News Kadaba Desk

ಮಂಗಳೂರು: ಮತ್ತೊಂದು ಕೊರೋನಾ ಪಾಸಿಟಿವ್ ➤ ರಾಜ್ಯದಲ್ಲಿ 26 ಹೊಸ ಪ್ರಕರಣ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.13. ಲಾಕ್ ಡೌನ್ ಸಡಿಲವಾದ ಬೆನ್ನಲ್ಲೇ ಮತ್ತೆ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಬುಧವಾರ ಮತ್ತೆ ಒಂದು ಕೊರೋನಾ ಪಾಸಿಟಿವ್ ವರದಿಯಾಗಿದೆ. ಫಸ್ಟ್ ನ್ಯೂರೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಸೋಮೇಶ್ವರದ 38ರ ಹರೆಯದ ಮಹಿಳೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ಒಟ್ಟು 26 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 951ಕ್ಕೆ ಏರಿಕೆಯಾಗಿದೆ.  

ಮಂಗಳೂರು: ಮತ್ತೊಂದು ಕೊರೋನಾ ಪಾಸಿಟಿವ್ ➤ ರಾಜ್ಯದಲ್ಲಿ 26 ಹೊಸ ಪ್ರಕರಣ ಪತ್ತೆ Read More »

ಕರ್ನಾಟಕ

ಹಣ ಪಾವತಿಸಿ ಹೊಟೇಲ್ ಕ್ವಾರಂಟೈನ್ ಗೆ ಬಲವಂತದ ಒತ್ತಾಯ ಆರೋಪ ➤ ಅನಿವಾಸಿ ಕನ್ನಡಿಗರನ್ನು ಕರೆಸಿ ಕಮಿಷನ್ ದಂಧೆಗಿಳಿದರೇ ಅಧಿಕಾರಿಗಳು..?

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.13. ದುಬೈಯಿಂದ ಮಂಗಳೂರಿಗೆ ತಲುಪಿದ ವಿಮಾನ ಯಾತ್ರಿಕರನ್ನು ಏರ್‌ಪೋರ್ಟ್ ನಲ್ಲಿ ಬಲವಂತದ ಹೋಟೆಲ್ ಕ್ವಾರೈಂಟೇನ್ ಗೆ ಒತ್ತಾಯಿಸಿದ ಬಗ್ಗೆ ಆರೋಪಗಳು ಕೇಳಿಬಂದಿದ್ದು, ಇದರಿಂದ ಜಿಲ್ಲಾಡಳಿತದ ವೈಫಲ್ಯದ ಬಗ್ಗೆ ಅನುಮಾನ ಮೂಡಿದೆ. ಸರಕಾರ ಗುರುತಿಸಿರುವ ಉಚಿತ ಹಾಸ್ಟೆಲ್ ನಲ್ಲಿ ತಂಗಲು ನಿರ್ಧರಿಸಿದ್ದ ಸುಮಾರು 30 ರಷ್ಟು ಯಾತ್ರಾರ್ಥಿಗಳಿಂದ ಒಂದು ದಿನಕ್ಕೆ 2000/- ರೂಪಾಯಿಯಂತೆ ನೀಡಿ ಹೋಟೆಲ್ ಕ್ವಾರೈಂಟೇನ್ ಸೌಲಭ್ಯವನ್ನು ಪಡೆಯಬೇಕೆಂಬ ಕಟ್ಟುನಿಟ್ಟಿನ ಆದೇಶವನ್ನು ಪಾಲಿಸಲು ಒತ್ತಾಯಪಡಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಜಿಲ್ಲಾಡಳಿತ ನಿಗದಿಪಡಿಸಿದ

ಹಣ ಪಾವತಿಸಿ ಹೊಟೇಲ್ ಕ್ವಾರಂಟೈನ್ ಗೆ ಬಲವಂತದ ಒತ್ತಾಯ ಆರೋಪ ➤ ಅನಿವಾಸಿ ಕನ್ನಡಿಗರನ್ನು ಕರೆಸಿ ಕಮಿಷನ್ ದಂಧೆಗಿಳಿದರೇ ಅಧಿಕಾರಿಗಳು..? Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಲಾಕ್‌ಡೌನ್ ಜಾರಿ ಬಳಿಕ ಮಂಗಳೂರಿಗೆ ಬಂದಿಳಿದ ಮೊದಲ ವಿಮಾನ ➤ 176 ಅನಿವಾಸಿ ಕನ್ನಡಿಗರನ್ನು ಹೊತ್ತು ಮಂಗಳೂರಿಗೆ ಆಗಮನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.13. ದೇಶಾದ್ಯಂತ ಲಾಕ್‌ಡೌನ್ ಜಾರಿಯಾದ ಬಳಿಕ‌ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನಿವಾಸಿ ಕನ್ನಡಿಗರನ್ನು ಹೊತ್ತು ವಿದೇಶದಿಂದ ಆಗಮಿಸಿದ ಮೊದಲ ವಿಮಾನವು ಬುಧವಾರ ರಾತ್ರಿ ಲ್ಯಾಂಡ್ ಆಯಿತು. ದುಬೈನಿಂದ 176 ಪ್ರಯಾಣಿಕರು ಆಗಮಿಸಿದ್ದು, ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಯಿತು. ನಂತರ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ವಿಮಾನದಲ್ಲಿದ್ದ 176 ಪ್ರಯಾಣಿಕರನ್ನು

ಲಾಕ್‌ಡೌನ್ ಜಾರಿ ಬಳಿಕ ಮಂಗಳೂರಿಗೆ ಬಂದಿಳಿದ ಮೊದಲ ವಿಮಾನ ➤ 176 ಅನಿವಾಸಿ ಕನ್ನಡಿಗರನ್ನು ಹೊತ್ತು ಮಂಗಳೂರಿಗೆ ಆಗಮನ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಹಿರಿಯ ಪತ್ರಕರ್ತೆ ಸೀತಾಲಕ್ಷ್ಮೀ ಕರ್ಕಿಕೋಡಿ ವಿಧಿವಶ ➤ ಇಂದು ಅಂತಿಮ ವಿಧಿವಿಧಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.13. ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯ ಉಪ ಸಂಪಾದಕಿ, ಹಿರಿಯ ಲೇಖಕಿ ಸೀತಾಲಕ್ಷ್ಮೀ ಕರ್ಕಿಕೋಡಿ ಕೆಲಕಾಲದ ಅಸೌಖ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದೆರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಿರಿಯ ಸಾಹಿತಿ ವಿ.ಗ.ನಾಯಕ ಹಾಗೂ ಶ್ಯಾಮಲಾ ಕರ್ಕಿಕೋಡಿ ದಂಪತಿಯ ಪುತ್ರಿಯಾಗಿರುವ ಸೀತಾಲಕ್ಷ್ಮಿ ಕರ್ಕಿಕೋಡಿಯವರು ಕನ್ನಡ ಪತ್ರಿಕೋದ್ಯಮದಲ್ಲಿ ಮಂಡಿಸಿದ ಸ್ತ್ರೀ ಪರತೆ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಮುಂಬಯಿ ವಿವಿ

ಹಿರಿಯ ಪತ್ರಕರ್ತೆ ಸೀತಾಲಕ್ಷ್ಮೀ ಕರ್ಕಿಕೋಡಿ ವಿಧಿವಶ ➤ ಇಂದು ಅಂತಿಮ ವಿಧಿವಿಧಾನ Read More »

ಕರಾವಳಿ

ಮಂಗಳೂರಿನಲ್ಲಿ ಮತ್ತೆ ಇಬ್ಬರಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.12. ಲಾಕ್ ಡೌನ್ ಸಡಿಲವಾದ ಬೆನ್ನಲ್ಲೇ ಕರಾವಳಿಯಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಮಂಗಳವಾರ ಮತ್ತೆ ಇಬ್ಬರಲ್ಲಿ ಕೊರೋನಾ ಪಾಸಿಟಿವ್ ವರದಿಯಾಗಿದೆ. ಫಸ್ಟ್ ನ್ಯೂರೊ ಆಸ್ಪತ್ರೆಯಲ್ಲಿದ್ದ ಸೋಂಕಿತ ರೋಗಿಯ ಸಂಪರ್ಕದಿಂದ ಮತ್ತೆ ಇಬ್ಬರಿಗೆ ಸೋಂಕು ತಗುಲಿದೆ. 50 ವರ್ಷ ಮಹಿಳೆ ಸೇರಿದಂತೆ 26 ವರ್ಷದ ಯುವಕನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಇಬ್ಬರು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಇಬ್ಬರೂ ಉಡುಪಿ ಮೂಲದವರೆಂದು ತಿಳಿದುಬಂದಿದೆ.

ಮಂಗಳೂರಿನಲ್ಲಿ ಮತ್ತೆ ಇಬ್ಬರಿಗೆ ಕೊರೋನಾ ಪಾಸಿಟಿವ್ Read More »

ಕರಾವಳಿ

ಸೌದಿ ಅರೇಬಿಯಾದಲ್ಲಿ ತಿಂಗಳ ಹಿಂದೆ ರಸ್ತೆ ಅಪಘಾತ ➤ ಗಂಭೀರ ಗಾಯಗೊಂಡು ಕೋಮಾದಲ್ಲಿದ್ದ ಸುಳ್ಯದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.11. ವಾಹನ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದ ಸುಳ್ಯದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಭಾನುವಾರದಂದು ಸೌದಿ ಅರೇಬಿಯಾದಲ್ಲಿ ನಡೆದಿದೆ. ಸೌದಿ ಅರೇಬಿಯಾದ ಅಲ್‌ – ಕೋಬಾರ್‌ ಎಂಬಲ್ಲಿ ಉದ್ಯೋಗದಲ್ಲಿದ್ದ ಸುಳ್ಯ ತಾಲೂಕಿನ ಅರಂತೋಡು ನಿವಾಸಿ ಅಬ್ದುಲ್ ಸತ್ತಾರ್ (45) ಎಂಬವರು ಸುಮಾರು ಒಂದು ತಿಂಗಳ ಹಿಂದೆ ವಾಹನ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಸೌದಿ ಅರೇಬಿಯಾದಲ್ಲಿ ತಿಂಗಳ ಹಿಂದೆ ರಸ್ತೆ ಅಪಘಾತ ➤ ಗಂಭೀರ ಗಾಯಗೊಂಡು ಕೋಮಾದಲ್ಲಿದ್ದ ಸುಳ್ಯದ ವ್ಯಕ್ತಿ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್

ರಾಜ್ಯದಲ್ಲಿ ಇಂದು 14 ಮಂದಿಯಲ್ಲಿ ಕೊರೋನಾ ಪತ್ತೆ ➤ ಒಟ್ಟು ಸಂಖ್ಯೆ 862 ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.11. ರಾಜ್ಯದಲ್ಲಿ‌ ಕೊರೋನ ಸೋಂಕು ದಿನಂಪ್ರತಿ ಹರಡುತ್ತಿದ್ದು, ಸೋಮವಾರದಂದು ಒಟ್ಟು 14 ಮಂದಿಯಲ್ಲಿ ಹೊಸದಾಗಿ ಕೊರೋನ ಸೋಂಕು ದೃಢಪಟ್ಟಿವೆ. ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಇಂದು 14 ಮಂದಿಗೆ ಕೊರೋನಾ ದೃಢಪಡುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ. ಈ ಪೈಕಿ ದಾವಣಗೆರೆಯಲ್ಲಿ 3, ಬೀದರ್ 2, ಬಾಗಲಕೋಟೆ 2, ಹಾವೇರಿ, ವಿಜಯಪುರ, ಮಂಡ್ಯ, ಬೆಂಗಳೂರು ನಗರ, ಕಲಬುರಗಿ ಹಾಗೂ ಹಾಸನದ

ರಾಜ್ಯದಲ್ಲಿ ಇಂದು 14 ಮಂದಿಯಲ್ಲಿ ಕೊರೋನಾ ಪತ್ತೆ ➤ ಒಟ್ಟು ಸಂಖ್ಯೆ 862 ಕ್ಕೆ ಏರಿಕೆ Read More »

ಕರ್ನಾಟಕ

ಕೊರೋನಾ ಲಾಕ್‌ಡೌನ್ ಹಿನ್ನೆಲೆ ➤ ನಾಳೆಯಿಂದ ಕಡಬದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ನಡೆಸಲು ನಿರ್ಧಾರ

ಕಡಬ: ಇತ್ತೀಚಿನ ದಿನಗಳಲ್ಲಿ ಕೊರೊನ ರೋಗವು ಹೆಚ್ಚುತಿರುವುದರಿಂದ ಅದನ್ನು ನಿಯಂತ್ರಿಸಲು ಪ್ರತಿಯೊಬ್ಬ ಗ್ರಾಹಕ ಮತ್ತು ವರ್ತಕರ ಕರ್ತವ್ಯವಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸರಕಾರ ಲಾಕ್ ಡೌನ್ ಮಾಡಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸರಕಾರ ಇತ್ತೀಚೆಗೆ ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 7ರ ತನಕ ತೆರೆದಿಟ್ಟು ವ್ಯವಹಾರ ಮಾಡಲು ಅನುಮತಿ ನೀಡಿತ್ತು. ಆದರೆ ಇದರಿಂದ ಪೇಟೆಯಲ್ಲಿ ಜನಸಂದಣಿ ಹೆಚ್ಚುತ್ತಿದ್ದು ಇದನ್ನು ನಿಯಂತ್ರಿಸಲು ಮೇ.12ರಿಂದ ಕಡಬದಲ್ಲಿ ಬೆಳಿಗ್ಗೆ 7ರಿಂದ ಅಪರಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ತೆರೆಯಲಿದ್ದು 2 ಗಂಟೆಯ

ಕೊರೋನಾ ಲಾಕ್‌ಡೌನ್ ಹಿನ್ನೆಲೆ ➤ ನಾಳೆಯಿಂದ ಕಡಬದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ನಡೆಸಲು ನಿರ್ಧಾರ Read More »

ಕರಾವಳಿ

ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂಗಡಿಗಳ ಬಾಡಿಗೆ ಮನ್ನಾ ಮಾಡಿದ ಕಡಬದ ಕಟ್ಟಡ ಮಾಲಕ ➤ 55 ಅಂಗಡಿಗಳ 2.5 ಲಕ್ಷ ಬಾಡಿಗೆ ಮನ್ನಾ ಮಾಡಿ ಮಾನವೀಯತೆ

(ನ್ಯೂಸ್ ಕಡಬ) newskadaba.com ಕಡಬ, ಮೇ.11. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಂಕಷ್ಟಕ್ಕೀಡಾಗಿದ್ದ ಅಂಗಡಿ ಮಾಲಕರಿಗೆ ನೆರವಾಗುವ ಉದ್ದೇಶದಿಂದ ಕಡಬದ ಕಟ್ಟಡ ಮಾಲಕರೋರ್ವರು ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕಡಬದ ಶ್ರೀರಾಮ್ ಟವರ್ಸ್ ಮತ್ತು ಓಂಕಾರ್ ಟವರ್ಸ್ ನ ಮಾಲಕರಾದ ಕೇಪು ಶಿವರಾಮ ಶೆಟ್ಟಿ ಹಾಗೂ ಕೃಷ್ಣ ಶೆಟ್ಟಿ ಅವರು ತಮ್ಮ ಮಾಲಕತ್ವದ ವಾಣಿಜ್ಯ ಸಂಕೀರ್ಣದ ಒಟ್ಟು 55 ಅಂಗಡಿ ಕೊಠಡಿಗಳ ಬಾಡಿಗೆದಾರರಿಗೆ ಕೊರೊನಾ ಲಾಕ್ ಡೌನ್ ಸಂಕಷ್ಟದ ಹಿನ್ನೆಲೆಯಲ್ಲಿ

ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂಗಡಿಗಳ ಬಾಡಿಗೆ ಮನ್ನಾ ಮಾಡಿದ ಕಡಬದ ಕಟ್ಟಡ ಮಾಲಕ ➤ 55 ಅಂಗಡಿಗಳ 2.5 ಲಕ್ಷ ಬಾಡಿಗೆ ಮನ್ನಾ ಮಾಡಿ ಮಾನವೀಯತೆ Read More »

ಕರಾವಳಿ
Scroll to Top