News Kadaba Desk

ಪುತ್ತೂರು: ಆಕ್ಟಿವಾ ಹಾಗೂ ಬೈಕ್ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 05. ರಸ್ತೆಯಲ್ಲಿರುವ ಗುಂಡಿ ತಪ್ಪಿಸಲು ಹೋಗಿ ಆಕ್ಟಿವಾ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಇಲ್ಲಿನ ಎಪಿಎಂಸಿ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಸವಾರರಿಬ್ಬರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ ಎನ್ನಲಾಗಿದೆ.

ಪುತ್ತೂರು: ಆಕ್ಟಿವಾ ಹಾಗೂ ಬೈಕ್ ನಡುವೆ ಢಿಕ್ಕಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ನಾಳೆ (ನ.06) ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಜನಜಾಗೃತಿ ಸಮಾವೇಶ

(ನ್ಯೂಸ್ ಕಡಬ) newskadaba.com ಕಡಬ, ನ. 05. ವಿಶ್ವ ಹಿಂದೂ ಪರಿಷತ್, ಬಜರಂಗದಳ ಪುತ್ತೂರು ಜಿಲ್ಲೆ ಇದರ ವತಿಯಿಂದ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಶೀಘ್ರವೇ ಜಾರಿಗೊಳಿಸುವಂತೆ ಆಗ್ರಹಿಸಿ ಬೃಹತ್ ಜನ ಜಾಗೃತಿ ಸಮಾವೇಷ ನ. 06ರಂದು ಸಂಜೆ ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಶ್ರೀಕ್ಷೇತ್ರ ಕಾರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಉಪಸ್ಥಿತರಿರಲಿದ್ದು, ಜಾಗೃತಿ ಸಂದೇಶವನ್ನು ನೀಡಲಿದ್ದಾರೆ. ವಿ.ಹಿಂ.ಪ ಕರ್ನಾಟಕ ದಕ್ಷಿಣ

ಕಡಬ: ನಾಳೆ (ನ.06) ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಜನಜಾಗೃತಿ ಸಮಾವೇಶ Read More »

ಕರಾವಳಿ, ಕರ್ನಾಟಕ

ಟ್ರಾಕ್ಟರ್ ಚಕ್ರದಡಿ ಸಿಲುಕಿ ತಾಯಿ- ಮಗು ದಾರುಣ ಮೃತ್ಯು

(ನ್ಯೂಸ್ ಕಡಬ) newskadaba.com ರಾಯಚೂರು, ನ. 04. ಟ್ರ್ಯಾಕ್ಟರ್ ನಡಿಗೆ ಸಿಲುಕಿ ತಾಯಿ, ಮಗು ಮೃತಪಟ್ಟ ದಾರುಣ ಘಟನೆ ಮನ್ಸಲಾಪುರ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಮಹಾರಾಷ್ಟ್ರ ಮೂಲದ ಕಾರ್ಮಿಕ ಮಹಿಳೆ ವೈಶಾಲಿ(26) ಹಾಗೂ ಸಮರ್ಥ(3) ಎಂದು ಗುರುತಿಸಲಾಗಿದೆ. ಹತ್ತಿ ತುಂಬಿದ್ದ ಟ್ರಾಕ್ಟರ್ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮಗು ಟ್ರಾಕ್ಟರ್ ನಡಿಗೆ ಸಿಲುಕುವ ಭಯದಿಂದ ರಕ್ಷಣೆಗೆ ಮುಂದಾದ ತಾಯಿಯು ಮಗುವಿನ ಜೊತೆಗೆ ಟ್ರಾಕ್ಟರ್ ನಡಿಗೆ ಸಿಲುಕಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ

ಟ್ರಾಕ್ಟರ್ ಚಕ್ರದಡಿ ಸಿಲುಕಿ ತಾಯಿ- ಮಗು ದಾರುಣ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ, ಪುತ್ತೂರು ವ್ಯಾಪ್ತಿಯ ಶಾಲೆಯಲ್ಲಿ ಖಾಲಿಯಿರುವ ಹುದ್ದೆಗೆ ಅತಿಥಿ ಶಿಕ್ಷಕರ ಬೇಡಿಕೆ ➤ ಸಚಿವರಿಗೆ ಮನವಿ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 04. ಪುತ್ತೂರು ಹಾಗೂ ಕಡಬ ವ್ಯಾಪ್ತಿಯಲ್ಲಿರುವ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ಒದಗಿಸುವಂತೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಹೊಸ ಕಟ್ಟಡಕ್ಕೆ ಅನುದಾನ ಮಂಜೂರು ಹಾಗೂ ಹೊಸ ಜೀಪು ಒದಗಿಸುವಂತೆ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಮನವಿ ಸಲ್ಲಿಸಿದರು.

ಕಡಬ, ಪುತ್ತೂರು ವ್ಯಾಪ್ತಿಯ ಶಾಲೆಯಲ್ಲಿ ಖಾಲಿಯಿರುವ ಹುದ್ದೆಗೆ ಅತಿಥಿ ಶಿಕ್ಷಕರ ಬೇಡಿಕೆ ➤ ಸಚಿವರಿಗೆ ಮನವಿ Read More »

ಕರಾವಳಿ, ಕರ್ನಾಟಕ

ಯುವಕನ ಅಟ್ಟಾಡಿಸಿ ಕೊಲೆಗೈದ ದುಷ್ಕರ್ಮಿಗಳ ತಂಡ..!

(ನ್ಯೂಸ್ ಕಡಬ) newskadaba.com ಕಲಬುರ್ಗಿ, ನ. 04. ಬೆಳ್ಳಂಬೆಳಿಗ್ಗೆ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಹತ್ಯೆಯಾದವರನ್ನು ವಿದ್ಯಾನಗರ ನಿವಾಸಿ ಪೊಲೀಸ್ ಪೇದೆ ಚಂದ್ರಕಾಂತ್ ಎಂಬವರ ಮಗ ಅಭಿಷೇಕ್(27) ಎಂದು ಗುರುತಿಸಲಾಗಿದೆ. ಅಭಿಷೇಕ್ ಜಿಮ್ ಗೆಂದು ಮನೆಯಿಂದ ಬೈಕ್ ಮೂಲಕ ತೆರಳಿದ್ದು, ಈ ವೇಳೆ ಆತನನ್ನು ಬೆನ್ನಟ್ಟಿದ ಏಳೆಂಟು ಜನರ ದುಷ್ಕರ್ಮಿಗಳ ಗುಂಪೊಂದು ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ದಾರೆ ಎನ್ಮಲಾಗಿದೆ.

ಯುವಕನ ಅಟ್ಟಾಡಿಸಿ ಕೊಲೆಗೈದ ದುಷ್ಕರ್ಮಿಗಳ ತಂಡ..! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಲ್ಯೊಡ್ ತುಲು ಲಿಪಿ ಪುದರ್ ಪಲವೆ ಪಾಡೆರಗ್ ಬಿನ್ನಪು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ನ. 04. ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಲ್ಯೊಡ್ ತುಲು ಲಿಪಿ ಪುದರ್ ಪಲವೆ ಪಾಡೊಡು ಪಂದ್ ದೇವಲ್ಯದ ಕಾರ್ಯನಿರ್ವಹಣಾಧಿಕಾರಿ ಲಿಂಗಯ್ಯ ಬುಕ್ಕ ವ್ಯವಸ್ಥಾಪನಾ ಸಮಿತಿದ ಗುರ್ಕಾರ್ಲಾಯಿನ ಮೋಹನ್ ರಾಮ್ ಸುಳ್ಳಿ ಮೆರೆಗ್ ಜೈ ತುಲುನಾಡ್ (ರಿ.) ಸುಳ್ಯ ಎಗ್ಗೆದ ಪದುಕೆರ್ ತೇದಿ ಸೋಮಾರದಾನಿ ಭಿನ್ನಾಪು ಮಲ್ತೆರ್. ಅಂಚೆನೇ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಲ್ಯೊದ ಲೋಗೊಡ್‌ಲ ತುಳು ಬರವು ಪಾಡೊಡು ಅವ್ವೆ ರೀತಿ ದೇವಾಲ್ಯೊದ ಲೆಪ್ಪೋಲೆಲೆನ್ ತುಲು ಲಿಪಿ ಬೊಕ್ಕ ತುಳು ಬಾಸೆಡ್

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಲ್ಯೊಡ್ ತುಲು ಲಿಪಿ ಪುದರ್ ಪಲವೆ ಪಾಡೆರಗ್ ಬಿನ್ನಪು Read More »

ಕರಾವಳಿ, ಕರ್ನಾಟಕ

ಆಂಬ್ಯುಲೆನ್ಸ್ ಮೂಲಕ 200 ಕೆಜಿ ಗಾಂಜಾ ಸಾಗಾಟ ➤ ಪೊಲೀಸರಿಂದ ಭರ್ಜರಿ ಬೇಟೆ

(ನ್ಯೂಸ್ ಕಡಬ) newskadaba.com ಚೆನ್ನೈ, ನ. 04. ಆಂಬ್ಯುಲೆನ್ಸ್ ವೊಂದರಲ್ಲಿ 200 ಕೆಜಿ ಗಾಂಜಾ ಕಳ್ಳ ಸಾಗಣೆ ಮಾಡುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ. ತಂಜಾವೂರು ಮೂಲಕ ಶ್ರೀಲಂಕಾಕ್ಕೆ ಅಪಾರ ಪ್ರಮಾಣದ ಗಾಂಜಾ ಸಾಗಾಟವಾಗುತ್ತಿರುವ ಬಗ್ಗೆ ಸುಳಿವು ಮೂಲಕ ನೀಡಿದ ಮಾಹಿತಿಯಂತೆ ಪೊಲೀಸರು ಶೋಧಕಾರ್ಯ ಆರಂಭಿಸಿ, ಆಂಬ್ಯುಲೆನ್ಸ್ ಅನ್ನು ತಡೆ ಹಿಡಿದಿದ್ದರು. ಈ ಸಂದರ್ಭ ಅದರ ಚಾಲಕ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದು, ಪೊಲೀಸರು ವಾಹನವನ್ನು ತಪಾಸಣೆ ನಡೆಸಿದಾಗ ಹಲವು ಚೀಲಗಳಲ್ಲಿ 200 ಕಿಲೋ ಗಾಂಜಾ ಪತ್ತೆಯಾಗಿದೆ.

ಆಂಬ್ಯುಲೆನ್ಸ್ ಮೂಲಕ 200 ಕೆಜಿ ಗಾಂಜಾ ಸಾಗಾಟ ➤ ಪೊಲೀಸರಿಂದ ಭರ್ಜರಿ ಬೇಟೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜ್ವರದಿಂದ ಬಳಲುತ್ತಿದ್ದ ಬಾಲಕಿಗೆ ಧಾರ್ಮಿಕ ವಿಧಿವಿಧಾನದ ಮೂಲಕ ಚಿಕಿತ್ಸೆ..! ➤ ತಂದೆಯ ಮೂಢನಂಬಿಕೆಗೆ ಬಲಿಯಾದ ಪುತ್ರಿ- ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ತಿರುವನಂತಪುರಂ, ನ. 04. ತಂದೆಯೋರ್ವನ ಮೂಢನಂಬಿಕೆಗೆ 11 ವರ್ಷದ ಪುತ್ರಿ ಬಲಿಯಾದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಫಾತಿಮಾ ಎಂದು ಗುರುತಿಸಲಾಗಿದೆ. ಬಾಲಕಿಯ ತಂದೆ ಸತ್ತಾರ್ ರವರ ಮೂಢನಂಬಿಕೆಯಿಂದಾಗಿ ಬಾಲಕಿ ಮೃತಪಟ್ಟಿರುವುದು ತಿಳಿದುಬಂದಿದೆ. ಬಾಲಕಿ ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯದ ತಂದೆ, ಮಸೀದಿ ಇಮಾಮ್ ರ​ ಬಳಿ ಕರೆದೊಯ್ದು, ಧಾರ್ಮಿಕ ವಿಧಿವಿಧಾನಗಳ ಮೂಲಕ ಚಿಕಿತ್ಸೆ ಕೊಡಿಸಲು ಮುಂದಾಗಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಫಾತಿಮಾ ಮೃತಪಟ್ಟಿದ್ದಾಳೆ.

ಜ್ವರದಿಂದ ಬಳಲುತ್ತಿದ್ದ ಬಾಲಕಿಗೆ ಧಾರ್ಮಿಕ ವಿಧಿವಿಧಾನದ ಮೂಲಕ ಚಿಕಿತ್ಸೆ..! ➤ ತಂದೆಯ ಮೂಢನಂಬಿಕೆಗೆ ಬಲಿಯಾದ ಪುತ್ರಿ- ಇಬ್ಬರ ಬಂಧನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಬಸ್ ನಲ್ಲಿ ಯುವತಿಯರ ವೀಡಿಯೋ ಚಿತ್ರೀಕರಿಸಿದ ವಿಕೃತಕಾಮಿಗೆ ಥಳಿತ ➤ ಆರೋಪಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 04. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಹೋದರಿಯರಿಬ್ಬರ ವೀಡಿಯೋವನ್ನು ಮೊಬೈಲ್ ಮೂಲಕ ಚಿತ್ರೀಕರಿಸಿರುವ ಕಾಮುಕನೋರ್ವನನ್ನು ಪ್ರಯಾಣಿಕರೇ ಸೇರಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಜಪ್ಪಿನಮೊಗರುವಿನಲ್ಲಿ ನಡೆದಿದೆ. ಆರೋಪಿ ಮಡಿಕೇರಿ ಮೂಲದ ಮಹಮ್ಮದ್ ಯೂಸುಫ್ ಎಂದು ಗುರುತಿಸಲಾಗಿದೆ. ಸಹೋದರಿಯರಿಬ್ಬರು ತಲಪಾಡಿಯಿಂದ ಮಂಗಳೂರು ಕಡೆಗೆ ಬಸ್ ನಲ್ಲಿ ತೆರಳುತ್ತಿದ್ದ ವೇಳೆ ಆರೋಪಿ ಯೂಸುಫ್ ತೊಕ್ಕೊಟ್ಟಿನಲ್ಲಿ ಬಸ್ ಹತ್ತಿದ್ದು, ಬಳಿಕ ಚಾಲಕನ ಹತ್ತಿರದ ಕ್ಯಾಬಿನ್‌ ಸೀಟಲ್ಲಿ ಕುಳಿತಿದ್ದ ಸಹೋದರಿಯರಿಬ್ಬರ ವೀಡಿಯೋವನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ.

ಮಂಗಳೂರು: ಬಸ್ ನಲ್ಲಿ ಯುವತಿಯರ ವೀಡಿಯೋ ಚಿತ್ರೀಕರಿಸಿದ ವಿಕೃತಕಾಮಿಗೆ ಥಳಿತ ➤ ಆರೋಪಿ ಪೊಲೀಸ್ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

‘ಅಪ್ಪು’ ಅಗಲಿಕೆ ಬೆನ್ನಲ್ಲೇ ಬ್ಲೇಡ್ ನಲ್ಲಿ ಅಪ್ಪು ಎಂದು ಕುಯ್ದುಕೊಂಡು ಅಸ್ವಸ್ಥಳಾದ ವಿದ್ಯಾರ್ಥಿನಿ..! ➤ “ಐ ಲವ್ ಯೂ, ಐ ವಾಂಟ್ ಯೂ ಅಪ್ಪು” ಎಂದು ರಕ್ತದಲ್ಲೇ ಬರೆದುಕೊಂಡ ಅಭಿಮಾನಿ

(ನ್ಯೂಸ್ ಕಡಬ) newskadaba.com ಚಾಮರಾಜನಗರ, ನ. 04. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನಿಧನದ ಬೆನ್ನಲ್ಲೇ, ನೊಂದ ಪುನೀತ್ ಅಭಿಮಾನಿಗಳು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ನಡುವೆ ಅಗಲಿದ ಅಪ್ಪು ಹೆಸರನ್ನು ವಿದ್ಯಾರ್ಥಿನಿಯೋರ್ವಳು ಬ್ಲೇಡ್​ ಮೂಲಕ ತನ್ನ ಕೈ ಮೇಲೆ ಬರೆದುಕೊಂಡಿದ್ದು, ಪರಿಣಾಮ ಆಕೆ ಅಸ್ವಸ್ಥಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಚಾಮರಾಜನಗರ ಮೈಸೂರಿನ ಹಾಸ್ಟೆಲ್​ವೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಈಕೆ, ನಟನ ಅಗಲಿಕೆಯಿಂದ ತೀವ್ರ ಆಘಾತಕ್ಕೊಳಗಾಗಿ ಬ್ಲೇಡ್​ನಲ್ಲಿ ಕೈ ಕೊಯ್ದುಕೊಂಡು ‘ಅಪ್ಪು’ ಎಂದು

‘ಅಪ್ಪು’ ಅಗಲಿಕೆ ಬೆನ್ನಲ್ಲೇ ಬ್ಲೇಡ್ ನಲ್ಲಿ ಅಪ್ಪು ಎಂದು ಕುಯ್ದುಕೊಂಡು ಅಸ್ವಸ್ಥಳಾದ ವಿದ್ಯಾರ್ಥಿನಿ..! ➤ “ಐ ಲವ್ ಯೂ, ಐ ವಾಂಟ್ ಯೂ ಅಪ್ಪು” ಎಂದು ರಕ್ತದಲ್ಲೇ ಬರೆದುಕೊಂಡ ಅಭಿಮಾನಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top