ಆತ್ಮಹತ್ಯೆಗೆ ಶರಣಾದ ಗೃಹಿಣಿ ➤ ಪತಿ, ಅತ್ತೆಯ ವಿರುದ್ದ ಮಾನಸಿಕ ಹಿಂಸೆ ಆರೋಪ

(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ,ಜೂ.15: ಹಿರೆಬಂಡಾಡಿ ಗ್ರಾಮದ ಪಾಲೆತ್ತಡಿ ಎಂಬಲ್ಲಿ ಶ್ವೇತಾ(24) ಎಂಬ ಗೃಹಿಣಿಯೋರ್ವರು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಭಾನುವಾರ ನಡೆದಿದೆ.

ರಾಜಕೀಯ ಮುಖಂಡ ಲೋಕೆಶ್ ಪಾಲೆತ್ತಡಿ ಎಂಬವರ ಪತ್ನಿಯಾಗಿರುವ ಶ್ವೇತಾ ನಾಲ್ಕು ವರ್ಷದ ಹಿಂದೆ ವಿವಾಹ ಆಗಿದ್ದರು ಮೂರು ವರ್ಷದ ಗಂಡು ಮಗುವನ್ನು ಹೊಂದಿದ್ದಾರೆ. ಪೊಲೀಸರಿಗೆ ದೂರು ನೀಡಿದ ಮೃತಳ ತಂದೆ ತನ್ನ ಮಗಳಿಗೆ ಆಕೆಯ ಪತಿ ಹಾಗೂ ಅತ್ತೆ ಮಾನಸಿಕ ಹಿಂಸೆ ನೀಡುತ್ತಿದ್ದರು ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೋಲಿಸರು ಪ್ರಕರಣ ದಾಕಲಿಸಿಕೊಂಡಿದ್ದಾರೆ.

Scroll to Top