskadaba.com ಉಡುಪಿ, ಜು.12. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಹಾಲು ಸಂಗ್ರಹಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲಿನ ಪ್ರಯೋಜನವನ್ನು ನಂದಿನಿ ಗ್ರಾಹಕರಿಗೂ ವಿಸ್ತರಿಸುವ ಉದ್ದೇಶದಿಂದ ಗುರುವಾರದಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಂದಿನಿ ಗ್ರಾಹಕರು ಖರೀದಿಸುವ ಪ್ರತಿ ಪ್ಯಾಕೆಟ್ (500 ಮಿ.ಲೀ, 1ಲೀ, 6ಲೀ) ನಂದಿನಿ ಹಾಲಿನ ಪ್ಯಾಕೆಟ್‌ನೊಂದಿಗೆ 90 ದಿನಗಳ ಕಾಲ ಬಾಳಿಕೆ ಬರುವ 180 ಮಿ.ಲೀ. ನಂದಿನಿ ತೃಪ್ತಿ ಹಾಲಿನ ಒಂದು ಪ್ಯಾಕೆಟ್‌ನ್ನು ಉಚಿತವಾಗಿ ನೀಡಲಾಗುವುದು

ಹಾಲು‌ ಖರೀದಿದಾರರಿಗೆ ಸಿಹಿ ಸುದ್ದಿ ► ಇಂದು ನಂದಿನಿ ಹಾಲು ಖರೀದಿಸಿದರೆ 180 ಮಿ.ಲೀ ‘ತೃಪ್ತಿ’ ಹಾಲು ಉಚಿತ Read More »

ಕರ್ನಾಟಕ

ಮತ್ತೆ ಮುಳುಗಿದ ಹೊಸ್ಮಠ ಸೇತುವೆ ► ಉಪ್ಪಿನಂಗಡಿ – ಕಡಬ ಸಂಚಾರದಲ್ಲಿ ವ್ಯತ್ಯಯ

(ನ್ಯೂಸ್ ಕಡಬ) newskadaba.com ಕಡಬ, ಜು.11. ಮುಳುಗು ಸೇತುವೆಯೆಂದೇ ಕುಖ್ಯಾತಿಯನ್ನು ಪಡೆದಿರುವ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಹೊಸ್ಮಠ ಸೇತುವೆಯು ಬುಧವಾರದಂದು ಮತ್ತೆ ಮುಳುಗಡೆಯಾಗಿ ರಸ್ತೆ ತಡೆ ಉಂಟಾಗಿದೆ. ಪ್ರಸಕ್ತ ವರ್ಷದಲ್ಲಿ ಸೇತುವೆಯು ಹಲವು ಬಾರಿ ಮುಳುಗಡೆಗೊಂಡು ಸಂಚಾರದಲ್ಲಿ ವ್ಯತ್ಯಯವುಂಟಾಗಿ ಉಪ್ಪಿನಂಗಡಿ, ಸುಬ್ರಹ್ಮಣ್ಯ ಪರಿಸರಕ್ಕೆ ಸಂಪರ್ಕ ಕಡಿತಗೊಂಡಿತ್ತು. ಹಳೆಯ ಸೇತುವೆಯ ಪಕ್ಕದಲ್ಲೇ ನೂತನ ಸೇತುವೆ ನಿರ್ಮಾಣವಾಗುತ್ತಿದೆಯಾದರೂ ಕಾಮಗಾರಿ ಅಪೂರ್ಣದಿಂದಾಗಿ ಈ ವರ್ಷವೂ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.

ಮತ್ತೆ ಮುಳುಗಿದ ಹೊಸ್ಮಠ ಸೇತುವೆ ► ಉಪ್ಪಿನಂಗಡಿ – ಕಡಬ ಸಂಚಾರದಲ್ಲಿ ವ್ಯತ್ಯಯ Read More »

ಕರಾವಳಿ
Scroll to Top