Keerthana

ಸೀಲ್ ಡೌನ್ ಇಲ್ಲ ಲಾಕ್‌ಡೌನ್ ಮಾತ್ರ: ದ.ಕ. ಜಿಲ್ಲಾಡಳಿತ ಸ್ಪಷ್ಟನೆ

ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಮಂಗಳೂರು, ಎ.10: ರಾಜ್ಯದಲ್ಲಿ ಲಾಕ್​ಡೌನ್​ ನಡುವೆಯೂ ದಿನೇ ದಿನೇ ಕೊರೋನ ಭೀತಿ ಹೆಚ್ಚಾಗುತ್ತಲೇ ಇದೆ. ಈ ನಡುವೆ ಮಂಗಳೂರು ನಗರವನ್ನು ಸೀಲ್ ಡೌನ್ ಮಾಡಲಾಗಿದೆ ಎಂಬ ವದಂತಿಗಳು ಸೃಷ್ಟಿಯಾಗಿದ್ದು, ಹಲವು ಖಾಸಗಿ ಟಿವಿ ಚಾನೆಲ್ ಗಳು ಕೂಡಾ ಸೀಲ್ ಡೌನ್ ಕುರಿತು ಪ್ರಸಾರ ಮಾಡುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಾಗಲಿ, ಮಂಗಳೂರು ನಗರದಲ್ಲಾಗಲಿ ಯಾವುದೇ ಸೀಲ್ ಡೌನ್ ಪ್ರಕ್ರಿಯೆ ನಡೆದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.   ನಗರದಲ್ಲಿ ಸೀಲ್ ಡೌನ್ ಮಾಡಲಾಗಿದೆ […]

ಸೀಲ್ ಡೌನ್ ಇಲ್ಲ ಲಾಕ್‌ಡೌನ್ ಮಾತ್ರ: ದ.ಕ. ಜಿಲ್ಲಾಡಳಿತ ಸ್ಪಷ್ಟನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಎ.10-12: ಪಡಿತರ ವಿತರಿಸಲು ಡಿಸಿ ಸಿಂಧೂ ರೂಪೇಶ್ ಸೂಚನೆ

ಮಂಗಳೂರು, ಎ.9: ಕೊರೋನ ವೈರಸ್ ಹಿನ್ನೆಲೆಯಲ್ಲಿ ರೇಷನ್ ವಿತರಣೆ ನಿರಂತರವಾಗಿ ನಡೆಯುತ್ತಿದೆ. ಈ ನಡುವೆ ಗುಡ್ ಫ್ರೈಡೆ ದಿನವಾದ ಎ.10ರಂದು ದ.ಕ. ಜಿಲ್ಲೆಯಲ್ಲಿ ರೇಷನ್ ವಿತರಣೆ ನಡೆಯಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ನೀಡಿದ್ದು, ಗುಡ್ ಫ್ರೈಡೆ ದಿನಂದಂದು ಸರಕಾರಿ ರಜೆಯಿದ್ದರೂ ಕೂಡ ರೇಷನ್ ಅಂಗಡಿಗಳು ತೆರೆದಿರುತ್ತವೆ. ಹಾಗೂ ಜನಸಾಮಾನ್ಯರಿಗೆ ಪಡಿತರ ಸಾಮಾಗ್ರಿಗಳನ್ನು ವಿತರಿಸಲಾಗುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಎಂದಿನಂತೆ ಬೆಳಗ್ಗಿನಿಂದ ಸಂಜೆಯ ತನಕ ಜನಸಾಮಾನ್ಯರಿಗೆ ಪಡಿತರ ಸಾಮಾಗ್ರಿಗಳು ಲಭ್ಯವಾಗಲಿವೆ. ಏಪ್ರಿಲ್ ಹಾಗೂ ಮೇ

ಎ.10-12: ಪಡಿತರ ವಿತರಿಸಲು ಡಿಸಿ ಸಿಂಧೂ ರೂಪೇಶ್ ಸೂಚನೆ Read More »

ಕರಾವಳಿ

ಮಂಗಳೂರಿನಲ್ಲಿ ಕೇರಳದವರಿಗೆ ಚಿಕಿತ್ಸೆ ನಿರಾಕರಣೆ ಹಿನ್ನೆಲೆ: ಕೇರಳದಲ್ಲೇ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ

ಕಾಸರಗೋಡು, ಎ.9: ಕರ್ನಾಟಕ-ಕೇರಳ ಗಡಿ ಪ್ರದೇಶವಾದ ತಲಪಾಡಿಯ ಮೂಲಕ ಮಂಗಳೂರಿಗೆ ಕೇರಳದವರಿಗೆ ಚಿಕಿತ್ಸೆಗೆ ತೆರಳಲಾಗದೆ ಕಠಿಣ ಸಂದರ್ಭ ಉಂಟಾಗಿದ್ದು, ಇದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೇರಳದಲ್ಲೇ ಅಗತ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಸರಗೋಡಿನಲ್ಲಿ ಸೂಕ್ತ ಆಸ್ಪತ್ರೆಯಿಲ್ಲದ ಹಿನ್ನೆಲೆಯಲ್ಲಿ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಗಳೂರಿಗೆ ತೆರಳಿದರೂ ಸೂಕ್ತ ಚಿಕಿತ್ಸೆಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ

ಮಂಗಳೂರಿನಲ್ಲಿ ಕೇರಳದವರಿಗೆ ಚಿಕಿತ್ಸೆ ನಿರಾಕರಣೆ ಹಿನ್ನೆಲೆ: ಕೇರಳದಲ್ಲೇ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ Read More »

ಕರಾವಳಿ

ರಾಜ್ಯದಲ್ಲಿ ಮತ್ತೆ 6 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 197ಕ್ಕೆ ಏರಿಕೆ

ಬೆಂಗಳೂರು, ಎ.9: ರಾಜ್ಯದಲ್ಲಿ ಮತ್ತೆ ಆರು ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 197ಕ್ಕೇರಿದೆ. ಬೆಳಗಾವಿಯಲ್ಲಿ ಒಂದೇ ಕುಟುಂಬದ ನಾಲ್ವರಿಗೆ ತಗುಲಿದ ಸೋಂಕು ತಗುಲಿದೆ. ತಾಲೂಕಿನ ಹಿರೇಬಾಗೇವಾಡಿಯ ಸೋಂಕಿತನ ತಂದೆ, ತಾಯಿ ಹಾಗೂ ಸಹೋದರನಿಗೂ ಸೋಂಕು ದೃಢವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ವರದಿಯಾಗಿದೆ. ದಿಲ್ಲಿ ಪ್ರಯಾಣದ ಹಿನ್ನೆಲೆ ಹೊಂದಿರುವ 27 ವರ್ಷದ ಪುರುಷರೊಬ್ಬರಲ್ಲಿ ಈ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ರಾಜ್ಯದಲ್ಲಿ ಮತ್ತೆ 6 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 197ಕ್ಕೆ ಏರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗುರುವಾರ 4 ವರ್ಷದ ಮಗು ಸೇರಿ 10 ಮಂದಿಗೆ ಕೊರೋನ ಪಾಸಿಟಿವ್: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 191ಕ್ಕೆ ಏರಿಕೆ

ಬೆಂಗಳೂರು, ಎ.9: 4 ವರ್ಷದ ಮಗು ಸೇರಿದಂತೆ ಗುರುವಾರ ಒಟ್ಟು 10 ಮಂದಿಗೆ ಕೊರೋನ ಸೋಂಕು ತಗುಲಿದ್ದು, ಗದಗಿನ 80 ವರ್ಷದ ವೃದ್ಧೆ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 191ಕ್ಕೇರಿಕೆಯಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. 28 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಬೆಳಗಾವಿಯ 50 ವರ್ಷದ ವ್ಯಕ್ತಿ, ಮೈಸೂರಿನ 55 ಹಾಗೂ 68 ವರ್ಷದ ವ್ಯಕ್ತಿಗಳು, ನಂಜನಗೂಡಿನ ಔಷಧ ಕಂಪೆನಿಯ ಉದ್ಯೋಗಿಯ ಸಹ ಪ್ರಯಾಣಿಕನಾಗಿದ್ದ 32 ವರ್ಷದ ವ್ಯಕ್ತಿಯಲ್ಲಿ ಸೋಂಕು

ಗುರುವಾರ 4 ವರ್ಷದ ಮಗು ಸೇರಿ 10 ಮಂದಿಗೆ ಕೊರೋನ ಪಾಸಿಟಿವ್: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 191ಕ್ಕೆ ಏರಿಕೆ Read More »

ಕರ್ನಾಟಕ

ಲಾಕ್‌ಡೌನ್ ವಿಸ್ತರಣೆ ಬಗ್ಗೆ ನಾಳೆ ತೀರ್ಮಾನ: ಸಿಎಂ ಬಿಎಸ್‌ವೈ

ಬೆಂಗಳೂರು, ಎ.9: ಈವರೆಗೆ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಬೇಕೇ ಎನ್ನುವ ಬಗ್ಗೆ ನಾಳೆ ತೀರ್ಮಾನ ಮಾಡಲಾಗುವುದು. ಸಂಪುಟ ಸಹೋದ್ಯೋಗಿಗಳು 15 ದಿನ ಲಾಕ್‌ಡೌನ್ ವಿಸ್ತರಣೆಗೆ ಸಲಹೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಹೋದ್ಯೋಗಿ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದೇನೆ. ಲಾಕ್‌ಡೌನ್ ಮುಂದುವರಿಸಬೇಕು ಎಂಬುದು ಬಹುತೇಕ ಸಚಿವರ ಅಭಿಪ್ರಾಯವಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಇಂದು ಸಂಜೆಯ

ಲಾಕ್‌ಡೌನ್ ವಿಸ್ತರಣೆ ಬಗ್ಗೆ ನಾಳೆ ತೀರ್ಮಾನ: ಸಿಎಂ ಬಿಎಸ್‌ವೈ Read More »

ಕರ್ನಾಟಕ

 ಎ.30ರವರೆಗೆ ಲಾಕ್ ಡೌನ್ ಮುಂದುವರಿಕೆ: ಒಡಿಶಾ ಸಿಎಂ ಘೋಷಣೆ

ಹೊಸದಿಲ್ಲಿ, ಎ.9: ಕೊರೋನ ವೈರಸ್ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 21 ದಿನಗಳ ಲಾಕ್ ಡೌನ್ ಎಪ್ರಿಲ್ 14ರಂದು ಅಂತ್ಯಗೊಳ್ಳಲಿದೆ. ಏತನ್ಮಧ್ಯೆ ದೇಶಾದ್ಯಂತ ಲಾಕ್ ಡೌನ್ ಮುಂದುವರಿಯಲಿದೆಯೇ ಎಂಬ ಜಿಜ್ಞಾಸೆ ಮೂಡಿದೆ. ಮತ್ತೊಂದೆಡೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಎಪ್ರಿಲ್ 30ರವರೆಗೆ ಲಾಕ್ ಡೌನ್ ಮುಂದುವರಿಸುವಂತೆ ಆದೇಶ ಹೊರಡಿಸಿದ್ದಾರೆ ಎಂದು ವರದಿ ತಿಳಿಸಿದೆ. ಕೋವಿಡ್ 19 ವೈರಸ್ ಕ್ಷಿಪ್ರವಾಗಿ ಹರಡುತ್ತಿರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ರಾಜ್ಯಗಳ ಮುಖ್ಯಮಂತ್ರಿ ಜತೆ ವಿಡಿಯೋ ಕಾನ್ಫರೆನ್ಸ್

 ಎ.30ರವರೆಗೆ ಲಾಕ್ ಡೌನ್ ಮುಂದುವರಿಕೆ: ಒಡಿಶಾ ಸಿಎಂ ಘೋಷಣೆ Read More »

ರಾಷ್ಟ್ರೀಯ ನ್ಯೂಸ್

ಮಂಗಳೂರಿನ ಕೇಂದ್ರ ಭಾಗವಾಗಿದ್ದ ಸೆಂಟ್ರಲ್ ಮಾರ್ಕೆಟ್ ಇನ್ನು ನೆನಪು ಮಾತ್ರ

ವ್ಯಾಪಾರಿಗಳು ಬೈಕಂಪಾಡಿ ಎಪಿಎಂಸಿಗೆ ಸ್ಥಳಾಂತರ ಮಂಗಳೂರು, ಎ.9: ಮಂಗಳೂರಿನ ಕೇಂದ್ರ ಭಾಗವಾಗಿದ್ದ ಸೆಂಟ್ರಲ್ ಮಾರ್ಕೆಟ್ ಇನ್ನು ನೆನಪು ಮಾತ್ರ. ಸುಮಾರು 50 ವರ್ಷಗಳ ಇತಿಹಾಸವಿರುವ ಈ ಮಾರುಕಟ್ಟೆಯನ್ನು ತೆರವು ಮಾಡಲು ಮಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. ಜೊತೆಗೆ ಪಕ್ಕದ ತರಕಾರಿ ಮತ್ತು ಮೀನು ಮಾರುಕಟ್ಟೆಯನ್ನು ಮುಚ್ಚಲು ನಿರ್ಧರಿಸಲಾಗಿದೆ. ಎರಡೂ ಕಟ್ಟಡಗಳು ತೀರ ಶಿಥಿಲಾವಸ್ಥೆಯಲ್ಲಿದ್ದು ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಹಂತದಲ್ಲಿದೆ. ಆದ್ದರಿಂದ ನೆಲಸಮಗೊಳಿಸಿ ಆ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಮೂಲಗಳು

ಮಂಗಳೂರಿನ ಕೇಂದ್ರ ಭಾಗವಾಗಿದ್ದ ಸೆಂಟ್ರಲ್ ಮಾರ್ಕೆಟ್ ಇನ್ನು ನೆನಪು ಮಾತ್ರ Read More »

ಕರಾವಳಿ

ಕೊರೋನ ಸೋಂಕು ಸಂಪೂರ್ಣ ನಿರ್ನಾಮಕ್ಕೆ ಡಿಸೆಂಬರ್‌ ವರೆಗೂ ಮುನ್ನೆಚ್ಚರಿಕೆ ವಹಿಸಿ: ಡಿಸಿಎಂ

ಬೆಂಗಳೂರು, ಎ.9: ಕೊರೋನ ವೈರಸ್‌ ಸಂಪೂರ್ಣ ನಿರ್ನಾಮ ಆಗುವವರೆಗೂ ಅಂದರೆ ಕನಿಷ್ಠ ಮುಂದಿನ 7-8 ತಿಂಗಳು ಮುನ್ನೆಚ್ಚರಿಕೆ ವಹಿಸಿ ಸಹಕರಿಸುವಂತೆ ಉಪ ಮುಖ್ಯಮಂತ್ರಿ ಡಾ. ಸಿ ಎನ್‌ ಅಶ್ವತ್ಥನಾರಾಯಣ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಬಿಬಿಎಂಪಿಯ ಪೌರ ಕಾರ್ಮಿಕರು, ಕೂಲಿ ಕಾರ್ಮಿಕರಿಗೆ ಮಲ್ಲೇಶ್ವರದಲ್ಲಿ ಪಡಿತರ ವಿತರಣೆ ಮಾಡಿದ ಡಾ. ಅಶ್ವತ್ಥನಾರಯಣ ಅವರು ಸುದ್ದಿಗಾರರ ಜತೆ ಮಾತನಾಡಿದರು. “ಪ್ರಸ್ತುತ ಸಭೆ, ಸಮಾರಂಭಗಳನ್ನು ಆಯೋಜಿಸದೆ ನಾಗರಿಕರೂ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಆದರೆ ವೈರಸ್‌ ಸಂಪೂರ್ಣವಾಗಿ ನಿರ್ಮೂಲನೆ ಆಗುವವರೆಗೂ ಅಂದರೆ ಮುಂದಿನ

ಕೊರೋನ ಸೋಂಕು ಸಂಪೂರ್ಣ ನಿರ್ನಾಮಕ್ಕೆ ಡಿಸೆಂಬರ್‌ ವರೆಗೂ ಮುನ್ನೆಚ್ಚರಿಕೆ ವಹಿಸಿ: ಡಿಸಿಎಂ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

24 ಗಂಟೆಯಲ್ಲಿ ವಿಶ್ವದಾದ್ಯಂತ 84,000ಕ್ಕೂ ಹೆಚ್ಚು ಕೊರೋನ ಪ್ರಕರಣ ದೃಢ

ಹೊಸದಿಲ್ಲಿ, ಎ.9: ಬುಧವಾರ ಒಂದೇ ದಿನ  84,000ಕ್ಕೂ ಹೆಚ್ಚು ಕೊರೋನ ಧನಾತ್ಮಕ ಪ್ರಕರಣಗಳು ವಿಶ್ವದಾದ್ಯಂತ ವರದಿಯಾಗಿದ್ದು, ಒಟ್ಟು ಪ್ರಕರಣಗಳು 1.5 ಮಿಲಿಯನ್ ದಾಟಿದೆ. ಕರೋನ ವೈರಸ್‌ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 88,502ರಷ್ಟಿದೆ. ನಿನ್ನೆ ಒಂದೇ ದಿನದಲ್ಲಿ ಅಮೆರಿಕಾದಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ -19 ಪ್ರಕರಣ ಅಂದರೆ 31,935 ಕರೋನ ವೈರಸ್ ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ. ಈಗಾಗಲೇ ಅಮೆರಿಕಾದಲ್ಲಿ 4,35,128 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದ್ದು, ಮೃತರ ಸಂಖ್ಯೆ 14,795ಕ್ಕೆ ಏರಿಕೆಯಾಗಿದೆ. ಸ್ಪೇನ್ನಲ್ಲಿ 148,220 ಪ್ರಕರಣಗಳು ಮತ್ತು 14,792 ಸಾವುಗಳು ವರದಿಯಾಗಿದೆ.

24 ಗಂಟೆಯಲ್ಲಿ ವಿಶ್ವದಾದ್ಯಂತ 84,000ಕ್ಕೂ ಹೆಚ್ಚು ಕೊರೋನ ಪ್ರಕರಣ ದೃಢ Read More »

ಅಂತರ್ರಾಷ್ಟ್ರೀಯ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top