News Kadaba Desk

ಶಾಲಾ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಮತ್ತು ಕಾರು ನಡುವೆ ಢಿಕ್ಕಿಯಾಗಿ ಬಸ್ ಪಲ್ಟಿ ➤ ಹಲವು ಮಕ್ಕಳಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಡಿ.06. ಶಾಲಾ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಹಲವರು ಗಾಯಗೊಂಡ ಘಟನೆ ನೆಲ್ಯಾಡಿ ಸಮೀಪದ ಕೊಕ್ಕಡ ಎಂಬಲ್ಲಿ ಶುಕ್ರವಾರದಂದು ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳು ಶೈಕ್ಷಣಿಕ ಖಾಸಗಿ ಬಸ್ ನಲ್ಲಿ ಪ್ರವಾಸ ತೆರಳುತ್ತಿದ್ದ ವೇಳೆ ಕೊಕ್ಕಡ ಸಮೀಪದ ಕಾಪಿನ ಬಾಗಿಲು ಎಂಬಲ್ಲಿ ತಮಿಳುನಾಡು ಮೂಲದವರಿದ್ದ ಕಾರು ನಡುವೆ ಢಿಕ್ಕಿ ಸಂಭವಿಸಿ ಬಸ್ಸು ಪಲ್ಟಿಯಾಗಿದೆ. ಘಟನೆಯಲ್ಲಿ ಹತ್ತು ಮಂದಿ ವಿದ್ಯಾರ್ಥಿಗಳು, ಶಿಕ್ಷಕ […]

ಶಾಲಾ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಮತ್ತು ಕಾರು ನಡುವೆ ಢಿಕ್ಕಿಯಾಗಿ ಬಸ್ ಪಲ್ಟಿ ➤ ಹಲವು ಮಕ್ಕಳಿಗೆ ಗಾಯ Read More »

ಕರ್ನಾಟಕ

ಅತ್ಯಾಚಾರಿಗಳನ್ನು ಭರ್ಜರಿಯಾಗಿ ಬೇಟೆಯಾಡಿದ ‘ವೀರ ಕನ್ನಡಿಗ’ ➤ ಎನ್‌ಕೌಂಟರ್ ತಂಡದ ಮುಖ್ಯಸ್ಥ ಕರ್ನಾಟಕದ ವಿಶ್ವನಾಥ್

(ನ್ಯೂಸ್ ಕಡಬ) newskadaba.com ಹೈದರಾಬಾದ್, ಡಿ.06. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪಶುವೈದ್ಯೆಯ ಅತ್ಯಾಚಾರಗೈದು ಜೀವಂತ ಸುಟ್ಟಿದ್ದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಲಾದ ತಂಡದ ಪೊಲೀಸ್ ಅಧಿಕಾರಿ ‘ವೀರ ಕನ್ನಡಿಗ’ ಇದೀಗ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಮತ್ತು ಚಿಂತಕುಂಟಾ ಕೇಶವುಲು ಎಂಬವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು, ಶುಕ್ರವಾರ ಬೆಳಗ್ಗಿನ ಜಾವ ಮಹಜರು ನಡೆಸುವ ವೇಳೆ ಎನ್‌ಕೌಂಟರ್‌ ನಡೆಸಿದ್ದಾರೆ. ಹೈದರಾಬಾದ್ ಹೊರವಲಯದ ಷಾದ್ ನಗರದಲ್ಲಿ ಎನ್‌ಕೌಂಟರ್ ನಡೆದಿದ್ದು, ಎನ್‌ಕೌಂಟರ್‌ ಕಾರ್ಯಾಚರಣೆಯನ್ನು

ಅತ್ಯಾಚಾರಿಗಳನ್ನು ಭರ್ಜರಿಯಾಗಿ ಬೇಟೆಯಾಡಿದ ‘ವೀರ ಕನ್ನಡಿಗ’ ➤ ಎನ್‌ಕೌಂಟರ್ ತಂಡದ ಮುಖ್ಯಸ್ಥ ಕರ್ನಾಟಕದ ವಿಶ್ವನಾಥ್ Read More »

ರಾಷ್ಟ್ರೀಯ ನ್ಯೂಸ್

ದೇಶವನ್ನು ಬೆಚ್ಚಿಬೀಳಿಸಿದ್ದ ಪಶುವೈದ್ಯೆಯ ಅತ್ಯಾಚಾರಗೈದು ಜೀವಂತ ಸುಟ್ಟ ಪ್ರಕರಣ ➤ ನಾಲ್ವರು ಆರೋಪಿಗಳ ಎನ್‌ಕೌಂಟರ್‌

(ನ್ಯೂಸ್ ಕಡಬ) newskadaba.com ಹೈದರಾಬಾದ್, ಡಿ.06. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪಶುವೈದ್ಯೆಯನ್ನು ಅತ್ಯಾಚಾರಗೈದು ಜೀವಂತ ಸುಟ್ಟಿದ್ದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಲಾಗಿದೆ. ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಮತ್ತು ಚಿಂತಕುಂಟಾ ಕೇಶವುಲು ಎಂಬವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು, ಶುಕ್ರವಾರ ಬೆಳಗ್ಗಿನ ಜಾವ ಎನ್‌ಕೌಂಟರ್‌ ನಡೆಸಿದ್ದಾರೆ. ಹೈದರಾಬಾದ್ ಹೊರವಲಯದ ಷಾದ್ ನಗರದಲ್ಲಿ ಎನ್‌ಕೌಂಟರ್ ನಡೆದಿದೆ ಎನ್ನಲಾಗಿದ್ದು, ಎನ್‌ಕೌಂಟರ್‌ ಕಾರ್ಯಾಚರಣೆಯನ್ನು ಕರ್ನಾಟಕದ ಗದಗ್ ಜಿಲ್ಲೆಯ ಅಧಿಕಾರಿಯೋರ್ವರು ನಡೆಸಿದ್ದಾರೆ. ಕನ್ನಡಿಗರಾದ ಸೈಬರಾಬಾದ್‌ ಪೊಲೀಸ್‌ ಆಯುಕ್ತ ವಿಶ್ವನಾಥ್ ಸಜ್ಜನ್

ದೇಶವನ್ನು ಬೆಚ್ಚಿಬೀಳಿಸಿದ್ದ ಪಶುವೈದ್ಯೆಯ ಅತ್ಯಾಚಾರಗೈದು ಜೀವಂತ ಸುಟ್ಟ ಪ್ರಕರಣ ➤ ನಾಲ್ವರು ಆರೋಪಿಗಳ ಎನ್‌ಕೌಂಟರ್‌ Read More »

ರಾಷ್ಟ್ರೀಯ ನ್ಯೂಸ್

ಪುತ್ತೂರು: ಸ್ಫೋಟಕ ಸಿಡಿದು ಓರ್ವ ಗಂಭೀರ ➤ ನಾಲ್ವರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.06. ಮನೆಯಲ್ಲಿ ಕಚ್ಚಾ ಸ್ಪೋಟಕವನ್ನು ತಯಾರಿಸುತ್ತಿದ್ದ ವೇಳೆ ಸ್ಪೋಟಕ ಸಿಡಿದ ಪರಿಣಾಮ ನಾಲ್ವರು ಗಾಯಗೊಂಡು, ಮನೆಗೆ ಹಾನಿಯಾದ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಂಪಲ್ಲಿ ಎಂಬಲ್ಲಿ ಗುರುವಾರದಂದು ನಡೆದಿದೆ. ಗಾಯಾಳುಗಳನ್ನು ಬೆಟ್ಟಂಪಲ್ಲಿ ನಿವಾಸಿ ಕೇಪುಗೌಡ ಎಂಬವರ ಪುತ್ರ ಬಾಲಕೃಷ್ಣ, ನಾದಿನಿ ವೇದಾವತಿ ಮತ್ತು ಅವರ ಮಕ್ಕಳಾದ ಕಾರ್ತಿಕ್ ಮತ್ತು ಮೋನಿಶಾ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ಬಾಲಕೃಷ್ಣರವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರನ್ನು ಪುತ್ತೂರಿನ ಹಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುತ್ತೂರು: ಸ್ಫೋಟಕ ಸಿಡಿದು ಓರ್ವ ಗಂಭೀರ ➤ ನಾಲ್ವರಿಗೆ ಗಾಯ Read More »

ಕರಾವಳಿ

ಹೆಣ್ಣಿನ ಬೆಳವಣಿಗೆಗೆ ಅಡ್ಡಿಯಾದ ಅತ್ಯಾಚಾರ ಎಂಬ ಆಯುಧ ➤ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು..?

✍? MD ಮುಸ್ತಫಾ ಮರ್ಧಾಳ (ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಡಿ.05. ಶೇಖರ್ ಮಧ್ಯಮ ವರ್ಗಕ್ಕೆ ಸೇರಿದ ರೈತ. ಹಳ್ಳಿಯಲ್ಲಿ ಜೀವಿಸುತ್ತಿದ್ದ ಆತನಿಗೆ ಹೆಚ್ಚು ಆಸ್ತಿಯೇನೂ ಅಲ್ಲದಿದ್ದರೂ ಜೀವಿಸಲು ಬೇಕಾದ ಎಲ್ಲಾ ಸೌಕರ್ಯಗಳಿತ್ತು. ಪತ್ನಿ ಮತ್ತು ಮಗಳನ್ನು ಹೊಂದಿರುವ ಆತನ ಬದುಕು ಸುಖಿ ಸಂಸಾರವಾಗಿತ್ತು. ಮಗಳು ಸುಮ ವಿಧ್ಯಾಭ್ಯಾಸದಲ್ಲಿ ಮತ್ತು ಇತರ ಚಟುವಟಿಕೆಯಲ್ಲಿ ಮುಂದೆ ಇದ್ದು SSLC ಯಲ್ಲಿ ಉತ್ತಮ ಅಂಕದೊಂದಿಗೆ ತೆರ್ಗಡೆಯಾಗುತ್ತಾಳೆ. ಮುಂದೆ ಜಿಲ್ಲಾಧಿಕಾರಿ ಆಗಬೇಕೆಂಬ ಆಸೆ ಇದ್ದ ಸುಮಾಳಿಗೆ IAS ಪರೀಕ್ಷೆ ಬರೆಯಬೇಕೆಂಬ

ಹೆಣ್ಣಿನ ಬೆಳವಣಿಗೆಗೆ ಅಡ್ಡಿಯಾದ ಅತ್ಯಾಚಾರ ಎಂಬ ಆಯುಧ ➤ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು..? Read More »

ವಿಶೇಷ ಲೇಖನಗಳು

ಪುತ್ತೂರು: ತಂದೆಯನ್ನು ಮಚ್ಚಿನಿಂದ ಕಡಿದು ಕೊಂದ ಮಗ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.04. ಮಗನೋರ್ವ ತನ್ನ ತಂದೆಯನ್ನೇ ಕತ್ತಿಯಿಂದ ಕಡಿದು ಕೊಂದ ಘಟನೆ ಬುಧವಾರ ರಾತ್ರಿ ಪುತ್ತೂರಿನಲ್ಲಿ ನಡೆದಿದೆ. ಹತ್ಯೆಗೊಳಗಾದ ವ್ಯಕ್ತಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣಾಜೆ ಗ್ರಾಮದ ಬೊಳ್ಳಿಂಬಳದ ನಿವಾಸಿಯಾಗಿರುವ ಕೃಷ್ಣ ನಾಯ್ಕ್ (65) ಎಂದು ಗುರುತಿಸಲಾಗಿದೆ. ಅವರ ಪುತ್ರ ಉದಯ ನಾಯ್ಕ್ (28) ಯಾವುದೇ ಕೆಲಸಕ್ಕೆ ಹೋಗದೇ ಮನೆಯಲ್ಲಿರುತ್ತಿದ್ದು, ಈ ಬಗ್ಗೆ ತಂದೆ ಮತ್ತು ಮಗನಿಗೆ ಪದೇ ಪದೇ ಜಗಳವಾಗುತ್ತಿತ್ತೆನ್ನಲಾಗಿದೆ. ಬುಧವಾರ ರಾತ್ರಿ ಇದೇ ವಿಷಯಕ್ಕೆ ತಕರಾರು ಎತ್ತಿದ್ದು,

ಪುತ್ತೂರು: ತಂದೆಯನ್ನು ಮಚ್ಚಿನಿಂದ ಕಡಿದು ಕೊಂದ ಮಗ Read More »

ಕರಾವಳಿ

ಕಡಬ: ಪೇರಡ್ಕದಲ್ಲಿ ಕಳ್ಳರ ಕೈಚಳಕ ➤ ಎರಡು ಅಂಗಡಿಗಳಿಗೆ ನುಗ್ಗಿದ ಕಳ್ಳರು

(ನ್ಯೂಸ್ ಕಡಬ) newskadaba.com ಕಡಬ, ಡಿ.04. ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ಸಮಯಗಳಿಂದ ಸುಮ್ಮನಿದ್ದ ಕಳ್ಳರು ಇದೀಗ ಮತ್ತೆ ತಮ್ಮ ಕೈಚಳಕವನ್ನು ತೋರಿದ್ದಾರೆ. ಕಡಬ ಸಮೀಪದ ಪೇರಡ್ಕ ಎಂಬಲ್ಲಿ ಉಮ್ಮರ್ ಪೊಸವಳಿಕೆ ಹಾಗೂ ಮಹಮ್ಮದ್ ಪೆಲತ್ರಾಣೆ ಎಂಬವರಿಗೆ ಸೇರಿದ ಅಂಗಡಿಗೆ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗಿನ ನಡುವೆ ನುಗ್ಗಿರುವ ಕಳ್ಳರು ಅಂಗಡಿಯೊಳಗಿದ್ದ ಅಕ್ಕಿ, ಎಣ್ಣೆ ಸೇರಿದಂತೆ ದಿನಸಿ ಸಾಮಾನುಗಳನ್ನು ಕದ್ದೊಯ್ದಿದ್ದಾರೆ.

ಕಡಬ: ಪೇರಡ್ಕದಲ್ಲಿ ಕಳ್ಳರ ಕೈಚಳಕ ➤ ಎರಡು ಅಂಗಡಿಗಳಿಗೆ ನುಗ್ಗಿದ ಕಳ್ಳರು Read More »

ಕರಾವಳಿ

ಶಾಲಾ ಬಾವಿಯ ನೀರಿಗೆ ವಿಷ ಬೆರೆಸಿರುವ ಶಂಕೆ ➤ ನೀರು ಕುಡಿದ ಎಂಟು ಮಂದಿ ವಿದ್ಯಾರ್ಥಿಗಳು ಅಸ್ವಸ್ಥ

ಬೆಳ್ತಂಗಡಿ, ಡಿ.02. ವಿಷ ಸೇರ್ಪಡೆಗೊಂಡ ಬಾವಿಯ ನೀರನ್ನು ಸೇವಿಸಿದ ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ನಡೆದಿದೆ. ಶಿಬಾಜೆ ಗ್ರಾಮದ ಪೆರ್ಲ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ 8 ವಿದ್ಯಾರ್ಥಿಗಳು ಸೋಮವಾರದಂದು ಶಾಲೆಯ ಆವರಣದಲ್ಲಿರುವ ತರಕಾರಿ ತೋಟಕ್ಕೆ ಬಾವಿಯಿಂದ ನೀರು ಹಾಕುತ್ತಿದ್ದ ಸಂದರ್ಭದಲ್ಲಿ ನೀರನ್ನು ಕುಡಿದಿದ್ದರು. ಕೆಲವೇ ಹೊತ್ತಿನಲ್ಲಿ ಆರನೇ ತರಗತಿಯ ರಾಜೇಶ್, ಮೋನಿಸ್, ಶ್ರವಣ್, ಸುದೀಪ್, ಏಳನೇ ತರಗತಿಯ ಚೇತನ್ ಕುಮಾರ್, ಎಂಟನೇ ತರಗತಿಯ ರಾಧಾಕೃಷ್ಣ, ಸುದೀಶ್

ಶಾಲಾ ಬಾವಿಯ ನೀರಿಗೆ ವಿಷ ಬೆರೆಸಿರುವ ಶಂಕೆ ➤ ನೀರು ಕುಡಿದ ಎಂಟು ಮಂದಿ ವಿದ್ಯಾರ್ಥಿಗಳು ಅಸ್ವಸ್ಥ Read More »

ಕರ್ನಾಟಕ

ನಾಳೆಯಿಂದಲೇ (ಡಿ.03) ದುಬಾರಿಯಾಗಲಿವೆ ಮೊಬೈಲ್ ಕರೆ ದರಗಳು ➤ ಯಾವೆಲ್ಲಾ ಕಂಪೆನಿಯ ದರಗಳು ಹೆಚ್ಚಲಿವೆ ಗೊತ್ತೇ..?

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.02. ಇಷ್ಟರವರೆಗೆ ಬೇಕಾಬಿಟ್ಟಿಯಾಗಿ ಉಪಯೋಗಿಸುತ್ತಿದ್ದ ಮೊಬೈಲ್ ಕರೆಗಳು ನಾಳೆಯಿಂದ (ಡಿ.03) ರಿಂದ ದುಬಾರಿಯಾಗಲಿದ್ದು, ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಕರೆ ಮತ್ತು ಡಾಟಾ ಪ್ಲಾನ್ ದರಗಳನ್ನು ಶೇ.42ರಷ್ಟು ಹೆಚ್ಚಿಸುವುದಾಗಿ ಭಾರ್ತಿ ಏರ್‌ಟೆಲ್ ಸಂಸ್ಥೆಯು ಪ್ರಕಟಿಸಿದೆ. ಈಗಾಗಲೇ ವೊಡಾಫೋನ್ ಮತ್ತು ಐಡಿಯಾ ತನ್ನ ದರಗಳಲ್ಲಿ ಹೆಚ್ಚಳವನ್ನು ಪ್ರಕಟಿಸಿದ್ದು, ಇದರ ಬೆನ್ನಿಗೇ ಏರ್‌ಟೆಲ್‌ನ ಕೂಡಾ ತನ್ನ ಕರೆದರವನ್ನು ಹೆಚ್ಚಳಗೊಳಿಸಲು ಮುಂದಾಗಿದೆ. ಅಲ್ಲದೆ ಡಿಸೆಂಬರ್ 6ರಿಂದ ರಿಲಯನ್ಸ್ ಜಿಯೋ ಕೂಡ ತನ್ನ ಮೊಬೈಲ್ ಸೇವೆಯ ದರಗಳನ್ನು ಹೆಚ್ಚಿಸಲಿದೆ.

ನಾಳೆಯಿಂದಲೇ (ಡಿ.03) ದುಬಾರಿಯಾಗಲಿವೆ ಮೊಬೈಲ್ ಕರೆ ದರಗಳು ➤ ಯಾವೆಲ್ಲಾ ಕಂಪೆನಿಯ ದರಗಳು ಹೆಚ್ಚಲಿವೆ ಗೊತ್ತೇ..? Read More »

ತಂತ್ರಜ್ಞಾನ, ಲೈಫ್‍ಸ್ಟೈಲ್
Scroll to Top