News Kadaba Desk

ಪುತ್ತೂರು: ಬಸ್ – ಬೈಕ್‌ ನಡುವೆ ಢಿಕ್ಕಿ ➤ ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.02. ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್‌ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಎಂಬಲ್ಲಿ ಸೋಮವಾರದಂದು ಸಂಭವಿಸಿದೆ. ಮೃತ‌ ಸವಾರನನ್ನು ಸುಳ್ಯ ತಾಲೂಕಿನ ಮರ್ಕಂಜ ನಿವಾಸಿ ಚಂದ್ರಶೇಖರ್ ಗೌಡ ಎಂದು ಗುರುತಿಸಲಾಗಿದೆ. ಕಾವು ಸಮೀಪದ ಮದ್ಲ ಎಂಬಲ್ಲಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ […]

ಪುತ್ತೂರು: ಬಸ್ – ಬೈಕ್‌ ನಡುವೆ ಢಿಕ್ಕಿ ➤ ಬೈಕ್ ಸವಾರ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಶಾಂತಿಮೊಗರು: ರಸ್ತೆ ಕಾಮಗಾರಿ ಹಿನ್ನೆಲೆ ➤ ಕಡಬ – ಪುತ್ತೂರು ಬಸ್ ಸಂಚಾರದಲ್ಲಿ ವ್ಯತ್ಯಯ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಕಡಬ, ಮಾ.02. ಕುದ್ಮಾರು ಬಳಿ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಂತಿಮೊಗರು ಮಾರ್ಗವಾಗಿ ಪುತ್ತೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ ಸಂಚಾರದಲ್ಲಿ ಸೋಮವಾರದಂದು ತಡೆ ಉಂಟಾಗಿದೆ. ಕೂರ ಜುಮಾ ಮಸೀದಿಯ ಬಳಿ ರಸ್ತೆಯ ಉಬ್ಬುಗಳನ್ನು ತೆರವುಗೊಳಿಸುವ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರಿನಿಂದ ಶಾಂತಿಮೊಗರು ಮಾರ್ಗವಾಗಿ ಕಡಬ ತೆರಳುವ ಹಾಗೂ ಕಡಬದಿಂದ ಶಾಂತಿಮೊಗರು ಮಾರ್ಗವಾಗಿ ಪುತ್ತೂರಿಗೆ ತೆರಳುವ ಎಲ್ಲಾ ಬಸ್ ಸಂಚಾರದಲ್ಲಿ ವ್ಯತ್ಯಯವುಂಟಾಗಿದೆ.

ಶಾಂತಿಮೊಗರು: ರಸ್ತೆ ಕಾಮಗಾರಿ ಹಿನ್ನೆಲೆ ➤ ಕಡಬ – ಪುತ್ತೂರು ಬಸ್ ಸಂಚಾರದಲ್ಲಿ ವ್ಯತ್ಯಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕರಾವಳಿಯ ವಿವಿಧೆಡೆ ಧಾರಾಕಾರ ಮಳೆ ➤ ಬೆಳ್ಳಂಬೆಳಗ್ಗೆ ತಂಪೆರೆದ ಮಳೆರಾಯ

(ನ್ಯೂಸ್ ಕಡಬ) newskadaba.com ಕಡಬ, ಮಾ.02. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಧಾರಾಕಾರ ಮಳೆಯಾಗಿದ್ದು, ಬಿಸಿಯಿಂದ ಕಂಗೆಟ್ಟಿದ್ದ ಇಳೆಯನ್ನು ತಂಪೆರೆದಿದೆ. ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ಕಡಬದ ಆತೂರು, ಕೊಯಿಲ, ರಾಮಕುಂಜ, ಸವಣೂರು, ನೆಲ್ಯಾಡಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಬಿಸಿಲಿನ ಬೇಗೆಯಿಂದ ಕರಕಲಾಗಿದ್ದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕರಾವಳಿಯ ವಿವಿಧೆಡೆ ಧಾರಾಕಾರ ಮಳೆ ➤ ಬೆಳ್ಳಂಬೆಳಗ್ಗೆ ತಂಪೆರೆದ ಮಳೆರಾಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ಟೆಂಪೋ ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ➤ ಮರಳು ಖಾಲಿ ಮಾಡಿ ತಂದಿರಿಸಿ ತನಿಖೆಯ ಹಾದಿ ತಪ್ಪಿಸಿದರೇ..?

ಕಡಬ, ಮಾ.01. 407 ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಉರುಳಿ ಬಿದ್ದ ವೇಳೆ ಸವಾರನ ತಲೆಯ ಮೇಲೆ 407 ಟೆಂಪೋ ಹರಿದ ಪರಿಣಾಮ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬ ಠಾಣಾ ವ್ಯಾಪ್ತಿಯ 102 ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ದೇವಸ್ಥಾನದ ಬಳಿ ಭಾನುವಾರದಂದು ಸಂಭವಿಸಿದ್ದು, ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದೆ. ಮೃತ ಸವಾರನನ್ನು ರಾಜಸ್ತಾನ ಮೂಲದ ಮೇಘರಾಜ್ ಎಂದು ಗುರುತಿಸಲಾಗಿದೆ. ಟೈಲ್ಸ್ ಹಾಕುವ ಕೆಲಸ ಮಾಡುತ್ತಿದ್ದ ಮೇಘರಾಜ್ ಕಡಬಕ್ಕೆ ತೆರಳಿ ಹಿಂತಿರುಗುತ್ತಿದ್ದಾಗ ಬೊಳ್ಳೂರು

ಕಡಬ: ಟೆಂಪೋ ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ➤ ಮರಳು ಖಾಲಿ ಮಾಡಿ ತಂದಿರಿಸಿ ತನಿಖೆಯ ಹಾದಿ ತಪ್ಪಿಸಿದರೇ..? Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ನೋಡ ನೋಡುತ್ತಿದ್ದಂತೆಯೇ ಹೊತ್ತಿ ಉರಿದ ಕೆಟಿಎಂ ಬೈಕ್ ➤ ನಡು ರಸ್ತೆಯಲ್ಲಿ ಭಸ್ಮ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.01. ಕೆಟಿಎಂ ಡ್ಯೂಕ್ ಬೈಕೊಂದು ಸವಾರನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಮಗುಚಿ ಬಿದ್ದು, ನೋಡ ನೋಡುತ್ತಿದ್ದಂತೆಯೇ ಹೊತ್ತಿ ಉರಿದು ಭಸ್ಮವಾದ ಘಟನೆ ಭಾನುವಾರದಂದು ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿ – ಗುರುವಾಯನಕೆರೆ ಮಾರ್ಗದ ಹೆಚ್.ಎಂ. ಆಡಿಟೋರಿಯಂ ಸಮೀಪ ಚಲಿಸುತ್ತಿದ್ದ ಕೆಟಿಎಂ ಡ್ಯೂಕ್ ಬೈಕ್ ಸವಾರನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಮಗುಚಿ ಬಿದ್ದಿದೆ. ನೋಡ ನೋಡುತ್ತಿದ್ದಂತೆಯೇ ಹೊತ್ತಿ ಉರಿದು ಭಸ್ಮವಾಗಿದೆ.

ಉಪ್ಪಿನಂಗಡಿ: ನೋಡ ನೋಡುತ್ತಿದ್ದಂತೆಯೇ ಹೊತ್ತಿ ಉರಿದ ಕೆಟಿಎಂ ಬೈಕ್ ➤ ನಡು ರಸ್ತೆಯಲ್ಲಿ ಭಸ್ಮ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ಟೆಂಪೊ – ಬೈಕ್ ಅಪಘಾತದಲ್ಲಿ ಓರ್ವ ಮೃತಪಟ್ಟ ಪ್ರಕರಣ ➤ ಸಹೋದ್ಯೋಗಿ ಕಾರ್ಮಿಕರಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.01. ಠಾಣಾ ವ್ಯಾಪ್ತಿಯ ಬೊಳ್ಳೂರು ದೇವಸ್ಥಾನ ಸಮೀಪ ಭಾನುವಾರದಂದು ನಡೆದ 407 ಟೆಂಪೋ ಹಾಗೂ ದ್ವಿಚಕ್ರ ವಾಹನ ನಡುವಿನ ಅಪಘಾತದಲ್ಲಿ ಮೃತಪಟ್ಟ ಮೇಘರಾಜ್ ಸಾವಿಗೆ ಕಾರಣವಾದ ಟೆಂಪೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಬೇಕೆ.ಮದು ಆಗ್ರಹಿಸಿ ರಾಜಸ್ಥಾನದ ಕಾರ್ಮಿಕರು ಆಗ್ರಹಿಸಿದ್ದಾರೆ. ಮೃತ ಮೇಘರಾಜ್ ಬೊಳ್ಳೂರು ಮಿತ್ತೋಡಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಇಳಿಜಾರಿನಲ್ಲಿ ದ್ವಿಚಕ್ರ ವಾಹನ ಸ್ಕಿಡ್ ಆಗಿದ್ದರಿಂದ ತಿರುವಿನಲ್ಲಿ ಉರುಳಿ ಬಿದ್ದಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಆಗಮಿಸುತ್ತಿದ್ದ ಟೆಂಪೋ

ಕಡಬ: ಟೆಂಪೊ – ಬೈಕ್ ಅಪಘಾತದಲ್ಲಿ ಓರ್ವ ಮೃತಪಟ್ಟ ಪ್ರಕರಣ ➤ ಸಹೋದ್ಯೋಗಿ ಕಾರ್ಮಿಕರಿಂದ ಪ್ರತಿಭಟನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ಟೆಂಪೋ – ದ್ವಿಚಕ್ರ ವಾಹನದ ನಡುವೆ ಅಪಘಾತ ➤ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಮಾ.01. ಗೂಡ್ಸ್ ಟೆಂಪೋ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ 102 ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ದೇವಸ್ಥಾನದ ಬಳಿ ಭಾನುವಾರದಂದು ಸಂಭವಿಸಿದೆ. ಮೃತ ಸವಾರನನ್ನು ರಾಜಸ್ತಾನ ಮೂಲದ ಮೇಘರಾಜ್ ಎಂದು ಗುರುತಿಸಲಾಗಿದೆ. ಬೊಳ್ಳೂರು ದೇವಸ್ಥಾನದಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ 407 ಟೆಂಪೋ ಹಾಗೂ ದ್ವಿಚಕ್ರ ವಾಹನದ ನಡುವೆ ಬೊಳ್ಳೂರು ದೇವಸ್ಥಾನದ ಮುಂದಿನ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಟೈಲ್ಸ್ ಹಾಕುವ ಕೆಲಸ

ಕಡಬ: ಟೆಂಪೋ – ದ್ವಿಚಕ್ರ ವಾಹನದ ನಡುವೆ ಅಪಘಾತ ➤ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ಬೈಕಿಗೆ ಢಿಕ್ಕಿ ಹೊಡೆದು ಪರಾರಿಯಾದ ಮಿನಿಬಸ್ ➤ ಪಂಚಾಯತ್ ಸದಸ್ಯೆ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಮಾ.01. ಪ್ಯಾಸೆಂಜರ್ ಟೆಂಪೋವೊಂದು ಬೈಕಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದರಿಂದ ಬೈಕಿನಲ್ಲಿದ್ದ ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಚಾಕೋಟೆಕೆರೆ ಎಂಬಲ್ಲಿ ಭಾನುವಾರದಂದು ನಡೆದಿದೆ. ಮೀನಾಡಿಯಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ ಬೈಕಿಗೆ ಹಿಂದಿನಿಂದ ಬಂದ ಪ್ಯಾಸೆಂಜರ್ ಟೆಂಪೋ ಓವರ್ಟೇಕ್ ಮಾಡುವ ಭರದಲ್ಲಿ ಢಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆಯಲ್ಲಿ ಮೀನಾಡಿ‌ ನಿವಾಸಿ, ಕುಟ್ರುಪ್ಪಾಡಿ ಪಂಚಾಯತ್ ಸದಸ್ಯೆ ಕುಸುಮಾ ಗಂಭೀರ ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ

ಕಡಬ: ಬೈಕಿಗೆ ಢಿಕ್ಕಿ ಹೊಡೆದು ಪರಾರಿಯಾದ ಮಿನಿಬಸ್ ➤ ಪಂಚಾಯತ್ ಸದಸ್ಯೆ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೊಳ್ಳೂರು ಶ್ರೀ ಷಣ್ಮುಖ ಸುಬ್ರಾಯ ಸ್ವಾಮಿ ದೇವಸ್ಥಾನ ➤ ದೇವರ ತುಳು ಭಕ್ತಿಗೀತೆಗಳ ಧ್ವನಿ ಸುರುಳಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಕಡಬ, ಫೆ.29. ಬೊಳ್ಳೂರು ಶ್ರೀ ಷಣ್ಮುಖ ಸುಬ್ರಾಯ ಸ್ವಾಮಿ ದೇವಸ್ಥಾನದ ತುಳು ಭಕ್ತಿಗೀತೆಗಳ ಧ್ವನಿಸುರುಳಿಯನ್ನು ದೇವಸ್ಥಾನದ ಆಡಳಿತದ ಮೋಕ್ತೇಸರಾದ ಶ್ರೀ ನಾರಾಯಣ ಕಲ್ಪುರೆಯವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜನಾರ್ದನ ಗೌಡ ಪುತ್ತಿಲ, ಕರುಣಾಕರ ರೈ ಕರ್ಮಾಯಿ, ಮೇದಪ್ಪಗೌಡ ಡೆಪ್ಪುಣಿ, ವಿಜಯಕುಮಾರ್ ರೈ ಕರ್ಮಾಯಿ, ಸರ್ವೋತ್ತಮ ಗೌಡ ಪಂಜೋಡಿ, ಮಂಜುನಾಥ ಕೋಲಂತ್ತಾಡಿ ಮೊದಲಾದವರು ಉಪಸ್ಥಿತರಿದ್ದರು. ಭಕ್ತಿ ಗೀತೆಯನ್ನು ಶ್ರೀಕಾಂತ್ ಗಟ್ಟಿಗಾರು ಅವರ ನಿರ್ವಹಣೆಯಲ್ಲಿ ವಸಂತ ಗುರಿಯಡ್ಕರವರು ಸಾಹಿತ್ಯ ರಚಿಸಿ ಹಾಡಿದ್ದಾರೆ.

ಬೊಳ್ಳೂರು ಶ್ರೀ ಷಣ್ಮುಖ ಸುಬ್ರಾಯ ಸ್ವಾಮಿ ದೇವಸ್ಥಾನ ➤ ದೇವರ ತುಳು ಭಕ್ತಿಗೀತೆಗಳ ಧ್ವನಿ ಸುರುಳಿ ಬಿಡುಗಡೆ Read More »

ಕರಾವಳಿ

ಮಾಣಿ: ಬಡ ಅನಾಥ ವೃದ್ಧೆಯ ಶವ ಸಂಸ್ಕಾರಕ್ಕೆ ನೆರವಾದ ಹಿಂದೂ – ಮುಸ್ಲಿಮರು

(ನ್ಯೂಸ್ ಕಡಬ) newskadaba.com ಮಾಣಿ, ಫೆ.29. ಅನಾರೋಗ್ಯದಿಂದ ಮೃತಪಟ್ಟ ಅನಾಥ ವೃದ್ಧ ಮಹಿಳೆಯೋರ್ವರ ಮೃತದೇಹದ ಅಂತ್ಯಸಂಸ್ಕಾರಕ್ಕೆ ಜಾತಿ ಮತ ಭೇದ ಮರೆತು ಜೊತೆ ಸೇರಿ ಶವಾಗಾರಕ್ಕೆ ಕಳುಹಿಸಿ ಕೊಟ್ಟು ಮಾನವೀಯತೆ ಮೆರೆದ ಘಟನೆ ಶನಿವಾರದಂದು ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ನಡೆದಿದೆ. ಕೊಡಾಜೆ ಮಸೀದಿಯ ಸಮೀಪದ ಒಂದು ಮನೆಯಲ್ಲಿ ಒಬ್ಬಳು ಬಡ ವೃದ್ಧ ಮಹಿಳೆಯು ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಸಿಕ್ಕ ತಕ್ಷಣ ಆ ಮನೆಗೆ ತೆರಳಿದ ಕೊಡಾಜೆ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ರಾಜ್ ಕಮಲ್,

ಮಾಣಿ: ಬಡ ಅನಾಥ ವೃದ್ಧೆಯ ಶವ ಸಂಸ್ಕಾರಕ್ಕೆ ನೆರವಾದ ಹಿಂದೂ – ಮುಸ್ಲಿಮರು Read More »

ಕರಾವಳಿ
Scroll to Top