ಟ್ರಾಕ್ಟರ್ ಚಕ್ರದಡಿ ಸಿಲುಕಿ ತಾಯಿ- ಮಗು ದಾರುಣ ಮೃತ್ಯು



(ನ್ಯೂಸ್ ಕಡಬ) newskadaba.com ರಾಯಚೂರು, ನ. 04. ಟ್ರ್ಯಾಕ್ಟರ್ ನಡಿಗೆ ಸಿಲುಕಿ ತಾಯಿ, ಮಗು ಮೃತಪಟ್ಟ ದಾರುಣ ಘಟನೆ ಮನ್ಸಲಾಪುರ ಎಂಬಲ್ಲಿ ನಡೆದಿದೆ.







ಮೃತಪಟ್ಟವರನ್ನು ಮಹಾರಾಷ್ಟ್ರ ಮೂಲದ ಕಾರ್ಮಿಕ ಮಹಿಳೆ ವೈಶಾಲಿ(26) ಹಾಗೂ ಸಮರ್ಥ(3) ಎಂದು ಗುರುತಿಸಲಾಗಿದೆ. ಹತ್ತಿ ತುಂಬಿದ್ದ ಟ್ರಾಕ್ಟರ್ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮಗು ಟ್ರಾಕ್ಟರ್ ನಡಿಗೆ ಸಿಲುಕುವ ಭಯದಿಂದ ರಕ್ಷಣೆಗೆ ಮುಂದಾದ ತಾಯಿಯು ಮಗುವಿನ ಜೊತೆಗೆ ಟ್ರಾಕ್ಟರ್ ನಡಿಗೆ ಸಿಲುಕಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ರಾಕ್ಟರ್ ಚಾಲಕ ಮಂಗೇಶ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.






error: Content is protected !!
Scroll to Top