News Kadaba Desk

ಹಾಡುಹಗಲೇ ಮಹಿಳೆಯ ಬ್ಯಾಗ್ ಕಳವಿಗೆ ವಿಫಲ ಯತ್ನ ➤ ಪ್ರತಿರೋಧದ ವೀಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.12. ಕಾರಿನಲ್ಲಿ ಬಂದ ಅಪರಿಚಿತರ ತಂಡವೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬ್ಯಾಗ್ ಕಳವಿಗೆ ಯತ್ನಿಸಿದ ಘಟನೆ ಬೆಂದೂರ್ವೆಲ್ ಸೈಂಟ್ ಆಗ್ನೇಸ್ ಕಾಲೇಜಿನ ಮುಂಭಾಗದಲ್ಲಿ ಭಾನುವಾರದಂದು ನಡೆದಿದೆ. ಮಹಿಳೆಯೊಬ್ಬರು ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ನಂಬರ್ ಪ್ಲೇಟ್ ಇಲ್ಲದ ರಿಟ್ಝ್ ಕಾರಿನಲ್ಲಿ ಬಂದ ಯುವಕರ ತಂಡದಲ್ಲಿದ್ದ ಓರ್ವ ಕಾರಿನಿಂದ ಇಳಿದು ಮಹಿಳೆಯ ಬ್ಯಾಗ್ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದ್ದು ಕೂಗಿಕೊಂಡಿದ್ದಾರೆ. ಆ ವೇಳೆ ಅಲ್ಲಿದ್ದ ಸಾರ್ವಜನಿಕರು […]

ಹಾಡುಹಗಲೇ ಮಹಿಳೆಯ ಬ್ಯಾಗ್ ಕಳವಿಗೆ ವಿಫಲ ಯತ್ನ ➤ ಪ್ರತಿರೋಧದ ವೀಡಿಯೋ ವೈರಲ್ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ತುಳುನಾಡಿಗರ ಕಾನೂನು ಹೋರಾಟಕ್ಕೆ ಮಣಿದ ಅದಾನಿ ಸಂಸ್ಥೆ ➤ ಮಂಗಳೂರು ವಿಮಾನ ನಿಲ್ದಾಣದ ಹೆಸರು ಮತ್ತೆ ಯಥಾಸ್ಥಿತಿಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.12. ಮಂಗಳೂರು ವಿಮಾನ ನಿಲ್ದಾಣಕ್ಕೆ ಅದಾನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದ್ದ ಅದಾನಿ ಸಂಸ್ಥೆಯು, ತುಳುನಾಡಿಗರ ಆಕ್ರೋಶಕ್ಕೆ ಮಣಿದು ಮತ್ತೆ ಇದೀಗ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರು ನಾಮಕರಣ ಮಾಡಿದೆ. ಮಂಗಳೂರು ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳ ನಿರ್ವಹಣೆಯ ಗುತ್ತಿಗೆಯನ್ನು ವರ್ಷದ ಹಿಂದೆ ವಹಿಸಿಕೊಂಡಿದ್ದ ಅದಾನಿ ಸಂಸ್ಥೆಯು ಅದಾನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣಗೊಳಿಸಿತ್ತು. ಈ ಬಗ್ಗೆ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ದಿಲ್‌ರಾಜ್‌ ಆಳ್ವ

ತುಳುನಾಡಿಗರ ಕಾನೂನು ಹೋರಾಟಕ್ಕೆ ಮಣಿದ ಅದಾನಿ ಸಂಸ್ಥೆ ➤ ಮಂಗಳೂರು ವಿಮಾನ ನಿಲ್ದಾಣದ ಹೆಸರು ಮತ್ತೆ ಯಥಾಸ್ಥಿತಿಗೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ನೆಲ್ಯಾಡಿ: ಉದನೆ ಗಣಪತಿ ಕಟ್ಟೆ ಧ್ವಂಸ ಪ್ರಕರಣ ➤ 24 ಗಂಟೆಗಳ ಒಳಗೆ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.12. ಇಲ್ಲಿಗೆ ಸಮೀಪದ ಉದನೆ ಎಂಬಲ್ಲಿರುವ ಗಣಪತಿ ಕಟ್ಟೆಯನ್ನು ಕಲ್ಲು ಎತ್ತಿ ಹಾಕಿ ಹಾನಿಗೊಳಿಸಿರುವ ಪ್ರಕರಣದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರದ ಬಾಗಲ್ ಪುರ ಜಿಲ್ಲೆಯ ಗೋಪಾಲ್ ಪುರ್ ತಾಲೂಕಿನ ಗರ್ನಿಯಾ ನಿವಾಸಿ ಸುಬೀಂದರ್ ಎಂಬವರ ಪುತ್ರ ರವೀಂದ್ರ ಕುಮಾರ್ (25) ಎಂದು ಗುರುತಿಸಲಾಗಿದೆ. ಉದನೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶುಕ್ರವಾರದಂದು ಉದನೆ ಗಣಪತಿ ಕಟ್ಟೆಯಲ್ಲಿ ಸರಳವಾಗಿ ಗಣೇಶೋತ್ಸವ ಆಚರಿಸಲಾಗಿತ್ತು. ಗಣಪತಿ ಕಟ್ಟೆಯ ಮೆಟ್ಟಿಲನ್ನು

ನೆಲ್ಯಾಡಿ: ಉದನೆ ಗಣಪತಿ ಕಟ್ಟೆ ಧ್ವಂಸ ಪ್ರಕರಣ ➤ 24 ಗಂಟೆಗಳ ಒಳಗೆ ಆರೋಪಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸೇತುವೆಯ ಮಧ್ಯದಲ್ಲಿ ಭೀಕರ ಕಾರು ಅಪಘಾತ ➤ ಸಿನಿಮೀಯ ಶೈಲಿಯಲ್ಲಿ ತಡೆಗೋಡೆಗೆ ಸಿಲುಕಿದ ಕಾರು

(ನ್ಯೂಸ್ ಕಡಬ) newskadaba.com ಬಾಗಲಕೋಟೆ, ಸೆ.12. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ಸಿನಿಮೀಯ ರೀತಿಯಲ್ಲಿ ನೇತಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿ ನಡೆದಿದೆ. ಜಮಖಂಡಿಯ ಚಿಕ್ಕಪಡಸಲಗಿ ಸೇತುವೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಿಯಾ ಸೆಲ್ಟಸ್ ಕಾರು ತಡೆಗೋಡೆಗೆ ಢಿಕ್ಕಿ ಹೊಡೆದು ತಡೆಗೋಡೆಯ ಮೇಲೆ ನಿಂತಿದೆ. ಕಾರಿನಲ್ಲಿದ್ದವರ ಅದೃಷ್ಟ ಚೆನ್ನಾಗಿದ್ದರಿಂದ ಕೂದಲೆಳೆಯ ಅಂತರದಲ್ಲಿ ಕೃಷ್ಣಾ ನದಿಗೆ ಬೀಳುವುದರಿಂದ ಪಾರಾಗಿದ್ದಾರೆ. ಅಪಘಾತದ ದೃಶ್ಯ ಮಾತ್ರ ಜುಂ ಎನ್ನಿಸುವಂತಿದೆ.        

ಸೇತುವೆಯ ಮಧ್ಯದಲ್ಲಿ ಭೀಕರ ಕಾರು ಅಪಘಾತ ➤ ಸಿನಿಮೀಯ ಶೈಲಿಯಲ್ಲಿ ತಡೆಗೋಡೆಗೆ ಸಿಲುಕಿದ ಕಾರು Read More »

ಕರ್ನಾಟಕ

ಬೃಹತ್ ಗಾತ್ರದ ಕಡವೆ ಶಿಕಾರಿ ➤ ವಾಹನ ಬಿಟ್ಟು ಆರೋಪಿಗಳು ಪರಾರಿ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಸೆ.12. ಕಡವೆಯೊಂದನ್ನು ಬೇಟೆಯಾಡಿದ ವೇಳೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಪಿಕಪ್ ಹಾಗೂ ಬೃಹತ್ ಕಡವೆಯನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಪರಾರಿಯಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪ ಕಡವೆ ಶಿಕಾರಿ ಮಾಡಿದ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಕೊಪ್ಪ ಡಿಎಫ್ಓ ನೀಲೇಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಈ ವೇಳೆ ಆರೋಪಿಗಳಾದ ದಿನೇಶ್, ಪ್ರಶಾಂತ್, ಪೂರ್ಣೆಶ್, ಸುರೇಶ್, ಸುಗಂದ್ ಪಿಕಪ್ ವಾಹನ ಹಾಗೂ ಕಡವೆಯನ್ನು ಬಿಟ್ಟು

ಬೃಹತ್ ಗಾತ್ರದ ಕಡವೆ ಶಿಕಾರಿ ➤ ವಾಹನ ಬಿಟ್ಟು ಆರೋಪಿಗಳು ಪರಾರಿ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ಕಿಡ್ಸ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಸೆ.11. ಕರ್ನಾಟಕ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿ (ಕಿಡ್ಸ್) ಪುತ್ತೂರು ಧರ್ಮಪ್ರಾಂತ್ಯ, ಕಾರೀತಾಸ್ ಇಂಡಿಯಾ ಸಹಯೋಗದಲ್ಲಿ ಪಟ್ಟಣ ಪಂಚಾಯತ್ ಕಡಬ ಮತ್ತು ಸಮುದಾಯ ಅರೋಗ್ಯ ಕೇಂದ್ರ ಕಡಬದ ಸಹಕಾರದಲ್ಲಿ ಕಡಬ ಸಮುದಾಯ ಅರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವ ಕೊರೋನಾ ವಾರಿಯರ್ಸ್‌ ಗಳಾದ 25 ಆಶಾ ಕಾರ್ಯಕರ್ತೆಯರಿಗೆ ಫುಡ್ ಕಿಟ್ ಗಳನ್ನು ಸಂಸ್ಥೆಯ ವತಿಯಿಂದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ಆರೋಗ್ಯಾಧಿಕಾರಿ ಶ್ರೀಮತಿ ಸುಚಿತ್ರ ರಾವ್, ಕಡಬ ಪಟ್ಟಣ ಪಂಚಾಯತ್

ಕಡಬ: ಕಿಡ್ಸ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ Read More »

ಕರಾವಳಿ

ವಿದ್ಯೆ, ಸಂಸ್ಕೃತಿಯ ಪ್ರೋತ್ಸಾಹವೇ ನಿಜವಾದ ಗಣಪನ ಆರಾಧನೆ-ನಳಿನ್ ಕುಮಾರ್ ಕಟೀಲ್ ➤ ಪಾಲ್ತಾಡಿ : ಶ್ರೀಗಣೇಶೋತ್ಸವ, ಸಾಧಕರಿಗೆ ಅಭಿನಂದನೆ

(ನ್ಯೂಸ್ ಕಡಬ) newskadaba.com ಕಡಬ, ಸೆ.11. ನಮ್ಮ ಪ್ರತಿಯೊಂದು ಆಚರಣೆಯ ಹಿಂದೆಯೂ ತನ್ನದೇ ಆದ ಮಹತ್ವವಿದೆ. ಗಣೇಶನ ರೂಪವೇ ಜೀವನ ಪಾಠ ಕಲಿಸುತ್ತದೆ. ವಿದ್ಯೆ, ಸಾಂಸ್ಕೃತಿಕ ಕ್ಷೇತ್ರ ಪ್ರೋತ್ಸಾಹವೇ ನಿಜವಾದ ಗಣಪನ ಆರಾಧನೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ತಮ್ಮ ಹುಟ್ಟೂರು ಪಾಲ್ತಾಡಿ ಗ್ರಾಮದ ಮಂಜುನಾಥ ನಗರದಲ್ಲಿ ಶ್ರೀ ಗಣೇಶೋತ್ಸವದ ಅಂಗವಾಗಿ ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ಹಾಗೂ ಶ್ರೀಸಿದ್ದಿ ವಿನಾಯಕ ಸೇವಾ ಸಂಘದ ವತಿಯಿಂದ ನಡೆದ ಶೈಕ್ಷಣಿಕ ಸಾಧನೆಗೈದ

ವಿದ್ಯೆ, ಸಂಸ್ಕೃತಿಯ ಪ್ರೋತ್ಸಾಹವೇ ನಿಜವಾದ ಗಣಪನ ಆರಾಧನೆ-ನಳಿನ್ ಕುಮಾರ್ ಕಟೀಲ್ ➤ ಪಾಲ್ತಾಡಿ : ಶ್ರೀಗಣೇಶೋತ್ಸವ, ಸಾಧಕರಿಗೆ ಅಭಿನಂದನೆ Read More »

ಕರಾವಳಿ

ಕಡಬ: ಮಹಿಳೆ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಸೆ.11. ಮನೆ ಪಕ್ಕದ ಗುಡ್ಡದ ಕಡೆಗೆ ತೆರಳಿದ ಮಹಿಳೆಯೋರ್ವರು ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ತಡವಾಗಿ ದೂರು ದಾಖಲಾಗಿದೆ. ನಾಪತ್ತೆಯಾಗಿರುವ ಮಹಿಳೆಯನ್ನು ಕಡಬ ತಾಲೂಕಿನ ಹಳೆನೇರಂಕಿ ಗ್ರಾಮದ ಮಡೆಂಜಿಮಾರು ನಿವಾಸಿ ಹೊನ್ನಮ್ಮ(58) ಎಂದು ಗುರುತಿಸಲಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಇವರು ಸೆಪ್ಟೆಂಬರ್ 05 ರಂದು ತನ್ನ ಮನೆಯ ಪಕ್ಕದ ಗುಡ್ಡದ ಕಡೆಗೆ ತೆರಳಿದ್ದು, ಆ ಬಳಿಕ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ಇದೀಗ ಆಕೆಯ

ಕಡಬ: ಮಹಿಳೆ ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ ತಾಲೂಕಿನಲ್ಲಿ ಏರಿಕೆ ಕಂಡ ಕೊರೋನಾ ಸೋಂಕು ➤ 18 ಮಂದಿಗೆ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಸೆ.11. ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿದ್ದ ಕೊರೋನಾ ಸೋಂಕು ಇದೀಗ ಮತ್ತೆ ಏರಿಕೆ ಕಂಡಿದ್ದು, ಇಂದು 18 ಮಂದಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಆರೋಗ್ಯ ಇಲಾಖೆಯ ವರದಿಯಂತೆ ಕಡಬ ತಾಲೂಕಿನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 18 ಕೋವಿಡ್ ಪ್ರಕರಣ ದಾಖಲಾಗಿದ್ದು, ಪುತ್ತೂರು ತಾಲೂಕಿನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.      

ಕಡಬ ತಾಲೂಕಿನಲ್ಲಿ ಏರಿಕೆ ಕಂಡ ಕೊರೋನಾ ಸೋಂಕು ➤ 18 ಮಂದಿಗೆ ಪಾಸಿಟಿವ್ Read More »

ಕರಾವಳಿ

ತನ್ನ ಬಹುಕಾಲದ ಆಸೆಯನ್ನು ನೆರವೇರಿಸಿದ ಚಿನ್ನದ ಹುಡುಗ ➤ ತಂದೆ-ತಾಯಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ ನೀರಜ್ ಚೋಪ್ರಾ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.11. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಚಿನ್ನದ ಹುಡುಗ ನೀರಜ್‌ ಚೋಪ್ರಾ ತನ್ನ ಬಹುಕಾಲದ ಆಸೆಯೊಂದನ್ನು ಈಡೇರಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ನೀರಜ್‌ ಚೋಪ್ರಾ, “ಇಂದು ನನ್ನ ಬಹುದಿನದ ಕನಸು ನನಸಾಗಿದೆ. ನನ್ನ ಹೆತ್ತವರ ಮೊದಲ ವಿಮಾನ ಪ್ರಯಾಣದ ಆಸೆಯನ್ನು ನಾನು ಈಡೇರಿಸಿದ್ದು, ನನಗೆ ಸಂತಸವಾಗಿದೆ” ಎಂದಿದ್ದಾರೆ. ನೀರಜ್ ಚೋಪ್ರಾ ಅವರು ತನ್ನ ತಂದೆ-ತಾಯಿಯನ್ನು ವಿಮಾನ ಪ್ರಯಾಣ ಮಾಡಿಸಬೇಕು ಎಂದು ಕನಸು ಕಂಡಿದ್ದರಂತೆ. ಅದರಂತೆ ನೀರಜ್‌ ಚೋಪ್ರಾ ಅವರು ಶನಿವಾರ

ತನ್ನ ಬಹುಕಾಲದ ಆಸೆಯನ್ನು ನೆರವೇರಿಸಿದ ಚಿನ್ನದ ಹುಡುಗ ➤ ತಂದೆ-ತಾಯಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ ನೀರಜ್ ಚೋಪ್ರಾ Read More »

ರಾಷ್ಟ್ರೀಯ ನ್ಯೂಸ್
Scroll to Top