ಕ್ವಾರಂಟೈನ್ ನಲ್ಲಿದ್ದರೂ ಕಡಬಕ್ಕೆ ಬಂದು ಕೆಲಸಕ್ಕೆ ಹಾಜರಾದ ಮ್ಯಾನೇಜರ್ ➤ ಮ್ಯಾನೇಜರ್ ಗೆ 14 ದಿನ ಕಛೇರಿಯಲ್ಲೇ ಕ್ವಾರಂಟೈನ್, ಸಿಬ್ಬಂದಿಗಳಿಗೆ 14 ದಿನ ರಜೆ
(ನ್ಯೂಸ್ ಕಡಬ) newskadaba.com ಕಡಬ, ಮೇ.15. ಚಿಕ್ಕಮಗಳೂರುನಿಂದ ಕಡಬಕ್ಕೆ ಆಗಮಿಸಿ ಕ್ವಾರಂಟೈನ್ ನಲ್ಲಿ ಇರಬೇಕಾಗಿದ್ದ ಮೈಕ್ರೋ ಫೈನಾನ್ಸ್ವೊಂದರ ಮ್ಯಾನೇಜರ್ ಕಛೇರಿಯಲ್ಲಿ ಇತರ ಸಿಬ್ಬಂದಿಗಳೊಂದಿಗೆ ಕಳೆದ ಎಂಟು ದಿನಗಳಿಂದ ಕೆಲಸ ನಿರ್ವಹಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಕಡಬ ಗ್ರಾಮ ಪಂಚಾಯತ್ ಕೋವಿಡ್ ಕಾರ್ಯಪಡೆಯ ಅಧಿಕಾರಿಗಳು ಕಛೇರಿಯಲ್ಲಿದ್ದ ಸಿಬ್ಬಂದಿಗಳಿಗೆ ರಜೆ ನೀಡಿ, ಕಛೇರಿಯಲ್ಲೇ ಮ್ಯಾನೇಜರ್ಗೆ ಕ್ವಾರಂಟೈನ್ ಮಾಡಿಸಿದ ಘಟನೆ ಶುಕ್ರವಾರದಂದು ನಡೆದಿದೆ. ಕಡಬದಲ್ಲಿ ಕಾರ್ಯಾಚರಿಸುತ್ತಿದ್ದ ಮೈಕ್ರೋ ಫೈನಾನ್ಸ್ವೊಂದರ ಮ್ಯಾನೇಜರ್ ಚಿಕ್ಕಮಗಳೂರಿನಿಂದ ಮೇ 6 ರಂದು ಕಡಬಕ್ಕೆ ಆಗಮಿಸಿದ್ದರು. ಈ ವೇಳೆ ಅವರಿಗೆ […]







