Keerthana

ಪ್ರಖ್ಯಾತ ನಿರೂಪಕ, ನಟ ಸಂಜೀವ್ ಕುಲಕರ್ಣಿ ನಿಧನ

ಬೆಂಗಳೂರು, ಜ.27: ಪ್ರಖ್ಯಾತ ನಿರೂಪಕ, ಕಿರುತರೆ ನಟ ಸಂಜೀವ್ ಕುಲಕರ್ಣಿ (49) ಅನಾರೋಗ್ಯದಿಂದ ಶನಿವಾರದಂದು ನಿಧನ ಹೊಂದಿದ್ದಾರೆ. ಸಂಜೀವ್ ಕಳೆದ ಹಲವು ವರ್ಷಗಳಿಂದ ಗಂಭೀರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಸಂಜೀವ ಕುಲಕರ್ಣಿಯವರು ಕಿರುತರೆ ನಟರಾಗಿದ್ದು, ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಪ್ರಖ್ಯಾತ ನಿರೂಪಕರೂ ಆಗಿದ್ದು, ವಿವಿಧ ಕಾರ್ಯಕ್ರಮಗಳ ವೇದಿಕೆಯಲ್ಲಿ ನಿರೂಪಣೆ ಮಾಡಿ ಮೆಚ್ಚುಗೆ ಗಳಿಸಿದ್ದಾರೆ. ಅಂತ್ಯಕ್ರಿಯೆಯನ್ನು ಚಾಮರಾಮಪೇಟೆಯ ಟಿಆರ್’ ಮಿಲ್ ಬಳಿಯ ಸ್ಮಶಾನದಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಂಜೀವ ಕುಲಕರ್ಣಿಯವರ […]

ಪ್ರಖ್ಯಾತ ನಿರೂಪಕ, ನಟ ಸಂಜೀವ್ ಕುಲಕರ್ಣಿ ನಿಧನ Read More »

ಕರಾವಳಿ

ಧಾರವಾಡದಲ್ಲಿ ಕಾರುಗಳ ಮುಖಾಮುಖಿ ಢಿಕ್ಕಿ: ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ ಸೇರಿ ನಾಲ್ವರು ಮೃತ್ಯು

ಧಾರವಾಡ, ಜ.27: ಎರಡು ಕಾರುಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಕುಂದಗೊಳದ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ ಸೇರಿ ನಾಲ್ವರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 4ರ ಯರಿಕೊಪ್ಪಬಳಿ ನಡೆದಿದೆ. ಇಂಡಿಕಾ ಕಾರಿನಲ್ಲಿ ಹೊರಟಿದ್ದ ಸ್ವಾಮೀಜಿ ಕಾರಿನ ಮುಂಭಾಗದಲ್ಲಿ ಕುಳಿತಿದ್ದರು. ಅಪಘಾತದಲ್ಲಿ ಚಿಕ್ಕೊಡಿ ತಾಲೂಕಿನ ಕಬ್ಬೂರು ಗ್ರಾಮದ ಚಾಲಕ ಕೂಡಾ ಮೃತಪಟ್ಟಿದ್ದಾರೆ. ಕಾರಿನ ಹಿಂಬದಿ ಕುಳಿತಿದ್ದ ಬಸಪ್ಪಪೂಜಾರ, ಸಿದ್ದಪ್ಪ ಇಂಗಳಳ್ಳಿ, ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಸಂಬಂಧಿ ಸೋಮಣ್ಣ ದೇಸಾಯಿ ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ

ಧಾರವಾಡದಲ್ಲಿ ಕಾರುಗಳ ಮುಖಾಮುಖಿ ಢಿಕ್ಕಿ: ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ ಸೇರಿ ನಾಲ್ವರು ಮೃತ್ಯು Read More »

ಕರ್ನಾಟಕ

ನಾರಾವಿ: ಬಸ್ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು

ಬೆಳ್ತಂಗಡಿ, ಜ.27: ಬೈಕ್‌ಗೆ ಬಸ್ ಢಿಕ್ಕಿಯೊಡೆದು ಸವಾರ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ರವಿವಾರ ಸಂಜೆ ಸಂಭವಿಸಿದೆ. ಮೃತರನ್ನು ಅಳದಂಗಡಿ ನಿವಾಸಿ ಸದಾಶಿವ ಹೆಗ್ಡೆ ಅವರ ಪುತ್ರ ಅರವಿಂದ ಹೆಗ್ಡೆ (27) ಎಂದು ಗುರುತಿಸಲಾಗಿದೆ. ಕಾರ್ಕಳದಿಂದ ನಾರಾವಿ ಮಾರ್ಗವಾಗಿ ಬೆಳ್ತಂಗಡಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ರಾಜ್ಯ ಹೆದ್ದಾರಿ ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಬೈಕ್‌ಗೆ ಢಿಕ್ಕಿಯೊಡೆಯಿತು ಎನ್ನಲಾಗಿದೆ. ತಕ್ಷಣ ಗಾಯಾಳನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಅಸುನೀಗಿದ್ದಾರೆ. ಈ ಬಗ್ಗೆ

ನಾರಾವಿ: ಬಸ್ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು Read More »

ಕರಾವಳಿ

ರಾಜ್ಯದಲ್ಲಿ ಸಂಭ್ರಮದ ಗಣರಾಜ್ಯೋತ್ಸವ: ರಾಜ್ಯಪಾಲರಿಂದ ಧ್ವಜಾರೋಹಣ

ಬೆಂಗಳರು, ಜ.26: ಬಿಬಿಎಂಪಿ ನಗರ ಜಿಲ್ಲೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿರುವ 71ನೇ ಗಣರಾಜ್ಯೋತ್ಸವ ನಗರದ ಕಬ್ಬನ್ ರಸ್ತೆಯ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಆರಂಭಗೊಂಡಿದ್ದು, ರಾಜ್ಯಪಾಲ ವಜುಭಾಯ್ ವಾಲಾ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ರಾಜ್ಯಪಾಲ ವಿ.ಆರ್ ವಾಲಾ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿದ್ದು, ಈ ವೇಳೆ ಭಾರತೀಯ ವಾಯುಪಡೆಯಿಂದ ಹೆಲಿಕಾಪ್ಟ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ನಂತರ ರಾಜ್ಯಪಾಲರು ಪರೇಡ್ ವೀಕ್ಷಿಸಿ, ಗೌರವ ನಂದನೆ ಸ್ವೀಕರಿಸಿ ನಾಡಿದನ ಜನತೆಗೆ ಗಣರಾಜ್ಯೋತ್ಸವ ಸಂದೇಶವನ್ನು

ರಾಜ್ಯದಲ್ಲಿ ಸಂಭ್ರಮದ ಗಣರಾಜ್ಯೋತ್ಸವ: ರಾಜ್ಯಪಾಲರಿಂದ ಧ್ವಜಾರೋಹಣ Read More »

ಕರ್ನಾಟಕ

ಕಾಸರಗೋಡು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಶಿಕ್ಷಕನಿಗೆ 20 ವರ್ಷ ಕಠಿಣ ಸಜೆ

ಕಾಸರಗೋಡು, ಜ.26 : ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಿಕ್ಷಕನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ 20 ವರ್ಷಗಳ ಕಠಿಣ ಸಜೆ ವಿಧಿಸಿದೆ.   ಆರೋಪಿ ಶಿಕ್ಷಕ ಕನಾರೂರು ಗ್ರಾಮದ ಪೆರಿಯಾಲಿ ಹೌಸ್‌ನ ರಾಜನ್‌.ಪಿ.ನಾಯರ್‌ ಯಾನೆ ರಾಜನ್‌ ಮಾಸ್ತರ್‌  ಸರಕಾರಿ ಶಾಲೆಯ ವಿದ್ಯಾರ್ಥಿನಿಗೆ ಐ.ಟಿ.ಸ್ಮಾರ್ಟ್ ಕೊಠಡಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾಗಿ ರಾಜಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ದೋಷಿ ಎಂದು ಸಾಬೀತುಪಡಿಸಿದ ನ್ಯಾಯಾಲಯ ಆತನಿಗೆ 2೦ ವರ್ಷ

ಕಾಸರಗೋಡು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಶಿಕ್ಷಕನಿಗೆ 20 ವರ್ಷ ಕಠಿಣ ಸಜೆ Read More »

ಕರಾವಳಿ

ದಿಲ್ಲಿ: ನಿರ್ಮಾಣ ಹಂತದ ಕಟ್ಟಡ ಕುಸಿದು ಐವರು ಮೃತ್ಯು,13 ಮಂದಿಗೆ ಗಾಯ

ಹೊಸದಿಲ್ಲಿ, ಜ.26: ದಿಲ್ಲಿ ಯ ಭಜನ್ ಪುರ ಪ್ರದೇಶದಲ್ಲಿ ಶನಿವಾರ ನಿರ್ಮಾಣ ಹಂತದ ಕಟ್ಟಡ ಕುಸಿದು ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ ಐವರು ಮೃತಪಟ್ಟಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆ ಇದ್ದು, ಶೋಧ ಕಾರ್ಯ ಮುಂದುವರೆದಿದೆ.

ದಿಲ್ಲಿ: ನಿರ್ಮಾಣ ಹಂತದ ಕಟ್ಟಡ ಕುಸಿದು ಐವರು ಮೃತ್ಯು,13 ಮಂದಿಗೆ ಗಾಯ Read More »

ರಾಷ್ಟ್ರೀಯ ನ್ಯೂಸ್

ಹರೇಕಳ ಹಾಜಬ್ಬ, ತುಳಸಿ ಗೌಡ ಸೇರಿ 141 ಮಂದಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ

ಬೆಂಗಳೂರು, ಜ.26: ಕರ್ನಾಟಕದ ಹಾಲಕ್ಕಿ ಬುಡಕಟ್ಟು ಸಮುದಾಯದ ತುಳಸಿ ಗೌಡ, ಹಾಗೂ ಅಕ್ಷರ ಸಂತ ಹರೇಳ ಹಾಜಬ್ಬ ಸೇರಿ ಒಟ್ಟು 141 ಮಂದಿಗೆ ಪ್ರತಿಷ್ಠಿತ ಪದ್ಮ  ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಮಾಜ ಸೇವೆ ಅರಣ್ಯ ರಕ್ಷಣೆಗೆ ತುಳಸಿ ಗೌಡ ಅವರನ್ನು ಗುರುತಿಸಿ ಪದ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಶಿಕ್ಷಣದ ಸಹಾಯವಿಲ್ಲದೇ ಅರಣ್ಯದಲ್ಲಿ ಲಭ್ಯವಾಗುವ ಅನೇಕ ವಿಧದ ಗಿಡ, ಗಿಡಮೂಲಿಕೆಗಳ ಕುರಿತು ಅಪಾರವಾದ ಅರಿವನ್ನು ಹೊಂದಿರುವುದು ತುಳಸಿ ಗೌಡ ಅವರ ಹೆಗ್ಗಳಿಕೆ. ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ದಕ್ಷಿಣ ಕನ್ನಡದ

ಹರೇಕಳ ಹಾಜಬ್ಬ, ತುಳಸಿ ಗೌಡ ಸೇರಿ 141 ಮಂದಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ Read More »

ಕರಾವಳಿ, ಕರ್ನಾಟಕ

ಭಾರತದಲ್ಲೂ ಕೊರೋನಾ ವೈರಸ್ ಆತಂಕ: ಕೇರಳ 7 ಮಂದಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ

ಕೊಚ್ಚಿ, ಜ.25: ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಾರಕ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಆತಂಕವನ್ನು ಸೃಷ್ಟಿಸಿದ್ದು, ಚೀನಾದಿಂದ ಬಂದಿರುವ 11 ಮಂದಿಯ ಪೈಕಿ 7 ಮಂದಿಯಲ್ಲಿ ಕೊರೋನಾ ವೈರಸ್’ನ ಗುಣಲಕ್ಷಣಗಳು ಕಂಡು ಬಂದಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಕೆಲ ದಿನಗಳಿಂದ ಚೀನಾ ರಾಷ್ಟ್ರದಿಂದ ಭಾರತಕ್ಕೆ ಆಗಮಿಸಿರುವವರ ಪೈಕಿ ಹಲವು ಜನರಲ್ಲಿ ಸೋಂಕು ತಗುಲಿರುವ ಶಂಕೆಗಳು ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದ ವಿವಿಧ ಆಸ್ಪತ್ರೆಗಳಲ್ಲಿ 7, ಮುಂಬೈನಲ್ಲಿ ಇಬ್ಬರು, ಬೆಂಗಳೂರು ಮತ್ತು ಹೈದ್ರಾಬಾದ್ ನಲ್ಲಿ

ಭಾರತದಲ್ಲೂ ಕೊರೋನಾ ವೈರಸ್ ಆತಂಕ: ಕೇರಳ 7 ಮಂದಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕುಂದಾಪುರ: ಬೈಕ್ ಢಿಕ್ಕಿ ಹೊಡೆದು ಮಹಿಳೆ ಮೃತ್ಯು

ಕುಂದಾಪುರ, ಜ.25: ಪಾದಚಾರಿ ಮಹಿಳೆಯೊಬ್ಬಳಿಗೆ ಬೈಕ್ಕೊಂದು ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರುವ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮಹಾದ್ವಾರದ ಎದುರು ನಡೆದಿದೆ.         ಮೃತ ಮಹಿಳೆಯನ್ನು ಸ್ಥಳೀಯ ನಿವಾಸಿ ವಿನಯ ಕಾಮತ್‌(62) ಎಂದು ಗುರುತಿಸಲಾಗಿದೆ. ಸವಾರ ಹಳವಳ್ಳಿ ನಿವಾಸಿ ಕೀರ್ತಿರಾಜ್ ಕೊಟೇಶ್ವರದಿಂದ ಕುಂಭಾಶಿ ಕಡೆಗೆ ಅತೀ ವೇಗದಿಂದ ಬಂದಿದ್ದು ಪಾದಚಾರಿ ವೃದ್ಧೆಗೆ ಢಿಕ್ಕಿ ಹೊಡೆದಿದ್ದಾನೆ. ಈ ಸಂದರ್ಭದಲ್ಲಿ ಬೈಕ್‌ ಸವಾರ ಕೀರ್ತಿರಾಜ್‌ ತಲೆಗೂ

ಕುಂದಾಪುರ: ಬೈಕ್ ಢಿಕ್ಕಿ ಹೊಡೆದು ಮಹಿಳೆ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಾಸರಗೋಡು: ಪತಿಯ ಕೊಲೆಗೆ ಸುಪಾರಿ ನೀಡಿದ ಪತಿ; ಇಬ್ಬರ ಬಂಧನ

ಕಾಸರಗೋಡು, ಜ 24: ಮಂಜೇಶ್ವರ ಪಾವೂರು ಕೆದಂಬಾಡಿಯ ಇಸ್ಮಾಯಿಲ್ (50) ನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಸ್ಮಾಯಿಲ್ ಪತ್ನಿ ಹಾಗೂ ಈಕೆಯ ನೆರೆಮನೆಯ ಯುವಕನೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಇಸ್ಮಾಯಿಲ್ ನ ಪತ್ನಿ ಆಯಿಷಾ (30) ಮತ್ತು ಮುಹಮ್ಮದ್ ಹನೀಫ್ (35) ಎಂದು ಗುರುತಿಸಲಾಗಿದೆ. ಜನವರಿ 20ರಂದು ಇಸ್ಮಾಯಿಲ್ ಮನೆಯಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತದೇಹವನ್ನು ಗಮನಿಸಿದ್ದ ಸಂಬಂಧಿಕರು ಇಸ್ಮಾಯಿಲ್ ನ ಕುತ್ತಿಗೆಯಲ್ಲಿ ಹಗ್ಗ ಬಿಗಿದ ಗುರುತು ಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ

ಕಾಸರಗೋಡು: ಪತಿಯ ಕೊಲೆಗೆ ಸುಪಾರಿ ನೀಡಿದ ಪತಿ; ಇಬ್ಬರ ಬಂಧನ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top