ಕುಂತೂರು: ಸರಣಿ ಅಪಘಾತ ► ಬೈಕ್ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ನ.09. ಮಾರುತಿ ರಿಟ್ಝ್ ಕಾರು, ಯಮಹಾ ಎಫ್ ಝಡ್ ಬೈಕ್ ಹಾಗೂ ದ್ವಿಚಕ್ರ ವಾಹನದ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಎಂಬಲ್ಲಿ ಶುಕ್ರವಾರದಂದು ನಡೆದಿದೆ.

ಉಪ್ಪಿನಂಗಡಿಯಿಂದ ಕಡಬ ಕಡೆಗೆ ತೆರಳುತ್ತಿದ್ದ ರಿಟ್ಝ್ ಕಾರು ವಿರುದ್ಧ ದಿಕ್ಕಿನಿಂದ ಆಗಮಿಸುತ್ತಿದ್ದ ಎಫ್ ಝಡ್ ಬೈಕ್ ಮತ್ತು ಸ್ಕೂಟಿಯೊಂದರ‌ ನಡುವೆ ಕುಂತೂರು ಕೋಚಕಟ್ಟೆ ಮಧ್ಯದ ಸೇತುವೆಯ ಮೇಲೆ ಅಪಘಾತ ಉಂಟಾಗಿ ಬೈಕ್ ಸವಾರ ಕುಂತೂರು ಪದವು ನಿವಾಸಿ ಪ್ರವೀಣ್ ಕೆ.ಆರ್. ಗಾಯಗೊಂಡಿದ್ದು, 108 ವಾಹನದ ಮೂಲಕ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Scroll to Top