News Kadaba Desk

ಆತ್ಮಹತ್ಯೆಗೆ ಶರಣಾದ ಗೃಹಿಣಿ ➤ ಪತಿ, ಅತ್ತೆಯ ವಿರುದ್ದ ಮಾನಸಿಕ ಹಿಂಸೆ ಆರೋಪ

(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ,ಜೂ.15: ಹಿರೆಬಂಡಾಡಿ ಗ್ರಾಮದ ಪಾಲೆತ್ತಡಿ ಎಂಬಲ್ಲಿ ಶ್ವೇತಾ(24) ಎಂಬ ಗೃಹಿಣಿಯೋರ್ವರು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಭಾನುವಾರ ನಡೆದಿದೆ. ರಾಜಕೀಯ ಮುಖಂಡ ಲೋಕೆಶ್ ಪಾಲೆತ್ತಡಿ ಎಂಬವರ ಪತ್ನಿಯಾಗಿರುವ ಶ್ವೇತಾ ನಾಲ್ಕು ವರ್ಷದ ಹಿಂದೆ ವಿವಾಹ ಆಗಿದ್ದರು ಮೂರು ವರ್ಷದ ಗಂಡು ಮಗುವನ್ನು ಹೊಂದಿದ್ದಾರೆ. ಪೊಲೀಸರಿಗೆ ದೂರು ನೀಡಿದ ಮೃತಳ ತಂದೆ ತನ್ನ ಮಗಳಿಗೆ ಆಕೆಯ ಪತಿ ಹಾಗೂ ಅತ್ತೆ ಮಾನಸಿಕ ಹಿಂಸೆ ನೀಡುತ್ತಿದ್ದರು ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ […]

ಆತ್ಮಹತ್ಯೆಗೆ ಶರಣಾದ ಗೃಹಿಣಿ ➤ ಪತಿ, ಅತ್ತೆಯ ವಿರುದ್ದ ಮಾನಸಿಕ ಹಿಂಸೆ ಆರೋಪ Read More »

ಕರಾವಳಿ

ಕಡಬದ ಡಿ.ಸಿ.ಸಿ ಬ್ಯಾಂಕ್ ಗೂ ತಟ್ಟಿದ ಕೊರೋನಾ ಬಿಸಿ ➤ ಒಂದು ವಾರ ಸ್ವಯಂ ಸೀಲ್ ಡೌನ್

(ನ್ಯೂಸ್ ಕಡಬ)newskadaba.com ಕಡಬ. ಜೂ. 15, ಕಡಬ ಸಿ.ಎ. ಬ್ಯಾಂಕ್ ಸಿಬ್ಬಂದಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರು ಭೇಟಿ ನೀಡಿದ್ದಾರೆನ್ನಲಾದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಕಡಬ ಶಾಖೆಯನ್ನು ಬ್ಯಾಂಕಿನ ಆಡಳಿತ ಮಂಡಳಿ ಒಂದು ವಾರಗಳ ಕಾಲ ಸ್ವಯಂ ಸೀಲ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಿಂದ ಗ್ರಾಹಕರು ಮೊಬೈಲ್ ಬ್ಯಾಂಕ್ ಮೂಲಕ ಬ್ಯಾಂಕಿನ ಎಲ್ಲಾ ಸೇವೆಗಳನ್ನು ಪಡೆಯಬಹುದು. ಮೊಬೈಲ್ ಬ್ಯಾಂಕ್ ವಾಹನ ಕಡಬ ಶ್ರೀ ರಾಂ ಟವರ್ಸ್ ವಠಾರದಲ್ಲಿ ಬ್ಯಾಂಕ್ ಕಾರ್ಯದ ಅವಧಿಯಲ್ಲಿ ನಿಲ್ಲಲಿದೆ ಗ್ರಾಹಕರು

ಕಡಬದ ಡಿ.ಸಿ.ಸಿ ಬ್ಯಾಂಕ್ ಗೂ ತಟ್ಟಿದ ಕೊರೋನಾ ಬಿಸಿ ➤ ಒಂದು ವಾರ ಸ್ವಯಂ ಸೀಲ್ ಡೌನ್ Read More »

ಕರಾವಳಿ

ಮರ್ಕಝ್: ಯುಎಇ ಯಿಂದ 40 ಬಾಡಿಗೆ ವಿಮಾನ ಯಾನ ➤ ಜೂ.17ಕ್ಕೆ ಮೊದಲ ವಿಮಾನ

(ನ್ಯೂಸ್ ಕಡಬ)newskadaba.com ಜೂ.15,ಮರ್ಕಝ್ ಹಳೆ ವಿದ್ಯಾರ್ಥಿಗಳ ಸಂಘಟನೆಯಾದ ಮರ್ಕಝ್ ಆಲುಮ್ನಿ ಯುಎಇ ಚಾಪ್ಟರ್ ವತಿಯಿಂದ 40 ವಿಮಾನಗಳ ಓಡಾಟಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಇದರ ಅಂಗವಾಗಿ ಮೊದಲ ವಿಮಾನವು ಜೂ. 17 ಮತ್ತು ಎರಡನೇ ವಿಮಾನ ಜೂ.18 ರಂದು ಯುಎಇಯಿಂದ ಕಲ್ಲಿಕೋಟೆಗೆ ಹಾರಲಿದೆ. ಇಂಡಿಯನ್ ಗ್ರಾಂಡ್ ಮುಫ್ತಿ ಅಲ್ ಹಾಜ್ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ನಿರ್ದೇಶನದ ಮೇರೆಗೆ ಕಲ್ಲಿಕೋಟೆ, ಕಣ್ಣೂರು,ಕೊಚ್ಚಿ, ತಿರುವನಂತಪುರಂ, ದೆಹಲಿ, ಹೈದರಾಬಾದ್, ಚೆನ್ನೈ, ಅಮೃತಸರ ಮತ್ತಿತರ ಪ್ರದೇಶಗಳಿಗೆ ಬಾಡಿಗೆ ವಿಮಾನ

ಮರ್ಕಝ್: ಯುಎಇ ಯಿಂದ 40 ಬಾಡಿಗೆ ವಿಮಾನ ಯಾನ ➤ ಜೂ.17ಕ್ಕೆ ಮೊದಲ ವಿಮಾನ Read More »

ರಾಷ್ಟ್ರೀಯ ನ್ಯೂಸ್

ಅಡಕೆ ಹಿಂಗಾರಕ್ಕೆ ರೋಗ ಭಾಧೆ ; ಕಂಗಾಲಾದ ರೈತ

ವರದಿ: ಕೆ.ಎಸ್.ಬಾಲಕೃಷ್ಣ ಕೊಯಿಲ ಕಳೆದ ವರ್ಷ ಪ್ರಾಕೃತಿಕ ವಿಕೋಪದಲ್ಲಿ ಅಡಕೆ ಇಳುವರಿಯ ಏರಿಳಿತ ಕಂಡು ಕಂಗಾಲಾಗಿದ್ದ ರೈತನಿಗೆ ಈ ಬಾರಿ ಅಡಕೆ ಹಿಂಗಾರಕ್ಕೆ ನಿಗೂಢ ರೋಗಭಾಧೆ ಆವರಿಸಿ ಮತ್ತೊಂಡು ಹೊಡೆತ ಬಿದ್ದಿದೆ. ಕಡಬ ತಾಲೂಕಿನ ಪೆರಾಬೆ ಗ್ರಾಮದ ಇಡಾಳ ಶ್ರೀಧರ ಗೌಡ ಎಂಬವರ ಅಡಕೆ ತೋಟ ಸಂಪೂರ್ಣ ಈ ರೋಗಕ್ಕೆ ಆಹುತಿಯಾಗಿದ್ದು, ಅಡಕೆ ಫಸಲು ಈ ಭಾರಿ ಮರೀಚಿಕೆಯಾಗಿದೆ. ಫಲವತ್ತಾದ ಅಡಕೆ ತೋಟದಲ್ಲಿ ಪ್ರತೀ ಹಂಗಾಮಿನಲ್ಲಿ ಬರೊಬ್ಬರಿ ಅಡಕೆ ಫಸಲು ಕಾಣುತ್ತಿದ್ದ ತೋಟದಲ್ಲಿ , ಅಡಕೆ ಫಸಲು

ಅಡಕೆ ಹಿಂಗಾರಕ್ಕೆ ರೋಗ ಭಾಧೆ ; ಕಂಗಾಲಾದ ರೈತ Read More »

ಕರಾವಳಿ, ವಿಶೇಷ ಲೇಖನಗಳು

ಇನ್ನಷ್ಟು ದಾಖಲೆಗಳ ಅವಕಾಶದಿಂದ ಹಿಂದೆ ಸರಿದ ಧೋನಿ ➤ಗೌತಮ್ ಗಂಭೀರ್ ಮಹತ್ವದ ಹೇಳಿಕೆ

(ನ್ಯೂಸ್ ಕಡಬ) newskadaba.com.ಮುಂಬೈ,ಜೂ.14:ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಒಂದು ವೇಳೆ ಟೀಂ ಇಂಡಿಯಾ ನಾಯಕತ್ವ ವಹಿಸದೇ ಇದ್ದರೆ ಅವರ ದಾಖಲೆಗಳ ಪಟ್ಟಿ ಇನ್ನೂ ವಿಶೇಷವಾಗಿರುತ್ತಿತ್ತು ಎಂದು ಗೌತಮ್ ಗಂಭೀರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಸ್ಟಾರ್ ಸ್ಪೋರ್ಟ್‍ನ ಕ್ರಕಿಟ್ ಕನೆಕ್ಟ್‍ಡ್ ಕಾರ್ಯಕ್ರಮದಲ್ಲಿ ಮಾತನಾಡಿದ ಗಂಭೀರ್, ಒಂದು ವೇಳೆ ಧೋನಿ ನಾಯಕತ್ವದ ಹೊರತಾಗಿ ಮೂರನೇ ಕ್ರಮಾಂಕದಲ್ಲಿ ಆಡುವ ನಿರ್ಧಾರ ಮಾಡಿದ್ದರೆ ಅವರು ವಿಶ್ವದ ಅತ್ಯಂತ ರೋಮಾಂಚನಕಾರಿ ಕ್ರಿಕೆಟ್‍ರ್ ಆಗಿರುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ. ಮೂರನೇ ಕ್ರಮಾಂಕದಲ್ಲಿ

ಇನ್ನಷ್ಟು ದಾಖಲೆಗಳ ಅವಕಾಶದಿಂದ ಹಿಂದೆ ಸರಿದ ಧೋನಿ ➤ಗೌತಮ್ ಗಂಭೀರ್ ಮಹತ್ವದ ಹೇಳಿಕೆ Read More »

ಕ್ರೀಡಾ ನ್ಯೂಸ್

ಶಾಸಕರಿಂದ ಎಂಡೋ ಪೀಡಿತರು ಹಾಗೂ ವಿಕಲಚೇತನರಿಗೆ ಆಹಾರ ಕಿಟ್ ವಿತರಣೆ

(ನ್ಯೂಸ್ ಕಡಬ)newskadaba.com ಕಡಬ. ಜೂ. 14, ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಎಂಡೋ ಪೀಡಿತ ಕುಂಟುಂಬಕ್ಕೆ ಸುಳ್ಯ ಶಾಸಕ ಎಸ್.ಅಂಗಾರ ಆಹಾರಕಿಟ್ ವಿತರಣೆ ಮಾಡಿದರು. ಶಾಸಕರು ತಮ್ಮ ಸ್ವಂತ ಖರ್ಚಿನಿಂದ ಸುಮಾರು 400 ಕಿಟ್‍ಗಳನ್ನು ನೆಲ್ಯಾಡಿ ಶಕ್ತಿ ಕೇಂದ್ರದಲ್ಲಿರುವ ಎಂಡೋ ಪೀಡಿತರು ಹಾಗೂ ವಿಕಲಚೇತನರಿಗೆ ವಿತರಣೆ ಮಾಡಿದರು. ಶಾಸಕರು ಕೊಯಿಲ ಎಂಡೋ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಎಂಡೋ ಪೀಡಿತರ ಪೋಷಕರಿಗೆ ಕಿಟ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಜಯಂತಿ ಆರ್

ಶಾಸಕರಿಂದ ಎಂಡೋ ಪೀಡಿತರು ಹಾಗೂ ವಿಕಲಚೇತನರಿಗೆ ಆಹಾರ ಕಿಟ್ ವಿತರಣೆ Read More »

ಕರಾವಳಿ

ಇನ್ನೂ ನಾಲ್ಕು ದಿನ ಭಾರೀ ಮಳೆ ಸಾಧ್ಯತೆ ➤ ಕರಾವಳಿ ಭಾಗಗಳಲ್ಲಿ ಆರೆಂಜ್ ಅಲರ್ಟ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಜೂ. 14, ರಾಜ್ಯದಾದ್ಯಂತ ಕಳೆದೆರಡು ದಿನಗಳಿಂದಲೂ ಭಾರೀ ಮಳೆ ಸುರಿಯುತ್ತಿದ್ದು, ಮುಂದಿನ ಮೂರರಿಂದ ನಾಲ್ಕು ದಿನಗಳ ಕಾಲ ಕರಾವಳಿ ಹಾಗೂ ಮಲೆನಾಡಿನ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಉತ್ತರ

ಇನ್ನೂ ನಾಲ್ಕು ದಿನ ಭಾರೀ ಮಳೆ ಸಾಧ್ಯತೆ ➤ ಕರಾವಳಿ ಭಾಗಗಳಲ್ಲಿ ಆರೆಂಜ್ ಅಲರ್ಟ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆ ➤ ಕಡಬ ಪೇಟೆಯ ಒಂದು ಭಾಗ ಸೀಲ್‌ಡೌನ್

(ನ್ಯೂಸ್ ಕಡಬ) newskadaba.com ಕಡಬ, ಜೂ.14. ಕಡಬದಲ್ಲಿ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಕಡಬ ಪೇಟೆಯ ಒಂದು ಪಾರ್ಶ್ವವನ್ನು ಸೀಲ್‌ಡೌನ್ ಮಾಡಲಾಗಿದೆ. ಕಡಬದ ಸಿ.ಎ. ಬ್ಯಾಂಕ್ ಉದ್ಯೋಗಿಗೆ ಕೊರೋನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಬ್ಯಾಂಕ್ ನ ಪರಿಸರದ 100 ಮೀಟರ್ ವ್ಯಾಪ್ತಿಯನ್ನು ಸೀಲ್‌ಡೌನ್ ಮಾಡಲಾಗಿದೆ. ರಿಕ್ಷಾ ನಿಲ್ದಾಣವನ್ನು ಸ್ಥಳಾಂತರಿಸಲಾಗಿದೆ.

ಕಡಬದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆ ➤ ಕಡಬ ಪೇಟೆಯ ಒಂದು ಭಾಗ ಸೀಲ್‌ಡೌನ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ವಿದ್ಯುತ್ ಶಾಕ್ ತಗುಲಿ ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com ಪುತ್ತೂರು. ಜೂ. 14, ವಿದ್ಯುತ್ ಶಾಕ್ ತಗುಲಿ ಯುವಕರೋರ್ವರು ಮೃತಪಟ್ಟ ಘಟನೆ ತಾಲೂಕಿನ ಕೈಯೂರಿನಿಂದ ವರದಿಯಾಗಿದೆ. ಮೃತರನ್ನು ಕೈಯೂರು ಉದ್ದೋಳೆ ಕಾಂಪ್ಲೆಕ್ಸ್ ಮಾಲಕ ರಮೇಶ್ ಗೌಡ ಎಂದು ತಿಳಿದು ಬಂದಿದೆ. ಇವರು ತನ್ನ ತೋಟದಲ್ಲಿರುವ ಪಂಪ್ ಅನ್ನು ಚಾಲು ಮಾಡಲು ಸ್ವಿಚ್ ಹಾಕುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಇವರು ಕೈಯೂರು ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರೂ ಆಗಿದ್ದರು.

ವಿದ್ಯುತ್ ಶಾಕ್ ತಗುಲಿ ಯುವಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬಕ್ಕೆ ಮತ್ತೊಂದು ಆಘಾತ ➤ ಕಡಬದ ವ್ಯಕ್ತಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಜೂ.14. ಕಡಬದ ಜನತೆಗೆ ಮತ್ತೆ ಆಘಾತ ಉಂಟಾಗಿದ್ದು, ಮತ್ತೊಂದು ಕೊರೋನಾ ಪಾಸಿಟಿವ್ ವರದಿಯಾಗಿದೆ. ನೂಜಿಬಾಳ್ತಿಲ ನಿವಾಸಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅವರಿಗೆ ಯಾರ ಸಂಪರ್ಕದಿಂದ ಸೋಂಕು ತಗಲಿದೆ ಎನ್ನುವುದು ತಿಳಿದುಬರಬೇಕಿದೆ.

ಕಡಬಕ್ಕೆ ಮತ್ತೊಂದು ಆಘಾತ ➤ ಕಡಬದ ವ್ಯಕ್ತಿಗೆ ಕೊರೋನಾ ಪಾಸಿಟಿವ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top