ಎಪಿಎಂಸಿ ಯ ನಿಯಮ‌ವನ್ನು ಮೀರಿ ಅಡಿಕೆ ವ್ಯಾಪಾರ ➤ ಕಡಬದಲ್ಲಿ ಎರಡು ವಾಹನಗಳು ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಎ.22. ಎ.ಪಿ.ಎಂ.ಸಿ.ಯ ನಿಯಮವನ್ನು ಮೀರಿ ಗೇರು ಬೀಜ ಖರೀದಿಸುವ ನೆಪದಲ್ಲಿ ಅಡಿಕೆಯನ್ನು ಖರೀದಿಸಿ ಲೋಡ್ ಮಾಡುತ್ತಿದ್ದ ಎರಡು ವಾಹನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಬುಧವಾರದಂದು ಕಡಬದಲ್ಲಿ ನಡೆದಿದೆ.

ಕಡಬ ಬಸ್ ನಿಲ್ದಾಣದ ಬಳಿ ಅಡಿಕೆ ವ್ಯಾಪಾರ ಮಾಡುತ್ತಿದ್ದ ವರ್ತಕರೋರ್ವರ ಗೋಡಾನ್ ನಿಂದ ಅಡಿಕೆ ಮತ್ತು ಗೇರು ಬೀಜವನ್ನು ತುಂಬಿಸಿದ್ದ ಈಚರ್ ಹಾಗೂ ಅಶೋಕ್ ಲೈಲಾಂಡ್ ದೋಸ್ತ್ ಗಾಡಿಯನ್ನು ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ, ಕೋವಿಡ್ ನಿಗ್ರಹದಳದ ಅಧಿಕಾರಿ ಮಸ್ತಾನ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

Scroll to Top