ಕರಾವಳಿಯ ವಿವಿಧೆಡೆ ಧಾರಾಕಾರ ಮಳೆ ➤ ಬೆಳ್ಳಂಬೆಳಗ್ಗೆ ತಂಪೆರೆದ ಮಳೆರಾಯ

(ನ್ಯೂಸ್ ಕಡಬ) newskadaba.com ಕಡಬ, ಮಾ.02. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಧಾರಾಕಾರ ಮಳೆಯಾಗಿದ್ದು, ಬಿಸಿಯಿಂದ ಕಂಗೆಟ್ಟಿದ್ದ ಇಳೆಯನ್ನು ತಂಪೆರೆದಿದೆ.

ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ಕಡಬದ ಆತೂರು, ಕೊಯಿಲ, ರಾಮಕುಂಜ, ಸವಣೂರು, ನೆಲ್ಯಾಡಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಬಿಸಿಲಿನ ಬೇಗೆಯಿಂದ ಕರಕಲಾಗಿದ್ದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Scroll to Top