ನೆಲ್ಯಾಡಿ: ವಿದ್ಯುತ್ ಆಘಾತಕ್ಕೊಳಗಾಗಿ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು.13. ವಿದ್ಯುತ್ ಆಘಾತಕ್ಕೊಳಗಾಗಿ ಯುವಕನೋರ್ವ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಇಲ್ಲಿನ ಲಾವತ್ತಡ್ಕದಲ್ಲಿ ನಡೆದಿದೆ.

ಮೃತ ಯುವಕನನ್ನು ಕೌಕ್ರಾಡಿ ಗ್ರಾಮದ ಮುಡಿಬೈಲು ನಿವಾಸಿ ಅಲ್ಫೋನ್ಸಾ ಡಿಸೋಜ ಹಾಗೂ ಎಲಿಝಾ ಡಿಸೋಜ ದಂಪತಿಯ ದ್ವಿತೀಯ ಪುತ್ರ ಜೋಸೆಫ್ ಡಿಸೋಜ (26) ಎಂದು ಗುರುತಿಸಲಾಗಿದೆ. ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ವೃತ್ತಿ ನಿರ್ವಹಿಸುತ್ತಿದ್ದ ಜೋಸೆಫ್ ಇಂದು ಸಂಜೆ ಲಾವತ್ತಡ್ಕದ ಮನೆಯೊಂದರಲ್ಲಿ ಕೆಲಸದಲ್ಲಿದ್ದಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.

Scroll to Top