News Kadaba Desk

ನೆಲ್ಯಾಡಿ: ಟ್ಯಾಂಕರ್ ಪಲ್ಟಿ – ಗ್ಯಾಸ್ ಸೋರಿಕೆ ➤ ಉಪ್ಪಿನಂಗಡಿ – ನೆಲ್ಯಾಡಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ.02. ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರೊಂದು ಪಲ್ಟಿಯಾದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ನೆಲ್ಯಾಡಿ ಸಮೀಪದ ಲಾವತ್ತಡ್ಕ ರೆಖ್ಯ ಎಂಬಲ್ಲಿ ಶುಕ್ರವಾರದಂದು ಸಂಭವಿಸಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ಗ್ಯಾಸ್ ತುಂಬಿಸಿಕೊಂಡು ತೆರಳುತ್ತಿದ್ದ ಟ್ಯಾಂಕರ್ ರೆಖ್ಯ ಸಮೀಪದ ತಿರುವಿನಲ್ಲಿ ರಸ್ತೆಗಡ್ಡವಾಗಿ ಮಗುಚಿ ಬಿದ್ದಿದೆ. ಪರಿಣಾಮ ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆಯಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದಾರೆ. ವಾಹನ ಸಂಚಾರಕ್ಕೆ ನಿರ್ಬಂಧ […]

ನೆಲ್ಯಾಡಿ: ಟ್ಯಾಂಕರ್ ಪಲ್ಟಿ – ಗ್ಯಾಸ್ ಸೋರಿಕೆ ➤ ಉಪ್ಪಿನಂಗಡಿ – ನೆಲ್ಯಾಡಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ Read More »

ರಾಷ್ಟ್ರೀಯ ನ್ಯೂಸ್

ಉಪ್ಪಿನಂಗಡಿ: ಬೈಕಿನ ಹಿಂಬದಿ ಚಕ್ರಕ್ಕೆ ಬಟ್ಟೆ ಸಿಲುಕಿ ರಸ್ತೆಗೆಸೆಯಲ್ಪಟ್ಟ ಮಹಿಳೆ ➤ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ.02. ತಾನು ಧರಿಸಿದ್ದ ಬಟ್ಟೆ ಬೈಕಿನ ಹಿಂಬದಿ ಚಕ್ರಕ್ಕೆ ಸಿಲುಕಿದ ಪರಿಣಾಮ ರಸ್ತೆಗೆಸೆಯಲ್ಪಟ್ಟು ಮಹಿಳೆಯೋರ್ವರು ಮೃತಪಟ್ಟ ಘಟನೆ ಗುರುವಾರ ಸಂಜೆ ಬೆಳ್ತಂಗಡಿಯಲ್ಲಿ ಸಂಭವಿಸಿದೆ. ಮೃತ ಮಹಿಳೆಯನ್ನು ಬೆಳ್ತಂಗಡಿ ಕಣಿಯೂರು ಸಮೀಪದ ನಿವಾಸಿ ಫಾತಿಮಾ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯು ರಾಝಿಕ್ ಎಂಬವರೊಂದಿಗೆ ಗುರುವಾರ ಸಂಜೆ ಬೈಕಿನಲ್ಲಿ ಸಹ ಸವಾರೆಯಾಗಿ ಸಂಚರಿಸುತ್ತಿದ್ದ ವೇಳೆ ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಯ ಗೋವಿಂದೂರು ಬಸ್ಸು ನಿಲ್ದಾಣದ ಬಳಿ ಫಾತಿಮಾ ಧರಿಸಿದ್ದ ಬಟ್ಟೆ ಬೈಕ್ ನ ಹಿಂಬದಿ

ಉಪ್ಪಿನಂಗಡಿ: ಬೈಕಿನ ಹಿಂಬದಿ ಚಕ್ರಕ್ಕೆ ಬಟ್ಟೆ ಸಿಲುಕಿ ರಸ್ತೆಗೆಸೆಯಲ್ಪಟ್ಟ ಮಹಿಳೆ ➤ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತ್ಯು Read More »

ಕರಾವಳಿ

ಕಾಫಿಡೇ ಮಾಲಕ ಸಿದ್ಧಾರ್ಥ್ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.31. ಸೋಮವಾರ ರಾತ್ರಿ ಮಂಗಳೂರಿನ ಜಪ್ಪಿನಮೊಗರು ನೇತ್ರಾವತಿ ಸೇತುವೆ ಬಳಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಕೆಫೆ ಕಾಫಿಡೇ ಮಾಲಕ ಸಿದ್ದಾರ್ಥ್‌ ಅವರ ಮೃತದೇಹ ಬುಧವಾರ ಮುಂಜಾನೆ ಪತ್ತೆಯಾಗಿದೆ. ಸುಮಾರು 36 ಗಂಟೆಗಳ ತೀವ್ರ ಶೋಧದ ನಂತರ ಹೊಯಿಗೆ ಬಜಾರ್‌ನ ಅಳಿವೆ ಬಾಗಿಲು ಬಳಿ ಬುಧವಾರ ಬೆಳಗ್ಗೆ 6.30ಕ್ಕೆ ಸಿದ್ದಾರ್ಥ್‌ ಅವರ ದೇಹ ಪತ್ತೆಯಾಗಿದೆ. ಸ್ಥಳೀಯ ಮೀನುಗಾರರು ಬೆಳಗ್ಗೆ ಮೀನುಗಾರಿಕೆಗೆಂದು ತೆರಳಿದ್ದಾಗ ನದಿ ದಡದಲ್ಲಿ ಮೃತದೇಹ ಕಂಡುಬಂದಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ರವರ

ಕಾಫಿಡೇ ಮಾಲಕ ಸಿದ್ಧಾರ್ಥ್ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ Read More »

ಕರ್ನಾಟಕ

ಕಡಬ: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ)newskadaba.com. ಜು.30. ಕಡಬ. ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ತಾಲೂಕಿನ ಕೋಡಿಂಬಾಳ ಗ್ರಾಮದ ನೆಕ್ಕರೆಕೊಚ್ಚಿ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕೋಡಿಂಬಾಳ ಗ್ರಾಮದ ನೆಕ್ಕರೆಕೊಚ್ಚಿ ನಿವಾಸಿ ಬಾಬು ಎಂದು ಗುರುತಿಸಲಾಗಿದೆ. ಸ್ಥಳೀಯ ಮಾಹಿತಿಯ ಪ್ರಕಾರ ಕೆಲಸಕ್ಕೆ ಹೋಗಿ ಹಿಂದಿರುಗುವಾಗ ಘಟನೆ ನಡೆದಿರಬಹುದು ಎಂಬುದಾಗಿ ಶಂಕಿಸಲಾಗಿದೆ. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಡಬ: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ

ಹೊಸ್ಮಠ: ಕಡಬದ ಖಾಸಗಿ ಆಂಬ್ಯುಲೆನ್ಸ್ ಪಲ್ಟಿ ➤ ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಜು.30. ಆಂಬ್ಯುಲೆನ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದುದರಿಂದ ಚಾಲಕ ಗಾಯಗೊಂಡ ಘಟನೆ ಕಡಬ ಸಮೀಪದ ಹೊಸ್ಮಠ ಎಂಬಲ್ಲಿ ಮಂಗಳವಾರದಂದು ನಡೆದಿದೆ. ಗಾಯಾಳು ಚಾಲಕನನ್ನು ಕಡಬದ ಅನುಗ್ರಹ ಆಂಬ್ಯುಲೆನ್ಸ್ ಮಾಲಕ ರಂಜಿತ್ ಎಂದು ಗುರುತಿಸಲಾಗಿದೆ. ಹೊಸ್ಮಠದಿಂದ ಕಡಬ ಕಡೆಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಚಾಲಕ ರಂಜಿತ್ ನನ್ನು ಕಡಬ ಸಮುದಾಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಆಂಬ್ಯುಲೆನ್ಸ್ ಸಂಪೂರ್ಣ ನಜ್ಜುಗುಜ್ಜಾಗಿದೆ.

ಹೊಸ್ಮಠ: ಕಡಬದ ಖಾಸಗಿ ಆಂಬ್ಯುಲೆನ್ಸ್ ಪಲ್ಟಿ ➤ ಚಾಲಕನಿಗೆ ಗಾಯ Read More »

ಕರಾವಳಿ

ಕಡಬ: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ)newskadaba.com. ಜು.30. ಕಡಬ. ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ತಾಲೂಕಿನ ಕೋಡಿಂಬಾಳ ಗ್ರಾಮದ ನೆಕ್ಕರೆಕೊಚ್ಚಿ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕೋಡಿಂಬಾಳ ಗ್ರಾಮದ ನೆಕ್ಕರೆಕೊಚ್ಚಿ ನಿವಾಸಿ ಬಾಬು ಎಂದು ಗುರುತಿಸಲಾಗಿದೆ. ಸ್ಥಳೀಯ ಮಾಹಿತಿಯ ಪ್ರಕಾರ ಕೆಲಸಕ್ಕೆ ಹೋಗಿ ಹಿಂದಿರುಗುವಾಗ ಘಟನೆ ನಡೆದಿರಬಹುದು ಎಂಬುದಾಗಿ ಶಂಕಿಸಲಾಗಿದೆ. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಡಬ: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ

ಮಾಜಿ ಸಿಎಂ ಎಸ್.ಎಂ. ಕೃಷ್ಣ ಅಳಿಯ ಸಿದ್ದಾರ್ಥ್ ಮಂಗಳೂರಿನಲ್ಲಿ ದಿಢೀರ್ ನಾಪತ್ತೆ…! ➤ ಉಳ್ಳಾಲ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವ ಶಂಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.30. ಮಾಜಿ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅಳಿಯ ವಿ.ಜಿ. ಸಿದ್ದಾರ್ಥ್‌ ಮಂಗಳೂರಿನ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದು, ತೀವ್ರ ಶೊಧ ಕಾರ್ಯ ಮುಂದುವರಿದಿದೆ. ವಿ.ಜಿ. ಸಿದ್ದಾರ್ಥ್‌ ಸೋಮವಾರ ಸಂಜೆ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದರು. ಕಾರಿನ ಚಾಲಕ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಅವರು ಬೆಂಗಳೂರಿನಿಂದ ಮಂಗಳೂರಿಗೆಂದು ಹೇಳಿ ಚಾಲಕ ಮತ್ತು ಇಬ್ಬರ ಜತೆಗೂಡಿ ಕಾರಿನಲ್ಲಿ ಹೊರಟಿದ್ದರು. ಪಂಪ್‌ವೆಲ್‌ ತಲುಪಿದಾಗ ಜತೆಗಿದ್ದ ಇಬ್ಬರು ಕಾರಿನಿಂದ ಇಳಿದಿದ್ದು, ಬಳಿಕ ಮಾಲಕನ ಸೂಚನೆಯಂತೆ

ಮಾಜಿ ಸಿಎಂ ಎಸ್.ಎಂ. ಕೃಷ್ಣ ಅಳಿಯ ಸಿದ್ದಾರ್ಥ್ ಮಂಗಳೂರಿನಲ್ಲಿ ದಿಢೀರ್ ನಾಪತ್ತೆ…! ➤ ಉಳ್ಳಾಲ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವ ಶಂಕೆ Read More »

ಕರ್ನಾಟಕ

ಹಿರಿಯ ಸುನ್ನೀ ನೇತಾರ, ‘ಶರಫುಲ್ ಉಲಮಾ’ ಅಬ್ಬಾಸ್ ಮುಸ್ಲಿಯಾರ್ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.29. ಸುನ್ನೀ ನೇತಾರ, ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಸ್ಥಾಪಕ ‘ಶರಫುಲ್ ಉಲಮಾ’ ಅಲ್‌ಹಾಜ್ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ (73) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಅಪರಾಹ್ನ ನಿಧನರಾದರು. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹಾಕತ್ತೂರು ಎಂಬಲ್ಲಿ 1946ರ ಜನವರಿ 1ರಂದು ಮುಹಮ್ಮದ್ ಕುಂಞಿ-ಬೀಫಾತಿಮಾ ಹಜ್ಜುಮ್ಮ ದಂಪತಿಯ ಪುತ್ರನಾಗಿ ಜನಿಸಿದ ಅಲ್‌ಹಾಜ್ ಶೈಖುನಾ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ 1994 ರಲ್ಲಿ ಮಂಜನಾಡಿಯಲ್ಲಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಸ್ಥಾಪಿಸುವ ಮೂಲಕ

ಹಿರಿಯ ಸುನ್ನೀ ನೇತಾರ, ‘ಶರಫುಲ್ ಉಲಮಾ’ ಅಬ್ಬಾಸ್ ಮುಸ್ಲಿಯಾರ್ ನಿಧನ Read More »

ಕರಾವಳಿ

ಪಂಜ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಅರೆಭಾಷೆ ಅಧ್ಯಕ್ಷರ ಭೇಟಿ ➤ ದೇವಸ್ಥಾನದ ವತಿಯಿಂದ ಗೌರವ ಅರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಜು.29. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ರಾಜ್ಯ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷ ಪಿ.ಸಿ.ಜಯರಾಂ‌ ಭಾನುವಾರದಂದು ಭೇಟಿ ನೀಡಿದರು. ಪಿ.ಸಿ.ಜಯರಾಂ‌ರವರನ್ನು ದೇವಸ್ಥಾನದ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರು ಗೌರವಿಸಿದರು. ಈ ಸಂದರ್ಭದಲ್ಲಿ ಜೇಸಿಐ ಪಂಜ ಪಂಚಶ್ರೀ ಘಟಕದ ಅಧ್ಯಕ್ಷ ವಾಸುದೇವ ಮೇಲ್ಪಾಡಿ, ಗ್ರಾಮ ಗೌಡ ಸಮಿತಿಯ ದೇವಿಪ್ರಸಾದ್ ಜಾಕೆ ಉಪಸ್ಥಿತರಿದ್ದರು.

ಪಂಜ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಅರೆಭಾಷೆ ಅಧ್ಯಕ್ಷರ ಭೇಟಿ ➤ ದೇವಸ್ಥಾನದ ವತಿಯಿಂದ ಗೌರವ ಅರ್ಪಣೆ Read More »

ಕರಾವಳಿ

ಕೋಡಿಂಬಾಳ: ಎಂಸಿವೈಎಂ ವತಿಯಿಂದ ಗ್ರೀನ್ ಸಂಡೇ ಕಾರ್ಯಕ್ರಮ ➤ ಚರ್ಚ್ ಪರಿಸರದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಜು.29. ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕ್ಯಾಥೊಲಿಕ್‌ ಯೂತ್ ಮೂವ್ ಮೆಂಟ್ (ಎಂ.ಸಿ.ವೈ.ಯಂ) ನ ವತಿಯಿಂದ ಗ್ರೀನ್ ಸಂಡೇ ಆಚರಿಸಲಾಯಿತು. ಭಾನುವಾರದ ದಿವ್ಯ ಬಲಿಪೂಜೆಯ ನಂತರ ಮಂಗಳೂರು ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಸಿ. ಮಾಥ್ಯು ರವರು ಚರ್ಚ್ ಪರಿಸರದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುತ್ತೂರು ಧರ್ಮಪ್ರಾಂತ್ಯದ ಪ್ರೋಕ್ಯುರೇಟರ್, ಕಿಡ್ಸ್ ನಿರ್ದೇಶಕರು ಹಾಗೂ ಕೋಡಿಂಬಾಳ ಚರ್ಚ್ ಧರ್ಮಗುರುಗಳಾದ ವಂದನೀಯ ರೆ| ಫಾ| ಜಾನ್ ಕುನ್ನತ್ತ್ ರವರು ಗಿಡಗಳನ್ನು ವಿತರಿಸಿ

ಕೋಡಿಂಬಾಳ: ಎಂಸಿವೈಎಂ ವತಿಯಿಂದ ಗ್ರೀನ್ ಸಂಡೇ ಕಾರ್ಯಕ್ರಮ ➤ ಚರ್ಚ್ ಪರಿಸರದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ Read More »

ಕರಾವಳಿ
Scroll to Top