News Kadaba Desk

ರಾಜ್ಯದಲ್ಲಿ ಇಂದು ಮಧ್ಯರಾತ್ರಿಯಿಂದ ಲಾಕ್‌ಡೌನ್ ಸಡಿಲಿಕೆ ➤ ಏನೆಲ್ಲಾ ಇರಲಿದೆ ಎಂಬ ಕುತೂಹಲವೇ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ‌ಎ.22. ಕಳೆದೊಂದು ತಿಂಗಳಿನಿಂದ ಲಾಕ್‌ಡೌನ್ ನಿಂದ ಕಂಗೆಟ್ಟಿದ್ದ ಜನತೆಗೆ ಶುಭ ಸುದ್ದಿಯೊಂದು ಹೊರಬಿದ್ದಿದ್ದು, ರಾಜ್ಯಾದ್ಯಂತ ಇಂದು ಮದ್ಯರಾತ್ರಿಯಿಂದ ಲಾಕ್ ಡೌನ್ ಸಡಿಲಗೊಳಿಸಿ, ರಾಜ್ಯ ಸರಕಾರವು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ವಾಹನ ರಿಪೇರಿ ಗ್ಯಾರೇಜ್, ಡಾಬಾ, ಕೊರಿಯರ್ ಸೇವೆ, ಪ್ಲಂಬರ್, ಎಲೆಕ್ಟ್ರೀಷಿಯನ್, ಬಡಗಿ, ಕೇಬಲ್ ಹಾಗೂ ಡಿಟಿಎಚ್ ಆಪರೇಟರ್, ಅಗತ್ಯ ವಸ್ತುಗಳ ಆನ್ ಲೈನ್ ಡೆಲಿವರಿ, ಆಹಾರ ಸಂಸ್ಕರಣಾ ಘಟಕಕ್ಕೆ ಅನುಮತಿ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ, ಕೃಷಿ ವಲಯ […]

ರಾಜ್ಯದಲ್ಲಿ ಇಂದು ಮಧ್ಯರಾತ್ರಿಯಿಂದ ಲಾಕ್‌ಡೌನ್ ಸಡಿಲಿಕೆ ➤ ಏನೆಲ್ಲಾ ಇರಲಿದೆ ಎಂಬ ಕುತೂಹಲವೇ..? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬದಿಂದ ಮಂಗಳೂರಿಗೆ ಕೆಲಸಕ್ಕೆ ತೆರಳಿದ ನರ್ಸ್ ಗೆ ‘ಹೋಂ ಕ್ವಾರಂಟೈನ್’ ➤ ಕಡಬವನ್ನು ?’ರೆಡ್ ಝೋನ್’ ಮಾಡಿದ ಕಾಣದ ‘ಕೈ’ ಯಾವುದು..?

(ನ್ಯೂಸ್ ಕಡಬ) newskadaba.com ಕಡಬ, ಎ.22. ಕಡಬದಿಂದ ಮಂಗಳೂರಿಗೆ ಕೆಲಸಕ್ಕೆ‌ಂದು ಆಗಮಿಸಿದ್ದ ನರ್ಸ್ ಓರ್ವರನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಿದ ಘಟನೆ ಬೆಳಕಿಗೆ ಬಂದಿದೆ. ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿಯಾಗಿರುವ ಲಿನೇಶ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾದಿಯಾಗಿ ಕೆಲಸ ಮಾಡಿಕೊಂಡಿದ್ದರು. ರಜೆಯ ಹಿನ್ನೆಲೆಯಲ್ಲಿ ಕಡಬದ ನೂಜಿಬಾಳ್ತಿಲ ಗ್ರಾಮದ ತನ್ನ ಮನೆಯಲ್ಲಿದ್ದ ಲಿನೇಶ್ ರನ್ನು ತುರ್ತಾಗಿ ಕೆಲಸಕ್ಕೆ ಹಾಜರಾಗುವಂತೆ ಆಸ್ಪತ್ರೆಯಿಂದ ಕರೆ ಮಾಡಲಾಗಿದೆ. ಅದರಂತೆ ಗರ್ಭಿಣಿಯಾಗಿರುವ ತನ್ನ ಪತ್ನಿ ಹಾಗೂ ನಾಲ್ಕು ವರ್ಷದ ಮಗುವಿನೊಂದಿಗೆ ಕಡಬದಿಂದ ಮಂಗಳೂರಿಗೆ ತನ್ನ

ಕಡಬದಿಂದ ಮಂಗಳೂರಿಗೆ ಕೆಲಸಕ್ಕೆ ತೆರಳಿದ ನರ್ಸ್ ಗೆ ‘ಹೋಂ ಕ್ವಾರಂಟೈನ್’ ➤ ಕಡಬವನ್ನು ?’ರೆಡ್ ಝೋನ್’ ಮಾಡಿದ ಕಾಣದ ‘ಕೈ’ ಯಾವುದು..? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಪಿಎಂಸಿ ಯ ನಿಯಮ‌ವನ್ನು ಮೀರಿ ಅಡಿಕೆ ವ್ಯಾಪಾರ ➤ ಕಡಬದಲ್ಲಿ ಎರಡು ವಾಹನಗಳು ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಎ.22. ಎ.ಪಿ.ಎಂ.ಸಿ.ಯ ನಿಯಮವನ್ನು ಮೀರಿ ಗೇರು ಬೀಜ ಖರೀದಿಸುವ ನೆಪದಲ್ಲಿ ಅಡಿಕೆಯನ್ನು ಖರೀದಿಸಿ ಲೋಡ್ ಮಾಡುತ್ತಿದ್ದ ಎರಡು ವಾಹನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಬುಧವಾರದಂದು ಕಡಬದಲ್ಲಿ ನಡೆದಿದೆ. ಕಡಬ ಬಸ್ ನಿಲ್ದಾಣದ ಬಳಿ ಅಡಿಕೆ ವ್ಯಾಪಾರ ಮಾಡುತ್ತಿದ್ದ ವರ್ತಕರೋರ್ವರ ಗೋಡಾನ್ ನಿಂದ ಅಡಿಕೆ ಮತ್ತು ಗೇರು ಬೀಜವನ್ನು ತುಂಬಿಸಿದ್ದ ಈಚರ್ ಹಾಗೂ ಅಶೋಕ್ ಲೈಲಾಂಡ್ ದೋಸ್ತ್ ಗಾಡಿಯನ್ನು ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ, ಕೋವಿಡ್ ನಿಗ್ರಹದಳದ ಅಧಿಕಾರಿ ಮಸ್ತಾನ್

ಎಪಿಎಂಸಿ ಯ ನಿಯಮ‌ವನ್ನು ಮೀರಿ ಅಡಿಕೆ ವ್ಯಾಪಾರ ➤ ಕಡಬದಲ್ಲಿ ಎರಡು ವಾಹನಗಳು ವಶಕ್ಕೆ Read More »

ಕರಾವಳಿ

ಕಡಬ: ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಅಕ್ಕಿ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಎ.22. ಗೃಹರಕ್ಷಕ ದಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಗೃಹ ರಕ್ಷಕ ದಳದ ಜಿಲ್ಲಾ ಕಮಾಡೆಂಟ್ ಡಾ| ಮುರಳೀ ಮೋಹನ ಚೂಂತಾರು ಅವರು ದಾನಿಗಳ ನೆರವಿನಿಂದ ಅಕ್ಕಿ ವಿತರಿಸಿದರು. ಮಂಗಳವಾರದಂದು ಕಡಬ ಘಟಕದ ಸದಸ್ಯರಿಗೆ ಅಕ್ಕಿ ವಿತರಿಸಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕಾರ್ಯ ನಿರ್ವಹಿಸುವ ಸುಮಾರು ಒಂದು ಸಾವಿರ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ದಾನಿಗಳ ಸಹಕಾರದಿಂದ ಅಕ್ಕಿಯನ್ನು ನೀಡಲಾಗುತ್ತಿದೆ. ಅದರಂತೆ ಕಡಬ ಗೃಹರಕ್ಷಕ ದಳದ ಸಿಬ್ಬಂದಿಗಳಿಗೂ

ಕಡಬ: ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಅಕ್ಕಿ ವಿತರಣೆ Read More »

ಕರಾವಳಿ

ಕಡಬ: ಅಕ್ರಮ ಕಸಾಯಿಖಾನೆಗೆ ಪೋಲಿಸರ ದಾಳಿ ➤ ದನ, ಮಾಂಸ ವಶ: ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬುಧವಾರ ಬೆಳ್ಳಂಬೆಳಗ್ಗೆ ಇಲ್ಲಿನ ಕಳಾರ ಎಂಬಲ್ಲಿನ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಕಡಬ ಎಸ್.ಐ ರುಕ್ಮ ನಾಯ್ಕ್ ನೇತೃತ್ವದ ಪೋಲಿಸ್ ತಂಡ ಒಂದು ದನ, ಹಾಗೂ ಮಾಂಸ ವನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಅಕ್ರಮವಾಗಿ ದನದ ಮಾಂಸ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯಲ್ಲಿ ಪೋಲಿಸರು ದಾಳಿ ನಡೆಸಿದ್ದಾರೆ. ಬಂಧಿತ ಆರೋಪಿಗಳನ್ನು ಜಾಬೀರ್ ಹಾಗೂ ಹಾಶಿರ್ ಎಂದು ಗುರುತಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಸ್.ಐ ರುಕ್ಮ ನಾಯ್ಕ್ ಅವರ ನೇತ್ರತ್ವದಲ್ಲಿ ಸಿಬ್ಬಂದಿಗಳಾದ ಭವಿತ್ ರೈ. ಶಿವರಾಜ್, ಕನಕರಾಜ್, ಮೋನಪ್ಪ,

ಕಡಬ: ಅಕ್ರಮ ಕಸಾಯಿಖಾನೆಗೆ ಪೋಲಿಸರ ದಾಳಿ ➤ ದನ, ಮಾಂಸ ವಶ: ಇಬ್ಬರ ಬಂಧನ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಬ್ರಹ್ಮಣ್ಯ: ವಿಷ ಸೇವಿಸಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.21. ವಿಷ ಸೇವಿಸಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಬಾಳುಗೋಡು ಎಂಬಲ್ಲಿ ನಡೆದಿದೆ. ಸುಳ್ಯ ತಾಲ್ಲೂಕು ಬಾಳುಗೋಡು ಉಪ್ಪುಕಳ ನಿವಾಸಿ ವಿನುತಾ(20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೂರನೇ ವರ್ಷದ ನರ್ಸಿಂಗ್ ತರಬೇತಿ ಪಡೆಯುತ್ತಿದ್ದ ವಿನುತಾ ಕೊರೋನಾ ವೈರಸ್ ಕಾಯಿಲೆ ಪ್ರಯುಕ್ತ ನರ್ಸಿಂಗ್ ತರಬೇತಿಗೆ ರಜೆ ನೀಡಿದ್ದ ಕಾರಣ ಮನೆಗೆ ಬಂದಿದ್ದಳು ಎನ್ನಲಾಗಿದೆ. ಸೋಮವಾರ ರಾತ್ರಿ ಎಂಟು ಗಂಟೆಯ ಸಮಯದಲ್ಲಿ ತನ್ನ ಮನೆಯಲ್ಲಿ ಇಲಿಪಾಷಾಣ ಸೇವಿಸಿ

ಸುಬ್ರಹ್ಮಣ್ಯ: ವಿಷ ಸೇವಿಸಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೂ ಬಂತು ಥರ್ಮಲ್ ಸ್ಕ್ಯಾನರ್ ➤ ಇನ್ಮುಂದೆ ಆರೋಗ್ಯ ತಪಾಸಣೆ ಬಲು ಸುಲಭ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಕಡಬ, ಎ.21. ಕೊರೋನಾ ವೈರಸ್‌ ನ್ನು ಪತ್ತೆಹಚ್ಚುವ ಸಲುವಾಗಿ ಈ ಹಿಂದೆ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಲಭ್ಯವಿದ್ದ ಥರ್ಮಲ್ ಸ್ಕ್ಯಾನರ್‌ನ್ನು ಕಡಬ ಸಮಯ ದಾಯ ಆರೋಗ್ಯ ಕೇಂದ್ರಕ್ಕೆ ಒದಗಿಸಲಾಗಿದೆ. ಪುತ್ತೂರು ತಾಲೂಕು ಆಸ್ಪತ್ರೆ, ಕಡಬ ಮತ್ತು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ, ಮತ್ತು ಹತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ ಒಂದರಂತೆ ಒಟ್ಟು 13 ಸ್ಯಾನರ್ ಗಳನ್ನು ನೀಡಲಾಗಿದೆ. ಇದುವರೆಗೆ ಥರ್ಮಲ್ ಸ್ಯ್ಯಾನರ್ ಇಲ್ಲದೆ ಜನರ ತಪಾಸಣೆಗೆ ಅಡ್ಡಿಯಾಗುತ್ತಿದ್ದು, ಇದೀಗ

ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೂ ಬಂತು ಥರ್ಮಲ್ ಸ್ಕ್ಯಾನರ್ ➤ ಇನ್ಮುಂದೆ ಆರೋಗ್ಯ ತಪಾಸಣೆ ಬಲು ಸುಲಭ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ಳಾರೆ: ಸಾವಿರ ರೂ. ಮತ್ತು ಊರ ಕೋಳಿಯ ಪ್ರಕರಣ ➤ ಸುಳ್ಳು ಸುದ್ದಿ ಹರಡಿದ ಮೂವರ ವಿರುದ್ಧ ಕೇಸ್

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಎ.20. ಲಾಕ್‌ಡೌನ್ ಉಲ್ಲಂಘಿಸಿ ಆಗಮಿಸಿದ್ದ ಕಾರನ್ನು ವಶಪಡಿಸಿ ದಂಡ ಹಾಕಿದ್ದ ಬೆಳ್ಳಾರೆ ಪೊಲೀಸರ ವಿರುದ್ಧ ದಂಡ ಹಾಕಿದ್ದಲ್ಲದೆ ಊರ ಕೋಳಿ ಕೇಳಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದಕ್ಕೆ ಸುಳ್ಳು ಸುದ್ದಿ ನೀಡಿದ ಕಾರಣಕ್ಕೆ ಮೂವರು ಆರೋಪಿಗಳ ಮೇಲೆ ಸೋಮವಾರದಂದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಸುಳ್ಳು ಆರೋಪಗಳನ್ನು ಹೊರಿಸಿ ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ವೈಮನಸ್ಸು ಉಂಟುಮಾಡಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆಂದು ಆರೋಪಿಸಿ ಸುಂದರ ಕಾಪುತ್ತಡ್ಕ,

ಬೆಳ್ಳಾರೆ: ಸಾವಿರ ರೂ. ಮತ್ತು ಊರ ಕೋಳಿಯ ಪ್ರಕರಣ ➤ ಸುಳ್ಳು ಸುದ್ದಿ ಹರಡಿದ ಮೂವರ ವಿರುದ್ಧ ಕೇಸ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬೆಂಗಳೂರು ಘಟನೆ ಮಾಸುವ ಮುನ್ನವೇ ಬಿ.ಸಿ ರೋಡ್ ನಲ್ಲಿ ಅಂತಹದೇ ಘಟನೆ ➤ ಲಾಕ್‌ಡೌನ್ ಉಲ್ಲಂಘನೆ ಪ್ರಶ್ನಿಸಿದ್ದಕ್ಕೆ ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.20. ಲಾಕ್‌ಡೌನ್ ಇದ್ದರೂ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಸರಕಾರಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಸೋಮವಾರದಂದು ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ಪುರಸಭೆಯ ಪರಿಸರ ಅಭಿಯಂತರರಾದ ವೀರಪ್ಪ ಕೆ. ಎಂಬವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳೊಂದಿಗೆ ಕರ್ತವ್ಯದ ನಿಮಿತ್ತ ಕಾರಿನಲ್ಲಿ ಬಂಟ್ವಾಳ ಕಸಬ ಗ್ರಾಮದ ಬಾರೆಕಾಡು ಎಂಬಲ್ಲಿಗೆ ತಲುಪಿದಾಗ ಮಧ್ಯಾಹ್ನ 1.00 ಗಂಟೆಗೆ ರಫೀಕ್ ಎಂಬವರ ಅಂಗಡಿ ತೆರೆದಿದ್ದು, ಅಂಗಡಿಯ ಎದುರು ಸುಮಾರು 5 ರಿಂದ 10 ಜನರು

ಬೆಂಗಳೂರು ಘಟನೆ ಮಾಸುವ ಮುನ್ನವೇ ಬಿ.ಸಿ ರೋಡ್ ನಲ್ಲಿ ಅಂತಹದೇ ಘಟನೆ ➤ ಲಾಕ್‌ಡೌನ್ ಉಲ್ಲಂಘನೆ ಪ್ರಶ್ನಿಸಿದ್ದಕ್ಕೆ ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರು: ಕೊರೋನಾ ವಾರಿಯರ್ ತಂಡದ ಮೇಲೆ ಕಿಡಿಗೇಡಿಗಳ ದಾಳಿ ➤ 54 ಪುಂಡರ ಬಂಧನ, ಮತ್ತಷ್ಟು ಆರೋಪಿಗಳಿಗಾಗಿ ಶೋಧ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.20. ಬೆಂಗಳೂರಿನ ಪಾದರಾಯನಪುರ ಎಂಬಲ್ಲಿ ಕೊರೋನಾ ವಾರಿಯರ್ ತಂಡದ ಮೇಲೆ ದಾಳಿ ನಡೆಸಿದ 54 ಕಿಡಿಗೇಡಿಗಳನ್ನು ಬಂಧಿಸಲಾಗಿದ್ದು, ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಿದ ಗೃಹಸಚಿವರು, ಪಾದರಾಯನಪುರದಲ್ಲಿ ವೈದ್ಯಕೀಯ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಲಾಗಿದ್ದು, ಘಟನೆ ನಡೆದು ಕೆಲವೇ ಗಂಟೆಗಳಲ್ಲಿ 54 ಮಂದಿಯನ್ನು ಬಂಧಿಸಲಾಗಿದೆ. ಇನ್ನುಳಿದವರನ್ನು

ಬೆಂಗಳೂರು: ಕೊರೋನಾ ವಾರಿಯರ್ ತಂಡದ ಮೇಲೆ ಕಿಡಿಗೇಡಿಗಳ ದಾಳಿ ➤ 54 ಪುಂಡರ ಬಂಧನ, ಮತ್ತಷ್ಟು ಆರೋಪಿಗಳಿಗಾಗಿ ಶೋಧ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top