News Kadaba Desk

33 ಕೆವಿ ವಿದ್ಯುತ್ ಮಾರ್ಗದ ನಿಯತಕಾಲಿಕ ಪಾಲನಾ ಕಾರ್ಯದ ಹಿನ್ನೆಲೆ ➤ ಇಂದು ಪುತ್ತೂರು, ಕಡಬ, ಸುಬ್ರಹ್ಮಣ್ಯ ಮಾರ್ಗದ ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ) newskadaba.com ಕಡಬ, ಆ.26. ಪುತ್ತೂರು – ಕಡಬ – ಸುಬ್ರಹ್ಮಣ್ಯ 33ಕೆವಿ ವಿದ್ಯುತ್ ಮಾರ್ಗದ ನಿಯತಕಾಲಿಕ ಪಾಲನಾ ಕಾರ್ಯ ನಿಮಿತ್ತ ಇಂದು (ಆ.26) ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ 33 ಕೆವಿ ಪುತ್ತೂರು, ಕಡಬ, ಸುಬ್ರಹ್ಮಣ್ಯ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33 ಕೆವಿ ಸುಬ್ರಹ್ಮಣ್ಯ, ನೆಲ್ಯಾಡಿ, ಸವಣೂರು, ಕಡಬ ಮತ್ತು ಬಿಂದು ಫ್ಯಾಕ್ಟರಿ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ ಗಳಿಂದ ವಿದ್ಯುತ್ ಸರಬರಾಜು […]

33 ಕೆವಿ ವಿದ್ಯುತ್ ಮಾರ್ಗದ ನಿಯತಕಾಲಿಕ ಪಾಲನಾ ಕಾರ್ಯದ ಹಿನ್ನೆಲೆ ➤ ಇಂದು ಪುತ್ತೂರು, ಕಡಬ, ಸುಬ್ರಹ್ಮಣ್ಯ ಮಾರ್ಗದ ವಿದ್ಯುತ್ ನಿಲುಗಡೆ Read More »

ಕರಾವಳಿ, ತಂತ್ರಜ್ಞಾನ, ಲೈಫ್‍ಸ್ಟೈಲ್

ಮರ್ಧಾಳ: ನಿಯಂತ್ರಣ ತಪ್ಪಿ ಕಾರು ಪಲ್ಟಿ ➤ ಓರ್ವನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಆ.26. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಚಾಲಕ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ನೀರಾಜೆ ಕ್ರಾಸ್ ಬಳಿ ಬುಧವಾರ ರಾತ್ರಿ ನಡೆದಿದೆ. ಗಾಯಗೊಂಡ ಚಾಲಕನನ್ನು ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಡೆಪ್ಪುಣಿ ನಿವಾಸಿ ಕುಶಾಲಪ್ಪ ಎಂದು ಗುರುತಿಸಲಾಗಿದೆ. ಕಡಬದಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ ಕಾರು ರಸ್ತೆಯ ಎಡ ಬದಿಗೆ ಬಿದ್ದಿದೆ. ಘಟನೆಯಲ್ಲಿ ಕುಶಾಲಪ್ಪರ ತಲೆಗೆ ಗಾಯಗಳಾಗಿದ್ದು,

ಮರ್ಧಾಳ: ನಿಯಂತ್ರಣ ತಪ್ಪಿ ಕಾರು ಪಲ್ಟಿ ➤ ಓರ್ವನಿಗೆ ಗಾಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ಪಾಲುದಾರಿಕೆ ಹೆಸರಲ್ಲಿ ಲಕ್ಷಾಂತರ ರೂ. ಎಗರಿಸಿ ಪರಾರಿ ➤ ಹಣ, ಚಿನ್ನ ಕೊಟ್ಟು ಕೈ ಸುಟ್ಟುಕೊಂಡ ವಿವಿಧ ವ್ಯಾಪಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ಆ.25. ಇತ್ತೀಚೆಗೆ ಶುಭಾರಂಭಗೊಂಡ ಹೊಟೇಲೊಂದರಲ್ಲಿ ಕೆಲಸದಲ್ಲಿದ್ದ ವ್ಯಕ್ತಿಯೋರ್ವ ಪಾಲುದಾರಿಕೆಯ ಹೆಸರಿನಲ್ಲಿ ಸ್ಥಳೀಯ ಜನರೊಂದಿಗೆ ಸ್ನೇಹ ಸಂಪಾದಿಸಿ ನಂತರ ಲಕ್ಷಾಂತರ ರೂ. ಹಣವನ್ನು ಹಾಗೂ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಕಡಬದಿಂದ ವರದಿಯಾಗಿದೆ. ಪರಾರಿಯಾಗಿರುವ ವ್ಯಕ್ತಿಯನ್ನು ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಹೋಬಳಿಯ ರಾಮಮಂದಿರ ಸಮೀಪದ ನಿವಾಸಿ ಎಂ.ಟಿ. ಕರೀಗೌಡ ಎಂಬವರ ಪುತ್ರ ಶರತ್ ಬಾಬು ಸಿ.ಕೆ. ಎಂದು ಗುರುತಿಸಲಾಗಿದೆ. ಈತ ಕಡಬದಲ್ಲಿ ನೂತನವಾಗಿ ಆರಂಭವಾದ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸಗಾರನಾಗಿ

ಕಡಬ: ಪಾಲುದಾರಿಕೆ ಹೆಸರಲ್ಲಿ ಲಕ್ಷಾಂತರ ರೂ. ಎಗರಿಸಿ ಪರಾರಿ ➤ ಹಣ, ಚಿನ್ನ ಕೊಟ್ಟು ಕೈ ಸುಟ್ಟುಕೊಂಡ ವಿವಿಧ ವ್ಯಾಪಾರಿಗಳು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮೈಸೂರಿನಲ್ಲಿ ಕೆಎಸ್ಸಾರ್ಟಿಸಿ ಬಸ್ – ಇನ್ನೋವಾ ನಡುವೆ ಢಿಕ್ಕಿ ➤ ಬಂಟ್ವಾಳದ ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಮೈಸೂರು, ಆ.24. ಸರಕಾರಿ ಬಸ್ ಹಾಗೂ ಇನ್ನೋವಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬಂಟ್ವಾಳ ತಾಲೂಕಿನ ಇಬ್ಬರು ಯುವಕರು ಗಂಭೀರ ಗಾಯಗೊಂಡಿರುವ ಘಟನೆ ಮಂಗಳವಾರದಂದು ಪಿರಿಯಾಪಟ್ಟಣದಲ್ಲಿ ಸಂಭವಿಸಿದೆ. ಗಾಯಾಳುಗಳನ್ನು ಬಂಟ್ವಾಳ ಕೆಳಗಿನಪೇಟೆಯ ನಿವಾಸಿ ಶಂಸುದ್ದೀನ್ ಮತ್ತು ಮೆಲ್ಕಾರ್ ಬೋಗೋಡಿ ನಿವಾಸಿ ಫಯಾಝ್ ಎಂದು ಗುರುತಿಸಲಾಗಿದೆ. ಗಾಯಳುಗಳು ತೆರಳುತ್ತಿದ್ದ ಇನ್ನೋವ ಕಾರು ಹಾಗೂ ಸರಕಾರಿ ಬಸ್ಸು ಮುಖಾಮುಖಿ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದೆ.      

ಮೈಸೂರಿನಲ್ಲಿ ಕೆಎಸ್ಸಾರ್ಟಿಸಿ ಬಸ್ – ಇನ್ನೋವಾ ನಡುವೆ ಢಿಕ್ಕಿ ➤ ಬಂಟ್ವಾಳದ ಇಬ್ಬರು ಗಂಭೀರ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

24 ಗಂಟೆಗಳಲ್ಲಿ 134 ಕಿಮೀ ಮ್ಯಾರಥಾನ್ ಓಡಿದ ಕಡಬದ ಹರೀಶ್ ಕರ್ಕೇರ ➤ ದೆಹಲಿಯಲ್ಲಿ ನಡೆಯಲಿರುವ 36 ಗಂಟೆಗಳ ಓಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ.24. ಏಜೀಸ್ ಫೆಡರಲ್ ಲೈಫ್ ಇನ್ಸೂರೆನ್ಸ್ ವತಿಯಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ 24 ಗಂಟೆಗಳ ಸ್ಟೇಡಿಯಂ ಓಟವನ್ನು ಪೂರ್ತಿಗೊಳಿಸಿ ಕಡಬದ ಹರೀಶ್ ಕರ್ಕೇರ ಅವರು ನವದೆಹಲಿಯಲ್ಲಿ ನಡೆಯಲಿರುವ 36 ಗಂಟೆಗಳ ಮ್ಯಾರಥಾನ್ ಓಟಕ್ಕೆ ಆಯ್ಕೆಯಾಗಿದ್ದಾರೆ. ಕಡಬ ತಾಲೂಕಿನ ಕಡ್ಯ ಕೊಣಾಜೆ ಗ್ರಾಮದ ಮುಚ್ಚಿರೋಡಿ ನಿವಾಸಿ ದೇವಪ್ಪ ಪೂಜಾರಿ – ಮೋಹಿನಿ ದಂಪತಿಯ ಪುತ್ರನಾಗಿರುವ ಹರೀಶ್ ಕರ್ಕೇರ ಅವರು 24 ಗಂಟೆಗಳಲ್ಲಿ 134 ಕಿಲೋಮೀಟರ್ ಓಟವನ್ನು ಪೂರ್ಣಗೊಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ಬೆಂಗಳೂರಿನ

24 ಗಂಟೆಗಳಲ್ಲಿ 134 ಕಿಮೀ ಮ್ಯಾರಥಾನ್ ಓಡಿದ ಕಡಬದ ಹರೀಶ್ ಕರ್ಕೇರ ➤ ದೆಹಲಿಯಲ್ಲಿ ನಡೆಯಲಿರುವ 36 ಗಂಟೆಗಳ ಓಟಕ್ಕೆ ಆಯ್ಕೆ Read More »

ಕರ್ನಾಟಕ, ಕ್ರೀಡಾ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಂತ ಹಂತವಾಗಿ ಶಾಲೆ ಆರಂಭ ➤ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.

(ನ್ಯೂಸ್ ಕಡಬ) newskadaba.com ಮಂಗಳೂರು, ಆ.23. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಸದ್ಯ ಸ್ವಲ್ಪಮಟ್ಟಿಗೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪದವಿ ಪೂರ್ವ ಕಾಲೇಜುಗಳನ್ನು ಹಂತ ಹಂತವಾಗಿ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಶಾಲೆಗಳ ಆರಂಭ ಕುರಿತು ಸದ್ಯಕ್ಕೆ ಯೋಚನೆ ಮಾಡಿಲ್ಲ. ಆದರೆ ಪಿಯು ತರಗತಿಗಳನ್ನು ಹಂತಹಂತವಾಗಿ ತೆರೆಯಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಸೋಮವಾರ ಜನಪ್ರತಿನಿಧಿಗಳೊಂದಿಗೆ ಸಭೆಯೂ ನಡೆದಿದೆ. ಪಿಯು ತರಗತಿಗಳು ಆರಂಭಗೊಂಡ ಬಳಿಕ ಪರಿಸ್ಥಿತಿಯನ್ನು ನೋಡಿಕೊಂಡು ಶಾಲೆಗಳನ್ನು ತೆರೆಯುವ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಂತ ಹಂತವಾಗಿ ಶಾಲೆ ಆರಂಭ ➤ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. Read More »

ಕರಾವಳಿ

ಉಪ್ಪಿನಂಗಡಿ: ಮೀನಿನ ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ➤ ಗಲಭೆಗೆ ಹುನ್ನಾರ..?

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ.23. ಇಲ್ಲಿನ ಹಳೆಗೇಟು ಬಳಿ ಇರುವ ಮೀನಿನ ಅಂಗಡಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಇಲ್ಲಿನ ಹಳೆಗೇಟು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಅಶೋಕ್ ಎಂಬವರಿಗೆ ಸೇರಿದ ಮೀನಿನ ಅಂಗಡಿಯಿದ್ದು, ಅದಕ್ಕೆ ಆದಿತ್ಯವಾರ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯಿಂದ ಮೀನಿನ ಅಂಗಡಿ ಹಾಗೂ ಮಂಜುಗಡ್ಡೆ ಹಾಕಿ ಶೇಖರಿಸಿಟ್ಟ ಮೀನು ಸುಟ್ಟು ಹೋಗಿವೆ. ಅಶೋಕ್ ಅವರು ಹಿಂದೂ ಪರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಗಲಭೆಗೆ ಕುಮ್ಮಕ್ಕು ನೀಡುವ

ಉಪ್ಪಿನಂಗಡಿ: ಮೀನಿನ ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ➤ ಗಲಭೆಗೆ ಹುನ್ನಾರ..? Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮತ್ತೊಬ್ಬ ಖ್ಯಾತ ನಟಿಯ ಸೆಕ್ಸ್ ವೀಡಿಯೋ ಲೀಕ್ ➤ ಭೋಜ್‌ಪುರಿ ನಟಿಯ ವೀಡಿಯೋ ಬೆನ್ನಲ್ಲೇ MMS ವೈರಲ್

(ನ್ಯೂಸ್ ಕಡಬ) newskadaba.com ಬಿಹಾರ, ಆ.23. ಇತ್ತೀಚೆಗೆ ಭೋಜ್​ಪುರಿ ನಟಿ ತ್ರಿಷಾ ಕರ್​ ಮಧು ಅವರ ಸೆಕ್ಸ್ ವೀಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಮತ್ತೊಬ್ಬ ಭೋಜ್​ಪುರಿ ನಟಿಯ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಭೋಜ್‌ಪುರಿ ನಟಿ ಪ್ರಿಯಾಂಕಾ ಪಂಡಿತ್​ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳನ್ನು ಕಂಗೆಡಿಸಿದೆ. ಇದೀಗ ವೈರಲ್​ ಆಗಿರುವ ವಿಡಿಯೋ ಹಳೆಯದ್ದು ಎನ್ನಲಾಗಿದ್ದು, ಮಧುಕರ್ ತ್ರಿಷಾ ಅವರ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಪ್ರಿಯಾಂಕಾ ವಿಡಿಯೋವನ್ನು ವೈರಲ್​ ಮಾಡಲಾಗಿದೆ. ಈ ಬಗ್ಗೆ

ಮತ್ತೊಬ್ಬ ಖ್ಯಾತ ನಟಿಯ ಸೆಕ್ಸ್ ವೀಡಿಯೋ ಲೀಕ್ ➤ ಭೋಜ್‌ಪುರಿ ನಟಿಯ ವೀಡಿಯೋ ಬೆನ್ನಲ್ಲೇ MMS ವೈರಲ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮೂರು ಜಿಲ್ಲೆಗಳನ್ನು ಹೊರತುಪಡಿಸಿ ಇಂದು ರಾಜ್ಯದಲ್ಲಿ ಶಾಲೆ ಆರಂಭ ➤ ದ.ಕ., ಉಡುಪಿ, ಕೊಡಗು ಜಿಲ್ಲೆಗಳಿಗೆ ವಿನಾಯಿತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.23‌. ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಇಂದಿನಿಂದ ಶಾಲೆ ಆರಂಭವಾಗಲಿದೆ ಎಂದು ರಾಜ್ಯ ಸರಕಾರ ತಿಳಿಸಿದೆ. ಕೊರೋನಾ ಪಾಸಿಟಿವಿಟಿ ದರ ಶೇ.2 ಕ್ಕಿಂತ ಹೆಚ್ಚಿರುವ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಶಾಲೆಯನ್ನು ಆರಂಭಿಸುವುದಿಲ್ಲ ಎಂದು ರಾಜ್ಯ ಶಿಕ್ಷಣ ಇಲಾಖೆಯು ಈ ಹಿಂದೆ ತಿಳಿಸಿತ್ತು. ಇದೀಗ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಶೇ.2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ

ಮೂರು ಜಿಲ್ಲೆಗಳನ್ನು ಹೊರತುಪಡಿಸಿ ಇಂದು ರಾಜ್ಯದಲ್ಲಿ ಶಾಲೆ ಆರಂಭ ➤ ದ.ಕ., ಉಡುಪಿ, ಕೊಡಗು ಜಿಲ್ಲೆಗಳಿಗೆ ವಿನಾಯಿತಿ Read More »

ಕರಾವಳಿ

ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ ➤ ಮಹಿಳೆಯರಿಬ್ಬರ ದುರ್ಮರಣ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.21. ಬೀಡಿ ಬ್ರ್ಯಾಂಚ್ ಗೆ ತೆರಳುತ್ತಿದ್ದ ವೇಳೆ ರೈಲು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ನಗರದ ಜೆಪ್ಪು ಮಹಾಕಾಳಿಪಡ್ಪು ದೇವಸ್ಥಾನದ ಬಳಿ ಶನಿವಾರದಂದು ನಡೆದಿದೆ. ಮೃತರನ್ನು ಜೆಪ್ಪು ನಿವಾಸಿಗಳಾದ ವಸಂತಿ (50) ಹಾಗೂ ಪ್ರೇಮಾ (48) ಎಂದು ಗುರುತಿಸಲಾಗಿದೆ. ಮಹಾಕಾಳಿಪಡ್ಪು ಎಂಬಲ್ಲಿರುವ ಬೀಡಿ ತೆಗೆದುಕೊಂಡು ತೆರಳುತ್ತಿದ್ದ ವೇಳೆ ರೈಲು ಹಳಿಯನ್ನು ದಾಟುತ್ತಿದ್ದ ಸಂದರ್ಭದಲ್ಲಿ ಕೇರಳ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ರೈಲು ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ ➤ ಮಹಿಳೆಯರಿಬ್ಬರ ದುರ್ಮರಣ Read More »

ಕರ್ನಾಟಕ
Scroll to Top