News Kadaba Desk

ಕಡಬದಲ್ಲಿ 132 ಮಂದಿಗೆ ಉಚಿತ ಕೊರೋನಾ ಟೆಸ್ಟ್ ➤ ಎಂಟು ಮಂದಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಆ.01. ಆರೋಗ್ಯ ಇಲಾಖೆಯ ವತಿಯಿಂದ ಉಚಿತ ಕೊರೊನಾ ಪರೀಕ್ಷೆಯು ಕಡಬದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರದಂದು ನಡೆಯಿತು. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಉಚಿತ ಕೊರೊನಾ ಪರೀಕ್ಷೆಯಲ್ಲಿ ಒಟ್ಟು 132 ಮಂದಿ ಸ್ವಯಂ ಪರೀಕ್ಷೆ ನಡೆಸಿದರು. ಇದರಲ್ಲಿ ಬೆಳ್ತಂಗಡಿ ತಾಲೂಕಿನ ಕೊಕ್ಕಡದ 6 ಮಂದಿಗೆ, ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೌಕ್ರಾಡಿಯ ಒಬ್ಬರಿಗೆ ಹಾಗೂ ಕೋಡಿಂಬಾಳದ ಒಬ್ಬರು ಸೇರಿದಂತೆ ಒಟ್ಟು 08 ಮಂದಿಗೆ ಕೊರೋನಾ […]

ಕಡಬದಲ್ಲಿ 132 ಮಂದಿಗೆ ಉಚಿತ ಕೊರೋನಾ ಟೆಸ್ಟ್ ➤ ಎಂಟು ಮಂದಿಗೆ ಕೊರೋನಾ ಪಾಸಿಟಿವ್ Read More »

ಕರಾವಳಿ

ತೆಕ್ಕಾರಿನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

ಉಪ್ಪಿನಂಗಡಿ: ಜುಲೈ 31ಸಂಭ್ರಮದ ಬಕ್ರೀದ್ ಹಬ್ಬವನ್ನು ತೆಕ್ಕಾರುವಿನಲ್ಲಿ ಕೋವಿಡ್-19 ರ ಮುನ್ನೆಚ್ಚರಿಕೆಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಬದ್ರಿಯಾ ಜುಮಾ ಮಸ್ಜಿದ್ ತೆಕ್ಕಾರುವಿನಲ್ಲಿ ಬೆಳಿಗ್ಗೆ 8:00 ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಮಾಸ್ಕ್ ಮತ್ತು ಮುಸಲ್ಲಗಳನ್ನು ಜನರೇ ಮನೆಯಿಂದಲೇ ತಂದು ಸಾಮಾಜಿಕ ಅಂತರ ಕಾಯ್ದುಕೊಂಡು ನಮಾಜ್ ನಲ್ಲಿ ನಿರತರಾದರು. ಸರಕಾರದ ಆದೇಶದಂತೆ ವಿಶೇಷ ಪ್ರಾರ್ಥನೆ ನಡೆಯಿತು. ಕೊರೊನಾ ಮುಕ್ತಿ ಹೊಂದಲು ಪ್ರತ್ಯೇಕ ಪ್ರಾರ್ಥನೆ ನಡೆಸಲಾಯಿತು. 14 ವರ್ಷದ ಮೇಲೆಯೂ 60 ವರ್ಷದ ಕೆಳಗಿನವರಿಗೆ ಮಾತ್ರ ಮಸೀದಿ ಪ್ರವೇಶಕ್ಕೆ ಅವಕಾಶವಿತ್ತು. ಪರಸ್ಪರ

ತೆಕ್ಕಾರಿನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ Read More »

ಕರಾವಳಿ, ಕರ್ನಾಟಕ

ಕಡಬದಲ್ಲಿ ಆರಂಭಗೊಳ್ಳಲಿರುವ ಮೊಬೈಲ್ ಸೆಂಟರ್ ಗೆ ಟೆಕ್ನೀಷಿಯನ್ ಬೇಕಾಗಿದ್ದಾರೆ

(ನ್ಯೂಸ್ ಕಡಬ) newskadaba.com ಕಡಬ, ಜು.31. ಕಡಬದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಮೊಬೈಲ್ ಸರ್ವೀಸ್ ಸೆಂಟರ್ ಗೆ ನುರಿತ ಮೊಬೈಲ್ ಟೆಕ್ನೀಷಿಯನ್ ಬೇಕಾಗಿದ್ದಾರೆ. ಅನುಭವಿ ಟೆಕ್ನೀಷಿಯನ್ ಗಳಿಗೆ ಆಕರ್ಷಕ ವೇತನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9743045643 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕಡಬದಲ್ಲಿ ಆರಂಭಗೊಳ್ಳಲಿರುವ ಮೊಬೈಲ್ ಸೆಂಟರ್ ಗೆ ಟೆಕ್ನೀಷಿಯನ್ ಬೇಕಾಗಿದ್ದಾರೆ Read More »

ತಂತ್ರಜ್ಞಾನ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಆಗಮನ

(ನ್ಯೂಸ್ ಕಡಬ) newskadaba.com.ಮಂಗಳೂರು ,ಜು.31: ದ.ಕ ಜಿಲ್ಲೆಗೆ ಭೇಟಿ ನೀಡಲು ಶುಕ್ರವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರಿಗೆ ದ.ಕ ಜಿಲ್ಲಾ ಕಾಂಗ್ರೆಸ್ ನಾಯಕರಿಂದ ಭವ್ಯ ಸ್ವಾಗತ ಸಿಕ್ಕಿದೆ. ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಬಿ.ರಮಾನಾಥ ರೈ,ಅಭಯ ಚಂದ್ರ ಜೈನ್ ,ವಿನಯ ಕುಮಾರ್ ಸೊರಕೆ,ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ಐವನ್ ಡಿ ಸೋಜ,ಯು.ಆರ್. ಸಭಾಪತಿ ಹಾಗೂ ಇತರ ಕಾಂಗ್ರೆಸ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಆಗಮನ Read More »

ಕರಾವಳಿ

ಭಾರತೀಯರ ಪ್ರವೇಶಕ್ಕೆ ಕುವೈತ್ ತಾತ್ಕಾಲಿಕ ನಿರ್ಬಂಧ

(ನ್ಯೂಸ್ ಕಡಬ) newskadaba.com.ಮಂಗಳೂರು,ಜು.31: ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿ ಕೆಲಸ ನಿರ್ವಹಿಸುತ್ತಿದ್ದ ಭಾರತೀಯರು ಕೊರೊನಾದಿಂದಾಗಿ ತಮ್ಮ ತಾಯ್ನಾಡಿಗೆ ಕಷ್ಟುಪಟ್ಟು ಮರಳಿದ್ದಾರೆ. ಆದರೆ ಕುವೈತ್‌ನಿಂದ ಸ್ವದೇಶಕ್ಕೆ ಮರಳಿದ್ದ ಅನೇಕ ಭಾರತೀಯರಿಗೆ ಈಗ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಭಾರತ ಸಹಿತ ಏಳು ದೇಶಗಳ ಜನರ ಪ್ರವೇಶಕ್ಕೆ ಕುವೈತ್ ತಾತ್ಕಾಲಿಕ ತಡೆ ನೀಡಿದೆ. ಬಾಂಗ್ಲಾದೇಶ, ಇರಾನ್, ನೇಪಾಳ, ಪಾಕಿಸ್ತಾನ, ಫಿಲಿಫೈನ್ಸ್ ಮತ್ತು ಶ್ರೀಲಂಕಾ ನಿರ್ಬಂಧಕ್ಕೆ ಒಳಗಾಗಿರುವ ಇತರ ರಾಷ್ಟ್ರಗಳು. ಕುವೈತ್ ಸರ್ಕಾರದ ಸಂವಹನ ಕೇಂದ್ರವು ಟ್ವಿಟ್ಟರ್‌ನಲ್ಲಿ ಇದನ್ನು ಪ್ರಕಟಿಸಿದ್ದು, ಎಷ್ಟು ಸಮಯದವರೆಗೆ

ಭಾರತೀಯರ ಪ್ರವೇಶಕ್ಕೆ ಕುವೈತ್ ತಾತ್ಕಾಲಿಕ ನಿರ್ಬಂಧ Read More »

ಕರಾವಳಿ

ನಾಳೆ ನಡೆಯುವ ಬಕ್ರೀದ್ ಹಿನ್ನೆಲೆ ➤ ಕಡಬ ಠಾಣೆಯಲ್ಲಿ ಶಾಂತಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಜು.30. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆಯವರ ನೇತೃತ್ವದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು. ಸಭೆಯಲ್ಲಿ ಹಿರಿಯ ಮುಖಂಡರು ಉಪಸ್ಥಿತರಿದ್ದು, ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಂಡು, ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ಬಕ್ರೀದ್ ಹಬ್ಬವನ್ನು ಆಚರಿಸುವ ಬಗ್ಗೆ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಡಬ ಎಸ್.ಐ.ರುಕ್ಮ ನಾಯ್ಕ್, ಎಎಸ್ಐ ರವಿ, ಕಾನ್ಸ್‌ಟೇಬಲ್ ಭವಿತ್ ರೈ, ಧಾರ್ಮಿಕ ಮುಖಂಡರಾದ ಮರ್ಧಾಳ ಮಸೀದಿಯ ಹಮೀದ್

ನಾಳೆ ನಡೆಯುವ ಬಕ್ರೀದ್ ಹಿನ್ನೆಲೆ ➤ ಕಡಬ ಠಾಣೆಯಲ್ಲಿ ಶಾಂತಿ ಸಭೆ Read More »

ಕರ್ನಾಟಕ

ಆಗಸ್ಟ್ 01 ರಂದು ಕಡಬದ ಏರ್ ಟೆಲ್ ಸೇವಾ ಕೇಂದ್ರ ಸ್ಥಳಾಂತರಗೊಂಡು ಶುಭಾರಂಭ ➤ ಏರ್ ಟೆಲ್ ಸಂಬಂಧಿತ ಎಲ್ಲಾ ಸೇವೆಗಳು ಇನ್ಮುಂದೆ ಕಡಬದಲ್ಲಿ ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಜು.29. ಇಲ್ಲಿನ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದ ಮಹಾಗಣಪತಿ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಏರ್ ಟೆಲ್ ಸೇವಾ ಕೇಂದ್ರ ‘ಭಾಗ್ಯಲಕ್ಷ್ಮೀ ಕಮ್ಯುನಿಕೇಷನ್’ ಗ್ರಾಹಕರಿಗೆ ಹೆಚ್ಚಿನ ಸೇವೆಯನ್ನು ನೀಡುವ ಉದ್ದೇಶದಿಂದ ಕಡಬದ ಸಿ.ಎ. ಬ್ಯಾಂಕ್ ಬಳಿಯ ಯೋಗಕ್ಷೇಮ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಆಗಸ್ಟ್ 01, 2020 ನೇ ಶನಿವಾರದಂದು ಶುಭಾರಂಭಗೊಳ್ಳಲಿದೆ. ನಮ್ಮ ಸಂಸ್ಥೆಯಲ್ಲಿ ಏರ್ ಟೆಲ್ ಸಂಬಂಧಿತ ಎಲ್ಲಾ ತರಹದ ಸೇವೆಗಳು ಮತ್ತು ಏರ್ಟೆಲ್ ನ್ಯೂ ಸಿಮ್ ಕಾರ್ಡ್ ಹಾಗೂ ಬೇರೆ

ಆಗಸ್ಟ್ 01 ರಂದು ಕಡಬದ ಏರ್ ಟೆಲ್ ಸೇವಾ ಕೇಂದ್ರ ಸ್ಥಳಾಂತರಗೊಂಡು ಶುಭಾರಂಭ ➤ ಏರ್ ಟೆಲ್ ಸಂಬಂಧಿತ ಎಲ್ಲಾ ಸೇವೆಗಳು ಇನ್ಮುಂದೆ ಕಡಬದಲ್ಲಿ ಲಭ್ಯ Read More »

ತಂತ್ರಜ್ಞಾನ, ಲೈಫ್‍ಸ್ಟೈಲ್

ಆಗಸ್ಟ್ 01 ರಂದು ಕಡಬದಲ್ಲಿ ಉಚಿತ ಕೊರೋನಾ ಪರೀಕ್ಷೆ

(ನ್ಯೂಸ್ ಕಡಬ) newskadaba.com ಕಡಬ, ಜು.29. ಆರೋಗ್ಯ ಇಲಾಖೆಯ ವತಿಯಿಂದ ಕಡಬದಲ್ಲಿ ಉಚಿತ ಕೊರೊನಾ ಪರೀಕ್ಷೆಯು ಆಗಸ್ಟ್ 01 ಶನಿವಾರದಂದು ನಡೆಯಲಿದೆ. ಕಡಬದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರದಂದು ಉಚಿತ ಕೊರೊನಾ ಪರೀಕ್ಷೆ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ಅವರು ತಿಳಿಸಿದ್ದಾರೆ.

ಆಗಸ್ಟ್ 01 ರಂದು ಕಡಬದಲ್ಲಿ ಉಚಿತ ಕೊರೋನಾ ಪರೀಕ್ಷೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬದಲ್ಲಿ ಕೋವಿಡ್ ಸ್ಫೋಟ ➤ ಒಂದೇ ದಿನ 11 ಮಂದಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಜು.29. ಕಡಬ ತಾಲೂಕಿನಲ್ಲಿ ಇಂದು ಅತ್ಯಧಿಕ ಕೋವಿಡ್ ಪ್ರಕರಣಗಳು ಪತ್ತೆಯಾಗುವುದರ ಮೂಲಕ ಕೊರೋನಾ ಸ್ಫೋಟಗೊಂಡಿದೆ. ಕಡಬ ತಾಲೂಕಿನ ಬಲ್ಯ ನಿವಾಸಿ 36 ವರ್ಷದ ಮಹಿಳೆ, ಕಡ್ಯ ಕೊಣಾಜೆಯ 37 ವರ್ಷದ ವ್ಯಕ್ತಿ, ಆಲಂಕಾರು ನಿವಾಸಿ 41 ವರ್ಷದ ವ್ಯಕ್ತಿ, ಚಾರ್ವಾಕ ನಿವಾಸಿ 41 ವರ್ಷದ ವ್ಯಕ್ತಿ, ಕಡಬದ 39 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇನ್ನು ಕಡಬ ತಾಲೂಕಿನ ಬೆಳಂದೂರು ರೈಲ್ವೇಗೇಟ್ ಬಳಿಯ ಮೂವರು ಮಹಿಳೆಯರು, ಇಬ್ಬರು ಯುವಕರು ಹಾಗೂ

ಕಡಬದಲ್ಲಿ ಕೋವಿಡ್ ಸ್ಫೋಟ ➤ ಒಂದೇ ದಿನ 11 ಮಂದಿಗೆ ಕೊರೋನಾ ಪಾಸಿಟಿವ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

➤➤ Breaking News ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವರ್ಗಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು‌28, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರನ್ನು ತಕ್ಷಣದಿಂದ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ನೂತನ ಜಿಲ್ಲಾಧಿಕಾರಿಯಾಗಿ ಬೆಳಗಾವಿ ಜಿಲ್ಲಾ ಪಂಚಾಯತ್ ಸಿ.ಇ.ಒ ಆಗಿದ್ದ ಡಾ.ರಾಜೇಂದ್ರ ಕೆ.ವಿ. ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಝನ್ ಸರ್ವೀಸ್ (ಈಡಿಸಿಎಸ್) ಇದರ ನಿರ್ದೇಶಕರಾಗಿ ನಿಯೋಜಿಸಲಾಗಿದೆ.

➤➤ Breaking News ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವರ್ಗಾವಣೆ Read More »

ಕರಾವಳಿ, ಕರ್ನಾಟಕ
Scroll to Top