News Kadaba Desk

ಮನೆಯ 4ನೇ ಮಹಡಿಯಿಂದ ಬಿದ್ದು ಮುತ್ತೂಟ್ ಸಮೂಹದ ಅಧ್ಯಕ್ಷ ಎಂ.ಜಿ ಜಾರ್ಜ್ ನಿಧನ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಮಾ. 07. ಮುತ್ತೂಟ್ ಸಮೂಹದ ಅಧ್ಯಕ್ಷ ಎಂ.ಜಿ. ಜಾರ್ಜ್ ಮುತ್ತೋಟ್ (71) ರವರು ತನ್ನ ಮನೆಯ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಎಂ.ಜಿ. ಜಾರ್ಜ್ ಮುತ್ತೂಟ್ ಅವರು ಪೂರ್ವ ದಿಲ್ಲಿಯ ಕೈಲಾಸ್ ನಲ್ಲಿರುವ ತನ್ನ ಮನೆಯ 4ನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಯ ವೇಳೆ ಅವರು ಮೃತಪಟ್ಟಿದ್ದರು.

ಮನೆಯ 4ನೇ ಮಹಡಿಯಿಂದ ಬಿದ್ದು ಮುತ್ತೂಟ್ ಸಮೂಹದ ಅಧ್ಯಕ್ಷ ಎಂ.ಜಿ ಜಾರ್ಜ್ ನಿಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೊನೆಗೂ ಐಪಿಎಲ್ ಗೆ ಮುಹೂರ್ತ ಫಿಕ್ಸ್ ➤ ಎ. 09ರಿಂದ ಪ್ರಾರಂಭ, ಮೆ. 30ರಂದು ಮೋದಿ ಸ್ಟೇಡಿಯಂನಲ್ಲಿ ಅದ್ದೂರಿ ಫೈನಲ್

(ನ್ಯೂಸ್ ಕಡಬ) newskadaba.com ಮುಂಬೈ, ಮಾ. 07. ಕಳೆದ ಬಾರಿ ಕೊರೋನಾ ಕಾರಣದಿಂದಾಗಿ ಕ್ರಿಕೆಟ್ ಪ್ರಿಯರಿಗೆ ವಂಚಿತವಾಗಿದ್ದ ಐಪಿಎಲ್ ಪಂದ್ಯಾವಳಿಯು ಈ ಬಾರಿ ಎಪ್ರಿಲ್ 9ರಿಂದ ಎಂದಿನ ಶೈಲಿಯಲ್ಲೇ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇದಕ್ಕಾಗಿ ಭಾರತದ ವಿವಿಧ ನಗರಗಳಲ್ಲಿ ನಡೆಯುವ ಐಪಿಎಲ್ ಪಂದ್ಯಾಟದ ವೇಳಾಪಟ್ಟಿಯನ್ನು ಬಿಸಿಸಿಐ ಈಗಾಗಲೆ ಬಿಡುಗಡೆ ಮಾಡಿದೆ. ಎರಡು ವರ್ಷಗಳ ನಂತರ ಐಪಿಎಲ್ ಪಂದ್ಯಾಟ ಈ ಬಾರಿ ದೆಹಲಿ, ಚೆನ್ನೈ, ಬೆಂಗಳೂರು, ಕಲ್ಕತ್ತಾ, ಮುಂಬೈ ಹಾಗೂ ಅಹ್ಮದಾಬಾದ್ ನಗರದಲ್ಲಿ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.

ಕೊನೆಗೂ ಐಪಿಎಲ್ ಗೆ ಮುಹೂರ್ತ ಫಿಕ್ಸ್ ➤ ಎ. 09ರಿಂದ ಪ್ರಾರಂಭ, ಮೆ. 30ರಂದು ಮೋದಿ ಸ್ಟೇಡಿಯಂನಲ್ಲಿ ಅದ್ದೂರಿ ಫೈನಲ್ Read More »

ಕ್ರೀಡಾ ನ್ಯೂಸ್

ಎಬಿವಿಪಿ ಸುಬ್ರಹ್ಮಣ್ಯ ಘಟಕದ ವತಿಯಿಂದ ಮಹಿಳಾ ದಿನಾಚರಣೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ. 07. ಎಬಿವಿಪಿ ಕುಕ್ಕೇ ಸುಬ್ರಹ್ಮಣ್ಯ ಘಟಕದ ವತಿಯಿಂದ ರವಿವಾರದಂದು ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಪಂಚಾಯತ್ ಸಭಾಂಗಣ ಸುಬ್ರಹ್ಮಣ್ಯದಲ್ಲಿ ಹಮ್ಮಿಕೊಳ್ಳಲಾಯಿತು.   ಈ ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲಲಿತಾ ಜಿ. ಇವರು ವಹಿಸಿದ್ದರು. ಮಹಿಳಾ ಹಾಗೂ ಮಕ್ಕಳ ತಜ್ಞೆ ಡಾ/ ರಜನಿ, ಸುಳ್ಯ ಇವರು ಬೌದ್ದಿಕ್ ಅನ್ನು ನೆರವೇರಿಸಿದರು ಹಾಗೂ ಅತಿಥಿಗಳಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ವನಜ

ಎಬಿವಿಪಿ ಸುಬ್ರಹ್ಮಣ್ಯ ಘಟಕದ ವತಿಯಿಂದ ಮಹಿಳಾ ದಿನಾಚರಣೆ Read More »

ಕರಾವಳಿ, ಕರ್ನಾಟಕ

BCM ಹಾಸ್ಟೆಲ್ ಅಲಾಟ್ಮೆಂಟ್ ಪ್ರಕ್ರಿಯೆ ಶೀಘ್ರವಾಗಿ ನಡೆಸುವಂತೆ NSUI ಸುಳ್ಯ ವತಿಯಿಂದ ಮನವಿ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 07. NSUI ಕ್ಯಾಂಪಸ್ ಮೀಟ್ ಸಂದರ್ಭದಲ್ಲಿ ಅಹವಾಲು ಸಲ್ಲಿಸಿದ್ದ ವಿದ್ಯಾರ್ಥಿಗಳ ಬೇಡಿಕೆಯ ಮೇರೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಹಾಸ್ಟೆಲ್ ನಲ್ಲಿ ಈವರೆಗೂ ಅಲಾಟ್ಮೆಂಟ್ ನಡೆಯದಿರುವ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಚಾರಿಸಲಾಯಿತು. ಈ ಶೈಕ್ಷಣಿಕ ವರ್ಷದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಹಾಸ್ಟೆಲ್ ಸಂಬಂದಿಸಿದ ಅಲೋಟ್ ಮೆಂಟ್ ಈವರೆಗೂ ನಡೆಯದೇ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ಶೈಕ್ಷಣಿಕ ವರ್ಷದ ಅರ್ಧ ಭಾಗ ಮುಕ್ತಾಯವಾಗುವ ಹಂತದಲ್ಲಿದೆ. ಆದುದರಿಂದ ವಿದ್ಯಾರ್ಥಿಗಳ ಈ

BCM ಹಾಸ್ಟೆಲ್ ಅಲಾಟ್ಮೆಂಟ್ ಪ್ರಕ್ರಿಯೆ ಶೀಘ್ರವಾಗಿ ನಡೆಸುವಂತೆ NSUI ಸುಳ್ಯ ವತಿಯಿಂದ ಮನವಿ Read More »

ಕರಾವಳಿ, ಕರ್ನಾಟಕ

ಉಡುಪಿ: ದೇವಸ್ಥಾನದ ಒಳಗೆ ನೇಣು ಬಿಗಿದು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕೋಟ, ಮಾ. 07. ಇಲ್ಲಿನ ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದ ಒಳಗೆ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ನಹತ್ಯೆಗೈದ ಯುವಕನನ್ನು ತೆಕ್ಕಟ್ಟೆ ಬಾರಾಳಿಬೆಟ್ಟು ನಿವಾಸಿ ಚಂದ್ರ ಪೂಜಾರಿ (35) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಸೆಂಟ್ರಿಂಗ್ ಕೆಲಸಗಳಿಗೆ ಹೋಗುತ್ತಿದ್ದ ಇವರು ಪ್ರತೀ ದಿನ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿನ ಕೆಲಸ ಕಾರ್ಯಗಳಿಗೂ ನೆರವಾಗುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಇವರು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ದೇವಸ್ಥಾನದ ಬಾವಿಯ ಹಗ್ಗದಿಂದ ನೇಣು ಬಿಗಿದು ಚಂದ್ರ ಪೂಜಾರಿಯವರು

ಉಡುಪಿ: ದೇವಸ್ಥಾನದ ಒಳಗೆ ನೇಣು ಬಿಗಿದು ಯುವಕ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪೇರಡ್ಕ ಮಖಾಂ ಉರೂಸ್ ಧಾರ್ಮಿಕ ಕಾರ್ಯಕ್ರಮ ➤ ದಾಂಪತ್ಯ ಜೀವನವೇ ಕುಟುಂಬದ ಅಡಿಪಾಯ- ಯಹ್ಯಾ ಬಾಖವಿ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 07. ವೈವಾಹಿಕ ಜೀವನದಲ್ಲಿ ಸಂತೋಷದಲ್ಲೇ ಮನುಷ್ಯನ ಮನಸ್ಸು ಶಾಂತವಾಗಿ ಸಕಾರಾತ್ಮಕ ಚಿಂತನೆಯಿಂದ ಬದುಕಲು ಸಾಧ್ಯ. ವೈವಾಹಿಕ ಜೀವನದ ನಂತರ ಕುಟುಂಬ ಕಲಹಕ್ಕೆ ಆಸ್ಪದ ಕೊಡಲೇಬಾರದು. ಆದರೆ ಕುಟುಂಬ ಜೀವನದ ಅಡಿಪಾಯವೇ ವೈವಾಹಿಕ ಜೀವನ ಎಂದು ಕೇರಳದ ಪ್ರಖ್ಯಾತ ವಾಗ್ಮಿ ಬಹು। ಯಹ್ಯಾ ಬಾಖವಿ ಪುಝಕ್ಕರ ಹೇಳಿದರು. ಅವರು ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫಿನ ಉರೂಸ್ ಕಾರ್ಯಕ್ರಮದ 2ನೇ ದಿನದಲ್ಲಿ ಮುಖ್ಯ ಪ್ರಭಾಷಣವನ್ನು ಮಾಡಿದರು. ಕಾರ್ಯಕ್ರಮವನ್ನು ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ

ಪೇರಡ್ಕ ಮಖಾಂ ಉರೂಸ್ ಧಾರ್ಮಿಕ ಕಾರ್ಯಕ್ರಮ ➤ ದಾಂಪತ್ಯ ಜೀವನವೇ ಕುಟುಂಬದ ಅಡಿಪಾಯ- ಯಹ್ಯಾ ಬಾಖವಿ Read More »

ಕರಾವಳಿ, ಕರ್ನಾಟಕ

? ಉಡುಪಿ: ಪೇಜಾವರ ಮಠದಲ್ಲಿ ಅಗ್ನಿ ಅವಘಡ ➤ ತಪ್ಪಿದ ಅನಾಹುತ

(ನ್ಯೂಸ್ ಕಡಬ) newskadaba.com ಉಡುಪಿ, ಮಾ. 07. ವಿದ್ಯುತ್ ಅವಘಡದಿಂದಾಗಿ ಅಗ್ನಿ ಅನಾಹುತ ಸಂಭವಿಸಿದ ಘಟನೆ ಉಡುಪಿಯ ಪೇಜಾವರ ಮಠದಲ್ಲಿ ನಡೆದಿದೆ. ಮಠದಲ್ಲಿ ಅಳವಡಿಸಲಾಗಿದ್ದ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಮಠದ ಸಿಬ್ಬಂದಿಗಳು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಕ್ಷಣವೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

? ಉಡುಪಿ: ಪೇಜಾವರ ಮಠದಲ್ಲಿ ಅಗ್ನಿ ಅವಘಡ ➤ ತಪ್ಪಿದ ಅನಾಹುತ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಆರೋಗ್ಯದಲ್ಲಿ ಏರುಪೇರು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 07. ಉತ್ತರಕನ್ನಡ ಸಂಸದ, ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಹಲವು ವರ್ಷಗಳಿಂದ ಕಾಡುತ್ತಿದ್ದ ಬೆನ್ನುನೋವು ಹಾಗೂ ಕಾಲು ನೋವಿನಿಂದಾಗಿ ಸಂಸದರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮಾ.6 ರಂದು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿ ದೆಹಲಿಯ ಮನೆಗೆ ಹೋಗಿದ್ದಾರೆ. ವೈದ್ಯರು ದೀರ್ಘಾವಧಿ ವಿಶ್ರಾಂತಿ ಪಡೆಯುಲು ಸೂಚಿಸಿರುವ ಹಿನ್ನಲೆಯಲ್ಲಿ ಪೂರ್ಣವಾಗಿ ಗುಣಮುಖರಾಗುವ ತನಕ ಸಂಸದರು ಸಾರ್ವಜನಿಕ ಕಾರ್ಯಕ್ರಮ ಹಾಗೂ ಭೇಟಿಗೆ

ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಆರೋಗ್ಯದಲ್ಲಿ ಏರುಪೇರು Read More »

ಕರ್ನಾಟಕ

ಕಣ್ಣೂರು: ಸ್ಟೀಲ್ ಬಾಂಬ್ ಪತ್ತೆ

(ನ್ಯೂಸ್ ಕಡಬ) newskadaba.com ಕೇರಳ, ಮಾ. 07. ತಲಶ್ಶೇರಿ ಪೊಲೀಸರು ಹಾಗೂ ಬಾಂಬ್‍ ಸ್ಕ್ವಾಡ್ ಜಂಟಿಯಾಗಿ ನಡೆಸಿದ ಆಯುಧ ತಪಾಸಣೆಯ ವೇಳೆ ಸ್ಟೀಲ್ ಬಾಂಬೊಂದು ತಲಶ್ಯೇರಿ ಠಾಣಾ ವ್ಯಾಪ್ತಿಯ ಉಕಂಡನ್ ಪೀಡಿಗ ಸಮೀಪ ಪಿಪಿ ಅನಂತನ್ ರಸ್ತೆಯ ಅಯ್ಯತ್ತಾನ್ ಎಂಬಲ್ಲಿ ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಬಾಂಬ್ ತಯಾರಿಸಲು ಬಳಸುವ 13 ಸ್ಟೀಲ್ ಕಂಟೈನರ್ ಹಾಗೂ ಸಿಡಿಮದ್ದು ಪತ್ತೆಯಾಗಿದೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ತಲಶ್ಶೇರಿ ಇನ್ಸ್‌ಪೆಕ್ಟರ್ ಗೋಪಕುಮಾರ್ ನೇತೃತ್ವದಲ್ಲಿ ಸಬ್‌ಇನ್ಸ್‌ಪೆಕ್ಟರ್

ಕಣ್ಣೂರು: ಸ್ಟೀಲ್ ಬಾಂಬ್ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಪ್ಪಿನಂಗಡಿ: ಅಶಾಂತಿ ಕದಡುವ ಕೋಮುವಾದಿ ಕಿಡಿಗೇಡಿಗಳ ವಿರುದ್ಧ ಮತ್ತು ಶಾಸಕರ ದೇಶದ್ರೋಹಿ ಹೇಳಿಕೆ ಖಂಡಿಸಿ ಎಸ್ಡಿಪಿಐ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ. 07. ಉಪ್ಪಿನಂಗಡಿಯಲ್ಲಿ ಸದಾ ಶಾಂತಿ ಕದಡುವ ಕೋಮುವಾದಿ ಶಕ್ತಿಗಳ ವಿರುದ್ಧ ಎಸ್ಡಿಪಿಐ ಉಪ್ಪಿನಂಗಡಿ ವಲಯದ ವತಿಯಿಂದ ಹೊಸ ಬಸ್ ನಿಲ್ದಾಣದ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಎಸ್ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಉಪ್ಪಿನಂಗಡಿಯಲ್ಲಿ ಕೋಮುಗಲಭೆ ಸೃಷ್ಟಿಸಲು ಸಂಘಪರಿವಾರ ನಿರಂತರವಾಗಿ ಪ್ರಯತ್ನ ಪಡುತ್ತಿದ್ದು, ಹಲವಾರು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಸಂಘಪರಿವಾರ ಕೋಮುಗಲಭೆ ನಡೆಸಲು ಪ್ರಯತ್ನಿಸಿದಾಗ ಎಸ್‌ಡಿಪಿಐ ಪಕ್ಷ ಸಮರ್ಥವಾಗಿ ಎದುರಿಸಿದೆ. ಇನ್ನೂ

ಉಪ್ಪಿನಂಗಡಿ: ಅಶಾಂತಿ ಕದಡುವ ಕೋಮುವಾದಿ ಕಿಡಿಗೇಡಿಗಳ ವಿರುದ್ಧ ಮತ್ತು ಶಾಸಕರ ದೇಶದ್ರೋಹಿ ಹೇಳಿಕೆ ಖಂಡಿಸಿ ಎಸ್ಡಿಪಿಐ ಪ್ರತಿಭಟನೆ Read More »

ಕರಾವಳಿ, ಕರ್ನಾಟಕ
Scroll to Top