News Kadaba Desk

ಕಟ್ಟಡ ಕಾರ್ಮಿಕರ ಖಾತೆಗೆ ರೂ. 2000 ಜಮಾ: ಸಚಿವ ಕೋಟ

ಮಂಗಳೂರು, ಎಪ್ರಿಲ್ 18. ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರಕಾರದಿಂದ ರೂ. 2000 ನೆರವು ಘೋಷಿಸಲಾಗಿದ್ದು, ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 6122 ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಮೊದಲ ಹಂತದಲ್ಲಿ ಜಮಾ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ಕಾರ್ಮಿಕ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಕೋರೋನಾ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ನೆರವಾಗಲು ಕಾರ್ಮಿಕ ನಿಧಿಯಿಂದ ಈ ಮೊತ್ತ […]

ಕಟ್ಟಡ ಕಾರ್ಮಿಕರ ಖಾತೆಗೆ ರೂ. 2000 ಜಮಾ: ಸಚಿವ ಕೋಟ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರಿಗೆ ಪಡಿತರ ಆಹಾರ ಪಡೆಯಲು ಸೂಚನೆ

ಮಂಗಳೂರು, ಎಪ್ರಿಲ್ 18. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಹೊಸದಾಗಿ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿರುವವರಿಗೆ ಪಡಿತರ ಹಂಚಿಕೆಯಾಗಿದೆ. ಅರ್ಜಿದಾರರು ತಮ್ಮ ಮನೆಯ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪಡಿತರ ಸಾಮಾಗ್ರಿ ಪಡೆಯಬಹುದಾಗಿದೆ. ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಉಚಿತವಾಗಿ 10 ಕೆಜಿ ಅಕ್ಕಿ ಹಾಗೂ ಎಪಿಎಲ್ ಕಾರ್ಡ್ ಅರ್ಜಿದಾರರಿಗೆ ಪ್ರತೀ ಕೆ.ಜಿ.ಗೆ ರೂ. 15ರಂತೆ 10 ಕೆಜಿ ಅಕ್ಕಿ ನೀಡಲಾಗುವುದು. ಅರ್ಜಿದಾರರು ಅರ್ಜಿ ಸಲ್ಲಿಸಿದ ಪ್ರತಿ ಹಾಗೂ ಆಧಾರ್ ಕಾರ್ಡ್ ನ್ಯಾಯಬೆಲೆ ಅಂಗಡಿಗೆ ಹಾಜರುಪಡಿಸಿ

ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರಿಗೆ ಪಡಿತರ ಆಹಾರ ಪಡೆಯಲು ಸೂಚನೆ Read More »

ಕರ್ನಾಟಕ

ಸೋಮವಾರದಿಂದ ಬೀಡಿ ಉದ್ಯಮ ಪುನರಾರಂಭ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು, ಎಪ್ರಿಲ್ 18.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ (ಏ.20) ಬೀಡಿ ಉದ್ಯಮ ಪುನರಾರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೀಡಿ ಕಂಪೆನಿಗಳ ಮಾಲೀಕರು, ಬೀಡಿ ಕಾರ್ಮಿಕ ಮುಖಂಡರ ಜತೆ ಸಭೆ ನಡೆಸಿ ಮಾತನಾಡುತ್ತಿದ್ದರು. ದ.ಕ. ಜಿಲ್ಲೆಯಲ್ಲಿ 1.90 ಲಕ್ಷ ಹಾಗೂ ಉಡುಪಿ ಜಿಲ್ಲೆಯಲ್ಲಿ 21 ಸಾವಿರದಷ್ಟು ಬೀಡಿ ಕಾರ್ಮಿಕರಿದ್ದಾರೆ. ಕೋರೋನಾ ಹಿನ್ನೆಲೆಯಲ್ಲಿ ಬೀಡಿ ಉದ್ಯಮ ಸಂಪೂರ್ಣ ಸ್ಥಗಿತಗೊಂಡಿದ್ದು, ಬಡವರ ಜೀವನಾಧಾರಕ್ಕೆ ಸಮಸ್ಯೆಯಾಗಿರುವುದು ಸರಕಾರದ

ಸೋಮವಾರದಿಂದ ಬೀಡಿ ಉದ್ಯಮ ಪುನರಾರಂಭ: ಸಚಿವ ಕೋಟ ಶ್ರೀನಿವಾಸ ಪೂಜಾರಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ ಸೇರಿದಂತೆ ಜಿಲ್ಲೆಯ ಏಳು ಗ್ರಾಮಗಳು ಸೀಲ್ ಡೌನ್..!! ➤ ಇನ್ಸಿಡೆಂಟ್‌ ಕಮಾಂಡರ್ ನೇಮಕಗೊಳಿಸಿ ದ.ಕ. ಜಿಲ್ಲಾಧಿಕಾರಿ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.18. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ಗ್ರಾಮಗಳನ್ನು ಕಂಟೈನ್ ಮೆಂಟ್ ಝೋನ್ ಆಗಿ ಗುರುತಿಸಿ ಸರ್ಕಾರದ ಸೂಚನೆಯಂತೆ ಇನ್ಸಿಡೆಂಟ್‌ ಕಮಾಂಡರ್ ಗಳ ನೇಮಕಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅದೇಶಿಸಿದ್ದಾರೆ. ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮ, ತುಂಬೆ ಗ್ರಾಮ, ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮ ಪುತ್ತೂರು ತಾಲೂಕಿನ ಸಂಪ್ಯ, ಉಪ್ಪಿನಂಗಡಿ ಗ್ರಾಮ, ಸುಳ್ಯ ತಾಲೂಕಿನ ಅಜ್ಜಾವರ, ಮಂಗಳೂರಿನ ತಾಲೂಕಿನ ತೊಕ್ಕೊಟ್ಟು ಗ್ರಾಮಗಳಲ್ಲಿ ಸರ್ಕಾರದ ನಿರ್ದೇಶನದಂತೆ ಸೀಲ್ ಡೌನ್ ಮಾಡಲಾಗಿದ್ದು, ಈ

ಉಪ್ಪಿನಂಗಡಿ ಸೇರಿದಂತೆ ಜಿಲ್ಲೆಯ ಏಳು ಗ್ರಾಮಗಳು ಸೀಲ್ ಡೌನ್..!! ➤ ಇನ್ಸಿಡೆಂಟ್‌ ಕಮಾಂಡರ್ ನೇಮಕಗೊಳಿಸಿ ದ.ಕ. ಜಿಲ್ಲಾಧಿಕಾರಿ ಆದೇಶ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ ಠಾಣಾ ಎಎಸ್ಐ ಸುರೇಶ್ ರಿಂದ ಬಡ ಕುಟುಂಬಕ್ಕೆ ಸಹಾಯ

(ನ್ಯೂಸ್ ಕಡಬ) newskadaba.com ಕಡಬ, ಎ.18. ಬಡ ಕುಟುಂಬವೊಂದಕ್ಕೆ ಅಕ್ಕಿ ಹಾಗೂ ದಿನಬಳಕೆಯ ವಸ್ತುಗಳನ್ನು ಸ್ವತಃ ಖರೀದಿಸಿ ತಲುಪಿಸಿ ಕಡಬ ಠಾಣಾ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಠಾಣಾ ವ್ಯಾಪ್ತಿಯ ಕುಂತೂರು ಸಮೀಪದ ಬೇಳ್ಪಾಡಿ ಎಂಬಲ್ಲಿನ ಮುಸ್ಲಿಂ ಕುಟುಂಬವೊಂದು ಬಡತನದಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದ ಕಡಬ ಠಾಣಾ ಎಎಸ್ಐ ಸುರೇಶ್ ಸಿ.ಟಿ., ಹೋಂಗಾರ್ಡ್ ಯೋಗೀಶ್ ಹಾಗೂ ಲೋಕೇಶ್ ರವರ ಜೊತೆ‌ ತೆರಳಿ ದಿನಬಳಕೆಯ ಸಾಮಾಗ್ರಿಗಳನ್ನು ವಿತರಿಸಿದರು. ಕಳೆದ ವಾರವಷ್ಟೇ ಕಡಬ ಠಾಣೆಯ ಮಹಿಳಾ ಸಿಬ್ಬಂದಿಗಳು ದಿನಬಳಕೆಯ ಸಾಮಾಗ್ರಿಗಳನ್ನು

ಕಡಬ ಠಾಣಾ ಎಎಸ್ಐ ಸುರೇಶ್ ರಿಂದ ಬಡ ಕುಟುಂಬಕ್ಕೆ ಸಹಾಯ Read More »

ಕರಾವಳಿ

ಎಪ್ರಿಲ್ 20 ರ ನಂತರ ಲಾಕ್‌ಡೌನ್ ಸಡಿಲಿಕೆಗೆ ತೀವ್ರ ವಿರೋಧದ ಹಿನ್ನೆಲೆ ➤ ಸರಕಾರದಿಂದ ಲಾಕ್‌ಡೌನ್ ಸಡಿಲಿಕೆ ಆದೇಶ ವಾಪಸ್..!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.18. ಲಾಕ್‌ಡೌನ್ ಸಡಿಲಿಕೆ ಖುಷಿಯಲ್ಲಿದ್ದವರಿಗೆ ಮತ್ತೊಂದು ಬಿಗ್ ಶಾಕಿಂಗ್‌ ನ್ಯೂಸ್ ಬಂದಿದ್ದು, ಲಾಕ್ ಡೌನ್ ಸಡಿಲಿಕೆ ನಿರ್ಧಾರವನ್ನು ಸರಕಾರವು ವಾಪಾಸ್ ಪಡೆದುಕೊಂಡಿದೆ. ಕಂಟೇನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದ್ದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ವಾಪಾಸ್ ಪಡೆದುಕೊಂಡಿದೆ. ಎಪ್ರಿಲ್ 20ರಿಂದ ಯಥಾಸ್ಥಿತಿ ಮುಂದುವರೆಯಲಿದ್ದು, ಸಂಪೂರ್ಣ ಲಾಕ್‌ಡೌನ್ ಇರಲಿದೆ. ಅಗತ್ಯ ವಸ್ತುಗಳಿಗೆ (ಮೆಡಿಕಲ್ ಎಮರ್ಜೆನ್ಸಿ) ಮಾತ್ರ ಸರ್ಕಾರ ಅವಕಾಶ ನೀಡಿದೆ.

ಎಪ್ರಿಲ್ 20 ರ ನಂತರ ಲಾಕ್‌ಡೌನ್ ಸಡಿಲಿಕೆಗೆ ತೀವ್ರ ವಿರೋಧದ ಹಿನ್ನೆಲೆ ➤ ಸರಕಾರದಿಂದ ಲಾಕ್‌ಡೌನ್ ಸಡಿಲಿಕೆ ಆದೇಶ ವಾಪಸ್..!! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೈಕ್ ಸವಾರರಿಗೆ ಶುಭ ಸುದ್ದಿ ➤ ಎಪ್ರಿಲ್ 20 ರ ನಂತರ ಕೆಲವು ಜಿಲ್ಲೆಗಳಲ್ಲಿ ಬೈಕ್ ಸಂಚಾರಕ್ಕೆ ಅನುಮತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.18. ಲಾಕ್‌ಡೌನ್ ನಡುವೆ ಬೈಕ್ ಸವಾರರಿಗೆ ಗುಡ್ ನ್ಯೂಸ್ ಹೊರಡಿಸಿರುವ ರಾಜ್ಯ ಸರಕಾರವು ಏಪ್ರಿಲ್ 20ರಿಂದ ಬೈಕ್ ಸಂಚಾರಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದೆ.   ಶನಿವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಸೂಚನೆ ನೀಡಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಏಪ್ರಿಲ್ 20 ರ ನಂತರ ಶೇ.33ರಷ್ಟು ಐಟಿ-ಬಿಟಿ ಉದ್ಯೋಗಿಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಅಲ್ಲದೆ ಕಟ್ಟಡ ಕಾಮಗಾರಿ ಆರಂಭಕ್ಕೆ

ಬೈಕ್ ಸವಾರರಿಗೆ ಶುಭ ಸುದ್ದಿ ➤ ಎಪ್ರಿಲ್ 20 ರ ನಂತರ ಕೆಲವು ಜಿಲ್ಲೆಗಳಲ್ಲಿ ಬೈಕ್ ಸಂಚಾರಕ್ಕೆ ಅನುಮತಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸರಳ ಮನೆ ಮದ್ದು – 01 ✍? ಅಜಿತ್ ಕೆ. ಕೋಡಿಂಬಾಳ

(ನ್ಯೂಸ್ ಕಡಬ) newskadaba.com ಉತ್ತಮ ಆರೋಗ್ಯಕ್ಕೆ ಮನೆಮದ್ದು: 1. ಪ್ರತಿದಿನ ಖಾಲಿ ಹೊಟ್ಟೆಗೆ ಒಂದು ಚಮಚ ಕಪ್ಪು ಜೀರಿಗೆ ಮತ್ತು ಎರಡು ಹನಿ ಜೇನುತುಪ್ಪವನ್ನು ನೀರಿನಲ್ಲಿ ಕಲಸಿ ಸೇವಿಸಿದರೆ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆಯಾಗುತ್ತದೆ. 2. ನಿತ್ಯ ಅಡುಗೆಯಲ್ಲಿ ಒಂದು ಚಿಟಿಕೆಯಷ್ಟು ಇಂಗನ್ನು ಬಳಸಿದರೆ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ. 3. ನಿತ್ಯ ಕೊತ್ತಂಬರಿ ಬೀಜದ ನೀರನ್ನು ಕುಡಿದರೆ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. 4. ಬಿಳಿ ಎಳ್ಳನ್ನು ನಿತ್ಯ ಸೇವಿಸುವುದರಿಂದ ರಕ್ತಹೀನತೆಯನ್ನು ಕಡಿಮೆ ಮಾಡಬಹುದು. 5. ದಿನನಿತ್ಯ ನೆಲ್ಲಿಕಾಯಿ ಅಥವಾ

ಸರಳ ಮನೆ ಮದ್ದು – 01 ✍? ಅಜಿತ್ ಕೆ. ಕೋಡಿಂಬಾಳ Read More »

ಆರೋಗ್ಯ ಮಾಹಿತಿ, ಲೈಫ್‍ಸ್ಟೈಲ್

ಉಪ್ಪಿನಂಗಡಿಯ ವಕೀಲರಿಗೆ ಕೊರೋನಾ ಸೋಂಕು ದೃಢ..!! ➤ ಸುಪ್ರೀಂ ಕೋರ್ಟ್‌ನಿಂದ ಹಿಂತಿರುಗಿ ಐಸೋಲೇಷನ್ ನಲ್ಲಿದ್ದ ವಕೀಲರು.!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.17. ಐಸೋಲೇಷನ್ ನಲ್ಲಿದ್ದ ಉಪ್ಪಿನಂಗಡಿ ನಿವಾಸಿಯೋರ್ವರಿಗೆ ಕೊರೋನಾ ಸೋಂಕು ಶುಕ್ರವಾರದಂದು ದೃಢಪಟ್ಟಿದೆ. ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿದ್ದ ಉಪ್ಪಿನಂಗಡಿ ನಿವಾಸಿ ಇತ್ತೀಚೆಗೆ ದೆಹಲಿಯಿಂದ ಆಗಮಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಐಸೋಲೇಷನ್ ನಲ್ಲಿದ್ದ ಅವರಿಗೆ ಗಂಟಲ ದ್ರವ ಪರೀಕ್ಷೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಸ್ವತಃ ವಕೀಲರೇ ನ್ಯೂಸ್ ಕಡಬಕ್ಕೆ ಪ್ರತಿಕ್ರಿಯಿಸಿದ್ದಾರೆ.

ಉಪ್ಪಿನಂಗಡಿಯ ವಕೀಲರಿಗೆ ಕೊರೋನಾ ಸೋಂಕು ದೃಢ..!! ➤ ಸುಪ್ರೀಂ ಕೋರ್ಟ್‌ನಿಂದ ಹಿಂತಿರುಗಿ ಐಸೋಲೇಷನ್ ನಲ್ಲಿದ್ದ ವಕೀಲರು.! Read More »

ಬ್ರೇಕಿಂಗ್ ನ್ಯೂಸ್

ಕೊರೋನಾ ಮಹಾಮಾರಿ ತಡೆಗಟ್ಟಲು ನಾವೇನು ಮಾಡಬಹುದು..? ➤ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ರಿಂದ ಮಹತ್ವದ ಮಾಹಿತಿ

?? ವೀಡಿಯೋ | Video ?? ಕೊರೋನಾ ಮಹಾಮಾರಿ ತಡೆಗಟ್ಟಲು ನಾವೇನು ಮಾಡಬಹುದು..? ➤?ಲಾಕ್‌ಡೌನ್ ವೇಳೆ ಮನೆಗೆ ಬರುವ ಆಶಾ ಕಾರ್ಯಕರ್ತರಿಗೆ ಹೇಗೆ ಉತ್ತರಿಸಬೇಕು..? ➤ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ರಿಂದ ಮಹತ್ವದ ಮಾಹಿತಿ ವೀಡಿಯೋ ನೋಡಲು??ಕ್ಲಿಕ್‌ ಮಾಡಿ

ಕೊರೋನಾ ಮಹಾಮಾರಿ ತಡೆಗಟ್ಟಲು ನಾವೇನು ಮಾಡಬಹುದು..? ➤ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ರಿಂದ ಮಹತ್ವದ ಮಾಹಿತಿ Read More »

ಕರಾವಳಿ
Scroll to Top