News Kadaba Desk

ಮಂಗಳೂರು: ತಂದೆಯೇ ಪುತ್ರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ➤ ಚಿಕಿತ್ಸೆ ಪಡೆಯುತ್ತಿದ್ದ ಮಗ ಮೃತ್ಯು

(ನ್ಯೂಸ್ ಕಡಬ) Newskadaba.com ಮಂಗಳೂರು, ಜು. 02. ತಂದೆಯೇ ಸ್ವತಃ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದಲ್ಲಿ ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ಪುತ್ರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತನನ್ನು ಆರೋಪಿ ವಿಶ್ವನಾಥ್ ಶೆಟ್ಟಿ ಪುತ್ರ ಸ್ವಾಮೀತ್ ಶೆಟ್ಟಿ (25) ಎಂದು ಗುರುತಿಸಲಾಗಿದೆ. ನಗರದ ಹೊರವಲಯದ ಜಪ್ಪಿನಮೊಗರು ಎಂಬಲ್ಲಿ ಜೂನ್ 21ರಂದು ರಾತ್ರಿ ದನ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಕೋಪಗೊಂಡ ವಿಶ್ವನಾಥ ಶೆಟ್ಟಿ ಪುತ್ರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು. […]

ಮಂಗಳೂರು: ತಂದೆಯೇ ಪುತ್ರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ➤ ಚಿಕಿತ್ಸೆ ಪಡೆಯುತ್ತಿದ್ದ ಮಗ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ದ.ಕ: ಅನ್ ಲಾಕ್ ಮಾರ್ಗಸೂಚಿ ಬದಲಾವಣೆ ➤ ವೀಕೆಂಡ್ ಕರ್ಫ್ಯೂ ವೇಳೆ ಮಧ್ಯಾಹ್ನ 2ರ ವರೆಗೆ ಮಾತ್ರ ಅವಕಾಶ- ಡಿ.ಸಿ

(ನ್ಯೂಸ್ ಕಡಬ) Newskadaba.com ಮಂಗಳೂರು, ಜು. 02. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಅನ್ ಲಾಕ್ ಮಾಡಿ, ಅಲ್ಲದೇ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಇಂದಿನಿಂದ ಹೊಸ ಮಾರ್ಗಸೂಚಿಯಂತೆ ಜಿಲ್ಲಾದ್ಯಂತ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಲಾಗಿದ್ದು, ಬಸ್ ಸಂಚಾರ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೂ ಅವಕಾಶ ನೀಡಲಾಗಿದೆ. ಹಾಗೆಯೇ ಶನಿವಾರ ಮತ್ತು ಭಾನುವಾರ ಎಂದಿನಂತೆ ವೀಕೆಂಡ್ ಕರ್ಫ್ಯೂ ಇದೆಯಾದರೂ ಅದರಲ್ಲಿ ಹೊಸ ಮಾರ್ಗಸೂಚಿಯಂತೆ ವೀಕೆಂಡ್

ದ.ಕ: ಅನ್ ಲಾಕ್ ಮಾರ್ಗಸೂಚಿ ಬದಲಾವಣೆ ➤ ವೀಕೆಂಡ್ ಕರ್ಫ್ಯೂ ವೇಳೆ ಮಧ್ಯಾಹ್ನ 2ರ ವರೆಗೆ ಮಾತ್ರ ಅವಕಾಶ- ಡಿ.ಸಿ Read More »

ಕರಾವಳಿ, ಕರ್ನಾಟಕ

ಪೋಷಕರು ಮದುವೆಗೆ ಒತ್ತಾಯಿಸಿದರೆಂದು ತನ್ನ ಮರ್ಮಾಂಗವನ್ನೇ ಕತ್ತರಿಸಿದ ಯುವಕ

(ನ್ಯೂಸ್ ಕಡಬ) Newskadaba.com ತಮಿಳುನಾಡು, ಜು. 02. ಮದುವೆಯಾಗಲು ಪೋಷಕರು ಒತ್ತಾಯ ಮಾಡಿದರೆಂದು ಯುವಕನೋರ್ವ ತನ್ನ ಮರ್ಮಾಂಗವನ್ನೇ ಕತ್ತರಿಸಿ ಆತ್ಮಹತ್ಯೆಗೆತ್ನಿಸಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯ ತಮ್ಮಂಪಟ್ಟಿ ಎಂಬಲ್ಲಿ ನಡೆದಿದೆ. ಯುವಕನನ್ನು ವಿಜಯರಾಘವನ್ ಎಂದು ಗುರುತಿಸಲಾಗಿದೆ. ಇವನಿಗೆ ಮದುವೆ ಮಾಡಿಕೊಳ್ಳುವಂತೆ ಪೋಷಕರು ಒತ್ತಾಯ ಹೇರಿದ್ದರು. ಈ ಹಿನ್ನೆಲೆ ಮನೆಯಲ್ಲಿ ಜಗಳ ಮಾಡಿದ ಈತ ತನ್ನ ಮರ್ಮಾಂಗ ಹಾಗೂ ಕುತ್ತಿಗೆಯನ್ನು ಕತ್ತರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಪೋಷಕರು ಮದುವೆಗೆ ಒತ್ತಾಯಿಸಿದರೆಂದು ತನ್ನ ಮರ್ಮಾಂಗವನ್ನೇ ಕತ್ತರಿಸಿದ ಯುವಕ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹಣ ಕೊಡದೇ ಇದ್ದುದಕ್ಕೆ ಪಂಚಾಯತ್ ಸದಸ್ಯನ ಮೇಲೆ ಮಂಗಳಮುಖಿಯರಿಂದ ಹಲ್ಲೆ…!

(ನ್ಯೂಸ್ ಕಡಬ) newskadaba.com ತುಮಕೂರು, ಜು. 02. ಗ್ರಾಮ ಪಂಚಾಯತ್ ಸದಸ್ಯರೋರ್ವರ ಮೇಲೆ ಮಂಗಳಮುಖಿಯರು ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ಎಂಬಲ್ಲಿ ನಡೆದಿದೆ. ಹಲ್ಲೆಗೊಳಗಾದವರನ್ನು ಕೋಡ್ಲಾಪುರ ಗ್ರಾಮ ಪಂಚಾಯತ್ ಸದಸ್ಯ ರಂಗನಾಥ್ ಎಂದು ಗುರುತಿಸಲಾಗಿದೆ. ಮಂಗಳ ಮುಖಿಯರು ಇವರ ಬೈಕ್ ಅಡ್ಡಗಟ್ಟಿ ಹಣ  ಕೇಳಿದ್ದು, ಈ ವೇಳೆ ರಂಗನಾಥ್ ಹಣ  ಕೊಡದೇ ಇದ್ದಾಗ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ ಕೊಡದೇ ಇದ್ದುದಕ್ಕೆ ಪಂಚಾಯತ್ ಸದಸ್ಯನ ಮೇಲೆ ಮಂಗಳಮುಖಿಯರಿಂದ ಹಲ್ಲೆ…! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರಿನ ಗಾಂಧಿ ಪ್ರತಿಮೆಗೆ ಅವಮಾನಗೈದ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಿ ➤ ಕ್ಯಾಂಪಸ್ ಫ್ರಂಟ್

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 02. ಪುತ್ತೂರಿನ ಹೃದಯ ಭಾಗದಲ್ಲಿ ಹಲವಾರು ವರ್ಷಗಳಿಂದಿರುವ ಗಾಂಧಿ ಪ್ರತಿಮೆಯನ್ನು ವಿಕೃತಗೊಳಿಸಿರುವ ಘಟನೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತಿದೆ. ಕಿಡಿಗೇಡಿಗಳು ಗಾಂಧಿ ಪ್ರತಿಮೆಯ ಕನ್ನಡಕ ತೆಗೆದು ಪ್ರತಿಮೆಯ ತಲೆಗೆ ಇಟ್ಟು ಹಾಗೂ ತಲೆಯ ಮೇಲೆ ಟೀ ಶರ್ಟ್ ನ್ನು ಇಟ್ಟು ಗಾಂಧೀಜಿಯನ್ನು ಅವಮಾನಗೊಳಿಸಿದ್ದಾರೆ. ಕಿಡಿಗೇಡಿಗಳನ್ನು ಶೀಘ್ರ ಬಂಧಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಕೊಡಿಪ್ಪಾಡಿ ಆಗ್ರಹಿಸಿದ್ದಾರೆ.

ಪುತ್ತೂರಿನ ಗಾಂಧಿ ಪ್ರತಿಮೆಗೆ ಅವಮಾನಗೈದ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಿ ➤ ಕ್ಯಾಂಪಸ್ ಫ್ರಂಟ್ Read More »

ಕರಾವಳಿ, ಕರ್ನಾಟಕ

ಕಡಬ: ಆಯುಷ್ಮಾನ್ ಜೈನ್ ವೆಜ್ ರೆಸ್ಟೋರೆಂಟ್ ಶುಭಾರಂಭ

ಕಡಬ: ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಅನುಗ್ರಹ ಸಭಾಭವನದ ಬಳಿಯಿರುವ ಶ್ರೀಹರಿ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ಆಯುಷ್ಮಾನ್ ಜೈನ್ ವೆಜ್ ರೆಸ್ಟೋರೆಂಟ್ ಜು.೧ರಂದು ಶುಭಾರಂಭಗೊAಡಿತು. ಸAಸ್ಥೆಯನ್ನು ದೀಪ ಬೆಳಗಿಸಿದ ಶ್ರೀ ಕಾಂಪ್ಲೆಕ್ಸ್ನ ಮಾಲಕ ನಿವೃತ್ತ ಶಿಕ್ಷಕ ಸಾಂತಪ್ಪ ಗೌಡ ಪಿಜಕಳ ಮಾತನಾಡಿ ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ ಕಡಬ ಪೇಟೆಯಲ್ಲಿ ಸುಸಜ್ಜಿತ ಸಸ್ಯಾಹಾರಿ ಉಪಹಾರ ಗೃಹದ ಅವಶ್ಯಕತೆ ಇತ್ತು ಅದನ್ನು ಆಯುಷ್ಮಾನ್ ಜೈನ್ ವೆಜ್ ರೆಸ್ಟೋರೆಂಟ್ ಪೂರೈಸಿದೆ. ಗ್ರಾಹಕರಿಗೆ ಉತ್ತಮ ಸೇವೆಯೊಂದಿಗೆ ಗುಣಮಟ್ಟದ ಊಟ, ಉಪಹಾರ ಹಾಗೂ ಇನ್ನಿತರ ಗ್ರಾಹಕರ ಅಗತ್ಯ

ಕಡಬ: ಆಯುಷ್ಮಾನ್ ಜೈನ್ ವೆಜ್ ರೆಸ್ಟೋರೆಂಟ್ ಶುಭಾರಂಭ Read More »

ಕರಾವಳಿ

ರಾಜ್ಯದಲ್ಲಿ ಇನ್ಮುಂದೆ ಮರಳು ಬ್ಯಾಗ್ ಗಳಲ್ಲಿ ಲಭ್ಯ ➤ ಕಡಿಮೆ ದರ ಹಾಗೂ ಕೆಲವರಿಗೆ ಉಚಿತ

(ನ್ಯೂಸ್ ಕಡಬ) Newskadaba.com ಬೆಂಗಳೂರು, ಜು. 01. ರಾಜ್ಯದಲ್ಲು ಇನ್ನು ಮುಂದೆ ಸಿಮೆಂಟ್ ಬ್ಯಾಗ್ ರೀತಿಯಲ್ಲಿ ಮರಳು ಕೂಡಾ ಬ್ಯಾಗ್ ಗಳಲ್ಲಿ ಸಿಗಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಮರಳು ಸಮಸ್ಯೆ ನಿವಾರಣೆಗೆ ಬ್ಯಾಗ್ ಗಳಲ್ಲಿ 50 ಕೆಜಿ ಮರಳು ಮಾರಾಟ ಮಾಡಲಾಗುವುದು ಎಂದು ಹೇಳಿದ್ದಾರೆ. ಕಲ್ಲು ಗಣಿಗಾರಿಕೆ ಹಾಗೂ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಜೊತೆಗೆ

ರಾಜ್ಯದಲ್ಲಿ ಇನ್ಮುಂದೆ ಮರಳು ಬ್ಯಾಗ್ ಗಳಲ್ಲಿ ಲಭ್ಯ ➤ ಕಡಿಮೆ ದರ ಹಾಗೂ ಕೆಲವರಿಗೆ ಉಚಿತ Read More »

ಕರ್ನಾಟಕ

ಮಕ್ಕಳ ಮೇಲೆ ಕೋವ್ಯಾಕ್ಸ್ ಲಸಿಕೆಗೆ ಅವಕಾಶವಿಲ್ಲ ➤ ತಜ್ಞರ ಸಮಿತಿ

(ನ್ಯೂಸ್ ಕಡಬ) Newskadaba.com ನವದೆಹಲಿ, ಜು. 01. ಕೋವಾಕ್ಸ್ ಕೊರೋನಾ ಲಸಿಕೆಯನ್ನುಎರಡರಿಂದ ಏಳು ವಯಸ್ಸಿನ ಮಕ್ಕಳ ಮೇಲೆ ಪ್ರಯೋಗಿಸಲು ಅವಕಾಶವಿಲ್ಲ ಎಂದು ಕೇಂದ್ರ ಔಷಧ ಪ್ರಾಧಿಕಾರ ತಜ್ಞರ ಸಮಿತಿ ಸೂಚಿಸಿದೆ. ಅಲ್ಲದೇ ಈ ಕುರಿತು ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಅವಕಾಶ ನೀಡಬಾರದು ಎಂದು ಸಮಿತಿ ತಿಳಿಸಿದೆ. ದೇಶದ ಹತ್ತು ಕಡೆಗಳಲ್ಲಿ ಎರಡರಿಂದ ಹದಿನೇಳರ ವಯಸ್ಸಿನ ಸುಮಾರು 460 ಮಕ್ಕಳಿಗೆ ಕೋವಾಕ್ಸ್ ಪ್ರಯೋಗಕ್ಕೆ ಅನುಮತಿ ಕೋರಿ ಸೀರಂ ಇನ್ಸ್ಟಿಟ್ಯೂಟ್ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿತ್ತು,

ಮಕ್ಕಳ ಮೇಲೆ ಕೋವ್ಯಾಕ್ಸ್ ಲಸಿಕೆಗೆ ಅವಕಾಶವಿಲ್ಲ ➤ ತಜ್ಞರ ಸಮಿತಿ Read More »

ರಾಷ್ಟ್ರೀಯ ನ್ಯೂಸ್

ಭಾರತದ ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರಿಗೆ ಯುರೋಪ್ ದೇಶಗಳಿಗೆ ಅವಕಾಶವಿಲ್ಲ…

(ನ್ಯೂಸ್ ಕಡಬ) Newskadaba.com ಜು. 01. ಕೊರೋನಾ ಕಾರಣದಿಂದಾಗಿ ಯುರೋಪಿಯನ್ ದೇಶಗಳು ಕಳೆದ ಕೆಲವು ತಿಂಗಳುಗಳಿಂದ ವಿಮಾಯಾನವನ್ನು ಸ್ಥಗಿತಗೊಳಿಸಿದ್ದು, ಇತ್ತೀಚೆಗೆ ಪುನಃ ವಿಮಾನಯಾನ ಆರಂಭವಾಗಿದ್ದರೂ ಕೂಡಾ ಹಲವು ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ. ಅದರಲ್ಲೂ ಏಷ್ಯಾದಿಂದ ಯಾರೇ ಪ್ರಯಾಣಿಕರು ಯೂರೋಪ್ ಗೆ ತೆರಳಬೇಕೆಂದರೆ ಕಡ್ಡಾಯವಾಗಿ ಲಸಿಕೆ ಪಡೆಯಲು ಸೂಚಿಸಿದೆ. ಆದರೆ ಭಾರತದ ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಈವರೆಗೆ ಮಾನ್ಯತೆ ನೀಡಿಲ್ಲ. ಹೀಗಾಗಿ ಭಾರತದ ಪ್ರಯಾಣಿಕರಿಗೆ ವೀಸಾ ನೀಡುವುದನ್ನು ಯೂರೋಪ್ ಒಕ್ಕೂಟ ನಿಷೇಧಿಸಿದೆ. ಇದೀಗ

ಭಾರತದ ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರಿಗೆ ಯುರೋಪ್ ದೇಶಗಳಿಗೆ ಅವಕಾಶವಿಲ್ಲ… Read More »

ಅಂತರ್ರಾಷ್ಟ್ರೀಯ ನ್ಯೂಸ್

ಡೆತ್ ನೋಟ್ ಬರೆದಿಟ್ಟು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ) Newskadaba.com ಶಿವಮೊಗ್ಗ, ಜು. 01. ಡೆತ್ ನೋಟ್ ಬರೆದಿಟ್ಟು ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಗರ ತಾಲೂಕಿನ ಕೆಳದ್ರಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಸುಬ್ರಹ್ಮಣ್ಯ ಎಂಬವರ ಪುತ್ರ ಗಣೇಶ್(22) ಎಂದು ಗುರುತಿಸಲಾಗಿದೆ. ಈತ ಉಡುಪಿಯ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗಿದೆ. ಈತನ ಮೃತದೇಹದ ಬಳಿ ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿಡಲಾಗಿತ್ತು. ಈ ಕುರಿತು ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೆತ್ ನೋಟ್ ಬರೆದಿಟ್ಟು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top