News Kadaba Desk

ಶಿರಾಡಿ ಘಾಟ್ ರಸ್ತೆ ಲಾರಿಗಳ ಸಂಚಾರಕ್ಕೆ ಮುಕ್ತವಾಗಿದೆ ಎಂಬ ವದಂತಿ ► ನಂಬಿ ಬಂದು ಪರದಾಡುತ್ತಿರುವ ನೂರಾರು ಲಾರಿಗಳ ಚಾಲಕರು..!!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.12. ಶಿರಾಡಿ ಘಾಟ್ ರಸ್ತೆಯಲ್ಲಿ ಲಾರಿಗಳ ಸಂಚಾರಕ್ಕೆ ನವೆಂಬರ್ 12 ಸೋಮವಾರದಿಂದ ಅನುವು ಮಾಡಿ ಕೊಡಲಾಗುತ್ತದೆ ಎಂದು ನವೆಂಬರ್ 08 ರಂದು ಜಿಲ್ಲಾಡಳಿತವು ಘೋಷಿಸಿದ್ದನ್ನು ನಂಬಿ ಬಂದ ನೂರಾರು ಲಾರಿಗಳ ಚಾಲಕರು ಪರದಾಡಿದ ಘಟನೆ ಸೋಮವಾರದಂದು ಗುಂಡ್ಯದಲ್ಲಿ ನಡೆದಿದೆ. ಶಿರಾಡಿ ಘಾಟಿ ರಸ್ತೆ ಘನ ವಾಹನಗಳಾದ ಲಾರಿಗಳ‌ ಸಂಚಾರಕ್ಕೆ ಇಂದು ಮುಕ್ತವಾಗುತ್ತದೆ ಅನ್ನುವ ಸುದ್ದಿಯನ್ನು ನಂಬಿ ಅನೇಕ ಲಾರಿಗಳು ಗುಂಡ್ಯಕ್ಕೆ ಆಗಮಿಸಿವೆ. ಸಕಲೇಶಪುರ ಕಡೆಗಳಿಂದಲೂ ಟನ್ ಗಟ್ಟಲೆ ಲೋಡು ತುಂಬಿದ ಲಾರಿಗಳು […]

ಶಿರಾಡಿ ಘಾಟ್ ರಸ್ತೆ ಲಾರಿಗಳ ಸಂಚಾರಕ್ಕೆ ಮುಕ್ತವಾಗಿದೆ ಎಂಬ ವದಂತಿ ► ನಂಬಿ ಬಂದು ಪರದಾಡುತ್ತಿರುವ ನೂರಾರು ಲಾರಿಗಳ ಚಾಲಕರು..!! Read More »

ಕರ್ನಾಟಕ

ಪೆರ್ನೆ: ಬೈಕ್ – ರಿಕ್ಷಾ ಢಿಕ್ಕಿ ► ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ನ.12. ಬೈಕ್ ಮತ್ತು ಗೂಡ್ಸ್ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆಯಲ್ಲಿ ನಡೆದಿದೆ. ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ಪೆರ್ನೆಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಗೂಡ್ಸ್ ರಿಕ್ಷಾ ನಡುವೆ ಪೆರ್ನೆ ಸಮೀಪದ ದೋರ್ಮೆ ಎಂಬಲ್ಲಿ ಮುಖಾಮುಖಿ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಬುಡೋಳಿ ಸಮೀಪ್ ಶೇರಾ ನಿವಾಸಿ

ಪೆರ್ನೆ: ಬೈಕ್ – ರಿಕ್ಷಾ ಢಿಕ್ಕಿ ► ಬೈಕ್ ಸವಾರ ಮೃತ್ಯು Read More »

ಕರಾವಳಿ

ಶಿರಾಡಿ: 80 ಅಡಿ ಆಳಕ್ಕೆ ಉರುಳಿದ ಕಾರು ► ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.12. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸುಮಾರು 80 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬರ್ಚಿನಹಳ್ಳ ಸಮೀಪ ನಡೆದಿದೆ. ಮೃತ ಚಾಲಕನನ್ನು ತಮಿಳುನಾಡಿನ ಹೊಸೂರು ತಾಲೂಕಿನ ಮುತ್ತಪ್ಪ ಎಂಬವರ ಪುತ್ರ ವೆಂಕಟರಾಜು ಎಂದು ಗುರುತಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಅವರು ಶನಿವಾರದಂದು ಪೂಜೆ ಮುಗಿಸಿ ವಾಪಸ್ ಊರಿಗೆ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಭಾನುವಾರದಂದು ಬೆಳಕಿಗೆ ಬಂದಿದೆ.

ಶಿರಾಡಿ: 80 ಅಡಿ ಆಳಕ್ಕೆ ಉರುಳಿದ ಕಾರು ► ಚಾಲಕ ಮೃತ್ಯು Read More »

ಕರಾವಳಿ

ಕೇಂದ್ರ ಸಚಿವ ಅನಂತ ಕುಮಾರ್ ನಿಧನದ ಹಿನ್ನೆಲೆ ► ಇಂದು ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.12. ಕರ್ನಾಟಕ ಬಿಜೆಪಿಯ ಹಿರಿಯ ಮುಖಂಡ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ, ಎಚ್.ಎನ್. ಅನಂತಕುಮಾರ್ (59) ಅನಾರೋಗ್ಯದಿಂದ ಸೋಮವಾರ ಬೆಳಗ್ಗಿನ ಜಾವ ನಿಧನರಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸರಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ ಜೊತೆಗೆ ಸರಕಾರಿ ಕಚೇರಿಗಳಿಗೂ ಒಂದು ದಿನಗಳ ರಜೆಯನ್ನು ಘೋಷಿಸಿದ್ದು ಮೂರು ದಿನಗಳ ಕಾಲ ಶೋಕಾಚರಣೆಯನ್ನು ನಡೆಸಲಿದೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತಕುಮಾರ್ ಅವರನ್ನು ಕಳೆದ ಎರಡು ದಿನಗಳಿಂದ ವೆಂಟಿಲೇಟರ್‍ನಲ್ಲಿ ಇಡಲಾಗಿತ್ತು. ಸೋಮವಾರ ಬೆಳಗ್ಗಿನ ಜಾವ ಎರಡು ಗಂಟೆ ಸುಮಾರಿಗೆ

ಕೇಂದ್ರ ಸಚಿವ ಅನಂತ ಕುಮಾರ್ ನಿಧನದ ಹಿನ್ನೆಲೆ ► ಇಂದು ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ Read More »

ರಾಷ್ಟ್ರೀಯ ನ್ಯೂಸ್

ಬಿಜೆಪಿಯ ಹಿರಿಯ ಮುಖಂಡ, ಕೇಂದ್ರ ಸಚಿವ ಅನಂತ ಕುಮಾರ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.12. ಕರ್ನಾಟಕ ಬಿಜೆಪಿಯ ಹಿರಿಯ ಮುಖಂಡ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ, ಎಚ್.ಎನ್. ಅನಂತಕುಮಾರ್ (59) ಅನಾರೋಗ್ಯದಿಂದ ಸೋಮವಾರ ಬೆಳಗ್ಗಿನ ಜಾವ ನಿಧನರಾದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತಕುಮಾರ್ ಅವರನ್ನು ಕಳೆದ ಎರಡು ದಿನಗಳಿಂದ ವೆಂಟಿಲೇಟರ್‍ನಲ್ಲಿ ಇಡಲಾಗಿತ್ತು. ಸೋಮವಾರ ಬೆಳಗ್ಗಿನ ಜಾವ ಎರಡು ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅನಂತಕುಮಾರ್ ನಿಧನದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಆಗಮಿಸಿ ಮೃತರ ಅಂತಿಮ ದರ್ಶನ ಪಡೆಯಲಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡ, ಕೇಂದ್ರ ಸಚಿವ ಅನಂತ ಕುಮಾರ್ ವಿಧಿವಶ Read More »

ರಾಷ್ಟ್ರೀಯ ನ್ಯೂಸ್

ಉಜಿರೆ: ಮುಖಕ್ಕೆ ಟೇಪ್ ಸುತ್ತಿದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.11. ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹವು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಭಾನುವಾರದಂದು ಕಂಡುಬಂದಿದೆ. ಅಂದಾಜು 30 ವರ್ಷ ವಯಸ್ಸಿನ ಯುವಕನ ಮುಖಕ್ಕೆ ಟೇಪ್ ಹಾಕಿ, ಕಾಲು ಕಟ್ಟಿದ್ದಲ್ಲದೆ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ ಸ್ಥಿತಿಯಲ್ಲಿ ಉಜಿರೆಯ ಗುರಿಪಳ್ಳ ಕ್ರಾಸ್ ನ ಅಳಕೆ ರಸ್ತೆಯ ಸಮೀಪ ಮೃತದೇಹ ಪತ್ತೆಯಾಗಿದ್ದು, ಬೇರೆ ಕಡೆ ಕೊಲೆ‌ ಮಾಡಿ ಇಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಠಾಣಾ ಪೊಲೀಸರು

ಉಜಿರೆ: ಮುಖಕ್ಕೆ ಟೇಪ್ ಸುತ್ತಿದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆ Read More »

ಕರಾವಳಿ

ನಿರ್ಗತಿಕ ವ್ಯಕ್ತಿಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಉಪ್ಪಿನಂಗಡಿ ಠಾಣಾ ಸಬ್ ಇನ್ಸ್‌ಪೆಕ್ಟರ್ ► ಅನಾಥನ ಬಂಧುವಾಗಿ ಅಂತ್ಯ ಸಂಸ್ಕಾರಕ್ಕೆ ನೇತೃತ್ವ ನೀಡಿದ ನಂದಕುಮಾರ್

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.10. ನಿರ್ಗತಿಕನಾಗಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟಿದ್ದು, ಅಂತ್ಯಸಂಸ್ಕಾರ ನಡೆಸಲು ಬಂಧು ಮಿತ್ರರು ಯಾರೂ ಇಲ್ಲದಿರುವುದನ್ನು ಮನಗಂಡ ಸಬ್ ಇನ್ಸ್‌ಪೆಕ್ಟರ್ ಓರ್ವರು ಸಾಮಾಜಿಕ ಕಾರ್ಯಕರ್ತರ ಸಹಕಾರದೊಂದಿಗೆ ಮೃತನ‌ ಅಂತ್ಯಸಂಸ್ಕಾರ ನಡೆಸಿದ ಮಾನವೀಯ ಕಾರ್ಯ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿಯಲ್ಲಿ ನಿರ್ಗತಿಕನಾಗಿ ಜೀವನ ಸಾಗಿಸುತ್ತಿದ್ದ ಪ್ರಸನ್ನ ಎಂಬವರು ಮೃತಪಟ್ಟಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್ ಚಿತೆಗೆ ಮೊದಲ ಕಟ್ಟಿಗೆಯನ್ನು ತಾನಿಟ್ಟು, ಅಗ್ನಿ ಸ್ಪರ್ಶ ಮಾಡುವ ಮೂಲಕ ಅನಾಥನ ಬಂಧುವಾಗಿ ಕಾರ್ಯ ನಿರ್ವಹಿಸಿದ್ದಾರೆ.

ನಿರ್ಗತಿಕ ವ್ಯಕ್ತಿಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಉಪ್ಪಿನಂಗಡಿ ಠಾಣಾ ಸಬ್ ಇನ್ಸ್‌ಪೆಕ್ಟರ್ ► ಅನಾಥನ ಬಂಧುವಾಗಿ ಅಂತ್ಯ ಸಂಸ್ಕಾರಕ್ಕೆ ನೇತೃತ್ವ ನೀಡಿದ ನಂದಕುಮಾರ್ Read More »

ಕರ್ನಾಟಕ

ಟಿಪ್ಪು ಜಯಂತಿ ಆಚರಣೆಯ ಹಿನ್ನೆಲೆ ► ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆಯವರೆಗೆ 144 ನಿಷೇಧಾಜ್ಞೆ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ನ.10. ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರದ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದ್ದು, ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ಬಾರದ ರೀತಿಯಲ್ಲಿ ಜಿಲ್ಲೆಯಾದ್ಯಂತ ಅಕ್ಟೋಬರ್ 09 ಸಂಜೆ 6 ಗಂಟೆಯಿಂದ ದಿನಾಂಕ ಅಕ್ಟೋಬರ್ 11 ಮಧ್ಯರಾತ್ರಿ 12 ಗಂಟೆಯವರೆಗೆ ಯಾವುದೇ ಸಾರ್ವಜನಿಕ ರಾಜಕೀಯ ಮುಂತಾದ ಬಹಿರಂಗ ಸಭೆ ಸಮಾರಂಭ, ಜಾಥಾ ಮತ್ತು ಮೆರವಣಿಗೆಗಳನ್ನು ನಿರ್ಬಂಧಿಸಿ ದಂಡ ಪ್ರಕ್ರಿಯೆ ಸಂಹಿತೆ 144 ರನ್ವಯ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ

ಟಿಪ್ಪು ಜಯಂತಿ ಆಚರಣೆಯ ಹಿನ್ನೆಲೆ ► ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆಯವರೆಗೆ 144 ನಿಷೇಧಾಜ್ಞೆ ಜಾರಿ Read More »

ಕರಾವಳಿ

ಕುಂತೂರು: ಸರಣಿ ಅಪಘಾತ ► ಬೈಕ್ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ನ.09. ಮಾರುತಿ ರಿಟ್ಝ್ ಕಾರು, ಯಮಹಾ ಎಫ್ ಝಡ್ ಬೈಕ್ ಹಾಗೂ ದ್ವಿಚಕ್ರ ವಾಹನದ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಎಂಬಲ್ಲಿ ಶುಕ್ರವಾರದಂದು ನಡೆದಿದೆ. ಉಪ್ಪಿನಂಗಡಿಯಿಂದ ಕಡಬ ಕಡೆಗೆ ತೆರಳುತ್ತಿದ್ದ ರಿಟ್ಝ್ ಕಾರು ವಿರುದ್ಧ ದಿಕ್ಕಿನಿಂದ ಆಗಮಿಸುತ್ತಿದ್ದ ಎಫ್ ಝಡ್ ಬೈಕ್ ಮತ್ತು ಸ್ಕೂಟಿಯೊಂದರ‌ ನಡುವೆ ಕುಂತೂರು ಕೋಚಕಟ್ಟೆ ಮಧ್ಯದ ಸೇತುವೆಯ ಮೇಲೆ ಅಪಘಾತ ಉಂಟಾಗಿ

ಕುಂತೂರು: ಸರಣಿ ಅಪಘಾತ ► ಬೈಕ್ ಸವಾರನಿಗೆ ಗಾಯ Read More »

ಕರಾವಳಿ

ಮೈತ್ರಿ ಸರಕಾರ ಭದ್ರವಾಗಿದೆ – ಶೀಘ್ರದಲ್ಲೇ ಕಡಬ ತಾಲೂಕು ಉದ್ಘಾಟನೆಗೆ ಕ್ರಮ ► ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ

(ನ್ಯೂಸ್ ಕಡಬ) newskadaba.com ಕಡಬ, ನ.09. ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಪಕ್ಷ ಜಯ ಗಳಿಸಿರುವುದರಿಂದ ಮೈತ್ರಿ ಸರಕಾರವನ್ನು ಜನ ಮೆಚ್ಚಿದ್ದಾರೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಕರ್ನಾಟಕದಲ್ಲಿ ಮೈತ್ರಿ ಸರಕಾರ ಭದ್ರವಾಗಿದ್ದು, ಬಿಜೆಪಿಯ ಕೌಂಟ್‌ಡೌನ್ ಶುರುವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕರ್ನಾಟಕ ರಾಜ್ಯ ಸರಕಾರದ ಸಚೇತಕ ಐವನ್ ಡಿ ಸೋಜ ಹೇಳಿದರು. ಗುರುವಾರದಂದು ಕಡಬ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ಬಿಜೆಪಿಯು ಕಾಂಗ್ರೆಸ್, ಜೆಡಿಎಸ್ ಮೈತ್ರಿಯನ್ನು ಅಪವಿತ್ರ ಎಂದು

ಮೈತ್ರಿ ಸರಕಾರ ಭದ್ರವಾಗಿದೆ – ಶೀಘ್ರದಲ್ಲೇ ಕಡಬ ತಾಲೂಕು ಉದ್ಘಾಟನೆಗೆ ಕ್ರಮ ► ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ Read More »

ಕರ್ನಾಟಕ
Scroll to Top