Ashitha Soodlu

ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಸಾರ್ವಜನಿಕರಿಂದ ಮನವಿ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 18. ಸಮರ್ಪಕ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಹಲವು ಮನೆಗಳ ಗೃಹೋಪಯೋಗಿ ವಿದ್ಯುತ್ ವಸ್ತುಗಳು ಹಾಳಾಗಿ, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಕೆಮ್ಮಿಂಜೆ ಗ್ರಾಮದ ಪುದುಕೋಳಿ ಪರಿಸರದ ನಾಗರಿಕರು ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಮೆಸ್ಕಾಂ ಇಂಜಿನಿಯರ್ ರಾಮಚಂದ್ರ ಅವರಿಗೆ ಮನವಿ ಮಾಡಿದ್ದಾರೆ.   ಪುತ್ತೂರು ಮೂಲೆಯಲ್ಲಿರುವ ವಿದ್ಯುತ್ ಪರಿವರ್ತಕದಿಂದ ವಿದ್ಯುತ್ ಸರಬರಾಜು ಆಗುತ್ತಿದ್ದು, ಕೆಲವು ದಿನಗಳಿಂದ ಅಸಮರ್ಪಕ ವಿದ್ಯುತ್‌ನಿಂದಾಗಿ ಹಲವು ಮನೆಗಳ […]

ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಸಾರ್ವಜನಿಕರಿಂದ ಮನವಿ Read More »

ಕರಾವಳಿ, ಕರ್ನಾಟಕ

ಮುಲ್ಕಿ: ಶಿಕ್ಷಕಿಗೆ ಕಳಪೆ ಬೆಡ್‌ಶೀಟ್ ಮಾರಿ, ಯುವಕರಿಂದ ಸಾವಿರಾರು ರೂ. ವಂಚನೆ

(ನ್ಯೂಸ್ ಕಡಬ) newskadaba.com ಮುಲ್ಕಿ ನ. 18: ಬಳ್ಕುಂಜೆ ಪ್ರದೇಶದಲ್ಲಿ ಇಬ್ಬರು ಬೆಡ್‌ಶೀಟ್ ಮಾರಿಕೊಂಡು ಟೀಚರ್ ಮನೆಗೆ ಬಂದು ಕಳಪೆ ಬೆಡ್‌ಶೀಟ್ ನೀಡಿ ಹಣ ವಂಚನೆ ಮಾಡಿದ ಘಟನೆ ನಡೆದಿದೆ. ಬಳ್ಕುಂಜೆಯ ತುಂಡುಪಡ್ಪು ಎಂಬಲ್ಲಿ ವಾಸವಿರುವ ಕರ್ನಿರೆ ಮೂಲದ ಟೀಚರ್ ಮನೆಗೆ ಆಗಮಿಸಿದ ಇಬ್ಬರು ಯುವಕರು ಬೆಡ್‌ಶೀಟ್ ಮಾರಾಟಕ್ಕೆಂದು ಬಂದು ವಂಚನೆ ಮಾಡಿದ್ದಾರೆ. ಯುವಕರು ಸೀದಾ ಮನೆಯೊಳಗೆ ಬಂದು ಟೀಚರ್ ಅವರ ಕಾಲಿಗೆ ನಮಸ್ಕರಿಸಿ ನಾವು ನಿಮ್ಮ ಶಿಷ್ಯಂದಿರು, ಕಟೀಲು ನೇಕಾರ ಸೌಧದಿಂದ ಬಂದಿದ್ದೇವೆ ಎಂದೆಲ್ಲ ಹೇಳಿ, ಕೂಡಲೇ

ಮುಲ್ಕಿ: ಶಿಕ್ಷಕಿಗೆ ಕಳಪೆ ಬೆಡ್‌ಶೀಟ್ ಮಾರಿ, ಯುವಕರಿಂದ ಸಾವಿರಾರು ರೂ. ವಂಚನೆ Read More »

ಕರಾವಳಿ

ಬಿಳಿನೆಲೆ : ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

(ನ್ಯೂಸ್ ಕಡಬ) newskadaba.com ಬಿಳಿನೆಲೆ, ನ. 18: ಬಿಳಿನೆಲೆಯಲ್ಲಿ ಕರೆಂಟ್ ಕಂಬಕ್ಕೆ ಯಾತ್ರಾರ್ಥಿಗಳ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಕಾರಿನ ಮೇಲೆ ಬಿದ್ದ ಘಟನೆ ಇಂದು ಬೆಳಗ್ಗೆ ನಡೆದಿದೆ.   ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಕರ ಕಾರು ನಿದ್ರೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಕಾರಿನ ಮೇಲೆ ಬಿದ್ದಿದೆ. ಸದ್ಯ ಕಾರಿನಲ್ಲಿ ಐವರಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  

ಬಿಳಿನೆಲೆ : ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು Read More »

ಕರಾವಳಿ

ಮಂಗಳೂರು: ಪುಸ್ತಕ ಬಿಡುಗಡೆ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 18.  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಹಾಗೂ ಮದಿಪು ಪ್ರಕಾಶನ, ಮಂಗಳ ಗಂಗೋತ್ರಿ ಇದರ ಆಶ್ರಯದಲ್ಲಿ ನವೆಂಬರ್ 21ರಂದು ಹಾವೇರಿ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡರ ಎರಡು ಕೃತಿಗಳಾದ “ಕೆಲೆಪು ಪೆರಡೆ ಕೆಲೆಪು” ತುಳು ಕವನ ಸಂಕಲನ ಹಾಗೂ “ಬೇಲಿಯೊಳಗಿನ ಬೆಳೆ” ಪ್ರಬಂಧ ಸಂಕಲನ ಬಿಡುಗಡೆ  ಸಮಾರಂಭವನ್ನು ಮಂಗಳೂರು  ವಿ.ವಿ. ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು ವಿ.ವಿ ಪ್ರಕಟಣೆಯು ತಿಳಿಸಿದೆ.

ಮಂಗಳೂರು: ಪುಸ್ತಕ ಬಿಡುಗಡೆ ಸಮಾರಂಭ Read More »

ಕರಾವಳಿ

ನೆಹರು ಯುವ ಕೇಂದ್ರ ಸಂಸ್ಥಾಪನಾ ದಿನಾಚರಣೆ ಹಾಗೂ ಜವಾಹರ್ ಲಾಲ್ ಜನ್ಮ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 18 ಜಿಲ್ಲಾಮಟ್ಟದ ನೆಹರು ಯುವ ಕೇಂದ್ರದ ಸಂಸ್ಥಾಪನಾ ದಿನಾಚರಣೆ ಹಾಗೂ ಜವಾಹರ್‍ ಲಾಲ್ ಜನ್ಮದಿನಾಚರಣೆಯನ್ನು ನಗರದ ತಾಲೂಕು ಕಚೇರಿ, ಎನ್.ಜಿ.ಓ ಹಾಲ್ ನಲ್ಲಿ  ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ರಾಮಚಂದ್ರ ಬೈಕಂಪಾಡಿ ಮಾತನಾಡಿ, ನೆಹರು ಯುವ ಕೇಂದ್ರ ಮಂಗಳೂರು ಜಿಲ್ಲೆಯ ಯುವಕ ಹಾಗೂ ಯುವತಿ ಮಂಡಲದ ಮೂಲಕ ಸಾಮಾಜಿಕ ಶೈಕ್ಷಣಿಕ ಹಾಗೂ ಅರೋಗ್ಯ ಪೂರ್ಣ ಸಮಾಜವನ್ನು ಕಟ್ಟುವಲ್ಲಿ ಅತ್ಯುತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ. ಯುವ ಜನರು ಸಾಮಾಜಿಕ ಮತ್ತು ಸಮುದಾಯದ ಕಾರ್ಯಕ್ರಮದ ಮೂಲಕ

ನೆಹರು ಯುವ ಕೇಂದ್ರ ಸಂಸ್ಥಾಪನಾ ದಿನಾಚರಣೆ ಹಾಗೂ ಜವಾಹರ್ ಲಾಲ್ ಜನ್ಮ ದಿನಾಚರಣೆ Read More »

ಕರಾವಳಿ, ಕರ್ನಾಟಕ

ರಾಮ ಮಂದಿರ ನಿರ್ಮಾಣಕ್ಕೆ ಮೂರು ವರ್ಷ ➤ ಪೇಜಾವರ ಶ್ರಿ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 18 ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲು ಸುಮಾರು ಮೂರುವರೆ ವರ್ಷ ಬೇಕಾಗಬಹುದು ಎಂದು ರಾಮ ಮಂದಿರ ನಿರ್ಮಾಣ ಟ್ರಸ್ಟ್‌ ನ ಟ್ರಸ್ಟಿ ಆಗಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.   ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂದಿರದ ಅಡಿಪಾಯದ ಸ್ಥಳದ ವಿಸ್ತರಣೆಗೆ ಟ್ರಸ್ಟ್‌ ನಿರ್ಧರಿಸಿದ್ದು, ಮಂದಿರದ ಜೊತೆಗೆ ಆ ಪ್ರದೇಶದ ಸಾಂಸ್ಕೃತಿಕ ಪುನರುತ್ಥಾನ ಕಾಮಗಾರಿಯನ್ನೂ ಕೈಗೊಳ್ಳಲಾಗುತ್ತದೆ ಎಂದರು. ಅಲ್ಲದೇ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಮಾರು 200 ಅಡಿ

ರಾಮ ಮಂದಿರ ನಿರ್ಮಾಣಕ್ಕೆ ಮೂರು ವರ್ಷ ➤ ಪೇಜಾವರ ಶ್ರಿ Read More »

ರಾಷ್ಟ್ರೀಯ ನ್ಯೂಸ್

ನಟಿ,ಬಿಜೆಪಿ ನಾಯಕಿ ಖುಷ್ಬೂ ಕಾರು ಅಪಘಾತ

(ನ್ಯೂಸ್ ಕಡಬ) newskadaba.com ಚೆನ್ನೈ  ನ. 18:  ಬಹುಭಾಷಾ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ತಮಿಳುನಾಡಿನ ಮೆಲ್ಮರುವಾತ್ತೂರ್ ಎಂಬಲ್ಲಿ ಈ ಘಟನೆ ನಡೆದಿದೆ. ಟ್ಯಾಂಕರ್ ವೊಂದು ಖುಷ್ಬೂ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಸಾತ್​ ಖುಷ್ಬೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾರು ಸಂಪೂರ್ಣ ಜಖಂಗೊಂಡಿದೆ.ಈ ಘಟನೆ ಕುರಿತು ಖುಶ್ಭೂ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.

ನಟಿ,ಬಿಜೆಪಿ ನಾಯಕಿ ಖುಷ್ಬೂ ಕಾರು ಅಪಘಾತ Read More »

ಕರಾವಳಿ

ಪಂಜಾಬ್ ಚುನಾವಣಾ ರಾಯಭಾರಿಯಾಗಿ ಸೋನು ಸೂದ್ ನೇಮಕ

(ನ್ಯೂಸ್ ಕಡಬ) newskadaba.com ನವದೆಹಲಿ  ನ. 18: ಕೊರೊನಾ ಲಾಕ್​ಡೌನ್​ ಘೋಷಣೆಯ ನಂತರ ಸಾವಿರಾರು ಬಡ ಜನರಿಗೆ, ವಿದ್ಯಾರ್ಥಿಗಳಿಗೆ ನೆರವಾಗಿರುವ ಬಹುಭಾಷಾ ನಟ ಸೋನು ಸೂದ್​ ಅವರನ್ನು ಚುನಾವಣಾ ಆಯೋಗ ಪಂಜಾಬ್ ರಾಜ್ಯದ ಚುನಾವಣಾ ರಾಯಭಾರಿಯಾಗಿ ನೇಮಕ ಮಾಡಿದೆ.   ಸೋನು ಸೂದ್​ ಲಾಕ್​ಡೌನ್ ಸಮಯದಲ್ಲಿ ನಾನಾ ಸ್ಥಳಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ತಮ್ಮ ತವರಿಗೆ ಮರಳಲು ಸಾರಿಗೆ ಸೌಲಭ್ಯಗಳನ್ನು ಒದಗಿಸಿದ್ದರು. ಕೃಷಿಕರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಸಮಾಜದ ಎಲ್ಲಾ ವರ್ಗದವರು ಅವರ ಕಾರ್ಯವನ್ನು ಮೆಚ್ಚುಗೆ

ಪಂಜಾಬ್ ಚುನಾವಣಾ ರಾಯಭಾರಿಯಾಗಿ ಸೋನು ಸೂದ್ ನೇಮಕ Read More »

ರಾಷ್ಟ್ರೀಯ ನ್ಯೂಸ್

ಪುತ್ತೂರು: ಆಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧೆ ➤ ಅಗ್ನಿಶಾಮಕ ದಳದಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 18:  ಕಳೆದ ದಿನ ಆರ್ಯಾಪು ಮರಿಕೆಯಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧೆಯೋರ್ವರನ್ನು ಪುತ್ತೂರು ಅಗ್ನಿ ಶಾಮಕ ದಳದವರು ರಕ್ಷಣೆ ಮಾಡಿದ ಘಟನೆ ನಡೆದಿದೆ.     ಬಾವಿಗೆ ಬಿದ್ದ ವೃದ್ಧೆಯನ್ನು ಆರ್ಯಾಪು ಮರಿಕೆ ನಿವಾಸಿ 90 ವರ್ಷ ಪ್ರಾಯದ ಸರಸ್ವತಿ ಎಂದು ಗುರುತಿಸಲಾಗಿದೆ. ಇವರು ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ನೀರು ತರಲೆಂದು ಹೋದವರು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ. ವಿಷಯ ಕೇಳಿದ ಕೂಡಲೇ ಪಕ್ಕದ ಮನೆಯವರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ.

ಪುತ್ತೂರು: ಆಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧೆ ➤ ಅಗ್ನಿಶಾಮಕ ದಳದಿಂದ ರಕ್ಷಣೆ Read More »

ಕರಾವಳಿ

ಹಳೇ ಕಟ್ಟಡದಲ್ಲಿ ಕೂಡಿ ಹಾಕಿ ಅಪ್ರಾಪ್ತೆಯ ಅತ್ಯಾಚಾರ

(ನ್ಯೂಸ್ ಕಡಬ) newskadaba.com ಕೋಲಾರ, ನ. 18. ಹಳೆಯ ಮನೆಯೊಂದರಲ್ಲಿ 13 ವರ್ಷದ ಬಾಲಕಿಯನ್ನು ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಕೋಲಾರ ಜಿಲ್ಲೆಯ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.   ಆರೋಪಿಗಳನ್ನು ಹಂಗಳ ಗ್ರಾಮದ ಹರೀಶ್, ರಘು, ಸುಹೇಲ್ ಮತ್ತು ಜಗದೀಶ್ ಎಂದು ಗುರುತಿಸಲಾಗಿದೆ. ರಾತ್ರಿ  ವೇಳೆಯಲ್ಲಿ ಬಾಲಕಿಯು ಮನೆಯಿಂದ ಹೊರಗಡೆ ಹೋಗಿದ್ದ ವೇಳೆ ಈ ನಾಲ್ವರು ಬಾಲಕಿಯನ್ನು ಅಪಹರಿಸಿ, ಹಳೆಯ ಮನೆಯೊಂದರಲ್ಲಿ ಕೂಡಿ ಹಾಕಿ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ಈ

ಹಳೇ ಕಟ್ಟಡದಲ್ಲಿ ಕೂಡಿ ಹಾಕಿ ಅಪ್ರಾಪ್ತೆಯ ಅತ್ಯಾಚಾರ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top