Keerthana

ಕಾಸರಗೋಡು: ಸಹ ಶಿಕ್ಷಕನಿಂದಲೇ ಶಿಕ್ಷಕಿಯ ಕೊಲೆ; ಕ್ರೈಂ ಬ್ರಾಂಚ್ ತನಿಖೆಯಿಂದ ಬಹಿರಂಗ

ಇಬ್ಬರ ಬಂಧನ ಕಾಸರಗೋಡು, ಜ.24: ಮೀಯಪದವು ವಿದ್ಯಾವಿರ್ಧಕ ಹಯರ್ ಸೆಕಂಡರಿ ಶಾಲೆಯ ಶಿಕ್ಷಕಿ ರೂಪಶ್ರೀ (44) ರವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹ ಶಿಕ್ಷಕ ಸೇರಿದಂತೆ ಇಬ್ಬರನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶಾಲೆಯ ಡ್ರಾಯಿಂಗ್ ಶಿಕ್ಷಕ ವೆಂಕಟರಮಣ ಕಾರಂತ (50) ಮತ್ತು ಕಾರು ಚಾಲಕ ನಿರಂಜನ ಎಂದು ಗುರುತಿಸಲಾಗಿದೆ. ಜನವರಿ 14ರ ಸಂಜೆಯಿಂದ ಶಿಕ್ಷಕಿ ರೂಪಶ್ರೀ ನಾಪತ್ತೆಯಾಗಿದ್ದಳು. 16 ರಂದು ಕುಂಬಳೆ ಸಮೀಪದ ಪೆರುವಾಡು ಕಡಲ ತೀರದಲ್ಲಿ ಮೃತದೇಹ ಪತ್ತೆಯಾಗಿತ್ತು. ಪ್ರಕರಣದ ಬಗ್ಗೆ ತನಿಖೆ ನಡೆಸಿದ […]

ಕಾಸರಗೋಡು: ಸಹ ಶಿಕ್ಷಕನಿಂದಲೇ ಶಿಕ್ಷಕಿಯ ಕೊಲೆ; ಕ್ರೈಂ ಬ್ರಾಂಚ್ ತನಿಖೆಯಿಂದ ಬಹಿರಂಗ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕರೋನಾ ವೈರಸ್‌ಗೆ ಚೀನಾ ತತ್ತರ: ಸಾವಿನ ಸಂಖ್ಯೆ 25 ಕ್ಕೇರಿಕೆ

ಬೀಜಿಂಗ್, ಜ.24: ಮಾರಕ ಕರೋನಾ ವೈರಸ್ ಗೆ ಚೀನಾ ತತ್ತರಿಸಿದ್ದು ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿದೆ. ಅಂದಾಜು 830 ಜನರು ಈ ಭೀಕರ ವೈರಸ್ ಗೆ ತುತ್ತಾಗಿದ್ದಾರೆ ಎಂದು ಚೀನಾ ಸರಕಾರ ತಿಳಿಸಿದೆ. ಮೊದಲ ಬಾರಿಗೆ ವೈರಸ್ ಪತ್ತೆಯಾದ ವುಹಾನ್ ನಗರದಲ್ಲೇ 1,072 ಜನರು  ಈ ಮಾರಾಣಾಂತಿಕ ವೈರಾಣು ವಿಗೆ  ತುತ್ತಾಗಿದ್ದಾರೆ ಎನ್ನುವ ಶಂಕೆ ವ್ಯಕ್ತಪಡಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ತುರ್ತು ಕ್ರಮಗಳನ್ನು ಘೋಷಣೆ

ಕರೋನಾ ವೈರಸ್‌ಗೆ ಚೀನಾ ತತ್ತರ: ಸಾವಿನ ಸಂಖ್ಯೆ 25 ಕ್ಕೇರಿಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೇರಳದಲ್ಲಿ ಸಂಸದೆ ಶೋಭಾ ವಿರುದ್ಧ ಪ್ರಕರಣ ದಾಖಲು

ತಿರುವನಂತಪುರಂ, ಜ.24: ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿದ್ದ ಮಲಪ್ಪುರಂನ ಕೆಲ ಹಿಂದೂ ಕುಟುಂಬಗಳಿಗೆ ಕೇರಳ ಸರ್ಕಾರ ನೀರು ಸರಬರಾಜನ್ನು ತಡೆ ಹಿಡಿದಿದೆ ಎಂದು ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಆರೋಪಿಸಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿಸೆಕ್ಷನ್ 153 (ಎ) ಅಡಿಯಲ್ಲಿ ಸಂಸದೆ ಶೋಭಾ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ವಕೀಲ ಮತ್ತು ಮಲಪ್ಪುರಂ ನಿವಾಸಿ ಸುಭಾಷ್ ಚಂದ್ರನ್ ಕೆ.ಆರ್. ಅವರ ದೂರಿನ ಆಧಾರದ

ಕೇರಳದಲ್ಲಿ ಸಂಸದೆ ಶೋಭಾ ವಿರುದ್ಧ ಪ್ರಕರಣ ದಾಖಲು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣ: ವರದಿ ಕೇಳಿದ ರಾಜ್ಯ ಸರಕಾರ

ಮಂಗಳೂರು, ಜ.24: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೂಡಲೇ ವರದಿ ಸಲ್ಲಿಸುವಂತೆ ರಾಜ್ಯ ಸರಕಾರ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯಕ್ಕೆ ಸೂಚನೆ ನೀಡಿದೆ. ಶುಕ್ರವಾರ ಮಧ್ಯಾಹ್ನದ ಒಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ರಾಜ್ಯ ಸರ್ಕಾರ ಕಳುಹಿಸಲಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬಿಟ್ಟ ಘಟನೆಗೆ ಸಂಬಂಧಪಟ್ಟಂತೆ ಹಲವಾರು ಊಹಾಪೋಹಗಳು ಎದ್ದಿದ್ದವು. ಈಗ ಪ್ರಕರಣ ತಿರುವು ಪಡೆದುಕೊಂಡಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಧ್ಯಂತರ ವರದಿ 

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣ: ವರದಿ ಕೇಳಿದ ರಾಜ್ಯ ಸರಕಾರ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು ಸ್ಫೋಟಕ ಪ್ರಕರಣ: ಆರೋಪಿ ಆದಿತ್ಯ ರಾವ್ ವಿರುದ್ಧ ಮತ್ತೊಂದು ದೂರು ದಾಖಲು

ಮಂಗಳೂರು, ಜ.23: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇಟ್ಟಿದ್ದ ಆರೋಪಿ ಆದಿತ್ಯರಾವ್ ಸದ್ಯ ಮಂಗಳೂರು ಪೊಲೀಸರ ವಶದಲ್ಲಿದ್ದು ಎಸಿಪಿ ಬೆಳ್ಯಪ್ಪ ತಂಡದಿಂದ ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ಇದೀಗ ಆರೋಪಿ ಆದಿತ್ಯರಾವ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಸ್ಫೋಟಕ ಇಟ್ಟ ಬಳಿಕ ಅದೇದಿನ ಜ.20ರಂದು ಇಂಡಿಗೋ ವಿಮಾನದಲ್ಲಿ ಬಾಂಬ್ ಇರಿಸಿದ್ದಾಗಿ ಬೆದರಿಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ಇಂಡಿಗೋ ಅಧಿಕಾರಿಗಳು ಈ ದೂರು ನೀಡಿದ್ದಾರೆ. ಅಂದು ಮಧ್ಯಾಹ್ನ 3:15ಕ್ಕೆ

ಮಂಗಳೂರು ಸ್ಫೋಟಕ ಪ್ರಕರಣ: ಆರೋಪಿ ಆದಿತ್ಯ ರಾವ್ ವಿರುದ್ಧ ಮತ್ತೊಂದು ದೂರು ದಾಖಲು Read More »

ಕರಾವಳಿ

ಅನುಮಾನಾಸ್ಪದ ಸ್ಫೋಟ: ಶಾಸಕ ಹ್ಯಾರಿಸ್ ಸೇರಿ ಹಲವರಿಗೆ ಗಾಯ

ಬೆಂಗಳೂರು, ಜ.23:  ಅನುಮಾನಾಸ್ಪದ ಸ್ಫೋಟ ಸಂಭವಿಸಿದ ಪರಿಣಾಮ ಶಾಸಕ ಎನ್‌.ಎ.ಹ್ಯಾರಿಸ್‌ ಸೇರಿದಂತೆ ಕೆಲವರಿಗೆ ಗಾಯವಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ಶಾಸಕ ಹ್ಯಾರಿಸ್ ಪಾಲ್ಗೊಂಡಿದ್ದರು. ಈ ವೇಳೆ ಸ್ಫೋಟ ಸಂಭವಿಸಿದೆ. ತಕ್ಷಣ ಶಾಸಕರು ಸೇರಿದಂತೆ ಗಾಯಗೊಂಡವರನ್ನು ಸೈಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿವೇಕನಗರದಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಹಾರಿಸ್ ಅವರು ವೇದಿಕೆಯಲ್ಲಿ ಕುಳಿತಿದ್ದರು. ಈ ವೇಳೆ ವಸ್ತುವೊಂದು ಬಂದು ಅಪ್ಪಳಿಸಿ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ. ಘಟನೆ ಕುರಿತು ಮಾಹಿತಿ ಪಡೆದ ಪೋಲೀಸರು, ಶ್ವಾನದಳದ

ಅನುಮಾನಾಸ್ಪದ ಸ್ಫೋಟ: ಶಾಸಕ ಹ್ಯಾರಿಸ್ ಸೇರಿ ಹಲವರಿಗೆ ಗಾಯ Read More »

ಕರ್ನಾಟಕ

ಮಂಗಳೂರು ಸ್ಫೋಟಕದ ಆರೋಪಿ ಆದಿತ್ಯ ರಾವ್ ಮಾನಸಿಕ ಅಸ್ವಸ್ಥ: ಬೊಮ್ಮಾಯಿ

ಬೆಳಗಾವಿ, ಜ.22: “ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿದ್ದ ಆರೋಪಿ ಆದಿತ್ಯ ರಾವ್‌ ಮಾನಸಿಕ ಅಸ್ವಸ್ಥರಾಗಿದ್ದಾರೆ. ಕೆಲಸ ದೊರಕಿಲ್ಲ ಎಂದು ಮಾನಸಿಕ ಖಿನ್ನತೆಗೆ ಒಳಗಾಗಿ ಇಂತಹ ಕೃತ್ಯ ಮಾಡಿದ್ದಾರೆ” ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಡುವ ಮೊದಲು ಆದಿತ್ಯ ರಾವ್ ಅವರು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿದ್ದಾರೆ ಎನ್ನುವ ಬಗ್ಗೆ ಸುಳ್ಳು ಕರೆ ಮಾಡಿ ಶಿಕ್ಷೆ ಅನುಭವಿಸಿದ್ದಾರೆ. ತನಿಖೆ

ಮಂಗಳೂರು ಸ್ಫೋಟಕದ ಆರೋಪಿ ಆದಿತ್ಯ ರಾವ್ ಮಾನಸಿಕ ಅಸ್ವಸ್ಥ: ಬೊಮ್ಮಾಯಿ Read More »

ಕರಾವಳಿ, ಕರ್ನಾಟಕ

ಮಂಗಳೂರು ಸ್ಫೋಟಕದ ಆರೋಪಿ ‘ರಾವ್’ ಆಗಿರುದರಿಂದ ಬಿಜೆಪಿಗೆ ಬೇಸರ: ದಿನೇಶ್ ಗುಂಡೂರಾವ್

ಬೆಂಗಳೂರು, ಜ.22: “ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ವ್ಯಕ್ತಿ ‘ರಾವ್​’ ಆಗಿರೋದ್ರಿಂದ ಬಿಜೆಪಿಗೆ ಸಂತಸವಾಗಿಲ್ಲ, ಬಂಧಿತ ರಾವ್ ಆಗಿರದೆ ಓರ್ವ ಮುಸ್ಲಿಂ ವ್ಯಕ್ತಿಯಾಗಿದಿದ್ದರೆ ಬಿಜೆಪಿ ನಾಯಕರ ವರ್ತನೆಯೇ ಬದಲಾಗುತ್ತಿತ್ತು” ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಆದಿತ್ಯ ರಾವ್ ಬದಲಾಗಿ ಬಂಧಿತ ಮುಸ್ಲಿಂ ಸಮುದಾಯದ ವ್ಯಕ್ತಿಯಾಗಿದ್ದರೆ ಇಂದು ಬಿಜೆಪಿ ನಾಯಕರ ವರ್ತನೆಯಲ್ಲಿ ಬದಲಾವಣೆ ಇರುತ್ತಿತ್ತು, ಜೊತೆಗೆ ಹಲವು ಹೇಳಿಕೆಗಳು ಹೊರಬೀಳುತ್ತಿದ್ದವು” ಎಂದು ಹೇಳಿದ್ದಾರೆ. “ಪತ್ರಕರ್ತೆ ಗೌರಿ ಲಂಕೇಶ್, ಸಾಹಿತಿ ಎಂ.ಎಂ

ಮಂಗಳೂರು ಸ್ಫೋಟಕದ ಆರೋಪಿ ‘ರಾವ್’ ಆಗಿರುದರಿಂದ ಬಿಜೆಪಿಗೆ ಬೇಸರ: ದಿನೇಶ್ ಗುಂಡೂರಾವ್ Read More »

ಕರ್ನಾಟಕ

ಗಲ್ಲು ಶಿಕ್ಷೆಯ ಅಪರಾಧಿಗಳ ಅರ್ಜಿ ಸಲ್ಲಿಕೆಗೆ ಕಾಲ ಮಿತಿ ನಿಗದಿಪಡಿಸಿ: ಸುಪ್ರೀಂ ಗೆ ಕೇಂದ್ರ ಮನವಿ

ಹೊಸದಿಲ್ಲಿ, ಜ.23: ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳಿಗೆ ಏಳು ದಿನಗಳ ಒಳಗಾಗಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಕೆಗೆ ಸಮಯ ಮಿತಿ ವಿಧಿಸುವಂತೆ ಇರಬೇಕು. ಇದರ ಜತೆಗೆ ತೀರ್ಪಿನ ಮರು ಪರಿಶೀಲನಾ ಅರ್ಜಿ ಮತ್ತು ಕ್ಯುರೇಟಿವ್‌ ಪಿಟಿಷನ್‌ ಸಲ್ಲಿಕೆಯ ಬಗ್ಗೆ ಕೂಡ ಸಮಯ ನಿಗದಿ ಮಾಡಬೇಕು ಎಂದು ಬುಧವಾರ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದೆ. ಕೇಂದ್ರ ಗೃಹ ಖಾತೆ ವತಿಯಿಂದಲೇ ಈ ಕೋರಿಕೆ ಮಂಡನೆಯಾಗಿದೆ. 2012ರ ನಿರ್ಭಯಾ ಗ್ಯಾಂಗ್‌ರೇಪ್‌ ಆರೋಪಿಗಳಿಗೆ ಈಗಾಗಲೇ ಘೋಷಣೆಯಾಗಿರುವ ಗಲ್ಲು ಶಿಕ್ಷೆ

ಗಲ್ಲು ಶಿಕ್ಷೆಯ ಅಪರಾಧಿಗಳ ಅರ್ಜಿ ಸಲ್ಲಿಕೆಗೆ ಕಾಲ ಮಿತಿ ನಿಗದಿಪಡಿಸಿ: ಸುಪ್ರೀಂ ಗೆ ಕೇಂದ್ರ ಮನವಿ Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು ಸ್ಫೋಟಕ ಆರೋಪಿ ಮುಸ್ಲಿಮ್ ಆಗಿದ್ದರೆ ಕತೆಯೇ ಬೇರೆಯಾಗುತ್ತಿತ್ತು: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜ.23: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ಶರಣಾಗತನಾಗಿರುವ ವ್ಯಕ್ತಿ ಮುಸ್ಲಿಮ್ ಆಗಿದ್ದಿದ್ದರೆ ಕತೆಯೇ ಮುಗಿದುಬಿಡುತ್ತಿತ್ತು. ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಮಾತನಾಡುತ್ತಿದ್ದರು. ಇಂದು ಯಾರೊಬ್ಬರ ಸುದ್ದಿಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಅಧಿಕಾರಿಗಳು ಸರಕಾರವನ್ನು ಮೆಚ್ಚಿಸಲು ಏನೇನೋ ಮಾಡುತ್ತಿರುವಂತಿದೆ, ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹೀಗಿದ್ದರೆ ರಾಜ್ಯದಲ್ಲಿ ಹೂಡಿಕೆ ಮಾಡಲು ಯಾರು ಮುಂದೆ ಬರುತ್ತಾರೆ ಎಂದು ಅವರು ಹೇಳಿದರು.

ಮಂಗಳೂರು ಸ್ಫೋಟಕ ಆರೋಪಿ ಮುಸ್ಲಿಮ್ ಆಗಿದ್ದರೆ ಕತೆಯೇ ಬೇರೆಯಾಗುತ್ತಿತ್ತು: ಮಾಜಿ ಸಿಎಂ ಕುಮಾರಸ್ವಾಮಿ Read More »

ಕರ್ನಾಟಕ
Scroll to Top