News Kadaba Desk

ಮೀನಿಗೆ ಗಾಳ ಹಾಕುತ್ತಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) Newskadaba.com ಉಡುಪಿ, ಅ. 11. ಮೀನಿಗೆ ಗಾಳ ಹಾಕುತ್ತಿದ್ದ ವೇಳೆ ಆಕಸ್ಮಿಕವಾಗಿ ಜಾರಿ ಬಿದ್ದು ವ್ಯಕ್ತಿಯೋರ್ವರು ನೀರು ಪಾಲಾದ ಘಟನೆ ಶಿರ್ವದಲ್ಲಿ ಭಾನುವಾರದಂದು ನಡೆದಿದೆ. ಮೃತರನ್ನು ಶಿರ್ವ ಮಟ್ಟಾರು ನಿವಾಸಿ ದಿಲೀಪ್ (30)ಎಂದು ಗುರುತಿಸಲಾಗಿದೆ. ಇವರು ದೈವ ನರ್ತಕರಾಗಿದ್ದರು. ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಮಲ್ಪೆಯ ಮುಳುಗು ತಜ್ಞ ಈಶ್ವರ್ ಆಗಮಿಸಿ ಶೋಧಕಾರ್ಯ ಮುಂದುವರಿಸಿದ್ದಾರೆ.

ಮೀನಿಗೆ ಗಾಳ ಹಾಕುತ್ತಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ

ಕೆರೆಗೆ ಹಾರಿ ಯುವತಿ ಆತ್ಮಹತ್ಯೆ

(ನ್ಯೂಸ್ ಕಡಬ) Newskadaba.com ವಿಟ್, ಅ. 11. ಯುವತಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ವಿಟ್ಲಕಸಬಾ ಗ್ರಾಮದ ನೇತ್ರಕೆರೆ ನಿವಾಸಿ ಬಾಬು ನಾಯ್ಕ ಅವರ ಪುತ್ರಿ ನಿಶ್ಮಿತಾ(22) ಎಂದು ಗುರುತಿಸಲಾಗಿದೆ. ನಿಶ್ಮಿತಾರವರು ಡೆಂಟಲ್ ಕ್ಲಿನಿಕ್ ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಭಾನುವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಈ ಕುರಿತು ವಿಟ್ಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಆದರೆ ಇಂದು (ಅ.11) ಮುಂಜಾನೆ ಕೆರೆಯೊಂದರಲ್ಲಿ ಮೃತದೇಹ ಪತ್ತೆಯಾಗಿದ್ದು, ಅಲ್ಲದೇ ಘಟನಾ ಸ್ಥಳದಲ್ಲಿ ಡೆತ್

ಕೆರೆಗೆ ಹಾರಿ ಯುವತಿ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ‘ಆಗ್ರೋ ಫರ್ಟಿಲೈಸ್’ ಗೊಬ್ಬರ ಮಾರಾಟ ಸಂಸ್ಥೆ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಅ.11. ಇಲ್ಲಿನ ಮುಖ್ಯ ರಸ್ತೆಯ ವೆರೈಟಿ ಬಿಲ್ಡಿಂಗ್ ನಲ್ಲಿ ಕೃಷಿಗೆ ಸಂಬಂಧಿಸಿದ ಸಾವಯವ ಹಾಗೂ ರಾಸಾಯನಿಕ ಗೊಬ್ಬರ ಮಾರಾಟ ಸಂಸ್ಥೆ ಆಗ್ರೋ ಫರ್ಟಿಲೈಸ್ ಶನಿವಾರದಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಮಾಲಕರ ಮಾತೃಶ್ರೀಯವರು ಉದ್ಘಾಟಿಸಿದರು. ಕಡಬ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು, ಯಶೋದಾ ಸೂಪರ್ ಶಾಪ್ ಮಾಲಕ ದಯಾನಂದ ಪ್ರಭು, ಉದ್ಯಮಿ ಅಜಿತ್ ಶೆಟ್ಟಿ, ಡಾ|ಸದಾನಂದ ರಾವ್, ಸಿಟಿ ಮೆಡಿಕಲ್ ನ ಶರೀಫ್, ಸ್ಟಾರ್ ಟ್ರೇಡಿಂಗ್ ನ ಶಗೀರ್

ಕಡಬ: ‘ಆಗ್ರೋ ಫರ್ಟಿಲೈಸ್’ ಗೊಬ್ಬರ ಮಾರಾಟ ಸಂಸ್ಥೆ ಶುಭಾರಂಭ Read More »

ಕರಾವಳಿ

ಗಾಂಧಿವಿಚಾರ ವೇದಿಕೆಯಿಂದ “ಮಾಸದ ಸಂವಾದ” ಅರವಿಂದ ಮಹರ್ಷಿಗಳ ಬಗ್ಗೆ ಉಪನ್ಯಾಸ ➤ ವಿಪರೀತವಾದ ಯಾವತ್ತೂ ಅಪಾಯವೇ- ಧೀರೇನ್ ಪರಮಲೆ

(ನ್ಯೂಸ್ ಕಡಬ) Newskadaba.com ಪಂಜ, ಅ. 11. ಯಾವುದೇ ವಿಚಾರಗಳು ವಿಪರೀತವಾದರೆ ಅದರಿಂದಲೇ ಹಾನಿಯಾಗುತ್ತದೆ ಎನ್ನುವುದನ್ನು ಮಹರ್ಷಿ ಅರವಿಂದರು ಹೇಳಿದ್ದರು, ಅಲ್ಲದೇ ಧರ್ಮ, ಜಾತಿ ಸೇರಿದಂತೆ ಯಾವುದೇ ಆದರೂ ವಿಪರೀತವಾದರೆ ಒಂದು ದಿನ ಅದರಿಂದಲೇ ಹೊಡೆತ, ಅದರಿಂದಲೇ ನಾಶ ನಿಶ್ಚಿತ ಎನ್ನುವುದನ್ನು ಮಹರ್ಷಿಗಳು ಹೇಳಿದ್ದರು ಎಂದು ಲೀಡರ್‌ ಎಕ್ಸಲೆನ್ಸ್‌ ಸೊಲ್ಯೂಶನ್‌ನ ಮುಖ್ಯಾಧಿಕಾರಿ, ಧಾರ್ಮಿಕ ಚಿಂತಕ ಧೀರೇನ್‌ ಪರಮಲೆ ಹೇಳಿದರು. ಅವರು ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ವತಿಯಿಂದ ಪಂಜದ ಜಾಕೆ ಪದ್ಮನಾಭ ಗೌಡ ಅವರ

ಗಾಂಧಿವಿಚಾರ ವೇದಿಕೆಯಿಂದ “ಮಾಸದ ಸಂವಾದ” ಅರವಿಂದ ಮಹರ್ಷಿಗಳ ಬಗ್ಗೆ ಉಪನ್ಯಾಸ ➤ ವಿಪರೀತವಾದ ಯಾವತ್ತೂ ಅಪಾಯವೇ- ಧೀರೇನ್ ಪರಮಲೆ Read More »

ಕರಾವಳಿ

ಬಂಟ್ವಾಳ: ತುಳು ಲಿಪಿ ನಾಮಫಲಕ ಅನಾವರಣ

(ನ್ಯೂಸ್ ಕಡಬ) Newskadaba.com ಬಂಟ್ವಾಳ, ಅ. 11. ವಿಶ್ವ ತುಳು ಲಿಪಿ ದಿನವಾದ ಅಕ್ಟೋಬರ್ 10 ರಂದು ತಾಲೂಕಿನ ಭಂಡಾರಿಬೆಟ್ಟುವಿನಲ್ಲಿರುವ ಯುವಜನ ವ್ಯಾಯಾಮ ಶಾಲೆಯ ನಾಮಫಲಕವನ್ನು ತುಳು ಲಿಪಿಯಲ್ಲಿ ಹಾಕಲಾಯಿತು. ತುಳು ಲಿಪಿ ಶಿಕ್ಷಕರು ಹಾಗೂ ಜೈ ತುಳುನಾಡ್ (ರಿ.) ಸಂಘಟನೆಯ ಉಪ ಸಂಘಟನಾ ಕಾರ್ಯದರ್ಶಿಯಾದ ಜಗದೀಶ ಗೌಡ ಕಲ್ಕಳ ಇವರು ತುಳು ಲಿಪಿ ನಾಮಫಲಕವನ್ನು ಅನಾವರಣಗೊಳಿಸಿದರು. ಹಾಗೆಯೇ ತುಳು ಲಿಪಿ ದಿನದ ವಿಶೇಷತೆ ಹಾಗೂ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಇವರ ಹುಟ್ಟುಹಬ್ಬವನ್ನು ತುಳು ಲಿಪಿ

ಬಂಟ್ವಾಳ: ತುಳು ಲಿಪಿ ನಾಮಫಲಕ ಅನಾವರಣ Read More »

ಕರ್ನಾಟಕ

ಮೇಲ್ಛಾವಣಿ ಮೂಲಕ ಮನೆಗೆ ನುಗ್ಗಲು ಪ್ರಯತ್ನಿಸಿದ ಅಪರಿಚಿತ ➤ ಮನೆಮಂದಿಯನ್ನು ಕಂಡು ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಅ.10. ಮನೆಯೊಂದರ ಶೌಚಾಲಯದ ಮೇಲ್ಛಾವಣಿಯ ಮೂಲಕ ಅಪರಿಚಿತ ವ್ಯಕ್ತಿಯೋರ್ವ ಒಳ ನುಗ್ಗಲು ಪ್ರಯತ್ನಿಸಿರುವ ಘಟನೆ ಠಾಣಾ ವ್ಯಾಪ್ತಿಯ ಮರ್ಧಾಳದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಮರ್ಧಾಳದ 102 ನೆಕ್ಕಿಲಾಡಿ ಗ್ರಾಮದ ಅತ್ಲಾಜೆ ನಿವಾಸಿ ಹಮೀದ್ ಎಂಬವರ ಮನೆಯ ಶೌಚಾಲಯದ ಮೇಲ್ಛಾವಣಿಯ ಶೀಟ್ ಮೂಲಕ ಅಪರಿಚಿತ ವ್ಯಕ್ತಿಯೋರ್ವ ಒಳನುಗ್ಗಲು ಪ್ರಯತ್ನಿಸಿದ್ದು, ಈ ವೇಳೆ ಶೌಚಾಲಯಕ್ಕೆ ತೆರಳಿದ ಮಹಿಳೆಯೋರ್ವರು ಆತನನ್ನು ಗಮನಿಸಿ ಬೊಬ್ಬೆ ಹೊಡೆದಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಯು ಪರಾರಿಯಾಗಿದ್ದು, ಶೌಚಾಲಯದ ಗೋಡೆಯ ಮೇಲೆ

ಮೇಲ್ಛಾವಣಿ ಮೂಲಕ ಮನೆಗೆ ನುಗ್ಗಲು ಪ್ರಯತ್ನಿಸಿದ ಅಪರಿಚಿತ ➤ ಮನೆಮಂದಿಯನ್ನು ಕಂಡು ಪರಾರಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಹವಾನಿಯಂತ್ರಿತ ಫ್ಯಾಮಿಲಿ ರೆಸ್ಟೋರೆಂಟ್ ‘ಹೋಟೆಲ್ ವೃದ್ಧಿ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಅ.08. ಇಲ್ಲಿನ ಸೈಂಟ್ ಜೋಕಿಮ್ಸ್ ಕಾಲೇಜಿನ ಮುಂಭಾಗದಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿ ಫ್ಯಾಮಿಲಿ ರೆಸ್ಟೋರೆಂಟ್ ‘ಹೋಟೆಲ್ ವೃದ್ಧಿ’ ಜ್ಯೂಸ್ & ಕ್ರೀಮ್ ಪಾರ್ಲರ್ ಶುಕ್ರವಾರದಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ನಿವೃತ್ತ ಶಿಕ್ಷಕ ನಾಗಪ್ಪ ಗೌಡ ಮರುವಂತಿಲ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಕ್ಟೋಬರ್ 16 ರಿಂದ ಆರಂಭಗೊಳ್ಳಲಿರುವ ಹವಾನಿಯಂತ್ರಿತ ಮೀನು ಮಾರಾಟ ಮಳಿಗೆ ‘ಮತ್ಸ್ಯದರ್ಶಿನಿ’ಯನ್ನು ಮಿನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ಸಾಂಕೇತಿಕವಾಗಿ ಉದ್ಘಾಟಿಸಿದರು. ವೇದಿಕೆಯಲ್ಲಿ ಕಡಬ ಜಿ.ಪಂ. ಮಾಜಿ ಸದಸ್ಯ

ಕಡಬ: ಹವಾನಿಯಂತ್ರಿತ ಫ್ಯಾಮಿಲಿ ರೆಸ್ಟೋರೆಂಟ್ ‘ಹೋಟೆಲ್ ವೃದ್ಧಿ ಶುಭಾರಂಭ Read More »

ಕರ್ನಾಟಕ

ತಾನು ವಿಷ ಕುಡಿದು ಮಕ್ಕಳಿಗೆ ವಿಷ ಕುಡಿಸಿದ ಭೂಪ ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಅ.08. ತಾನು ವಿಷ ಕುಡಿದು ತನ್ನ ಮಕ್ಕಳಿಗೆ ಜ್ಯೂಸ್‌ನಲ್ಲಿ ವಿಷ ಬೆರೆಸಿ ಕುಡಿಸಿದ ಘಟನೆ ಕಡಬದಿಂದ ವರದಿಯಾಗಿದೆ ಮೂತಃ ಬೆಳ್ತಂಗಡಿ ತಾಲೂಕಿನ ಶಿಶಿಲ ನಿವಾಸಿ ವಿಶ್ವನಾಥ ಎಂಬವರು ಕಡಬ ತಾಲೂಕಿನ ಬಲ್ಯದಿಂದ ಮದುವೆಯಾಗಿದ್ದು, ಕುಡಿತದ ಚಟ ಹೊಂದಿದ್ದ ವಿಶ್ವನಾಥರು ಕುಡಿದು ಬಂದು ಪತ್ನಿಯ ಜೊತೆ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಪತ್ನಿಯು ತವರು ಮನೆಗೆ ಬಂದಿದ್ದು, ಇಲ್ಲಿಗೆ ಬಂದಿದ್ದ ವಿಶ್ವನಾಥ್ ತನ್ನ ಸಣ್ಣ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ಜ್ಯೂಸ್ ಕುಡಿಸಿದ್ದಾನೆ ಎನ್ನಲಾಗಿದೆ.

ತಾನು ವಿಷ ಕುಡಿದು ಮಕ್ಕಳಿಗೆ ವಿಷ ಕುಡಿಸಿದ ಭೂಪ ➤ ಆಸ್ಪತ್ರೆಗೆ ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ವಿಷಕಾರಿ ಹಾವು ಕಡಿತ ➤ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಅ.08. ವಿಷಕಾರಿ ಹಾವು ಕಡಿದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಇಚಿಲಂಪಾಡಿ ಎಂಬಲ್ಲಿ ಶುಕ್ರವಾರದಂದು ಸಂಭವಿಸಿದೆ. ಮೃತ ವ್ಯಕ್ತಿಯನ್ನು ಇಚಿಲಂಪಾಡಿಯ ಬಿಜೇರು ನಿವಾಸಿ ನಾರಾಯಣ ಶೆಟ್ಟಿ ಎಂದು ಗುರುತಿಸಲಾಗಿದೆ. ಮೃತರು ಗುರುವಾರದಂದು ಗದ್ದೆಯ ಬದಿಯಲ್ಲಿ ಹಾದುಹೋಗುತ್ತಿದ್ದ ವೇಳೆ ವಿಷಕಾರಿ ಹಾವು ಕಡಿದಿದ್ದು, ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಯುರ್ವೇದಿಕ್ ಪಂಡಿತರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು ಎನ್ನಲಾಗಿದೆ.  ಇಂದು ಗಾಯ ಉಲ್ಬಣಿಸಿ ರಕ್ತ ಸ್ರಾವ ಉಂಟಾದ ಹಿನ್ನೆಲೆಯಲ್ಲಿ

ಕಡಬ: ವಿಷಕಾರಿ ಹಾವು ಕಡಿತ ➤ ವ್ಯಕ್ತಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಅಡಿಗ ಟಿವಿಎಸ್ ಕಡಬದಲ್ಲಿ ದಸರಾ ವಿಶೇಷ ಲೋನ್ ಮೇಳ ಹಾಗೂ ಎಕ್ಸ್‌ಚೇಂಜ್ ಆಫರ್ ➤ ಮುಂಗಡ ಪಾವತಿ ಕೇವಲ ರೂ 5999 ಪಾವತಿಸಿ ನಿಮ್ಮಿಷ್ಟದ ಟಿವಿಎಸ್ ವಾಹನವನ್ನು ಖರೀದಿಸಿ

ಕಡಬ ತಾಲೂಕಿನಲ್ಲಿ ಕಳೆದ 5 ವರ್ಷಗಳಿಂದ ಟಿವಿಎಸ್ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಹೆಸರುವಾಸಿಯಾಗಿರುವ, ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಟಿವಿಎಸ್ ಮಹಾ ಕಾರ್ನಿವಲ್ ನಡೆಯುತ್ತಿದೆ. ಮುಂಗಡ ಪಾವತಿ ಕೇವಲ ರೂ5999 (ರಿಜಿಸ್ಟ್ರೇಷನ್ ಹಾಗೂ ಇನ್ಸೂರೆನ್ಸ್ ಸೇರಿ): BS6 ವಾಹನಗಳಿಗೆ ಮೊದಲಬಾರಿ ಅತೀ ಕಡಿಮೆ ಡೌನ್ ಪೇಮೆಂಟ್ ಮತ್ತು ಬಡ್ಡಿ ದರ ಸ್ಕೀಮ್ ಗಳನ್ನು ಅಡಿಗ ಮೋಟಾರ್ಸ್ ನಲ್ಲಿ ಪರಿಚಯಿಸಲಾಗಿದೆ. ರಿಜಿಸ್ಟ್ರೇಷನ್ ಹಾಗೂ ಇನ್ಸೂರೆನ್ಸ್ ಸೇರಿ ಕೇವಲ ರೂ5999/- ಮುಂಗಡ

ಅಡಿಗ ಟಿವಿಎಸ್ ಕಡಬದಲ್ಲಿ ದಸರಾ ವಿಶೇಷ ಲೋನ್ ಮೇಳ ಹಾಗೂ ಎಕ್ಸ್‌ಚೇಂಜ್ ಆಫರ್ ➤ ಮುಂಗಡ ಪಾವತಿ ಕೇವಲ ರೂ 5999 ಪಾವತಿಸಿ ನಿಮ್ಮಿಷ್ಟದ ಟಿವಿಎಸ್ ವಾಹನವನ್ನು ಖರೀದಿಸಿ Read More »

ತಂತ್ರಜ್ಞಾನ, ಲೈಫ್‍ಸ್ಟೈಲ್
Scroll to Top