News Kadaba Desk

18 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್ ➤ ಖಾಸಗಿ ಆಸ್ಪತ್ರೆಗಳಲ್ಲಿ 150 ರೂ‌. ನಿಗದಿ: ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ.07. ಕೊರೋನಾ ವ್ಯಾಕ್ಸಿನ್ ಗೆ ಬೇಕಾಬಿಟ್ಟಿ ದರ ವಸೂಲಿ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಗಳ ಹಗಲು ದರೋಡೆಗೆ ಮೂಗುದಾರ ಹಾಕಿರುವ ಕೇಂದ್ರ ಸರಕಾರವು ಖಾಸಗಿ ಆಸ್ಪತ್ರೆಗಳಿಗೆ ಪ್ರತ್ಯೇಕ ದರ ನಿಗದಿಪಡಿಸಿದೆ. ಈ ಬಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ಲಭ್ಯವಿರಲಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ 150 ರೂಪಾಯಿ ಸೇವಾ ಶುಲ್ಕ ಮಾತ್ರ ವಿಧಿಸಲು ದರ ನಿಗದಿಪಡಿಸಲಾಗಿದೆ ಎಂದಿದ್ದಾರೆ. ದೇಶದಲ್ಲಿ ಉತ್ಪಾದಿಸಲಾಗುವ […]

18 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್ ➤ ಖಾಸಗಿ ಆಸ್ಪತ್ರೆಗಳಲ್ಲಿ 150 ರೂ‌. ನಿಗದಿ: ಪ್ರಧಾನಿ ಮೋದಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತು ➤ ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ.07. ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಇದುವರೆಗೆ ದೇಶದ 23 ಕೋಟಿ ಜನತೆಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ. ಅವರು ಸೋಮವಾರ ಸಂಜೆ ದೇಶವನ್ನುದ್ದೇಶಿಸಿ ಮಾತನಾಡಿ, ದೇಶಾದ್ಯಂತ ವ್ಯಾಕ್ಸಿನ್ ವಿತರಣೆಗೆ ‘ಮಿಷನ್ ಇಂದ್ರಧನುಷ್’ ಆರಂಭಿಸಲಾಗಿದೆ. ಇನ್ನು ಮುಂದೆ ಕೇಂದ್ರ ಸರಕಾರವೇ ರಾಜ್ಯಗಳಿಗೆ ಉಚಿತವಾಗಿ ಕೊರೋನಾ ಲಸಿಕೆಯನ್ನು ಪೂರೈಸಲಿದ್ದು, ಮುಂದಿನ 2 ವಾರಗಳ ಬಳಿಕ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಿದೆ. ದೇಶದ ಬಡವರು

ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತು ➤ ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

14 ವರ್ಷದ ಬಾಲಕನನ್ನು ಪ್ರೀತಿಸಿ ಪರಾರಿಯಾದ 2 ಮಕ್ಕಳ ತಾಯಿ ➤ ಮುಂದೆ ನಡೆದಿದ್ದೇ ಬೇರೆ

(ನ್ಯೂಸ್ ಕಡಬ) newskadaba.com ಛತ್ತೀಸ್ಗಢ, ಜೂ.07. ಎರಡು ಮಕ್ಕಳ ತಾಯಿಯೋರ್ವಳು 14 ವರ್ಷದ ಬಾಲಕನೊಂದಿಗೆ ಪರಾರಿಯಾಗಿರುವ ವಿಚಿತ್ರ ಘಟನೆ ಛತ್ತೀಸ್ಗಢದಿಂದ ವರದಿಯಾಗಿದೆ. ಛತ್ತೀಸ್ಗಢದ ಕೊರಬಾ ನಿವಾಸಿ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಮಹಿಳೆಯ ಪತಿಯು ಸರ್ಕಾರಿ ನೌಕರನಾಗಿ ಕರ್ತವ್ಯದಲ್ಲಿದ್ದರು ಎನ್ನಲಾಗಿದೆ. ಮಹಿಳೆಗೆ ತನ್ನ ಮಗನ ವಯಸ್ಸಿನ ಬಾಲಕನ ಮೇಲೆ ಪ್ರೇಮಾಂಕುರವಾಗಿದ್ದು, ಆತನನ್ನು ಪುಸಲಾಯಿಸಿ ಆತನ ಜೊತೆ ಪರಾರಿಯಾಗಿದ್ದಾಳೆ. ವಿಷಯ ತಿಳಿದ ಮನೆಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನಿಖೆ ಕೈಗೊಂಡ ಪೊಲೀಸರು ಜೋಡಿಯನ್ನು ಜಾಂಜ್ಗಿರ್ ಜಿಲ್ಲೆಯ ಚಂಪಾ ಎಂಬಲ್ಲಿ ಪತ್ತೆಹಚ್ಚಿ

14 ವರ್ಷದ ಬಾಲಕನನ್ನು ಪ್ರೀತಿಸಿ ಪರಾರಿಯಾದ 2 ಮಕ್ಕಳ ತಾಯಿ ➤ ಮುಂದೆ ನಡೆದಿದ್ದೇ ಬೇರೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಜ್ಯಾದ್ಯಂತ ನಾಳೆಯಿಂದ ಲಾಕ್‍ಡೌನ್ ಸಡಿಲ..? ➤ ರಸ್ತೆಗಿಳಿಯಲಿವೆ ಕೆಎಸ್ಸಾರ್ಟಿಸಿ ಬಸ್‌ಗಳು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.07. ರಾಜ್ಯದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಹೇರಲಾಗಿರುವ ಲಾಕ್‍ಡೌನ್ ನಾಳೆಯಿಂದ ಹಂತಹಂತವಾಗಿ ಅನ್ ಲಾಕ್ ಆಗಲಿದೆ. ನಾಳೆಯಿಂದ ಒಂದೊಂದೇ ಸರಕಾರಿ ಸೇವೆಗಳು ಆರಂಭಗೊಳ್ಳುತ್ತಿದ್ದು, ನಾಳೆಯಿಂದ ಆಯ್ದ ಕೆಎಸ್ಸಾರ್ಟಿಸಿ ಬಸ್ ಗಳು ರಸ್ತೆಗಿಳಿಯಲಿವೆ. ರಾಜ್ಯದಲ್ಲಿರುವ ಎಲ್ಲಾ ರಿಜಿಸ್ಟ್ರಾರ್​ ಮತ್ತು ಸಬ್​ ರಿಜಿಸ್ಟ್ರಾರ್ ಕಚೇರಿಗಳು ನಾಳೆಯಿಂದಲೇ ತೆರೆಯಲಿವೆ. ಮೊದಲನೇಯ ಹಂತದಲ್ಲಿ ಶೇ.50ರಷ್ಟು ಆಟೋ, ಟ್ಯಾಕ್ಸಿಗಳು ರಸ್ತೆಗಿಳಿಯಲಿವೆ. ಎಲ್ಲಾ ಧಾರ್ಮಿಕ ಸ್ಥಳಗಳು ತೆರೆಯಲಿದ್ದು, ಮಂದಿರ, ಮಸೀದಿ, ಚರ್ಚ್ ತೆರೆಯುವುದಕ್ಕೆ ಕೇಂದ್ರವು ಅನುಮತಿ ನೀಡಿದೆ.      

ರಾಜ್ಯಾದ್ಯಂತ ನಾಳೆಯಿಂದ ಲಾಕ್‍ಡೌನ್ ಸಡಿಲ..? ➤ ರಸ್ತೆಗಿಳಿಯಲಿವೆ ಕೆಎಸ್ಸಾರ್ಟಿಸಿ ಬಸ್‌ಗಳು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮರ್ಧಾಳ ಮಸೀದಿಯಲ್ಲಿ ಐಸೋಲೇಷನ್ ಸೆಂಟರ್ ನಿರ್ಮಾಣಕ್ಕೆ ಸಿದ್ಧತೆ ➤ ಅನುಮತಿ ಕೋರಿ ಐತ್ತೂರು ಪಂಚಾಯತ್ ಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಜೂ.07. ಕೊರೋನಾ ಎರಡನೇ ಅಲೆಯು ಗ್ರಾಮೀಣ ಭಾಗದಲ್ಲಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಮರ್ಧಾಳ ಬದ್ರಿಯಾ ಜುಮಾ ಮಸೀದಿಯಲ್ಲಿ ಐಸೋಲೇಷನ್ ಸೆಂಟರ್ ತೆರೆಯಲು ಅನುಮತಿ ನೀಡುವಂತೆ ಐತ್ತೂರು ಗ್ರಾಮ ಪಂಚಾಯತ್ ಗೆ ಮನವಿ ನೀಡಲಾಯಿತು. ಯಾವುದೇ ರೋಗ ಲಕ್ಷಣಗಳಿಲ್ಲದ ಕೊರೋನಾ ಸೋಂಕಿತರಿಗೆ ಹೋಂ ಐಸೋಲೇಷನ್ ಮಾಡುವಂತೆ ವೈದ್ಯರು ಸೂಚನೆ ನೀಡುತ್ತಿದ್ದು, ಗ್ರಾಮೀಣ ಭಾಗದ ಕೆಲವರಿಗೆ ತಮ್ಮ ಮನೆಗಳಲ್ಲಿ ಅಂತಹ ಸೌಲಭ್ಯಗಳಿರುವುದಿಲ್ಲ. ಅಂತಹ ಸಾರ್ವಜನಿಕರಿಗೆ ತಂಗಲು ಅವಕಾಶ ನೀಡಿ ಕೊರೋನಾ ಹಬ್ಬುವುದನ್ನು ತಡೆಗಟ್ಟುವ ಸಲುವಾಗಿ

ಮರ್ಧಾಳ ಮಸೀದಿಯಲ್ಲಿ ಐಸೋಲೇಷನ್ ಸೆಂಟರ್ ನಿರ್ಮಾಣಕ್ಕೆ ಸಿದ್ಧತೆ ➤ ಅನುಮತಿ ಕೋರಿ ಐತ್ತೂರು ಪಂಚಾಯತ್ ಗೆ ಮನವಿ Read More »

ಕರಾವಳಿ

ಮರಕ್ಕೆ ಢಿಕ್ಕಿ ಹೊಡೆದ ಅಂಬ್ಯುಲೆನ್ಸ್ ➤ ಮೂವರು ಮೃತ್ಯು, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಕಣ್ಣೂರು, ಜೂ.07. ಆಂಬ್ಯುಲೆನ್ಸ್ ವೊಂದು ರಸ್ತೆಯ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರದಂದು ಕೇರಳ ರಾಜ್ಯದ ಕಣ್ಣೂರಿನಲ್ಲಿ ನಡೆದಿದೆ. ಮೃತರನ್ನು ಪಯ್ಯನ್ನೂರು ನಿವಾಸಿಗಳಾದ ಬಿಜೋ (45) ಆತನ ಸಹೋದರಿ ರಜಿನಾ (37) ಮತ್ತು ಆಂಬ್ಯುಲೆನ್ಸ್ ಚಾಲಕ ನಿತಿನ್ ರಾಜ್ (40) ಎಂದು ಗುರುತಿಸಲಾಗಿದೆ. ಬೆನ್ನಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಕಣ್ಣೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮುಂಜಾನೆ ಕಣ್ಣೂರು ಸಮೀಪದ ಮುಂಡಾಯದ್ ಎಂಬಲ್ಲಿ ಚಾಲಕನ

ಮರಕ್ಕೆ ಢಿಕ್ಕಿ ಹೊಡೆದ ಅಂಬ್ಯುಲೆನ್ಸ್ ➤ ಮೂವರು ಮೃತ್ಯು, ಓರ್ವ ಗಂಭೀರ Read More »

ರಾಷ್ಟ್ರೀಯ ನ್ಯೂಸ್

BIG SHOCKING: ರಾಜ್ಯದಲ್ಲಿ ನೂರರ ಗಡಿ ದಾಟಿದ ಪೆಟ್ರೋಲ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.07. ಕೊರೋನಾ ಮಹಾಮಾರಿ ನಡುವೆ ರಾಜ್ಯದ ಜನತೆಗೆ ಪೆಟ್ರೋಲ್ ದರ ಶಾಕ್ ಆಗಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್ ದರ ನೂರರ ಗಡಿ ದಾಟಿದೆ. ಭಾನುವಾರದಂದು ಬಳ್ಳಾರಿ, ಉತ್ತರ ಕನ್ನಡದ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕುಗಳಲ್ಲಿ ಪೆಟ್ರೋಲ್ ದರ ಶತಕದ ಗಡಿ ದಾಟಿದೆ. ಶಿರಸಿಯಲ್ಲಿ 100.29 ರೂ., ಬಳ್ಳಾರಿಯಲ್ಲಿ 100.08 ರೂ., ವಿಜಯನಗರ ಜಿಲ್ಲೆಯಲ್ಲಿ 99.45 ರೂ.ಗೆ ಏರಿಕೆಯಾಗಿದೆ.      

BIG SHOCKING: ರಾಜ್ಯದಲ್ಲಿ ನೂರರ ಗಡಿ ದಾಟಿದ ಪೆಟ್ರೋಲ್ Read More »

ಕರಾವಳಿ

ಲೇಖಕ, ಮಾಜಿ ಸಚಿವ ಪ್ರೊ. ಮಮ್ತಾಝ್ ಅಲಿ‌ ಖಾನ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.07. ಮಾಜಿ ಸಚಿವ, ಲೇಖಕ, ಪ್ರೊ. ಮಮ್ತಾಝ್ ಅಲಿ ಖಾನ್(94) ಅವರು ಸೋಮವಾರದಂದು ನಿಧನರಾಗಿದ್ದಾರೆ. 2008ರಲ್ಲಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಪಸಂಖ್ಯಾತ ಕಲ್ಯಾಣ, ಹಜ್, ವಕ್ಫ್ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಇವರು ಇಂದು ಬೆಂಗಳೂರಿನ ಗಂಗಾನಗರ ನಿವಾಸದಲ್ಲಿ ತಮ್ಮ ವಯೋಸಹಜ ಖಾಯಿಲೆಯಿಂದ ಮುಂಜಾನೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.      

ಲೇಖಕ, ಮಾಜಿ ಸಚಿವ ಪ್ರೊ. ಮಮ್ತಾಝ್ ಅಲಿ‌ ಖಾನ್ ಇನ್ನಿಲ್ಲ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Nalin Kumar kateel

ಸಿಎಂ ಯಡಿಯೂರಪ್ಪರ ರಾಜೀನಾಮೆ ವಿಚಾರ ➤ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾದರೂ ಏನು..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.07. ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನವನ್ನು ಮೂಡಿಸಿರುವ ಮುಖ್ಯಮಂತ್ರಿ ಬಿ‌.ಎಸ್. ಯಡಿಯೂರಪ್ಪರ ‘ನನಗೆ ಸಿಎಂ ಸ್ಥಾನ ನೀಡಿರುವುದು ಸಂಘಟನೆ. ಹೈಕಮಾಂಡ್ ಗೆ ನನ್ನ ಬಗ್ಗೆ ಎಲ್ಲಿಯವರೆಗೆ ವಿಶ್ವಾಸವಿರುತ್ತದೆಯೋ ಅಲ್ಲಿಯವರೆಗೆ ಸಿಎಂ ಸ್ಥಾನದಲ್ಲಿರುತ್ತೇನೆ. ಹೈಕಮಾಂಡ್ ಸೂಚಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎನ್ನುವ ಹೇಳಿಕೆಯ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ. ಈ ಬಗ್ಗೆ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು, ಯಡಿಯೂರಪ್ಪ ಅವರು ನಮ್ಮ ಆದರ್ಶ ನಾಯಕ. ರಾಷ್ಟ್ರ ನಾಯಕರು ಮತ್ತು

ಸಿಎಂ ಯಡಿಯೂರಪ್ಪರ ರಾಜೀನಾಮೆ ವಿಚಾರ ➤ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾದರೂ ಏನು..? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಹೋದ್ಯೋಗಿ ಮಹಿಳೆ ಜೊತೆ ಸಬ್ ಇನ್ಸ್‌ಪೆಕ್ಟರ್ ಸರಸ ಸಲ್ಲಾಪ ➤ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೋಡಿ

(ನ್ಯೂಸ್ ಕಡಬ) newskadaba.com ಹೈದರಾಬಾದ್, ಜೂ.07. ತನ್ನ ಸಹೋದ್ಯೋಗಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಎಸ್ಐ ಓರ್ವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಹೈದರಾಬಾದ್​ನ ಜವಹರ್​ ನಗರ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಅನಿಲ್​ ಎಂಬಾತ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಯ ವಿವಾಹಿತ ಮಹಿಳೆಯೊಂದಿಗೆ ಹಲವು ಸಮಯಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ದೂರು ಕೂಡಾ ದಾಖಲಾಗಿದ್ದು, ಈ ನಡುವೆ ತಿಮ್ಮೈಪಲ್ಲಿ ಎಂಬಲ್ಲಿನ ರೆಸಾರ್ಟ್​ವೊಂದರಲ್ಲಿ ಅನಿಲ್​ ಮತ್ತು ಮಹಿಳೆ ಸರಸದಲ್ಲಿ

ಸಹೋದ್ಯೋಗಿ ಮಹಿಳೆ ಜೊತೆ ಸಬ್ ಇನ್ಸ್‌ಪೆಕ್ಟರ್ ಸರಸ ಸಲ್ಲಾಪ ➤ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೋಡಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top