ಸ್ಕಾಲರ್ ಶಿಪ್ ಮಂಜೂರಾತಿಯಲ್ಲಿ ವಿಳಂಬ ಮತ್ತು ಪಿ.ಹೆಚ್.ಡಿ, ಎಮ್.ಫಿಲ್ ಫೆಲೋಶಿಪ್ ಕಡಿತಗೊಳಿಸಿರುವ ವಿರುದ್ಧ ಸಿಎಫ್ಐ ವತಿಯಿಂದ “ಸ್ಕಾಲರ್ ಶಿಪ್ ಕೊಡಿ” ವಿದ್ಯಾರ್ಥಿ ಆಂದೋಲನದ ಘೋಷಣೆ
(ನ್ಯೂಸ್ ಕಡಬ) newskadaba.com ಪ್ರಸಕ್ತ ಶ್ಯಕ್ಷಣಿಕ ವರ್ಷದ ಶಾಲಾ ಕಾಲೇಜುಗಳು ಇನ್ನೇನು ಆರಂಭಗೊಳ್ಳಲಿದೆ. ಕೊರೋನಾದ ಪರಿಣಾಮದಿಂದ ಜನರ ಆರ್ಥಿಕ ಸ್ಥಿತಿಗತಿಯು ತೀರಾ ಹದಗೆಟ್ಟಿರುವುದರಿಂದ ಪೋಷಕರು ತಮ್ಮ ಮಕ್ಕಳ ಅಡ್ಮಿಷನ್ ಫೀಸ್ ಕಟ್ಟಲು ಪರದಾಡುತ್ತಿದ್ದಾರೆ. ಇನ್ನೊಂದು ಕಡೆ ಶಿಕ್ಷಣ ಸಂಸ್ಥೆಗಳು ಕೂಡಾ ಅಡ್ಮಿಶನ್ ಫೀಸ್ ಹೆಚ್ಚಿಸಿರುವುದಲ್ಲದೇ ಒಂದೇ ಕಂತಿನಲ್ಲಿ ಎಲ್ಲಾ ಶುಲ್ಕವನ್ನು ಕಟ್ಟಲು ಒತ್ತಾಯಿಸುವ ಮೂಲಕ ಪೋಷಕರಿಗೆ ಗಾಯದ ಮೇಲೆ ಬರೆ ಎಳೆದಿದ್ದಾರೆ. ಸರಕಾರವು ಕೂಡಾ ಈ ಬಗ್ಗೆ ಒಂದು ಮಾರ್ಗಸೂಚಿಯನ್ನು ತರಲು ವಿಫಲವಾಗಿರುವುದು ವಿಪರ್ಯಾಸವೇ ಸರಿ. ಸದ್ಯದ […]










