Keerthana

ಸಿಎಂ ಬೆಂಗಾವಲು ವಾಹನ ಢಿಕ್ಕಿ: ನಾಲ್ವರಿಗೆ ಗಾಯ

ಬೆಂಗಳೂರು, ಜ.1: ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಗಾವಲು ವಾಹನ ಬೇರೆ ಎರಡು ವಾಹನಗಳಿಗೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ  ಬೆಂಗಳೂರಿನ ಯಶವಂತಪುರ ಮೇಲ್ಸೇತುವೆ ಬಳಿ ನಡೆದಿದೆ. ತುಮಕೂರಿಗೆ ಪ್ರಧಾನಿ ಆಗಮಿಸಲಿರುವ ಹಿನ್ನಲೆಯಲ್ಲಿ ಭದ್ರತೆ ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಹೊರಟಿದ್ದರು. ಯಶವಂತಪುರ ಮೇಲ್ಸೇತುವೆ ಬಳಿ ಬೆಳಗ್ಗೆ 11 ಗಂಟೆಗೆ ಹೋಗುತ್ತಿರಬೇಕಾದರೆ ಹಿಂದಿನಿಂದ ಬರುತ್ತಿದ್ದ ಬೆಂಗಾವಲು ಪಡೆ ಕಾರಿನ ಚಾಲಕ ವಿನಯ್ ಕುಮಾರ್ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದ್ದಾರೆನ್ನಲಾಗಿದೆ. ಕಾರು ವಿಭಜಕಕ್ಕೆ ಹೊಡೆದು ನುಗ್ಗಿ […]

ಸಿಎಂ ಬೆಂಗಾವಲು ವಾಹನ ಢಿಕ್ಕಿ: ನಾಲ್ವರಿಗೆ ಗಾಯ Read More »

ಕರ್ನಾಟಕ

ತಲಪಾಡಿ: ಟೋಲ್ ವಸೂಲಿ ಮಾಡದಂತೆ ಆಗ್ರಹಿಸಿ ಬಿಜೆಪಿ ಧರಣಿ

ಉಳ್ಳಾಲ, ಜ.1: ಪಂಪ್ ವೆಲ್ ಮೇಲ್ಸೆತುವೆ ಕಾಮಗಾರಿ  ಪೂರ್ಣಗೊಳ್ಳದ ಹಿನ್ನೆಲೆ ತಲಪಾಡಿ ಟೋಟ್ ಗೇಟ್ ನಲ್ಲಿ ಸುಂಕ ಸಂಗ್ರಹ ಮಾಡಬಾರದೆಂದು ಆಗ್ರಹಿಸಿ ಬಿಜೆಪಿ ಧರಣಿ ನಡೆಸಿದೆ. ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ನೇತೃತ್ವದಲ್ಲಿ ತಲಪಾಡಿ ಟೋಲ್ ಎದುರು ಧರಣಿ ನಡೆಸಿದರು. ಬಿಜೆಪಿ ಕಾರ್ಯಕರ್ತರು  ತಲಪಾಡಿ  ಟೋಲ್ ಗೇಟ್ ನಲ್ಲಿ ಗೇಟುಗಳ ಕಟ್ಟಿ ಹಾಕಿ, ವಾಹನಗಳನ್ನು ಉಚಿತವಾಗಿ ಬಿಡಲಾಗುತ್ತಿದೆ.

ತಲಪಾಡಿ: ಟೋಲ್ ವಸೂಲಿ ಮಾಡದಂತೆ ಆಗ್ರಹಿಸಿ ಬಿಜೆಪಿ ಧರಣಿ Read More »

ಕರಾವಳಿ

ಉಡುಪಿ ನೂತನ ಎಸ್ಪಿಯಾಗಿ ಅಕ್ಷಯ್ ಮಚ್ಚೀಂದ್ರ

ಉಡುಪಿ, ಜ.1: ಉಡುಪಿಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಕ್ಷಯ್‌ ಮಚ್ಚೀಂದ್ರ ಹಾಕೆಯನ್ನು ನಿಯುಕ್ತಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಅವರು ಈ ಮೊದಲು ಕಲಬುರಗಿ ಜಿಲ್ಲೆಯ ಚಿಂಚೋಳಿ ಉಪವಿಭಾಗದ ಸಹಾಯಕ ಪೊಲೀಸ್‌ ಅಧೀಕ್ಷರರಾಗಿ ಸೇವೆ ಸಲ್ಲಿಸಿದರು. ಎಸ್ಪಿಯಾಗಿದ್ದ ನಿಶಾ ಜೇಮ್ಸ್‌ ಅವರನ್ನು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಪೊಲೀಸ್‌ ಅಧೀಕ್ಷಕರಾಗಿ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ. ನೂತನ ಎಸ್ಪಿಯವರು 2015ರ ಬ್ಯಾಂಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದಾರೆ. ನಿಶಾ ಜೇಮ್ಸ್‌ ಅವರು 2018ರ ಫೆಬ್ರವರಿ 23ರಂದು ಉಡುಪಿ ಎಸ್ಪಿಯಾಗಿದ್ದು ಮಹಿಳೆಯರ

ಉಡುಪಿ ನೂತನ ಎಸ್ಪಿಯಾಗಿ ಅಕ್ಷಯ್ ಮಚ್ಚೀಂದ್ರ Read More »

ಕರಾವಳಿ

ಮಂಗಳೂರು ಗೋಲಿಬಾರ್ ಪ್ರಕರಣ: ಹಾಲಿ ನ್ಯಾಯಾಧೀಶರಿಂದ ತನಿಖೆ ಒತ್ತಾಯಿಸಿ ನಾಳೆ ಧರಣಿ

ಮಂಗಳೂರು, ಜ.1: ಮಂಗಳೂರು ಗೋಲಿಬಾರ್ ಪ್ರಕರಣವನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಒಳಪಡಿಸಬೇಕೆಂದು ಒತ್ತಾಯಿಸಿದ ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷ, ಸಂಘಟನೆಗಳ ಜಂಟಿ ಆಶ್ರಯದಲ್ಲಿ ಜ.2ರಂದು ಅಂಬೇಡ್ಕರ್‌ ಪ್ರತಿಮೆಯ ಮುಂಭಾಗದಲ್ಲಿ ಸಾಮೂಹಿಕ ಧರಣಿ ನಡೆಸಲು ನಿರ್ಧಾರ ಮಾಡಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದ್ದಾರೆ. ನಗರದ ಖಾಸಗಿ ಹೊಟೇಲ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷ, ಸಂಘಟನೆಗಳ ನಿಯೋಗದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಲಾಠಿಚಾರ್ಚ್ ಹಾಗೂ ಗೋಲಿಬಾರ್‌ಗೆ ಕಾರಣವಾಗಿರುವ

ಮಂಗಳೂರು ಗೋಲಿಬಾರ್ ಪ್ರಕರಣ: ಹಾಲಿ ನ್ಯಾಯಾಧೀಶರಿಂದ ತನಿಖೆ ಒತ್ತಾಯಿಸಿ ನಾಳೆ ಧರಣಿ Read More »

ಕರಾವಳಿ

ಹೊಸ ವರ್ಷಾಚರಣೆ: ನಿಯಮ ತಪ್ಪಿದರೆ ಪೊಲೀಸ್ ಕ್ರಮ; ಆಯುಕ್ತರ ಎಚ್ಚರಿಕೆ

ಮಂಗಳೂರು, ಡಿ.31: ಹೊಸ ವರ್ಷಆಚರಣೆ ನೆಪದಲ್ಲಿ ನಿಯಮ ತಪ್ಪಿದರೆ ಮುಲಾಜಿಲ್ಲದೇ ಪೊಲೀಸ್‌ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ‌ಆಯುಕ್ತ ಡಾ.ಪಿ.ಎಸ್‌. ಹರ್ಷ ಎಚ್ಚರಿಕೆ ನೀಡಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆ ನಡೆಸುವ ಯಾವುದೇ ಹೊಟೇಲ್‌, ರೆಸಾರ್ಟ್‌ಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸಿ ಲಿಖಿತ ಪರವಾನಗಿ ಪಡೆಯಬೇಕು, ಹಾಗೆಯೇ ಸಂಭ್ರಮಾಚರಣೆಯನ್ನು 12.5ಕ್ಕೆ ಮುಗಿಸಿ 15 ನಿಮಿಷದಲ್ಲಿ ಸ್ಥಳದಿಂದ ತೆರಳಬೇಕು ಎಂದು ಅವರು ತಿಳಿಸಿದ್ದಾರೆ. ಮದ್ಯಪಾನ ಮಾರಾಟ ಮಾಡುವ ಅಂಗಡಿಗಳು 12.5 ನಿಮಿಷದವರೆಗೆ ಮದ್ಯ ಮಾರಾಟ ಮಾಡಲು ಪರವಾನಗಿ ಪಡೆಯಬೇಕು, ಪರವಾನಗಿ ನೀಡುವ

ಹೊಸ ವರ್ಷಾಚರಣೆ: ನಿಯಮ ತಪ್ಪಿದರೆ ಪೊಲೀಸ್ ಕ್ರಮ; ಆಯುಕ್ತರ ಎಚ್ಚರಿಕೆ Read More »

ಕರಾವಳಿ

ಆಧಾರ್-ಪ್ಯಾನ್ ಲಿಂಕ್: ಮಾರ್ಚ್ ಗೆ ಅಂತಿಮ ಗಡುವು ವಿಸ್ತರಣೆ

ಹೊಸದಿಲ್ಲಿ, ಡಿ.31: ಆಧಾರ್‌ ಸಂಖ್ಯೆ ಜೊತೆ ಪ್ಯಾನ್‌ ಕಾರ್ಡ್ ಅನ್ನು ಜೋಡಣೆ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಮತ್ತೆ ವಿಸ್ತರಣೆ ಮಾಡಿದ್ದು, 2020ರ ಮಾರ್ಚ್ ತಿಂಗಳಿಗೆ ವಿಸ್ತರಣೆ ಮಾಡಿದೆ. ಈ ಮೊದಲು ಆದಾಯ ತೆರಿಗೆ ಇಲಾಖೆಯು ಮಾಧ್ಯಮಗಳಿಗೆ ನೀಡಿದ್ದ ಜಾಹೀರಾತಿನಲ್ಲಿ ಡಿಸೆಂಬರ್‌ 31ರೊಳಗೆ ಆಧಾರ್-ಪ್ಯಾನ್‌ ಲಿಂಕ್‌ ಮಾಡಲು ಸೂಚಿಸಲಾಗಿತ್ತು. ಇದೀಗ ಈ ಗಡುವನ್ನು ಡಿಸೆಂಬರ್‌ 31ರಿಂದ ಮಾರ್ಚ್ ತಿಂಗಳವರೆಗೆ ವಿಸ್ತರಿಸಲಾಗಿದೆ. ಈ ಸಂಬಂಧ ಇಂದು ನಡೆದ ಹಣಕಾಸು ಸಚಿವಾವಲಯದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಆಧಾರ್‌

ಆಧಾರ್-ಪ್ಯಾನ್ ಲಿಂಕ್: ಮಾರ್ಚ್ ಗೆ ಅಂತಿಮ ಗಡುವು ವಿಸ್ತರಣೆ Read More »

ಕರಾವಳಿ, ರಾಷ್ಟ್ರೀಯ ನ್ಯೂಸ್

ಮಹಾರಾಷ್ಟ್ರ: ಸಂಪುಟ ವಿಸ್ತರಣೆ ಬೆನ್ನಲ್ಲೆ ರಾಜೀನಾಮೆ ನೀಡಲು ಮುಂದಾದ ಎನ್ ಸಿಪಿ ಶಾಸಕ

ಔರಂಗಬಾದ್, ಡಿ. 31: ಮಹಾರಾಷ್ಟ್ರ ಸರ್ಕಾರದ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಬೀಡ್ ಜಿಲ್ಲೆಯ ಎನ್ ಸಿಪಿ ಶಾಸಕ ಪ್ರಕಾಶ್ ಸೊಲಾಂಕೆ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದು ರಾಜಕೀಯ ಮಾಡಲು ನಮ್ಮಂತವರು ಅರ್ಹರಲ್ಲ ಎಂದು ಹೇಳಿದ್ದಾರೆ. ಮಜಲ್ಗಾಂವ್ ಕ್ಷೇತ್ರದಿಂದ ನಾಲ್ಕು ಬಾರಿ ಚುನಾಯಿತರಾಗಿರುವ ಸೋಲಾಂಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಲು ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸ್ಥಾನ ಇಲ್ಲದಿರುವುದು ಕಾರಣ ಎಂಬ ಮಾತುಗಳು ಕೇಳಿ ಬರುತ್ತಿದ್ದು ಆದರೆ ಸೊಲಾಂಕೆ ಇದನ್ನು ನಿರಾಕರಿಸಿದ್ದಾರೆ. “ನನಗೆ ಯಾವುದೇ ನಾಯಕರ ಮೇಲೆ

ಮಹಾರಾಷ್ಟ್ರ: ಸಂಪುಟ ವಿಸ್ತರಣೆ ಬೆನ್ನಲ್ಲೆ ರಾಜೀನಾಮೆ ನೀಡಲು ಮುಂದಾದ ಎನ್ ಸಿಪಿ ಶಾಸಕ Read More »

ರಾಷ್ಟ್ರೀಯ ನ್ಯೂಸ್

ಕುಂದಾಪುರ: ನೀರು ಸೇದಲು ಹೋದ ವಿದ್ಯಾರ್ಥಿನಿ ಬಾವಿಗೆ ಬಿದ್ದು  ಮೃತ್ಯು

ಕುಂದಾಪುರ, ಡಿ.31: ಬಾವಿಯಿಂದ ನೀರು ಸೇದುವ ವೇಳೆ ಹಗ್ಗ ತುಂಡಾದ ಪರಿಣಾಮ ವಿದ್ಯಾರ್ಥಿನಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಾವುಂದ ಗ್ರಾಮದ ಕುದ್ರುಕೋಡು ಬಾಗಳಾಡಿಯಲ್ಲಿ ನಡೆದಿದೆ. ಮೃತರನ್ನು  ಕುದ್ರುಕೋಡಿನ ಬಾಬು ಮೊಗವೀರ ಎಂಬವರ ಪುತ್ರಿ ಪ್ರೀತಿ (19) ಎಂದು ಗುರುತಿಸಲಾಗಿದೆ. ಬಾರ್ಕೂರಿನಲ್ಲಿ ಪದವಿ ವಿದ್ಯಾರ್ಥಿನಿಯಾಗಿರುವ ಪ್ರೀತಿ ಕ್ರಿಸ್‌ಮಸ್‌ ರಜೆಯ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದರು. ಮನೆಯ ಹತ್ತಿರವಿರುವ ಬಾವಿಯಿಂದ ನೀರು ತರಲೆಂದು ಹೋಗಿದ್ದು, ಈ ಸಂದರ್ಭ ಹಗ್ಗ ತುಂಡಾಗಿ ಪ್ರೀತಿ ಬಾವಿಗೆ ಬಿದ್ದಿದ್ದಾರೆನ್ನಲಾಗಿದೆ. ತುಂಬಾ ಹೊತ್ತು ಕಳೆದರೂ ಮನೆಗೆ

ಕುಂದಾಪುರ: ನೀರು ಸೇದಲು ಹೋದ ವಿದ್ಯಾರ್ಥಿನಿ ಬಾವಿಗೆ ಬಿದ್ದು  ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪ್ರಚೋದನಕಾರಿ ಸಂದೇಶ ರವಾನೆ ಆರೋಪ: ಯುವಕನ ಸೆರೆ

ಮಂಗಳೂರು, ಡಿ.31: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ರವಾನಿಸಿದ ಆರೋಪದಲ್ಲಿ ಯುವಕನೋರ್ವನನ್ನು ಮಂಗಳೂರು ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ. ಬಂಧಿತರನ್ನು ಪಾಂಡೇಶ್ವರ ನಿವಾಸಿ ಮೊಯ್ದೀನ್ ಹಮೀಝ್ (25) ಎಂದು ಗುರುತಿಸಲಾಗಿದೆ. ಡಿ.19ರಂದು ಮಂಗಳೂರಿನಲ್ಲಿ ನಡೆದ ಹಿಂಸಾಚಾರ- ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಂಚಿಕೊಳ್ಳುವುದು, ರವಾನೆ ಮಾಡುವುದು ಅಪರಾಧವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಚೋದನಕಾರಿ ಪೋಸ್ಟ್ ಹಾಕಿದ ಹಲವರ ವಿರುದ್ಧ ನೋಟಿಸ್ ಕಳುಹಿಸಲಾಗಿದೆ. ಸದ್ಯ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಂ

ಪ್ರಚೋದನಕಾರಿ ಸಂದೇಶ ರವಾನೆ ಆರೋಪ: ಯುವಕನ ಸೆರೆ Read More »

ಕರಾವಳಿ

ಪೌರತ್ವ ಕಾಯ್ದೆಗೆ ಬೆಂಬಲ ನೀಡುವಂತೆ ಪ್ರಧಾನಿ ಅಭಿಯಾನ

ಹೊಸದಿಲ್ಲಿ, ಡಿ.30: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದಾದ್ಯಂತ ತೀವ್ರ ವಿರೋಧ ಹಾಗೂ ಆಕ್ರೋಶಗಳು ವ್ಯಕ್ತವಾಗುತ್ತಿರುವ ನಡುವಲ್ಲೆ ಕಾಯ್ದೆಗೆ ಬೆಂಬಲ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಭಿಯಾನ ಆರಂಭಿಸಿರುವ ಪ್ರಧಾನಿ ಮೋದಿಯವರು, ಹ್ಯಾಷ್ ಟ್ಯಾಗ್ ಮೂಲಕ ಇಂಡಿಯಾ ಸಪೋರ್ಟ್ಸ್ ಸಿಟಿಝೆನ್’ಶಿಫ್ ಅಮೆಂಡ್ಮೆಂಟ್ ಆ್ಯಕ್ಟ್ ಎಂದು ಅಭಿಯಾನ ಆರಂಭಿಸಿದ್ದಾರೆ.

ಪೌರತ್ವ ಕಾಯ್ದೆಗೆ ಬೆಂಬಲ ನೀಡುವಂತೆ ಪ್ರಧಾನಿ ಅಭಿಯಾನ Read More »

ರಾಷ್ಟ್ರೀಯ ನ್ಯೂಸ್
Scroll to Top