ಮೈಸೂರಿನಲ್ಲಿ ಕೆಎಸ್ಸಾರ್ಟಿಸಿ ಬಸ್ – ಇನ್ನೋವಾ ನಡುವೆ ಢಿಕ್ಕಿ ➤ ಬಂಟ್ವಾಳದ ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಮೈಸೂರು, ಆ.24. ಸರಕಾರಿ ಬಸ್ ಹಾಗೂ ಇನ್ನೋವಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬಂಟ್ವಾಳ ತಾಲೂಕಿನ ಇಬ್ಬರು ಯುವಕರು ಗಂಭೀರ ಗಾಯಗೊಂಡಿರುವ ಘಟನೆ ಮಂಗಳವಾರದಂದು ಪಿರಿಯಾಪಟ್ಟಣದಲ್ಲಿ ಸಂಭವಿಸಿದೆ.

ಗಾಯಾಳುಗಳನ್ನು ಬಂಟ್ವಾಳ ಕೆಳಗಿನಪೇಟೆಯ ನಿವಾಸಿ ಶಂಸುದ್ದೀನ್ ಮತ್ತು ಮೆಲ್ಕಾರ್ ಬೋಗೋಡಿ ನಿವಾಸಿ ಫಯಾಝ್ ಎಂದು ಗುರುತಿಸಲಾಗಿದೆ. ಗಾಯಳುಗಳು ತೆರಳುತ್ತಿದ್ದ ಇನ್ನೋವ ಕಾರು ಹಾಗೂ ಸರಕಾರಿ ಬಸ್ಸು ಮುಖಾಮುಖಿ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದೆ.

 

 

 

 

Scroll to Top