News Kadaba Desk

ಕಡಬ: ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಚೆನ್ನಪ್ಪ ಗೌಡ ಎನ್ಕಾಜೆ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಸೆ.14. ನಿವೃತ್ತ ಪೋಲಿಸ್ ಹೆಡ್ ಕಾನ್ಸ್ ಸ್ಟೇಬಲ್, ರೆಂಜಿಲಾಡಿ ಗ್ರಾಮದ ಎನ್ಕಾಜೆ ನಿವಾಸಿ ಚೆನ್ನಪ್ಪ ಗೌಡ (73ವ) ಅವರು ಅಸೌಖ್ಯದಿಂದ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಸೋಮವಾರದಂದು ನಿಧನರಾಗಿದ್ದಾರೆ. ಇವರು ಬೆಳ್ಳಾರೆ, ಸುಬ್ರಹ್ಮಣ್ಯ, ಸುಳ್ಯ, ಪುತ್ತೂರು, ಬಿಸಿರೋಡು, ಕುಂದಾಪುರ ಸೇರಿದಂತೆ ಜಿಲ್ಲೆಯ ಹಲವು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮೃತರು ಪತ್ನಿ ಚಂದ್ರಾವತಿ, ಪುತ್ರ ಹರಿಪ್ರಸಾದ್ ಅವರನ್ನು ಅಗಲಿದ್ದಾರೆ.      

ಕಡಬ: ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಚೆನ್ನಪ್ಪ ಗೌಡ ಎನ್ಕಾಜೆ ನಿಧನ Read More »

ಕರಾವಳಿ

ವಿದ್ಯಾರ್ಥಿಗಳಿಗೆ ಶುಭ ಸುದ್ದಿ: ಶಾಲಾ-ಕಾಲೇಜು ಫೀಸ್ ಕಟ್ಟಲು ಒತ್ತಡ ಹಾಕುವಂತಿಲ್ಲ ➤ ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.14. ರಾಜ್ಯ ಸರಕಾರದ ಸೂಚನೆಯ ಮೇರೆಗೆ ದ.ಕ. ಜಿಲ್ಲೆಯಲ್ಲಿ ಕೋವಿಡ್ ನಿಯಮ ಪಾಲಿಸಿಕೊಂಡು ಶಾಲೆಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು, ಈ ನಡುವೆ ಶಾಲಾ ಕಾಲೇಜುಗಳು ಶುಲ್ಕ ಪಾವತಿಸುವಂತೆ ಒತ್ತಡ ಹೇರುವಂತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚನೆ ನೀಡಿದ್ದಾರೆ. ದ.ಕ. ಜಿಲ್ಲೆಯ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಉತ್ತಮವಾಗಿ ಇರುವುದರಿಂದ ಶಾಲೆಗಳಲ್ಲಿ 9ನೇ ಮತ್ತು 10ನೇ ತರಗತಿಯನ್ನು ಬೆಳಗ್ಗಿನ ಹೊತ್ತು ಹಾಗೂ 8ನೇ ತರಗತಿಯನ್ನು ಮಧ್ಯಾಹ್ನದ ಬಳಿಕ ನಡೆಸಲು

ವಿದ್ಯಾರ್ಥಿಗಳಿಗೆ ಶುಭ ಸುದ್ದಿ: ಶಾಲಾ-ಕಾಲೇಜು ಫೀಸ್ ಕಟ್ಟಲು ಒತ್ತಡ ಹಾಕುವಂತಿಲ್ಲ ➤ ಜಿಲ್ಲಾಧಿಕಾರಿ ಸೂಚನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉದ್ಯೋಗ ಮಾಹಿತಿ | ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಗಳು ➤ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಕಡಬ, ಸೆ.14. ಕಡಬದ ಹಲವು ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದ್ದು, ಕಡಬದಲ್ಲಿ ಇನ್ನಿತರ ಸಂಸ್ಥೆಗಳಲ್ಲಿ ಉದ್ಯೋಗಕ್ಕಾಗಿ ನಿಮ್ಮ ಬಯೋಡಾಟವನ್ನು newskadaba@gmail.com ಗೆ ಇಮೇಲ್‌ ಮಾಡಿ. ಕಡಬದ ನಿಪ್ಪೋನ್ ಪೈಂಟ್ಸ್ ಮಳಿಗೆಗೆ ಕಂಪ್ಯೂಟರ್ ತಿಳಿದಿರುವ ಮಹಿಳೆ ಅಥವಾ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಕರ್ಷಕ ವೇತನ ನೀಡಲಾಗುವುದು. ಸಂಪರ್ಕ ಸಂಖ್ಯೆ: 94822 17529 ಕಡಬದ ಹಾರ್ಡ್‌ವೇರ್ & ಇಂಡಸ್ಟ್ರೀಸ್ ಸಂಸ್ಥೆಯೊಂದಕ್ಕೆ ಸೇಲ್ಸ್ ವಿಭಾಗಕ್ಕೆ

ಉದ್ಯೋಗ ಮಾಹಿತಿ | ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಗಳು ➤ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ Read More »

ಉದ್ಯೋಗ, ಲೈಫ್‍ಸ್ಟೈಲ್

ಗತಿ ಇಲ್ಲದವರು ನನ್ನನ್ನು ಸಾಕಬೇಡಿ ➤ ಹೀಗೆಂದು ಕಡಬದಲ್ಲಿ ಆಡಿನ ಮೇಲೆ ಬರೆದ ಪೋಸ್ಟರ್ ವೈರಲ್

(ನ್ಯೂಸ್ ಕಡಬ) newskadaba.com ಕಡಬ, ಸೆ.14. ಸಾಕು ಪ್ರಾಣಿಗಳನ್ನು ಬೀದಿಗೆ ಬಿಡುವವರ ವಿರುದ್ಧ ಕಡಬ ಪಟ್ಟಣ ಪಂಚಾಯತ್ ದಂಡ ವಿಧಿಸುತ್ತಿರುವುದರ ಮಧ್ಯೆಯೇ ಸಾಕು ಪ್ರಾಣಿಗಳ ಉಪಟಳದಿಂದ ಬೇಸತ್ತಿರುವ ಸಾರ್ವಜನಿಕರು ಬೀದಿಯಲ್ಲಿರುವ ಆಡಿನ ಕತ್ತಿಗೆ ಪ್ಲೇಕಾರ್ಡ್ ಕಟ್ಟಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಡಬ ಪೇಟೆಯಲ್ಲಿ ಸಾಕುಪ್ರಾಣಿಗಳು ರಸ್ತೆಯಲ್ಲೇ ಅಡ್ಡಾಡುವುದರಿಂದಾಗಿ ಅದೆಷ್ಟೋ ಅಪಘಾತಗಳು ಸಂಭವಿಸಿ, ಹಲವಾರು ಮಂದಿ ಗಾಯಗೊಂಡಿದ್ದಾರೆ. ಆದರೆ ಇದೀಗ ಆಡುಗಳನ್ನು ರಸ್ತೆಗೆ ಬಿಡುವವರಿಗೆ ಸಾರ್ವಜನಿಕರೇ ಎಚ್ಚರಿಕೆ ನೀಡಲಾರಂಭಿಸಿದ್ದು, ಗತಿ‌ ಇಲ್ಲದವರು ನನ್ನನ್ನು ಸಾಕಬೇಡಿ, ದಯಮಾಡಿ

ಗತಿ ಇಲ್ಲದವರು ನನ್ನನ್ನು ಸಾಕಬೇಡಿ ➤ ಹೀಗೆಂದು ಕಡಬದಲ್ಲಿ ಆಡಿನ ಮೇಲೆ ಬರೆದ ಪೋಸ್ಟರ್ ವೈರಲ್ Read More »

ಕರಾವಳಿ

ಬಲೆನೋ ಕಾರು – ಆಟೋ ರಿಕ್ಷಾ ನಡುವೆ ಢಿಕ್ಕಿ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.14. ಆಟೋ ರಿಕ್ಷಾ ಹಾಗೂ ಬಲೆನೋ ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ರಿಕ್ಷಾ ಚಾಲಕ ಸೇರಿದಂತೆ ಮೂವರು ಗಾಯಗೊಂಡ ಘಟನೆ ಮಂಗಳವಾರದಂದು ಪುತ್ತೂರಿನ ಬೊಳ್ವಾರಿನಲ್ಲಿ ನಡೆದಿದೆ. ಬೊಳ್ವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗದಲ್ಲಿ ಅಪಘಾತ ಸಂಭವಿಸಿದ್ದು, ರಿಕ್ಷಾ ಚಾಲಕ ಕಂಬಳಬೆಟ್ಟು ನಿವಾಸಿ ಫಕೀರ್ ಸಾಹೇಬ್ ಹಾಗೂ ಇನ್ನಿಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಕಾರಿನ ಒಂದು ಪಾರ್ಶ್ವ ಸಂಪೂರ್ಣ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ

ಬಲೆನೋ ಕಾರು – ಆಟೋ ರಿಕ್ಷಾ ನಡುವೆ ಢಿಕ್ಕಿ ➤ ಮೂವರಿಗೆ ಗಾಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ➤ ಮೂವರು ಮಹಿಳೆಯರ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.14. ಗ್ರಾಹಕರ ಸೋಗಿನಲ್ಲಿ ಪುತ್ತೂರಿನ ಜೋಸ್ ಆಲುಕ್ಕಾಸ್ ಮಳಿಗೆಗೆ ಬಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ದಾವಣಗೆರೆ ಜಿಲ್ಲೆಯ ನಿವಾಸಿಗಳಾದ ಬೀಬಿಜಾನ್, ಹುಸೇನ್ ಬಿ ಹಾಗೂ ಜೈತುಂಬಿ ಎಂದು ಗುರುತಿಸಲಾಗಿದೆ. ಆರೋಪಿಗಳು ಸೆ.1ರಂದು ಜೋಸ್ ಆಲುಕ್ಕಾಸ್‌ಗೆ ಬಂದು ಚಿನ್ನವನ್ನು ಖರೀದಿಸಿದ್ದರು. ಇದೇ ಸಂದರ್ಭದಲ್ಲಿ 2,60,400 ರೂ. ಮೌಲ್ಯದ ಕಿವಿಯ ಚಿನ್ನಾಭರಣವನ್ನು ವಂಚಿಸಿ ಕಳವು ಮಾಡಿಕೊಂಡು

ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ➤ ಮೂವರು ಮಹಿಳೆಯರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ‌.13. ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ತಲೆಯ ಒಳಭಾಗಕ್ಕೆ ಏಟು ಬಿದ್ದು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಆಸ್ಕರ್ ಅವರನ್ನು ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸೋಮವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ‌.      

ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಇನ್ನಿಲ್ಲ Read More »

ಕರಾವಳಿ

ಕಡಬ: ಚಲಿಸುತ್ತಿದ್ದ ಕಾರಿನಲ್ಲಿ ಹಠಾತ್ ಕಾಣಿಸಿಕೊಂಡ ಬೆಂಕಿ ➤ ಸಾರ್ವಜನಿಕರು ನಂದಿಸಿದ್ದರಿಂದ ತಪ್ಪಿತು ಹೆಚ್ಚಿನ ಅಪಾಯ

(ನ್ಯೂಸ್ ಕಡಬ) newskadaba.com ಕಡಬ, ಸೆ.13. ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಹಠಾತ್‌ ಬೆಂಕಿ ಕಾಣಿಸಿಕೊಂಡ ಘಟನೆ ಸೋಮವಾರದಂದು ಕಡಬ ಪೇಟೆಯಲ್ಲಿ ನಡೆದಿದೆ. ಕಡಬದ ಮಹಾಗಣಪತಿ ದೇವಸ್ಥಾನದ ರಸ್ತೆಯ ದ್ವಾರದ ಸಮೀಪ ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಸಾರ್ವಜನಿಕರು ಸೇರಿ ಬೆಂಕಿಯನ್ನು ನಂದಿಸಿದ್ದು, ಹೆಚ್ಚಿನ ಅಪಾಯ ತಪ್ಪಿದಂತಾಗಿದೆ.      

ಕಡಬ: ಚಲಿಸುತ್ತಿದ್ದ ಕಾರಿನಲ್ಲಿ ಹಠಾತ್ ಕಾಣಿಸಿಕೊಂಡ ಬೆಂಕಿ ➤ ಸಾರ್ವಜನಿಕರು ನಂದಿಸಿದ್ದರಿಂದ ತಪ್ಪಿತು ಹೆಚ್ಚಿನ ಅಪಾಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಮಾರಕಾಸ್ತ್ರಗಳಿಂದ ಇರಿದು ಯುವಕನ ಬರ್ಬರ ಕೊಲೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.13. ಯುವಕನೋರ್ವನನ್ನು ಮಾರಕಾಸ್ತ್ರದಿಂದ ಕಡಿದು ಕೊಲೆಗೈದ ಘಟನೆ ಬಂಟ್ವಾಳ ತಾಲೂಕಿನ ಕಕ್ಯೆಪದವು ಕೊಡ್ಯಮಲೆ ಗುಡ್ಡೆ ಎಂಬಲ್ಲಿ ಸೋಮವಾರದಂದು ನಡೆದಿದೆ. ಕೊಲೆಯಾದ ಯುವಕನನ್ನು ಸ್ಥಳೀಯ ನಿವಾಸಿ ರಫೀಕ್ (26) ಎಂದು ಗುರುತಿಸಲಾಗಿದೆ. ಕಕ್ಯಪದವು ನಿವಾಸಿ ಸಿದ್ದೀಕ್ ಎಂಬಾತನಿಗೆ ರಫೀಕ್ ಜೊತೆ ವೈಯಕ್ತಿಕ ದ್ವೇಷವಿದ್ದು, ಇಂದು ಮಾರಕಾಸ್ತ್ರಗಳಿಂದ ಕೊಲೆಗೈದಿರುವುದಾಗಿ ವರದಿಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.      

ಬಂಟ್ವಾಳ: ಮಾರಕಾಸ್ತ್ರಗಳಿಂದ ಇರಿದು ಯುವಕನ ಬರ್ಬರ ಕೊಲೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಾಡೋಳಿ ಡಯಾಗ್ನೋಸ್ಟಿಕ್ ಸೆಂಟರ್‍ನಲ್ಲಿ ಕಡಬದ ಪ್ರಪ್ರಥಮ ಎಕ್ಸ್‍ರೇ ವಿಭಾಗ ಶುಭಾರಂಭ ➤ ತಜ್ಞ ವೈದ್ಯರ ಭೇಟಿಯ ಜೊತೆಗೆ ಎಕ್ಸ್‍ರೇ ಸೇವೆ ಶ್ಲಾಘನೀಯ: ಸಚಿವ ಎಸ್.ಅಂಗಾರ

ಕಡಬ, ಸೆ.12. ಇಲ್ಲಿನ ನಾಡೋಳಿ ಡಯಾಗ್ನಾಸ್ಟಿಕ್ ಸೆಂಟರ್ ನಲ್ಲಿ ಸಾರ್ವಜನಿಕರಿಗೆ ಸಿಗುವ ಸೇವೆಯು ಕಡಬ ತಾಲೂಕಿಗೆ ಒಂದು ಉತ್ತಮ ಬೆಳವಣಿಗೆ ಆಗಿದೆ ಎಂದು ಬಂದರು ಮತ್ತು ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್, ಅಂಗಾರ ಹೇಳಿದರು. ಅವರು ಭಾನುವಾರದಂದು ನಾಡೋಳಿ ಡಯಾಗ್ನೋಸ್ಟಿಕ್ ಸೆಂಟರ್‍ನಲ್ಲಿ ಕಡಬದಲ್ಲಿ ಪ್ರಪ್ರಥಮ ಬಾರಿಗೆ ಆರಂಭಗೊಂಡ ಎಕ್ಸ್‍ರೇ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಕಡಬ ತಾಲೂಕು ಆಗಿದೆಯಾದರೂ ಕಡಬದಲ್ಲಿ ಇರುವುದು ಸಮುದಾಯ ಆಸ್ಪತ್ರೆಯಾಗಿರುವುದರಿಂದ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ, ಆದುದರಿಂದ ಇಲ್ಲಿ ತಾಲೂಕು

ನಾಡೋಳಿ ಡಯಾಗ್ನೋಸ್ಟಿಕ್ ಸೆಂಟರ್‍ನಲ್ಲಿ ಕಡಬದ ಪ್ರಪ್ರಥಮ ಎಕ್ಸ್‍ರೇ ವಿಭಾಗ ಶುಭಾರಂಭ ➤ ತಜ್ಞ ವೈದ್ಯರ ಭೇಟಿಯ ಜೊತೆಗೆ ಎಕ್ಸ್‍ರೇ ಸೇವೆ ಶ್ಲಾಘನೀಯ: ಸಚಿವ ಎಸ್.ಅಂಗಾರ Read More »

ಕರಾವಳಿ, ತಂತ್ರಜ್ಞಾನ, ಲೈಫ್‍ಸ್ಟೈಲ್
Scroll to Top