News Kadaba Desk

ನೀರಿನ ಟ್ಯಾಪ್ ಓಪನ್ ಮಾಡಿ ದರೋಡೆ ಕಳ್ಳರ ಹೊಸ ತಂತ್ರ ➤ ಜಾಗರೂಕತೆಯಿಂದ ಇರುವಂತೆ ಬೆಳ್ಳಾರೆ ಎಸ್ಐ ಆಂಜನೇಯ ರೆಡ್ಡಿ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಅ.05. ರಾತ್ರಿ ಹೊತ್ತು ಮನೆಯ ಹೊರಗಿನ ನೀರಿನ ಟ್ಯಾಪ್ ಓಪನ್ ಮಾಡಿಟ್ಟು ಹೊರಬಂದ ವ್ಯಕ್ತಿಗೆ ಹಲ್ಲೆ ನಡೆಸಿ ಮನೆಯನ್ನು ದರೋಡೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಬೆಳ್ಳಾರೆ ಠಾಣಾ ಸಬ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ ಸಾರ್ವಜನಿಕರಲ್ಲಿ ತಿಳಿಸಿದ್ದಾರೆ. ರಾತ್ರಿ ಹೊತ್ತು ಮನೆಯ ಹೊರಗಿರುವ ನೀರಿನ ಟ್ಯಾಪ್ ಅಥವಾ ಇನ್ನಿತರ ಹೊರಗಿನ ಪೈಪ್ ಗಳಲ್ಲಿ ನೀರು ಹೋಗುವ ಶಬ್ದ ಕೇಳಿದರೆ ಏಕಾಏಕಿ ಹೊರ ಬರುವ ಪ್ರಯತ್ನ ಮಾಡದೆ […]

ನೀರಿನ ಟ್ಯಾಪ್ ಓಪನ್ ಮಾಡಿ ದರೋಡೆ ಕಳ್ಳರ ಹೊಸ ತಂತ್ರ ➤ ಜಾಗರೂಕತೆಯಿಂದ ಇರುವಂತೆ ಬೆಳ್ಳಾರೆ ಎಸ್ಐ ಆಂಜನೇಯ ರೆಡ್ಡಿ ಎಚ್ಚರಿಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕರಾವಳಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ➤ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿದ ಡಿಕೆಶಿ

(ನ್ಯೂಸ್ ಕಡಬ) newskadaba.com ಸುಳ್ಯ, ಅ.05. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಕರಾವಳಿಗೆ ಆಗಮಿಸಿದ್ದು, ಸುಳ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದಾರೆ‌. ಡಿಕೆಶಿ ಈ ಹಿಂದೆ ಸಿದ್ಧರಾಮಯ್ಯ ಸಂಪುಟದಲ್ಲಿ ಇಂಧನ ಸಚಿವರಾಗಿದ್ದ ವೇಳೆ ವಿದ್ಯುತ್ ಸಮಸ್ಯೆ ಬಗ್ಗೆ ಕರೆ ಮಾಡಿದ್ದ ವ್ಯಕ್ತಿಯ ಜೊತೆ ವಾಗ್ವಾದ ನಡೆದಿದ್ದು, ಆ ಬಳಿಕ ಕರೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸುಳ್ಯ ಕೋರ್ಟ್ ಡಿ.ಕೆ.ಶಿವಕುಮಾರ್ ಗೆ ಹಲವು ಬಾರಿ ನೊಟೀಸ್ ನೀಡಿದ್ದರೂ ಡಿಕೆಶಿ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ

ಕರಾವಳಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ➤ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿದ ಡಿಕೆಶಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕುಕ್ಕೇ ಸೇರಿದಂತೆ ರಾಜ್ಯದ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ➤ ಅರೆ ಬರೆ ಬಟ್ಟೆ ತೊಟ್ಟು ಆಗಮಿಸುವವರಿಗೆ ಬೀಳಲಿದೆ ಕಡಿವಾಣ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.05. ರಾಜ್ಯದ 216 ‘ಎ’ ಗ್ರೇಡ್ ದೇವಸ್ಥಾನಗಳಲ್ಲಿ ಇನ್ಮುಂದೆ ಬೇಕಾಬಿಟ್ಟಿಯಾಗಿ ವಸ್ತ್ರ ಧರಿಸುವುದಕ್ಕೆ ಕಡಿವಾಣ ಬೀಳಲಿದೆ. ಕುಕ್ಕೇ ಸುಬ್ರಹ್ಮಣ್ಯ, ಕಟೀಲು, ಪೊಳಲಿ, ಮಂದಾರ್ತಿ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವ ಬಗ್ಗೆ ಚರ್ಚೆಯಾಗುತ್ತಿದ್ದು, ಅರೆ ಬರೆ ಬಟ್ಟೆ ತೊಟ್ಟು ದೇವಾಲಯಕ್ಕೆ ಆಗಮಿಸುವವರಿಗೆ ನಿಷೇಧ ಹೇರಲಿದೆ. ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಕೆಲವೇ ದಿನಗಳಲ್ಲಿ ಅಂತಿಮ ತೀರ್ಮಾನ ಹೊರಬರಲಿದೆ ಎಂದು ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ಮಾಹಿತಿ

ಕುಕ್ಕೇ ಸೇರಿದಂತೆ ರಾಜ್ಯದ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ➤ ಅರೆ ಬರೆ ಬಟ್ಟೆ ತೊಟ್ಟು ಆಗಮಿಸುವವರಿಗೆ ಬೀಳಲಿದೆ ಕಡಿವಾಣ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೈಂದಡ್ಕ ಮೈದಾನ ಗ್ರಾ.ಪಂ.ಗೆ ಹಸ್ತಾಂತರ ➤ ದಾರಿಯನ್ನು ಯಥಾಸ್ಥಿತಿಯಲ್ಲಿ ಇಡುವಂತೆ ಆದೇಶ

ಉಪ್ಪಿನಂಗಡಿ, ಅ.05. ಇಲ್ಲಿನ ೩೪ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಮೈಂದಡ್ಕ ಎಂಬಲ್ಲಿ ಕಂದಾಯ ಇಲಾಖೆಯ ಅಧೀನದಲ್ಲಿದ್ದ ೦.೫೭ ಎಕ್ರೆ ಭೂಮಿಯನ್ನು ಸಾರ್ವಜನಿಕ ಆಟದ ಮೈದಾನವನ್ನಾಗಿ ಬಳಸಿಕೊಳ್ಳಲು ಸ್ಥಳೀಯ ಗ್ರಾ.ಪಂ. ಅಧೀನಕ್ಕೆ ಒಪ್ಪಿಸಿ ಪುತ್ತೂರು ಸಹಾಯಕ ಕಮಿಷನರ್ ಆದೇಶ ಹೊರಡಿಸಿದ್ದು, ಈ ಜಮೀನಿನಲ್ಲಿ ಊರ್ಜಿತವಿರುವ ರಸ್ತೆಯನ್ನು ಆತಂಕಿಸತಕ್ಕದ್ದಲ್ಲವೆಂದು ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿದ್ದಾರೆ. ಮೈಂದಡ್ಕದಲ್ಲಿರುವ ೮೮/೧ ಸರ್ವೆ ನಂಬರ್‌ನಲ್ಲಿ ಸುಮಾರು ಎರಡು ಎಕ್ರೆಯಷ್ಟು ಸ್ಥಳವು ಅನಿಲ್ ಮಿನೇಜಸ್ ಎಂಬವರ ಖದೀಮ ವರ್ಗದ ಕುಮ್ಕಿಯಾಗಿದ್ದು, ಅದರಲ್ಲಿ ೦.೫೫ ಎಕ್ರೆ ಜಾಗವು ಮೈದಾನಕ್ಕೆ

ಮೈಂದಡ್ಕ ಮೈದಾನ ಗ್ರಾ.ಪಂ.ಗೆ ಹಸ್ತಾಂತರ ➤ ದಾರಿಯನ್ನು ಯಥಾಸ್ಥಿತಿಯಲ್ಲಿ ಇಡುವಂತೆ ಆದೇಶ Read More »

ಕರಾವಳಿ

ಜಗತ್ತಿನೆಲ್ಲೆಡೆ ಸ್ಥಗಿತಗೊಂಡ ವಾಟ್ಸ್ಅಪ್, ಫೇಸ್‌ಬುಕ್‌, ಇನ್ಸ್‌ಟಾಗ್ರಾಂ ➤ ಪರದಾಡಿದ ನೆಟ್ಟಿಗರು

(ನ್ಯೂಸ್ ಕಡಬ) newskadaba.com ನವದೆಹಲಿ, ಅ.05. ಪ್ರಮುಖ ಸೋಷಿಯಲ್ ಮೀಡಿಯಾಗಳಾದ ವಾಟ್ಸ್ಅಪ್ ಮೆಸೆಂಜರ್‌, ಫೇಸ್‌ಬುಕ್, ಇನ್ಸ್‌ಟಾಗ್ರಾಂ ಸರ್ವರ್ ಜಗತ್ತಿನೆಲ್ಲೆಡೆ ಏಕಕಾಲದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹಲವರು ಪರದಾಡಿದ್ದಾರೆ‌. ಈ ಕುರಿತು ಮಾಹಿತಿ ನೀಡಲು ಸಾಮಾಜಿಕ ತಾಣ ಬಳಕೆದಾರರು ಟ್ವಿಟರ್‌ ಅನ್ನು ಆಶ್ರಯಿಸಿದ್ದಾರೆ. ಸೋಮವಾರ ರಾತ್ರಿ 9.03 ರ ಸಮಯದಲ್ಲಿ ತಾತ್ಕಾಲಿಕವಾಗಿ ಸರ್ವರ್‌ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಒಡೆತನದ ಮೆಸೆಂಜರ್ ಹಾಗೂ ವಾಟ್ಸ್ಅಪ್ ಬಳಕೆದಾರರು ಪರದಾಡಿದ್ದು, ಈ ಬಗ್ಗೆ ಟ್ವಿಟರ್ ನಲ್ಲಿ ಸಂದೇಶ ರವಾನಿಸಲಾಗಿತ್ತು. ಈ ಬಗ್ಗೆ ಫೇಸ್‌ಬುಕ್‌

ಜಗತ್ತಿನೆಲ್ಲೆಡೆ ಸ್ಥಗಿತಗೊಂಡ ವಾಟ್ಸ್ಅಪ್, ಫೇಸ್‌ಬುಕ್‌, ಇನ್ಸ್‌ಟಾಗ್ರಾಂ ➤ ಪರದಾಡಿದ ನೆಟ್ಟಿಗರು Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜೇಸಿಐ ಕಡಬ ಕದಂಬ ಘಟಕದ ಜೇಸಿ ಸಪ್ತಾಹ ಕದಂಬೋತ್ಸವ – 2021 ➤ ಸೈಂಟ್ ಜೋಕಿಮ್ಸ್ ಕಾಲೇಜಿನಲ್ಲಿ ಪರಿಸರ ಸಂರಕ್ಷಣೆಯ ಮಾಹಿತಿ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಕಡಬ, ಅ.04. ಜೇಸಿಐ ಕಡಬ ಕದಂಬ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಹಾಗೂ ಜೂನಿಯರ್ ಜೇಸಿ ವಿಭಾಗದ ವತಿಯಿಂದ ಜೇಸಿ ಸಪ್ತಾಹ 2021 ಕದಂಬೋತ್ಸವದ ಅಂಗವಾಗಿ ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ ಎಂಬ ಕಾರ್ಯಕ್ರಮವು ಕಡಬದ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸೋಮವಾರದಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕಾಧ್ಯಕ್ಷ ತಿರುಮಲೇಶ್ ಭಟ್ ವಹಿಸಿದ್ದರು. ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ|ಫಾ| ಅರುಣ್ ವಿಲ್ಸನ್ ಲೋಬೋ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ

ಜೇಸಿಐ ಕಡಬ ಕದಂಬ ಘಟಕದ ಜೇಸಿ ಸಪ್ತಾಹ ಕದಂಬೋತ್ಸವ – 2021 ➤ ಸೈಂಟ್ ಜೋಕಿಮ್ಸ್ ಕಾಲೇಜಿನಲ್ಲಿ ಪರಿಸರ ಸಂರಕ್ಷಣೆಯ ಮಾಹಿತಿ ಕಾರ್ಯಾಗಾರ Read More »

ಕರಾವಳಿ

ಅ.5 ರಂದು ಡಿ.ಕೆ. ಶಿವಕುಮಾರ್ ಸುಳ್ಯ ಕೋರ್ಟ್‌ಗೆ ಹಾಜರ್ ➤ ಕೊನೆಗೂ ಡಿಕೆಶಿ ಕರಾವಳಿ ಪ್ರವಾಸ ಫಿಕ್ಸ್

(ನ್ಯೂಸ್ ಕಡಬ) newskadaba.com ಸುಳ್ಯ, ಅ.03. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಕ್ಟೋಬರ್ 05 ರಂದು ಕರಾವಳಿಗೆ ಆಗಮಿಸಲಿದ್ದು, ಸುಳ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲಿದ್ದಾರೆ‌. ಡಿಕೆಶಿ ಈ ಹಿಂದೆ ಸಿದ್ಧರಾಮಯ್ಯ ಸಂಪುಟದಲ್ಲಿ ಇಂಧನ ಸಚಿವರಾಗಿದ್ದ ವೇಳೆ ವಿದ್ಯುತ್ ಸಮಸ್ಯೆ ಬಗ್ಗೆ ಕರೆ ಮಾಡಿದ ವ್ಯಕ್ತಿಯ ಜೊತೆ ವಾಗ್ವಾದ ನಡೆದಿದ್ದು, ಆ ಬಳಿಕ ಕರೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸುಳ್ಯ ಕೋರ್ಟ್ ಡಿ.ಕೆ.ಶಿವಕುಮಾರ್ ಗೆ ಹಲವು ಬಾರಿ ನೊಟೀಸ್ ನೀಡಿದ್ದರೂ ಡಿಕೆಶಿ ಹಾಜರಾಗಿರಲಿಲ್ಲ.

ಅ.5 ರಂದು ಡಿ.ಕೆ. ಶಿವಕುಮಾರ್ ಸುಳ್ಯ ಕೋರ್ಟ್‌ಗೆ ಹಾಜರ್ ➤ ಕೊನೆಗೂ ಡಿಕೆಶಿ ಕರಾವಳಿ ಪ್ರವಾಸ ಫಿಕ್ಸ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಿಜೆಪಿಯ 40 ಶಾಸಕರು ಕಾಂಗ್ರೆಸ್‌ಗೆ..? ➤ ಕಾಗೆ ಹಾರಿಸಿದ ರಾಜು ಕಾಗೆ

(ನ್ಯೂಸ್ ಕಡಬ) newskadaba.com ಬೆಳಗಾವಿ, ಅ.03. ಬಿಜೆಪಿಯ 40 ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಜು ಕಾಗೆ ನೀಡಿರುವ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಮದಭಾವಿ ಎಂಬಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಜು ಕಾಗೆ, ರಾಜ್ಯ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲದೇ ಇರುವುದರಿಂದ ಎಲ್ಲಯ ರಂಗಗಳಲ್ಲೂ ವಿಫಲವಾಗಿದೆ. ಬಿಜೆಪಿಯಲ್ಲಿ ಬೇಸತ್ತಿರುವ 40 ರಷ್ಟು ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಕಾಗೆ ಹಾರಿಸಿದ್ದಾರೆ. ಕಾಗೆಯವರ ಹೇಳಿಕೆಗೆ ಇದೀಗ ರಾಜ್ಯ ರಾಜಕಾರಣದಲ್ಲಿ

ಬಿಜೆಪಿಯ 40 ಶಾಸಕರು ಕಾಂಗ್ರೆಸ್‌ಗೆ..? ➤ ಕಾಗೆ ಹಾರಿಸಿದ ರಾಜು ಕಾಗೆ Read More »

ಕರಾವಳಿ

ಕಡಬ: ‘ಸ್ವಾತಿ ಎಸಿ & ಟಿವಿ ವರ್ಲ್ಡ್’ ಇಲೆಕ್ಟ್ರಾನಿಕ್ ಶೋರೂಂ ಶುಭಾರಂಭ ➤ ಮಾಸಿಕ ಕಂತಿನಲ್ಲಿ ಎಸಿ ಮತ್ತು ಟಿವಿ ಖರೀದಿ ಸೌಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಅ.02. ಇಲ್ಲಿನ ಸೈಂಟ್ ಜೋಕಿಮ್ಸ್ ಚರ್ಚ್‌ನ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸ್ವಾತಿ ಇಲೆಕ್ಟ್ರಾನಿಕ್ಸ್ & ಪಂಪ್ ಪಾಯಿಂಟ್ ಸಹ ಸಂಸ್ಥೆ ಹವಾನಿಯಂತ್ರಕ ಹಾಗೂ ದೂರದರ್ಶನಗಳ ಮಾರಾಟ ಮಳಿಗೆ ಸ್ವಾತಿ ಎ.ಸಿ. & ಟಿ.ವಿ ವರ್ಲ್ಡ್ ಶನಿವಾರದಂದು ಶುಭಾರಂಭಗೊಂಡಿತು.   ನೂತನ ಸಂಸ್ಥೆಯನ್ನು ಸೈಂಟ್ ಜೋಕಿಮ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ಅರುಣ್ ವಿಲ್ಸನ್ ಲೋಬೋ ಅವರು ಉದ್ಘಾಟಿಸಿ ಶುಭಹಾರೈಸಿದರು. ಲಯನ್ಸ್ ಜಿಲ್ಲಾ ಕೋ-ಆರ್ಡಿನೇಟರ್ ಲ| ಗೋವರ್ಧನ ಶೆಟ್ಟಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ

ಕಡಬ: ‘ಸ್ವಾತಿ ಎಸಿ & ಟಿವಿ ವರ್ಲ್ಡ್’ ಇಲೆಕ್ಟ್ರಾನಿಕ್ ಶೋರೂಂ ಶುಭಾರಂಭ ➤ ಮಾಸಿಕ ಕಂತಿನಲ್ಲಿ ಎಸಿ ಮತ್ತು ಟಿವಿ ಖರೀದಿ ಸೌಲಭ್ಯ Read More »

ತಂತ್ರಜ್ಞಾನ, ಲೈಫ್‍ಸ್ಟೈಲ್

ಕಡಬ: ಕೋಳಿ ಊಟ ಸೇವಿಸಿ ಹಲವರ ಆರೋಗ್ಯದಲ್ಲಿ ಏರುಪೇರು ➤ ಚಿಕಿತ್ಸೆ ಫಲಿಸದೆ ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಅ.02. ಕೋಳಿ ಊಟ ಸೇವಿಸಿದ ಜನರಲ್ಲಿ ಒರ್ವ ಮೃತಪಟ್ಟು, ಹಲವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಬಲ್ಯ ಸಮೀಪದ ಗಾಣದಕೊಟ್ಟಿಗೆ ಎಂಬಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಗಾಣದ ಕೊಟ್ಟಿಗೆ ನಿವಾಸಿ ದೇವಪ್ಪ ಗೌಡ (60.ವ) ಎಂದು ಗುರುತಿಸಲಾಗಿದೆ. ದೇವಪ್ಪ ಗೌಡರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೂಲಿ ಕೆಲಸ ಮಾಡಲು ಇತರ ಸದಸ್ಯರೊಂದಿಗೆ ಬಲ್ಯದ ಸಂಜೀವ ದೇವಾಡಿಗರವರ ಮನೆಗೆ ಹೋಗಿದ್ದರು. ಅಲ್ಲಿ ಮಧ್ಯಾಹ್ನದ ಊಟಕ್ಕೆ ಮಾಡಲಾಗಿದ್ದ ಕೋಳಿ ಪದಾರ್ಥ ಸೇವಿಸಿದ್ದರು.

ಕಡಬ: ಕೋಳಿ ಊಟ ಸೇವಿಸಿ ಹಲವರ ಆರೋಗ್ಯದಲ್ಲಿ ಏರುಪೇರು ➤ ಚಿಕಿತ್ಸೆ ಫಲಿಸದೆ ಓರ್ವ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top