News Kadaba Desk

ವಾಹನ ಸವಾರರಿಗೆ ಗುಡ್ ನ್ಯೂಸ್ ಟ್ರಾಫಿಕ್ ದಂಡ ಪಾವತಿಗೆ ಮತ್ತೆ ಶೇ.50 ರಷ್ಟು ಡಿಸ್ಕೌಂಟ್ ಘೋಷಣೆ

(ನ್ಯೂಸ್‌ ಕಡಬ) newskadaba.com,  ಜೂ.05: ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ಮತ್ತೊಮ್ಮೆ ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50 ರಷ್ಟು ರಿಯಾಯಿತಿ ಘೋಷಿಸಿ ಗುರುವಾರ ಆದೇಶಿಸಿದೆ. ಈ ಹಿಂದೆ ಶೇ. 50ರಷ್ಟು ರಿಯಾಯಿತಿ ನೀಡಿ ಭಾರಿ ಮೊತ್ತದ ದಂಡ ಸಂಗ್ರಹಿಸಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಮ್ಮೆ ರಿಯಾಯಿತಿ ಘೋಷಣೆ ಮಾಡಿದ್ದು, ಜೂನ್ 21 ರಿಂದ ಜುಲೈ 10ರವರೆಗೆ ದಂಡದ ಅರ್ಧದಷ್ಟು ಹಣ ಪಾವತಿಸಲು […]

ವಾಹನ ಸವಾರರಿಗೆ ಗುಡ್ ನ್ಯೂಸ್ ಟ್ರಾಫಿಕ್ ದಂಡ ಪಾವತಿಗೆ ಮತ್ತೆ ಶೇ.50 ರಷ್ಟು ಡಿಸ್ಕೌಂಟ್ ಘೋಷಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಶೇಷ ಲೇಖನ “ವಿಶ್ವ ಪರಿಸರ ದಿನ ಜೂನ್ – 5” ಡಾ.ಚೂಂತಾರು

(ನ್ಯೂಸ್ ಕಡಬ) newskadaba.com ಜೂ. 05. ಇಂದು ಜೂನ್ 5 ವಿಶ್ವ ಪರಿಸರ ದಿನ. ಇದರಲ್ಲೇನಿದೆ ವಿಶೇಷ ಬಿಡಿ. ಪ್ರತಿ ದಿನಕ್ಕೂ ಒಂದು ವಿಶೇಷವಿದ್ದೇ ಇರುತ್ತದೆ. ಆದರೆ ಇವತ್ತು ಮಾತ್ರ ನಾವು ಗಂಭೀರವಾಗಿ ಚಿಂತನೆಗೆ ಹಚ್ಚಿಕೊಳ್ಳಬೇಕಾದ ವಿಶೇಷ ದಿನ.  ವಿಶ್ವಸಂಸ್ಥೆಯ ಪರಿಸರ ಸಂರಕ್ಷಣೆ ಕಾರ್ಯಕ್ರಮದ ಮುಖಾಂತರ ಜಗತಿನಾದ್ಯಂತ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸಲು ಸಾಂಕೇತಿಕವಾಗಿ ಜೂನ್ 5ರಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. 1972ರಲ್ಲಿ ಸ್ವೀಡನ್ ದೇಶದ ರಾಜಧಾನಿ ಸ್ಟಾಕ್‍ಹೋಮ್‍ನಲ್ಲಿ ನಡೆದ ವಿಶ್ವಸಂಸ್ಥೆಯ ಸಂಮ್ಮೇಳನದ ನೆನಪಿನಲ್ಲಿ ಜೂನ್

ವಿಶೇಷ ಲೇಖನ “ವಿಶ್ವ ಪರಿಸರ ದಿನ ಜೂನ್ – 5” ಡಾ.ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಮಂಗಳೂರು: ಜೂನ್ 15 ರಿಂದ ವಿಶೇಷ ಮಾನ್ಸೂನ್ ವೇಳಾಪಟ್ಟಿ ಪ್ರಕಟಿಸಿದ ಕೊಂಕಣ ರೈಲ್ವೆ

(ನ್ಯೂಸ್‌ ಕಡಬ) newskadaba.com, ಜೂ.04: ಕೊಂಕಣ ರೈಲ್ವೆ ಮಾರ್ಗದಲ್ಲಿ ಮುಂಗಾರು ಮಳೆಯ ಅವಧಿಯಲ್ಲಿ ರೈಲುಗಳ ಸುರಕ್ಷಿತ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಮಹತ್ವದ ನಿರ್ಧಾರ ಕೈಗೊಂಡಿದೆ…….. ಈ ಮಾರ್ಗದಲ್ಲಿ ಚಲಿಸುವ ರೈಲುಗಳಿಗಾಗಿ ವಿಶೇಷ ಮುಂಗಾರು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಹೊಸ ವೇಳಾಪಟ್ಟಿಯು ಜೂನ್ 15, 2026 ರಿಂದ ಜಾರಿಗೆ ಬರಲಿದ್ದು, ಅಕ್ಟೋಬರ್ 20, 2026 ರವರೆಗೆ ಜಾರಿಯಲ್ಲಿರಲಿದೆ. ಪಶ್ಚಿಮ ಕರಾವಳಿ ಮತ್ತು ಕೊಂಕಣ ಭಾಗದಲ್ಲಿ ಮುಂಗಾರು ಮಳೆಯು ಅತ್ಯಂತ ಭೀಕರವಾಗಿರುತ್ತದೆ. ಈ ಅವಧಿಯಲ್ಲಿ ಗುಡ್ಡ

ಮಂಗಳೂರು: ಜೂನ್ 15 ರಿಂದ ವಿಶೇಷ ಮಾನ್ಸೂನ್ ವೇಳಾಪಟ್ಟಿ ಪ್ರಕಟಿಸಿದ ಕೊಂಕಣ ರೈಲ್ವೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚೆಸ್ ಟೂರ್ನಮೆಂಟ್ 19 ವರ್ಷಗಳ ಹಿಂದಿನ ವಿಶ್ವನಾಥ ಆನಂದ್ ರವರ ದಾಖಲೆ ಮುರಿದ ಪ್ರಜ್ಞಾನಂದ

(ನ್ಯೂಸ್ ಕಡಬ) newskadaba.com ಜೂ. 04. ನಾರ್ವೆ ಚೆಸ್ 2026 ಟೂರ್ನಮೆಂಟ್‌ ನಲ್ಲಿ ಭಾರತದ ಯುವ ಚೆಸ್ ತಾರೆ 20 ವರ್ಷದ ಆರ್. ಪ್ರಜ್ಞಾನಂದ ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನೇ ಅವರ ತವರಿನಲ್ಲಿ ಎರಡು ಬಾರಿ ಸೋಲಿಸುವ ಮೂಲಕ, ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ಐತಿಹಾಸಿಕ ದಾಖಲೆಯನ್ನು ಪ್ರಜ್ಞಾನಂದ ಮುರಿದಿದ್ದಾರೆ. ಈ ಮೂಲಕ ಒಂದೇ ಕ್ಲಾಸಿಕಲ್ ಟೂರ್ನಮೆಂಟ್‌ ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು

ಚೆಸ್ ಟೂರ್ನಮೆಂಟ್ 19 ವರ್ಷಗಳ ಹಿಂದಿನ ವಿಶ್ವನಾಥ ಆನಂದ್ ರವರ ದಾಖಲೆ ಮುರಿದ ಪ್ರಜ್ಞಾನಂದ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ತಿರುಮಲದಲ್ಲಿ ದಾಖಲೆ ಬರೆದ ಶ್ರೀವಾರಿ ಪ್ರಸಾದ: ಮೇ ತಿಂಗಳಲ್ಲಿ 1.21 ಕೋಟಿಗೂ ಅಧಿಕ ಲಡ್ಡು ಮಾರಾಟ!

(ನ್ಯೂಸ್‌ ಕಡಬ) newskadaba.com, ಜೂ.04: ಕಲಿಯುಗದ ಪ್ರತ್ಯಕ್ಷ ದೈವವೆಂದು ಆರಾಧಿಸಲ್ಪಡುವ ಶ್ರೀ ವೆಂಕಟೇಶ್ವರ ಸ್ವಾಮಿಯ ಪರಮ ಪವಿತ್ರ ಪ್ರಸಾದವಾದ ತಿರುಮಲ ತಿರುಪತಿ ಲಡ್ಡು ಮತ್ತೊಮ್ಮೆ ಹೊಸ ಇತಿಹಾಸ ನಿರ್ಮಿಸಿದೆ. ವಿಶ್ವದಾದ್ಯಂತದ ಕೋಟ್ಯಂತರ ಭಕ್ತರ ನಂಬಿಕೆ ಹಾಗೂ ಭಕ್ತಿಯ ಪ್ರತೀಕವಾಗಿರುವ ಶ್ರೀವಾರಿ ಲಡ್ಡು, 2026ರ ಮೇ ತಿಂಗಳಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದ್ದು, ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.   ತಿರುಮಲ ತಿರುಪತಿ ದೇವಸ್ಥಾನಂ (TTD) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, 2024ರ ಮೇ ತಿಂಗಳಲ್ಲಿ 1.01 ಕೋಟಿ ಲಡ್ಡುಗಳು

ತಿರುಮಲದಲ್ಲಿ ದಾಖಲೆ ಬರೆದ ಶ್ರೀವಾರಿ ಪ್ರಸಾದ: ಮೇ ತಿಂಗಳಲ್ಲಿ 1.21 ಕೋಟಿಗೂ ಅಧಿಕ ಲಡ್ಡು ಮಾರಾಟ! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆನ್‌ಲೈನ್ ಜೂಜಾಟ ನಿಯಂತ್ರಣಕ್ಕೆ ಸುಪ್ರೀಂ ಅಸ್ತು: ರಾಜ್ಯ ಸರ್ಕಾರಗಳ ನಿಷೇಧ ಕಾಯ್ದೆ ಸಿಂಧು

(ನ್ಯೂಸ್‌ ಕಡಬ) newskadaba.com, ಜೂ.04: ಆನ್‌ಲೈನ್ ಗೇಮಿಂಗ್ ಮತ್ತು ಜೂಜಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ನಿಂದ ಭಾರಿ ಜಯ ಸಿಕ್ಕಿದೆ. ಹಣ ಅಥವಾ ಪಣವನ್ನು ಒಡ್ಡಿ ಆಡುವ ಆನ್‌ಲೈನ್ ಕೌಶಲ್ಯದ ಆಟಗಳ ಮೇಲಿನ ಬೆಟ್ಟಿಂಗ್‌ಗೆ ಯಾವುದೇ ಸಾಂವಿಧಾನಿಕ ರಕ್ಷಣೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇದರೊಂದಿಗೆ, ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ಅನ್ನು ನಿಷೇಧಿಸುವ ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳ ಕಾನೂನುಗಳ ಸಿಂಧುತ್ವವನ್ನು ದೇಶದ ಅತ್ಯುನ್ನತ

ಆನ್‌ಲೈನ್ ಜೂಜಾಟ ನಿಯಂತ್ರಣಕ್ಕೆ ಸುಪ್ರೀಂ ಅಸ್ತು: ರಾಜ್ಯ ಸರ್ಕಾರಗಳ ನಿಷೇಧ ಕಾಯ್ದೆ ಸಿಂಧು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ಅರಣ್ಯ ಅಧಿಕಾರಿ ಜೀಪ್‌ ಕಳವು – ಆರೋಪಿ ಆರೆಸ್ಟ್

(ನ್ಯೂಸ್‌ ಕಡಬ) newskadaba.com, ಜೂ.04: ಪಡೀಲ್‌ನ ಅರಣ್ಯ ಇಲಾಖೆಯ ವಸತಿ ಗೃಹದ ಬಳಿ ನಿಲ್ಲಿಸಿದ್ದ ಅರಣ್ಯ ಸಂಚಾರಿದಳದ RFO ಜೀಪನ್ನು ಕದ್ದು ಕುಂದಾಪುರದತ್ತ ತೆಗೆದು ಕೊಂಡು ಹೋಗಿದ್ದ ವಿದೇಶದಲ್ಲಿ ಉದ್ಯೋದಲ್ಲಿದ್ದ ಆರೋಪಿಯನ್ನು ಕುಂದಾಪುರ ಅರಣ್ಯ ಇಲಾಖೆ ಅಧಿಕಾರಿಗಳು ಕೋಟೇಶ್ವರ ಸಮೀಪದ ಮೂಡುಗೋಪಾಡಿಯಲ್ಲಿ ಬಂಧಿಸಿದ್ದಾರೆ. ಕೇರಳದ ಕೋಯಿಕ್ಕೋಡ್ ಜಿಲ್ಲೆಯ ನದೀಮ್ (23) ಬಂಧಿತ ಆರೋಪಿ. ಘಟನೆ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಮಂಗಳೂರು : ಅರಣ್ಯ ಅಧಿಕಾರಿ ಜೀಪ್‌ ಕಳವು – ಆರೋಪಿ ಆರೆಸ್ಟ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಭಾರತೀಯ ಬಾಂಡ್‌ಗಳ ಮೇಲಿನ ಬಂಡವಾಳ ಲಾಭ ತೆರಿಗೆ ರದ್ದು ವಿದೇಶಿ ಹೂಡಿಕೆ ಆಕರ್ಷಿಸಲು ಕೇಂದ್ರದ ಮಾಸ್ಟರ್ ಪ್ಲಾನ್

(ನ್ಯೂಸ್‌ ಕಡಬ) newskadaba.com, ಜೂ.04: ವಿದೇಶಿ ಹೂಡಿಕೆ ಆಕರ್ಷಿಸಲು ಕೇಂದ್ರದ ಮಾಸ್ಟರ್ ಪ್ಲಾನ್: ಸರ್ಕಾರಿ ಬಾಂಡ್‌ಗಳ ಮೇಲಿನ ಬಂಡವಾಳ ಲಾಭ ತೆರಿಗೆ ಸಂಪೂರ್ಣ ರದ್ದು!   ನವದೆಹಲಿ: ದೇಶದ ಆರ್ಥಿಕತೆಯನ್ನು ಬಲಪಡಿಸಲು ಮತ್ತು ವಿದೇಶಿ ಬಂಡವಾಳವನ್ನು ದೊಡ್ಡ ಪ್ರಮಾಣದಲ್ಲಿ ಆಕರ್ಷಿಸಲು ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ನಿರ್ಧಾರವೊಂದನ್ನು ಕೈಗೊಂಡಿದೆ. ಭಾರತೀಯ ಸರ್ಕಾರಿ ಬಾಂಡ್‌ಗಳಲ್ಲಿ (Government Securities – G-Secs) ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರ ಮೇಲಿನ ಬಂಡವಾಳ ಲಾಭ ತೆರಿಗೆಯನ್ನು (Capital Gains Tax)

ಭಾರತೀಯ ಬಾಂಡ್‌ಗಳ ಮೇಲಿನ ಬಂಡವಾಳ ಲಾಭ ತೆರಿಗೆ ರದ್ದು ವಿದೇಶಿ ಹೂಡಿಕೆ ಆಕರ್ಷಿಸಲು ಕೇಂದ್ರದ ಮಾಸ್ಟರ್ ಪ್ಲಾನ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಳೆಗಾಲ ಎದುರಿಸಲು ಮೆಸ್ಕಾಂ ಸಜ್ಜು- 489 ಮಂದಿಯ ವಿಶೇಷ ಕಾರ್ಯಪಡೆ ನಿಯೋಜನೆ

(ನ್ಯೂಸ್ ಕಡಬ) newskadaba.com ಜೂ. 04.  ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯದ ಸವಾಲುಗಳನ್ನು ಎದುರಿಸಲು ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಸನ್ನದ್ಧವಾಗಿದ್ದು, ಮೆಸ್ಕಾಂ ವ್ಯಾಪ್ತಿಗೆ ಬರುವ ನಾಲ್ಕು ಜಿಲ್ಲೆಗಳ 14 ವಿಭಾಗಗಳಲ್ಲಿ ಒಟ್ಟು 489 ಸಿಬ್ಬಂದಿಗಳನ್ನು ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳಲು ಕಾರ್ಯಪಡೆಗಳಲ್ಲಿ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ 62 ವಾಹನಗಳ ವ್ಯವಸ್ಥೆ ಮಾಡಲಾಗಿದೆ ಮತ್ತು ದೂರವಾಣಿ ಕರೆಗಳು ಮತ್ತು ದೂರುಗಳನ್ನು ನಿರ್ವಹಿಸಲು 23 ಸಿಬ್ಬಂದಿಯ ವಿಶೇಷ ತಂಡವನ್ನು ರಚಿಸಲಾಗಿದೆ.   ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುರ್ತು ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಅತ್ತಾವರದಲ್ಲಿ

ಮಳೆಗಾಲ ಎದುರಿಸಲು ಮೆಸ್ಕಾಂ ಸಜ್ಜು- 489 ಮಂದಿಯ ವಿಶೇಷ ಕಾರ್ಯಪಡೆ ನಿಯೋಜನೆ Read More »

ಕರಾವಳಿ

ಜೂ.28 ರಿಂದ ಜು. 01ರ ವರೆಗೆ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನ

(ನ್ಯೂಸ್‌ ಕಡಬ) newskadaba.com, ಜೂ.04: ಜಿಲ್ಲೆಯಲ್ಲಿ ಜೂನ್‌ 28 ರಿಂದ ಜುಲೈ 01 ರವರೆಗೆ ರಾಷ್ಟ್ರೀಯ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪೋಷಕರು ತಮ 0-5 ವರ್ಷದೊಳಗಿನ ಮಕ್ಕಳನ್ನು ಹತ್ತಿರದ ಪೊಲಿಯೋ ಬೂತ್‌ಗಳಿಗೆ ಕರೆದುಕೊಂಡು ಬಂದು ಉಚಿತ ಪೊಲಿಯೋ ಲಸಿಕೆಯನ್ನು ತಪ್ಪದೆ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಡಾ ಕೆ.ಎನ್‌.ಅನುರಾಧ ಹೇಳಿದರು. ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಟಾಸ್ಕ್‌ ಪೋರ್ಸ್‌ ಸಮಿತಿ ಸಭೆಯ

ಜೂ.28 ರಿಂದ ಜು. 01ರ ವರೆಗೆ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top