news kadaba desk

ನಕಲಿ ಚಿನ್ನವಿಟ್ಟು ರೂ.58 ಲಕ್ಷದ ಆಭರಣ ಕಳವು ಮಾಡಿದ ಉದ್ಯೋಗಿ ಅರೆಸ್ಟ್…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.08.  ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ನಕಲಿ ಆಭರಣ ಇಟ್ಟು ಅಸಲಿ ಚಿನ್ನಾಭರಣ ಕಳವು ಮಾಡಿದ್ದ ಮಹಿಳಾ ಉದ್ಯೋಗಿಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಬಂಧಿತ ಆರೋಪಿಯನ್ನು ಉದ್ಯೋಗಿ ವಾಣಿ ವಾಡೇಕರ್ (22) ಎಂದು ಗುರುತಿಸಲಾಗಿದೆ. ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಗುರುತಿಸಲಾಗಿದೆ. ಬಂಧಿತ ವಾಣಿ ವಾಡೇಕರ್ 10 ದಿನಗಳ ಅಂತರದಲ್ಲಿ ಒಂದರ ಹಿಂದೆ ಒಂದರಂತೆ ಆಭರಣಗಳನ್ನು ಕಳವು ಮಾಡಿದ್ದು, ಅಂಗಡಿಯ ಮುಖ್ಯಸ್ಥರು ವಾರಕ್ಕೊಮ್ಮೆ ಲೆಕ್ಕ ಪರಿಶೋಧನೆ […]

ನಕಲಿ ಚಿನ್ನವಿಟ್ಟು ರೂ.58 ಲಕ್ಷದ ಆಭರಣ ಕಳವು ಮಾಡಿದ ಉದ್ಯೋಗಿ ಅರೆಸ್ಟ್…! Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಿಷಬ್ ಪಂತ್ ಗೆ ಯಶಸ್ವಿಯಾಗಿ ನಡೆದ ಮೊಣಕಾಲಿನ ಶಸ್ತ್ರಚಿಕಿತ್ಸೆ

 (ನ್ಯೂಸ್ ಕಡಬ) newskadaba.com ಮುಂಬೈ, ಜ.07.  ಇತ್ತೀಚಿಗೆ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕ್ರಿಕೆಟಿಗ ರಿಷಬ್ ಪಂತ್ ಗೆ ಶನಿವಾರ ಮುಂಬೈನಲ್ಲಿ ಯಶಸ್ವಿ ಮೊಣಕಾಲಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಕಳೆದ ವಾರ ನಡೆದ ಭೀಕರ ಕಾರು ಅಪಘಾತದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾದ ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಮುಂಬೈ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.  ಅಂಧೇರಿ ಪಶ್ಚಿಮದಲ್ಲಿರುವ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಸ್ಪೋರ್ಟ್ಸ್ ಮೆಡಿಸಿನ್ ಕೇಂದ್ರದ

ರಿಷಬ್ ಪಂತ್ ಗೆ ಯಶಸ್ವಿಯಾಗಿ ನಡೆದ ಮೊಣಕಾಲಿನ ಶಸ್ತ್ರಚಿಕಿತ್ಸೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತೆರೆದ ಬಾವಿಗೆ ಬಿದ್ದು ಎರಡು ಸಿಂಹಗಳು ಮೃತ್ಯು

(ನ್ಯೂಸ್ ಕಡಬ) newskadaba.com ಗುಜರಾತ್, ಜ.07.  ತೆರೆದ ಬಾವಿಗೆ 5 ವರ್ಷ ಗಂಡು ಸಿಂಹ ಮತ್ತು 9 ವರ್ಷದ ಹೆಣ್ಣು ಸಿಂಹ ಬಿದ್ದು ಮೃತಪಟ್ಟ ಘಟನೆ ಗುಜರಾತ್ ನ ಅಮ್ರೇಲಿ ಜಿಲ್ಲೆಯಲ್ಲಿ  ವರದಿಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಖಂಭ  ತಾಲೂಕಿನ ಕೊಟ್ಟಾ ಗ್ರಾಮದ ರೈತರೊಬ್ಬರಿಗೆ ಸೇರಿದ ಬಾವಿಗೆ ಸಿಂಹಗಳೆರಡು ಆಕಸ್ಮಿಕವಾಗಿ ಬಿದ್ದು ಮುಳುಗಿ ಮೃತಪಟ್ಟಿವೆ ಎಂದು ಗಿರ್ ಅರಣ್ಯ ಸಂರಕ್ಷಣಾಧಿಕಾರಿ ರಾಜ್ ದೀಪ್ ಸಿಂಗ್ ಜಾಲಾ ಹೇಳಿದರು .

ತೆರೆದ ಬಾವಿಗೆ ಬಿದ್ದು ಎರಡು ಸಿಂಹಗಳು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಮನಗರದಲ್ಲಿ ಅಯೋಧ್ಯೆ ಮಾದರಿಯಲ್ಲಿ ಮಂದಿರ ಅಭಿವೃದ್ಧಿ ಯೋಜನೆ ರೂಪಿಸಲು ಸೂಚನೆ ➤ ಸಿಎಂ ಬೊಮ್ಮಾಯಿ

 (ನ್ಯೂಸ್ ಕಡಬ) newskadaba.com ಬೆಳಗಾವಿ, ಜ.07.  ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮಾದರಿಯಲ್ಲಿಯೇ ರಾಜ್ಯದ ರಾಮದೇವರಬೆಟ್ಟದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ರಾಮನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ ಎಂದು ತಿಳಿದು ಬಂದಿದೆ. ಇಲಾಖೆಗೆ ಸೇರಿದ 19 ಎಕರೆ ಜಾಗದಲ್ಲಿ ಯೋಜನೆ ಅನುಷ್ಠಾನಗೊಳಿಸುವ ಕುರಿತು ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆ ಸಲ್ಲಿಸಲು ಅಭಿವೃದ್ಧಿ ಸಮಿತಿ ರಚಿಸಿ ಕಾರ್ಯಸಾಧ್ಯತೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಜಿಲ್ಲಾಧಿಕಾರಿ ಡಾ. ಅವಿನಾಶ್‌ ಮೆನನ್‌ ರಾಜೇಂದ್ರನ್‌ ಅವರಿಗೆ

ರಾಮನಗರದಲ್ಲಿ ಅಯೋಧ್ಯೆ ಮಾದರಿಯಲ್ಲಿ ಮಂದಿರ ಅಭಿವೃದ್ಧಿ ಯೋಜನೆ ರೂಪಿಸಲು ಸೂಚನೆ ➤ ಸಿಎಂ ಬೊಮ್ಮಾಯಿ Read More »

ಕರ್ನಾಟಕ

ಮಂಗಳೂರಿಗೆ ಆಗಮಿಸಿದ ಎಂ.ಎಸ್ ಧೋನಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 07. ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅವರು ಶನಿವಾರದಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.   ಇಂದು ಸಂಜೆ ಕಾಸರಗೋಡಿನಲ್ಲಿ ನಡೆಯಲಿರುವ ಧೋನಿ ಅವರ ಸ್ನೇಹಿತ ಡಾ.ಶಾಜೀರ್ ಗಫಾರ್ ಅವರ ತಂದೆ ಪ್ರೊ.ಕೆ ಕೆ ಅಬ್ದುಲ್ ಗಫಾರ್ ಅವರ ಆತ್ಮಕಥನ ಬಿಡುಗಡೆ ಸಮಾರಂಭದಲ್ಲಿ ಧೋನಿ ಭಾಗಯಾಗಲಿದ್ದಾರೆ ಎನ್ನಲಾಗಿದೆ.

ಮಂಗಳೂರಿಗೆ ಆಗಮಿಸಿದ ಎಂ.ಎಸ್ ಧೋನಿ Read More »

ಕರ್ನಾಟಕ

ಕಾಂಗ್ರೆಸ್ ಮುಖಂಡನ ಸಹೋದರನ ಮೇಲೆ ಗುಂಡಿನ ದಾಳಿ

 (ನ್ಯೂಸ್ ಕಡಬ) newskadaba.com ಕಲಬುಲಗಿ, ಜ.07.   ಆಳಂದ ಚೆಕ್ ಪೋಸ್ಟ್ ಹತ್ತಿರದಲ್ಲಿ ಶನಿವಾರ ಮಧ್ಯಾಹ್ನ ಜೀಪಿನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಕಲಬುರಗಿಯಲ್ಲಿ ವರದಿಯಾಗಿದೆ. ಗಾಯಗೊಂಡವರನ್ನು ಚನ್ನವೀರ ಎಂದು ಗುರುತಿಸಲಾಗಿದೆ. ಇವರು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸಂತೋಷ ಪಾಟೀಲ್ ದಣ್ಣೂರ ಅವರ ಸಹೋದರರಾಗಿದ್ದಾರೆ.  ಚೆನ್ನವೀರ ಪಾಟೀಲ್ ದಣ್ಣೂರ ಹಾಗೂ ಜೊತೆಗಿದ್ದ ಹುಡುಗನ ಮೇಲೆ ಫೈರಿಂಗ್ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬೊಲೆರೋ ವಾಹನದಲ್ಲಿ ಆಗಮಿಸಿದ ದುಷ್ಕರ್ಮಿಗಳು ಚನ್ನವೀರ ಕೈಗೆ

ಕಾಂಗ್ರೆಸ್ ಮುಖಂಡನ ಸಹೋದರನ ಮೇಲೆ ಗುಂಡಿನ ದಾಳಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕುಪ್ಪೆಪದವು ಬದ್ರಿಯಾ ಜುಮಾ ಮಸ್ಜಿದ್ ವಾರ್ಷಿಕ ಮಹಾಸಭೆ ➤ 2023- 2024 ಸಾಲಿನ ನೂತನ ಅಧ್ಯಕ್ಷರಾಗಿ ಶರೀಫ್, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.07.  ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆಪದವು ಇದರ ವಾರ್ಷಿಕ ಮಹಾಸಭೆಯು ಸ್ಥಳೀಯ ಖತೀಬರಾದ ಕೆ.ಎಚ್.ಯು. ಶಾಫಿ ಮದನಿ ಕರಾಯ ಉಸ್ತಾದ್ ರವರ ರೊಂದಿಗೆ ನಿಕಟ ಪೂರ್ವ ಆಧ್ಯಕ್ಷ ಅಬ್ದುಲ್  ರಹ್ಮಾನ್ ಬದ್ರಿಯಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. 2023-2024ನೇ ಸಾಲಿನ ನೂತನ ಆಧ್ಯಕ್ಷರಾಗಿ ಮೊಹಮ್ಮದ್ ಶರೀಫ್ ಕಜೆ, ಉಪಾಧ್ಯಕ್ಷರಾಗಿ N.A ಅಬ್ದುಲ್ ಲತೀಫ್ ಆಚಾರಿಜೋರಾ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ರಫೀಕ್ ಆಚಾರಿಜೋರ, ಜೊತೆ ಕಾರ್ಯದರ್ಶಿಗಯಾಗಿ ಮುಸ್ತಾಫಾ ಕಾಡಕ್ಕೇರಿ ,ಕೋಶಾಧಿಕಾರಿಯಾಗಿ ಇಬ್ರಾಹಿಂ ಹಾಜಿ ಆಯ್ಕೆಯಾದರು. ಸಮಿತಿಯ

ಕುಪ್ಪೆಪದವು ಬದ್ರಿಯಾ ಜುಮಾ ಮಸ್ಜಿದ್ ವಾರ್ಷಿಕ ಮಹಾಸಭೆ ➤ 2023- 2024 ಸಾಲಿನ ನೂತನ ಅಧ್ಯಕ್ಷರಾಗಿ ಶರೀಫ್, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಆಯ್ಕೆ Read More »

ಕರ್ನಾಟಕ

ಸಾಹಿತ್ಯ ಸಮ್ಮೇಳನಕ್ಕೆಂದು ಬಂದಿದ್ದ ಶಿಕ್ಷಕ ಹೃದಯಾಘಾತದಿಂದಾಗಿ ಮೃತ್ಯು

 (ನ್ಯೂಸ್ ಕಡಬ) newskadaba.com ಹಾವೇರಿ, ಜ.07.   86 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆಂದು ಬಂದ ಶಿಕ್ಷಕ ಹೃದಯಾಘಾತದಿಂದಾಗಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಯಲ್ಲಿ ವರದಿಯಾಗಿದೆ. ಮೃತ ಶಿಕ್ಷಕನನ್ನು ಸಂಗನಗೌಡರ (34) ಎಂದು ಗುರುತಿಸಲಾಗಿದೆ. ಹಾವೇರಿಯ ಅಶ್ವಿನಿ ನಗರದ ಗೆಳಯರ ಬಳಗ ಶಾಲೆಯಲ್ಲಿ ಶಿಕ್ಷಕ  ಸಂಗನಗೌಡರ ವಾಸ್ತವ್ಯ ಹೂಡಿದ್ದರು, ಹೃದಯಾಘಾತವಾದ  ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಅದ್ರೆ ಚಿಕಿತ್ಸೆ ಫಲಿಸದೆ ಶಿಕ್ಷಕ ಮೃತ ಪಟ್ಟಿದ್ದಾರೆ ಎನ್ನಲಾಗಿದೆ. ಮೃತ ಶಿಕ್ಷಕ ಸಂಗನಗೌಡರವರು ಮಂಡ್ಯ ಜಿಲ್ಲೆಯ ಕೆ.ಆರ್‌ ಪೇಟೆಯ ಮತ್ತಿಕೇರಿ

ಸಾಹಿತ್ಯ ಸಮ್ಮೇಳನಕ್ಕೆಂದು ಬಂದಿದ್ದ ಶಿಕ್ಷಕ ಹೃದಯಾಘಾತದಿಂದಾಗಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಾಜ್ಯದ ಐವರು ಪೊಲೀಸರಿಗೆ ಕೇಂದ್ರ ಗೃಹಮಂತ್ರಿ ವಿಶೇಷ ಕಾರ್ಯಚರಣೆ ಪದಕ ಪ್ರದಾನ

(ನ್ಯೂಸ್ ಕಡಬ) newskadaba.com ಕಾರವಾರ, ಜ.07.  ‘ಕೇಂದ್ರ ಗೃಹಮಂತ್ರಿ ವಿಶೇಷ ಕಾರ್ಯಚರಣೆ ಪದಕ’ಕ್ಕೆ ರಾಜ್ಯದ ಐವರು ಪೊಲೀಸರು ಭಾಜನರಾಗಿದ್ದಾರೆ ಎಂದು ವರದಿ ತಿಳಿಸಿದೆ. ಕೇಂದ್ರ ಗೃಹ ಮಂತ್ರಿಗಳ ವಿಶೇಷ ಕಾರ್ಯಾಚರಣೆ ಪದಕಕ್ಕೆ ಆಯ್ಕೆಯಾಗಿವರನ್ನು ಹೊನ್ನಾವರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎಸ್.ಆರ್.ಶ್ರೀಧರ್, ಸಿವಿಲ್ ಹೆಡ್ ಕಾನ್ಸ್‌ಟೇಬಲ್ ಕೃಷ್ಣ ಗೌಡ, ಬೆಂಗಳೂರು ಕಾಟನ್‌ಪೇಟೆ ಪಿಐ ಜಿ.ಬಾಲರಾಜು, ಬೆಂಗಳೂರಿನ ನಿವೃತ್ತ ಎಎಸ್‌ಐ ಎಂ.ಶೌಕತ್ ಅಲಿ, ಬೆಂಗಳೂರು ಐಎಸ್‌ಡಿ ಹೆಡ್ ಕಾನ್ಸ್ಟೇಬಲ್ ಪಿ.ಸೋಮಶೇಖರ  ಎಂದು ಗುರುತಿಸಲಾಗಿದೆ. ಅವರಿಗೆ  ಕೋರಮಂಗಲ ಪರೇಡ್ ಮೈದಾನದಲ್ಲಿ

ರಾಜ್ಯದ ಐವರು ಪೊಲೀಸರಿಗೆ ಕೇಂದ್ರ ಗೃಹಮಂತ್ರಿ ವಿಶೇಷ ಕಾರ್ಯಚರಣೆ ಪದಕ ಪ್ರದಾನ Read More »

ಕರ್ನಾಟಕ

ಪಿಕ್‌ನಿಕ್‌ಗೆ ಹೊರಟಿದ್ದ ವಿದ್ಯಾರ್ಥಿನಿಯರ ಟ್ರಾಕ್ಟರ್ ಪಲ್ಟಿ ➤ ಓರ್ವ ವಿದ್ಯಾರ್ಥಿನಿ ಮೃತ್ಯು, 30ಕ್ಕೂ ಹೆಚ್ಚು ಮಂದಿಗೆ ಗಾಯ

 (ನ್ಯೂಸ್ ಕಡಬ) newskadaba.com ಕಾರವಾರ, ಜ.07.   ಪ್ರವಾಸಕ್ಕೆಂದು ತೆರಳುತ್ತಿದ್ದ ವೇಳೆ  ಕೆಪಿಸಿ ಸರಕಾರಿ ಪಿಯುಸಿ ಕಾಲೇಜು ವಿದ್ಯಾರ್ಥಿನಿಯರ ಟ್ರಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದು, 30ಕ್ಕೂ ಅಧಿಕ ವಿದ್ಯಾರ್ಥಿನಿಯರು ಗಾಯಗೊಂಡಿರುವ ಘಟನೆ ಕಾರವಾರದ ಮಳಗಿಯ ಬಳಿ ವದರಿಯಾಗಿದೆ. ಕಾಲೇಜಿನ 40ಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರು ಹಾಗೂ 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಎರಡು ಟ್ರಾಕ್ಟರ್‌ನಲ್ಲಿ ಮಳಗಿ ಹತ್ತಿರದಲ್ಲಿರುವ ತಾಣವೊಂದನ್ನು ವೀಕ್ಷಣೆ ಮಾಡಲು ತೆರಳಿದ್ದರು. ಬಳಿಕ ಸಮೀಪದ ಹೋಟೆಲ್‌ವೊಂದರಲ್ಲಿ ಊಟ ಮುಗಿಸಿ ಮರಳಿ ಕಾಲೇಜಿಗೆ ಬರುತ್ತಿದ್ದ

ಪಿಕ್‌ನಿಕ್‌ಗೆ ಹೊರಟಿದ್ದ ವಿದ್ಯಾರ್ಥಿನಿಯರ ಟ್ರಾಕ್ಟರ್ ಪಲ್ಟಿ ➤ ಓರ್ವ ವಿದ್ಯಾರ್ಥಿನಿ ಮೃತ್ಯು, 30ಕ್ಕೂ ಹೆಚ್ಚು ಮಂದಿಗೆ ಗಾಯ Read More »

ಕರಾವಳಿ
Scroll to Top