Keerthana

ಕೆಎಸ್ಸಾರ್ಟಿಸಿ ಬಸ್-ಕಾರು ಢಿಕ್ಕಿ: ನಾಲ್ವರು ಸ್ಥಳದಲ್ಲೇ ಮೃತ್ಯು

ಮುಧೋಳ, ಜ.3: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ನಡುವೆ ಢಿಕ್ಕಿ ಸಂಭವಿಸಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ  ಶಿರೋಳ ಕ್ರಾಸ್ ಬಳಿ ನಡೆದಿದೆ. ಮೃತರನ್ನು ಸಿದ್ದರಾಯ ತೇಲಿ (36), ಬಾಲಪ್ಪ ಸಂಡಗಿ (34), ಹನಮಂತ ಗನಗಾರ (21), ರಿಯಾಜ ಜಾಲಗೇರ (25) ಎಂದು ತಿಳಿದುಬಂದಿದೆ. ಇವರೆಲ್ಲರೂ ಜಮಖಂಡಿ ತಾಲೂಕಿನ ಗೋಠೆ ಗ್ರಾಮದವರೆಂದು ಹೇಳಲಾಗಿದೆ. ಮೃತರು ನ್ಯಾಯಲಯದ ವ್ಯಾಜ್ಯದ ನಿಮಿತ್ತ ಗೋಠಯಿಂದ ಧಾರವಾಡದ ಹೈಕೋರ್ಟ್ ಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಬೆಳಗಾವಿಯಿಂದ ಕಲಬುರಗಿ ಮಾರ್ಗವಾಗಿ ತೆರಳುತಿದ್ದ […]

ಕೆಎಸ್ಸಾರ್ಟಿಸಿ ಬಸ್-ಕಾರು ಢಿಕ್ಕಿ: ನಾಲ್ವರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿ: ಇರಾನ್ ಕಮಾಂಡರ್ ಮೇಜರ್ ಜನರಲ್ ಸಹಿತ ಎಂಟು ಮಂದಿ ಹತ್ಯೆ

ಬಾಗ್ದಾದ್, ಜ.3: ಬಾಗ್ದಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಡೆದ ವೈಮಾನಿಕ ರಾಕೆಟ್ ದಾಳಿಯಲ್ಲಿ ಇರಾನ್ ನ ಕಮಾಂಡರ್ ಮೇಜರ್ ಜನರಲ್ ಖಾಸಿಂ ಸೊಲೆಮನಿ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಇರಾಕ್ ಅಧಿಕಾರಿಗಳು ತಿಳಿಸಿದ್ದಾರೆ. ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿ ನಡೆದ ಈ ಏರ್ ಸ್ಟ್ರೈಕ್ ನಲ್ಲಿ ಸೊಲೆಮನಿ ಅಲ್ಲದೇ ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸಸ್ (ಪಿಎಂಎಫ್) ಎಂದು ಕರೆಯಲ್ಪಡುವ ಇರಾನ್ ಬೆಂಬಲಿತ ಸೇನಾಪಡೆಗಳ ಡೆಪ್ಯುಟಿ ಕಮಾಂಡರ್ ಅಬು ಮೆಹದಿ ಅಲ್-ಮುಹಂದಿಸ್ ಅವರನ್ನು ಹತ್ಯೆ ನಡೆಸಿದೆ ಎಂದು

ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿ: ಇರಾನ್ ಕಮಾಂಡರ್ ಮೇಜರ್ ಜನರಲ್ ಸಹಿತ ಎಂಟು ಮಂದಿ ಹತ್ಯೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಉಳ್ಳಾಲ ನೇತ್ರಾವತಿ ನದಿಗೆ ಹಾರಿದ ಯುವಕ: ಪೊಲೀಸರಿಂದ ಶೋಧ ಕಾರ್ಯ

ಮಂಗಳೂರು, ಜ.3: ಯುವಕನೋರ್ವ ಉಳ್ಳಾಲದ ನೇತ್ರಾವತಿ ಸೇತುವೆಯಿಂದ ಹಾರಿ ನಾಪತ್ತೆಯಾಗಿದ್ದಾನೆ. ನದಿಗೆ ಹಾರಿದ ಯುವಕನನ್ನು ಉಳ್ಳಾಲಬೈಲ್ ನಿವಾಸಿ ನಿವಾಸಿ ನಾವೇಶ್ ಎಂದು ಗುರುತಿಸಲಾಗಿದೆ. ಜ.3 ರ ಬೆಳಿಗ್ಗೆ 6: 30 ಕ್ಕೆ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು ಯುವಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಉಳ್ಳಾಲ ನೇತ್ರಾವತಿ ನದಿಗೆ ಹಾರಿದ ಯುವಕ: ಪೊಲೀಸರಿಂದ ಶೋಧ ಕಾರ್ಯ Read More »

ಕರಾವಳಿ

ಬಳ್ಪ: ಚಿರತೆ ದಾಳಿಗೆ ವ್ಯಕ್ತಿ ಗಂಭೀರ

ಸುಬ್ರಹ್ಮಣ್ಯ, ಜ.2: ವ್ಯಕ್ತಿಯ ಮೇಲೆ ಚಿರತೆಯೊಂದು ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಕಡಬ ತಾಲೂಕಿನ ಬಳ್ಪಗ್ರಾಮದಲ್ಲಿ ಗುರುವಾರ ನಡೆದಿದೆ. ಗಾಯಗೊಂಡವರನ್ನು ಕಾಯರ ನಿವಾಸಿ ಕೃಷಿಕ ಬಾಲಕೃಷ್ಣ ಎಂದು ಗುರುತಿಸಲಾಗಿದೆ. ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಬಾಲಕೃಷ್ಣ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಗುರುವಾರ ಹಗಲು ಹೊತ್ತಲ್ಲಿ ನಡೆದಿದ್ದು ಕೃಷಿಕ ಬಾಲಕೃಷ್ಣ ಅವರು ಹುಲ್ಲು ತರಲೆಂದು ತೋಟಕ್ಕೆ ತೆರಳಿದ ವೇಳೆ ಈ ಘಟನೆ

ಬಳ್ಪ: ಚಿರತೆ ದಾಳಿಗೆ ವ್ಯಕ್ತಿ ಗಂಭೀರ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಲಬುರಗಿ: ಶಾಲಾ ಮಕ್ಕಳ ಪ್ರವಾಸದ ಬಸ್ ಮರಕ್ಕೆ ಢಿಕ್ಕಿ; ಹತ್ತು ವಿದ್ಯಾರ್ಥಿಗಳಿಗೆ ಗಾಯ

ಕಲಬುರಗಿ, ಜ.2: ಶಾಲಾ ಮಕ್ಕಳು ಪ್ರವಾಸಕ್ಕೆಂದು ಹೊರಟಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಹತ್ತಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ಕಲಬುರಗಿ ನಗರದ ವೆಂಕಟಗಿರಿ ಹೊಟೇಲ್ ಬಳಿ ಇಂದು ಬೆಳಗ್ಗೆ ನಡೆದಿದೆ. ಚನ್ನವೀರ ನಗರದಲ್ಲಿರುವ ಅಯ್ಯಪ್ಪ ಶಾಲೆಗೆ ಸೇರಿದ ಬಸ್ ಇದಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಹಿಡಿದಿದೆ ಎನ್ನಲಾಗುತ್ತಿದ್ದು, ಬಸ್ ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬಸ್ ನಲ್ಲಿ ಹತ್ತಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಘಟನೆಯಿಂದ

ಕಲಬುರಗಿ: ಶಾಲಾ ಮಕ್ಕಳ ಪ್ರವಾಸದ ಬಸ್ ಮರಕ್ಕೆ ಢಿಕ್ಕಿ; ಹತ್ತು ವಿದ್ಯಾರ್ಥಿಗಳಿಗೆ ಗಾಯ Read More »

ಕರ್ನಾಟಕ

ಮಂಗಳೂರು: ದೋಣಿ ಮುಳುಗಡೆ; ಏಳು ಕಾರ್ಮಿಕರ ರಕ್ಷಣೆ

ಮಂಗಳೂರು, ಜ.2: ಮಂಗಳೂರಿನ ಹಳೆ ಬಂದರಿನಿಂದ ಕಟ್ಟಡ ಸಾಮಾಗ್ರಿಗಳನ್ನು ಲಕ್ಷ ದ್ವೀಪಕ್ಕೆ ಸಾಗಾಟ ಮಾಡುತ್ತಿದ್ದ ಬೃಹತ್ ದೋಣಿಯೊಂದು ಲಕ್ಷದ್ವೀಪದ ಕಿಲ್ತಾನ್ ದ್ವೀಪದ ಬಳಿ ಮುಳುಗಡೆಗೊಂಡಿದ್ದು, ದೋಣಿಯಲ್ಲಿದ್ದ ಏಳು ಮಂದಿ ಕಾರ್ಮಿಕರನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ. ಲಕ್ಷದ್ವೀಪ ಮೂಲದ ಜಾಬಿರ್ ಎಂಬವರಿಗೆ ಸೇರಿದ್ದ ‘ಫೈಸಲ್ ಹುಸೈನ್’ ಎಂಬ ಹೆಸರಿನ ಬೋಟ್ ಸೋಮವಾರ ಬೆಳಗ್ಗೆ 11 ಗಂಟೆಗೆ ಮಂಗಳೂರು ಹಳೆ ಬಂದರಿನಿಂದ 700 ಚೀಲ ಸಿಮೆಂಟ್, ಸಿಮೆಂಟ್ನಿಂದ ತಯಾರಿಸಿದ 400 ಬ್ಲಾಕ್ಇಟ್ಟಿಗೆ, 1,000 ಚೀಲ ಜಲ್ಲಿ, ಎಂ-ಸ್ಯಾಂಡ್, ಸ್ಟೀಲ್

ಮಂಗಳೂರು: ದೋಣಿ ಮುಳುಗಡೆ; ಏಳು ಕಾರ್ಮಿಕರ ರಕ್ಷಣೆ Read More »

ಕರಾವಳಿ

ಬಂಟ್ವಾಳ: ಆಕಸ್ಮಿಕವಾಗಿ ಬಾವಿಗೆ ಬಿದ್ದು ಯುವಕ ಮೃತ್ಯು

ಬಂಟ್ವಾಳ, ಜ.2: ಯುವಕನೊಬ್ಬ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ವಿಟ್ಲದ ಕೊಳ್ನಾಡು ಗ್ರಾಮದ ಕಾಡುಮಠದಲ್ಲಿ ಬುಧವಾರ ನಡೆದಿದೆ. ಮೃತ ಪಟ್ಟವರನ್ನು ಕೊಳ್ನಾಡು ಗ್ರಾಮದ ಕಾಡುಮಠ ಜನತಾ ಕಾಲನಿ ನಿವಾಸಿ ಪ್ರಶಾಂತ್ (25)ಎಂದು ಗುರುತಿಸಲಾಗಿದೆ. ಕೊಡಂಗಾಯಿಯಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟಕ್ಕೆ ಸ್ನೇಹಿತರೊಂದಿಗೆ ಹೋಗಿದ್ದು ಮರಳಿ ಬಾರದ ಕಾರಣ ಮನೆಯವರು ಆತಂಕಗೊಂಡು ಬುಧವಾರ ಬೆಳಗ್ಗೆ ಹುಡುಕಾಟ ನಡೆಸಿದಾಗ ಮನೆ ಸಮೀಪದ ಕಾಲು ದಾರಿ ಬದಿಯ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪ್ರಶಾಂತ್‌ ಅವರು ಯಕ್ಷಗಾನ ಮುಗಿಸಿ ಬುಧವಾರ ಬೆಳಿಗ್ಗೆ ಸ್ನೇಹಿತನೊಂದಿಗೆ

ಬಂಟ್ವಾಳ: ಆಕಸ್ಮಿಕವಾಗಿ ಬಾವಿಗೆ ಬಿದ್ದು ಯುವಕ ಮೃತ್ಯು Read More »

ಕರಾವಳಿ

ಕಲಬುರಗಿ: ನಿಂತಿದ್ದ ರೈಲು ಬೋಗಿಯಲ್ಲಿ ಅಗ್ನಿ ಅವಘಡ

ಕಲಬುರಗಿ, ಡಿ.2: ಇಲ್ಲಿನ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲೊಂದರ ಬೋಗಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ತಡರಾತ್ರಿ ನಡೆದಿದೆ.‌ ಸರಕು ಸಾಗಾಣಿಕೆ ರೈಲ್ವೆಯ ಸಿಬ್ಬಂದಿಯ ವಿಶೇಷ ಬೋಗಿನಲ್ಲಿ  ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ರೈಲ್ವೆ ನಿಲ್ದಾಣ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.‌ ಗುರುವಾರ ತಡರಾತ್ರಿ 2 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದ್ದು, ಯಾವ ಕಾರಣಕ್ಕಾಗಿ ನಡೆಯಿತು ಎಂಬುದರ ಬಗ್ಗೆ ತನಿಖೆಯ ನಂತರ ತಿಳಿದು ಬರಲಿದೆ ಎಂದಿದ್ದಾರೆ.  

ಕಲಬುರಗಿ: ನಿಂತಿದ್ದ ರೈಲು ಬೋಗಿಯಲ್ಲಿ ಅಗ್ನಿ ಅವಘಡ Read More »

ಕರ್ನಾಟಕ

ಚಿತ್ರದುರ್ಗ: ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಮೃತ್ಯು

ಚಿತ್ರದುರ್ಗ, ಜ. 2: ಇಲ್ಲಿನ ಗಾರೆಹಟ್ಟಿ ಬಡಾವಣೆಯ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯಲಿದ್ದ ಮೂವರು ಮೃತಪಟ್ಟ ದಾರುಣ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತರನ್ನು ಅರುಣ್ (40), ಪತ್ನಿ ಲತಾ (35), ಹಾಗೂ 7ನೇ ತರಗತಿ ವಿದ್ಯಾರ್ಥಿನಿ ಪುತ್ರಿ ಅಮೃತಾ(13) ಎಂದು ಗುರುತಿಸಲಾಗಿದೆ. ಸ್ಪೋಟದ ರಭಸಕ್ಕೆ ಮನೆಯಲ್ಲಿನ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿವೆ. ಮೂರು ಜನರ ಮೃತ ದೇಹಗಳು‌ ಅರೆಬರೆ ಸುಟ್ಟಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿ ಬೆಂಕಿ‌ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಚಿತ್ರದುರ್ಗ ಕೋಟೆ ಪೊಲೀಸ್

ಚಿತ್ರದುರ್ಗ: ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಮೃತ್ಯು Read More »

ಕರ್ನಾಟಕ

ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ

ಬೆಂಗಳೂರು, ಜ.2: ತುಮಕೂರಿನಲ್ಲಿ ನಡೆಯಲಿರುವ ಕೃಷಿ ಸಮಾವೇಶ ಮತ್ತು ಬೆಂಗಳೂರಿನಲ್ಲಿನ ಭಾರತೀಯ ವಿಜ್ಞಾನ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 2 ಗಂಟೆಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು 2-15ಕ್ಕೆ ಹೆಲಿಕಾಪ್ಟರ್ ಮೂಲಕ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಡಾ. ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಲಿಸಲಿದ್ದು ಮಠದಲ್ಲಿ ಡಾ.

ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ Read More »

ಕರ್ನಾಟಕ
Scroll to Top