Keerthana

ಮುಂಬೈ ತಾಜ್ ಮಹಲ್ ಹೊಟೇಲ್ ನ ಆರು ಮಂದಿ ಸಿಬ್ಬಂದಿಗೆ ಕೊರೋನ ಪಾಸಿಟಿವ್

ಮಹಾರಾಷ್ಟ್ರ, ಎ.12: ಮುಂಬೈ ತಾಜ್ ಮಹಲ್ ಹೊಟೇಲ್ ನ ಆರು ಮಂದಿ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ವರದಿ ಬಂದಿದೆ ಇಂಡಿಯಾ ಟುಡೇ ವರದಿ ಮಾಡಿದೆ. ಸದ್ಯ ಆರು ಮಂದಿ ತಾಜ್ ಮಹಲ್ ಪ್ಯಾಲೇಸ್ ಹೊಟೇಲ್ ಸಿಬ್ಬಂದಿಯ ಆರೋಗ್ಯ ಸ್ಥಿರವಾಗಿದ್ದು ಬಾಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ. ಗೌತಮ್ ಬನ್ಸಾಲಿ ತಿಳಿಸಿದ್ದಾರೆ. ಆದರೆ ತಾಜ್ ಹೊಟೇಲ್ ನ ಎಷ್ಟು ಮಂದಿ ನೌಕರರಿಗೆ ಸೋಂಕು ತಗುಲಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. 6 ಮಂದಿಯಲ್ಲಿ ಪಾಸಿಟಿವ್ ವರದಿ ಬಂದ ತಕ್ಷಣವೇ […]

ಮುಂಬೈ ತಾಜ್ ಮಹಲ್ ಹೊಟೇಲ್ ನ ಆರು ಮಂದಿ ಸಿಬ್ಬಂದಿಗೆ ಕೊರೋನ ಪಾಸಿಟಿವ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೇಶದಲ್ಲಿ ಒಂದೇ ದಿನ ಕೊರೋನಗೆ 34 ಮಂದಿ ಸಾವು: 909 ಮಂದಿಗೆ ಸೋಂಕು ದೃಢ

ಹೊಸದಿಲ್ಲಿ, ಎ.12: ಮಹಾಮಾರಿ ಕೊರೋನ ವೈರಸ್​ ಅಟ್ಟಹಾಸ ಮುಂದುವರಿಯುತ್ತಲೇ ಇದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 8,356ಕ್ಕೆ ಏರಿಕೆಯಾಗಿದೆ. ಕಳೆದ 24ಗಂಟೆಯಲ್ಲಿ 909 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು ಒಟ್ಟು 34 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಭಾರತದಲ್ಲಿ ಒಟ್ಟು ಸಾವಿನಸಂಖ್ಯೆ 273ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮಾ.24ರ ಮಧ್ಯರಾತ್ರಿಯಿಂದ ಭಾರತ ಲಾಕ್​ಡೌನ್​ ಆಗಿತ್ತು. ಎ.14ರವರೆಗೆ ಅದರ ಅವಧಿ ಇತ್ತು. ಆದರೆ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲ

ದೇಶದಲ್ಲಿ ಒಂದೇ ದಿನ ಕೊರೋನಗೆ 34 ಮಂದಿ ಸಾವು: 909 ಮಂದಿಗೆ ಸೋಂಕು ದೃಢ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

Breaking news ರಾಜ್ಯದಲ್ಲಿ ಎಪ್ರಿಲ್ 30ರವರೆಗೆ ಲಾಕ್ ಡೌನ್ ವಿಸ್ತರಣೆ : ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಎಪ್ರಿಲ್ 30ರವರೆಗೆ ಲಾಕ್ ಡೌನ್ ವಿಸ್ತರಣೆ : ಸಿಎಂ ಯಡಿಯೂರಪ್ಪ ಬೆಂಗಳೂರು, ಎ.11: ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಪ್ರಿಲ್ 30ರವರೆಗೆ ಲಾಕ್ ಡೌನ್ ವಿಸ್ತರಿಸಲು ತೀರ್ಮಾನಿಸಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಲಾಕ್ ಡೌನ್ ವಿಸ್ತರಣೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ವಿಡಿಯೋ ಕಾನ್ಫರೆನ್ಸ್ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ. 21 ದಿನಗಳ ಕಾಲದ ಲಾಕ್ ಡೌನ್ ಎಪ್ರಿಲ್ 14ಕ್ಕೆ ಕೊನೆಯಾಗಲಿರುವ ಹಿನ್ನೆಲೆಯಲ್ಲಿ ಚರ್ಚಿಸಲು

Breaking news ರಾಜ್ಯದಲ್ಲಿ ಎಪ್ರಿಲ್ 30ರವರೆಗೆ ಲಾಕ್ ಡೌನ್ ವಿಸ್ತರಣೆ : ಸಿಎಂ ಯಡಿಯೂರಪ್ಪ Read More »

ಕರ್ನಾಟಕ

ಕೊರೋನ ವೈರಸ್‌ಗೆ ಕೇರಳದಲ್ಲಿ ಮೂರನೇ ಬಲಿ: 71 ವರ್ಷದ ವೃದ್ಧ ಸಾವು

ಕಣ್ಣೂರು, ಎ.11: ಕೊರೋನ ವೈರಸ್‌ಗೆ ಕೇರಳದಲ್ಲಿ ಮೂರನೇ ಬಲಿಯಾಗಿದೆ. ಕೇರಳದ ಕಣ್ಣೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾಂಡಿಚೇರಿಯ ಮಾಹೆ ನಿವಾಸಿ 71 ವರ್ಷದ ವ್ಯಕ್ತಿ ಮೃತರಾಗಿದ್ದಾರೆ. ವ್ಯಕ್ತಿಗೆ ಆರೋಗ್ಯದಲ್ಲಿ ತೀವ್ರ ತೊಂದರೆ ಉಂಟಾಗಿದ್ದು ಕಳೆದ ಎರಡು ವಾರಗಳಿಂದ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಅವರು ಮಾರ್ಚ್ 27 ರಂದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು ಆ ಬಳಿಕ ಡಿಸ್ಚಾರ್ಜ್ ಆಗಿದ್ದರು. ಆ ಬಳಿಕ ವ್ಯಕ್ತಿ ಪುನಃ ಆಸ್ಪತ್ರೆಗೆ ದಾಖಲಾಗಿದ್ದು ವೃದ್ಧ ವ್ಯಕ್ತಿಗೆ ನ್ಯುಮೋನಿಯಾವಿದ್ದು ಎರಡು ಕಿಡ್ನಿಗಳು ವೈಫಲ್ಯ ಹೊಂದಿದ್ದವು.

ಕೊರೋನ ವೈರಸ್‌ಗೆ ಕೇರಳದಲ್ಲಿ ಮೂರನೇ ಬಲಿ: 71 ವರ್ಷದ ವೃದ್ಧ ಸಾವು Read More »

ರಾಷ್ಟ್ರೀಯ ನ್ಯೂಸ್

ಮತ್ತೆ 7 ಪಾಸಿಟಿವ್ ಪ್ರಕರಣ: ರಾಜ್ಯದಲ್ಲಿ 214ಕ್ಕೇರಿದ ಸೋಂಕಿತರ ಸಂಖ್ಯೆ

ಬೆಂಗಳೂರು, ಎ.11: ರಾಜ್ಯದಲ್ಲಿ ಇಂದು ಮತ್ತೆ ಏಳು ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 214ಕ್ಕೇರಿದೆ. ಇಂದಿನ ಏಳು ನೂತನ ಪ್ರಕರಣಗಳ ಪೈಕಿ ಐದು ಮಂದಿ ಸೋಂಕಿತರು ಮೈಸೂರಿನಲ್ಲಿ ವರದಿಯಾಗಿದೆ. ಉಳಿದಂತೆ ಬೆಂಗಳೂರು ನಗರದಲ್ಲಿ ಓರ್ವ ಮತ್ತು ಬೀದರ್ ನ ಓರ್ವ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಮೈಸೂರಿನಲ್ಲಿ ಐದು ಪ್ರಕರಣಗಳು ದೃಢವಾಗಿದ್ದು, ಎಲ್ಲರೂ ಸೋಂಕಿತ ಸಂಖ್ಯೆ 88ರ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಇವರೆಲ್ಲರೂ ಫಾರ್ಮ ಕಂಪನಿಯ ಸಿಬ್ಬಂದಿಗಳಾಗಿದ್ದಾರೆ. ಇವರೆಲ್ಲರೂ ಮೈಸೂರಿನ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮತ್ತೆ 7 ಪಾಸಿಟಿವ್ ಪ್ರಕರಣ: ರಾಜ್ಯದಲ್ಲಿ 214ಕ್ಕೇರಿದ ಸೋಂಕಿತರ ಸಂಖ್ಯೆ Read More »

ಕರ್ನಾಟಕ

ದೇಶದಲ್ಲಿ 24 ಗಂಟೆಗಳಲ್ಲಿ 1,035 ಮಂದಿಯಲ್ಲಿ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 7,447ಕ್ಕೆ ಏರಿಕೆ

ಹೊಸದಿಲ್ಲಿ, ಎ11: ದೇಶದಲ್ಲಿ ಮಾರಕ ಕೊರೋನ ವೈರಸ್ ಆತಂಕ ತಂದೊಡ್ಡಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಅಗತ್ಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಏತನ್ಮಧ್ಯೆ, ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1,035 ಮಂದಿಯಲ್ಲಿ ಹೊಸದಾಗಿ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕು ಪೀಡಿತರ ಸಂಖ್ಯೆ 7,447ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 1035 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 40

ದೇಶದಲ್ಲಿ 24 ಗಂಟೆಗಳಲ್ಲಿ 1,035 ಮಂದಿಯಲ್ಲಿ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 7,447ಕ್ಕೆ ಏರಿಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತದಲ್ಲಿ ಈವರೆಗೆ ಎಷ್ಟು ಮಂದಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ: ವೈದ್ಯಕೀಯ ಸಂಶೋಧನಾ ಮಂಡಳಿ ಏನು ಹೇಳುತ್ತೆ?

ಹೊಸದಿಲ್ಲಿ, ಎ.11 : ದೇಶದಲ್ಲಿ ಮಾರಕ ಕೊರೋನ ಸೋಂಕು ತಲ್ಲಣ ಸೃಷ್ಟಿಸಿದ್ದು, ದಿನೇ ದಿನೇ ಸೋಂಕು ಪೀಡಿತರ ಸಂಖ್ಯೆ ವ್ಯಾಪಿಸುತ್ತಲೇ ಇದೆ. ಏತನ್ಮಧ್ಯೆ, ದೇಶಾದ್ಯಂತ ಏ.10ರವರೆಗೆ 1,61,330 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸ್ಪಷ್ಟಪಡಿಸಿದೆ. ಎ.10ರಂದು ರಾತ್ರಿ 9 ಗಂಟೆಯವರೆಗೆ 1, 47,034 ಮಂದಿಯಿಂದ ಸಂಗ್ರಹಿಸಲಾದ 1,61,330 ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ಕೊರೊನಾ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಕೋವಿಡ್-19 ಲಕ್ಷಣವಿರುವ ಎಲ್ಲ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಭಾರತದಲ್ಲಿ ಈವರೆಗೆ ಎಷ್ಟು ಮಂದಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ: ವೈದ್ಯಕೀಯ ಸಂಶೋಧನಾ ಮಂಡಳಿ ಏನು ಹೇಳುತ್ತೆ? Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹೆಚ್ಚಿದ ಕೊರೊನಾ ಭೀತಿ : ಮಂಡ್ಯದ ಹಲವು ಪ್ರದೇಶಗಳು ಸೀಲ್ ಡೌನ್

ಮಂಡ್ಯ, ಎ.11: ಮಾರಕ ಕೊರೋನ ಸೋಂಕು ರಾಜ್ಯಕ್ಕೆ ಕಂಟಕವಾಗಿ ಪರಿಣಮಿಸಿದ್ದು, ಜನತೆ ನಲುಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲೂ ಕೊರೋನ ಆತಂಕ ತಟ್ಟಿದೆ. ಜಿಲ್ಲೆಯಲ್ಲಿ ತಂಗಿದ್ದ ಐವರು ತಬ್ಲಿಘಿಗಳಲ್ಲಿ ಮಾರಕ ಕೊರೋನ ವೈರಸ್ ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಅಗತ್ಯ ಕ್ರಮ ಮತ್ತಷ್ಟು ಬಿಗಿ ಗೊಳಿಸಲಾಗಿದೆ. ಮಳವಳ್ಳಿಯಲ್ಲಿ ನಾಲ್ವರು ಧರ್ಮ ಗುರುಗಳ ಸಂಪರ್ಕದಲ್ಲಿದ್ದ ಜನರನ್ನು ಕ್ವಾರೆಂಟೈನ್ ಮಾಡಿದ್ದು, ಇಡೀ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಮಳವಳ್ಳಿಯ ಈದ್ಗಾ ಮೊಹಲ್ಲಾ, ಕೋಟೆ ಕಾಳಮ್ಮನ ಬೀದಿಯಲ್ಲಿ ಸೀಲ್ ಡೌನ್ ಮಾಡಲಾಗಿದೆ. ಇದರೊಂದಿಗೆ ಜನತೆಗೆ ಅಗತ್ಯ

ಹೆಚ್ಚಿದ ಕೊರೊನಾ ಭೀತಿ : ಮಂಡ್ಯದ ಹಲವು ಪ್ರದೇಶಗಳು ಸೀಲ್ ಡೌನ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಡುಕೋಣೆ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಆರೋಪ: ಫಾದರ್ ಸೇರಿ ಆರು ಜನರ ಮೇಲೆ ದೂರು

ಕುಂದಾಪುರ, ಎ.10: ಕೊರೋನ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವಿಕೆ ಹಿನ್ನಲೆಯಲ್ಲಿ ಧಾರ್ಮಿಕ ಸಂಸ್ಥೆಗಳಲ್ಲಿ ಜಾತ್ರೆ, ಸಭೆ ಸಮಾರಂಭಗಳು ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ನಿಷೇಧಿಸಿ ಹೊರಡಿಸಿರುವ ಆದೇಶ ಮಾಡಲಾಗಿತ್ತು. ಇದೀಗ ಆದೇಶ ಉಲ್ಲಂಘಿಸಿ, ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ನಾಡ ಗ್ರಾಮದ ಪಡುಕೋಣೆ ಸಂತ ಅಂತೋನಿ ಚರ್ಚ್‌ನಲ್ಲಿ ಜನರು ಸೇರಿ ಸಾಮೂಹಿಕ

ಪಡುಕೋಣೆ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಆರೋಪ: ಫಾದರ್ ಸೇರಿ ಆರು ಜನರ ಮೇಲೆ ದೂರು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ದೇಶದಲ್ಲಿ ಕೊರೋನ ವೈರಸ್‌ಗೆ 199 ಮಂದಿ ಬಲಿ: 6,500 ಗಡಿಯತ್ತ ಸೋಂಕಿತರ ಸಂಖ್ಯೆ

ಹೊಸದಿಲ್ಲಿ, ಎ.10: ದೇಶದಲ್ಲಿ ಕೊರೋನ ವೈರಸ್ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, ಕಳೆದ 24 ಗಂಟೆಗಳಲ್ಲಿ 33 ಮಂದಿ ವೈರಸ್‌ಗೆ ಬಲಿಯಾಗಿದ್ದು, ಇದರಂತೆ ಸಾವಿನ ಸಂಖ್ಯೆ 199ಕ್ಕೆ ಏರಿಕೆಯಾಗಿದೆ. ಅಲ್ಲದೆ, ಸೋಂಕಿತರ ಸಂಖ್ಯೆ 6,500 ಗಡಿಯತ್ತ ತಲುಪಿದೆ. ಕೊರೋನ ವೈರಸ್ ಹತ್ತಿಕ್ಕಲು ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ ದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡಿದೆ. ಆದರೂ, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವುದು, ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ

ದೇಶದಲ್ಲಿ ಕೊರೋನ ವೈರಸ್‌ಗೆ 199 ಮಂದಿ ಬಲಿ: 6,500 ಗಡಿಯತ್ತ ಸೋಂಕಿತರ ಸಂಖ್ಯೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top