Ashitha Soodlu

ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆ ಕು.ಸ್ವಾತಿ ನರಿಮೊಗರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ

ನರಿಮೊಗರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಇವರು ಕಳೆದ ಮೇ ತಿಂಗಳಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕೆ ಯಲ್ಲಿ ಶ್ರೀ ಶಾರದಾ ಕಲಾ ಕೇಂದ್ರ ಭಕ್ತಕೋಡಿಯ ನೃತ್ಯ ಗುರು ವಿದ್ವಾನ್ ಗೋಪಾಲಕೃಷ  ವೀರಮಂಗಲ ಇವರ ಶಿಷ್ಯೆ ಕು.ಸ್ವಾತಿ ನರಿಮೊಗರು ಶೇ.೮೫ ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿರುತ್ತಾರೆ. ಸ.ಪ.ಪೂ. ಕಾಲೇಜು ಕೊಂಬೆಟ್ಟು ಇಲ್ಲಿ ಪ್ರಥಮ ಪಿ,ಯು.ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಗುರುಕುಲ ಸಂಗೀತ ಕಲಾಕೇಂದ್ರ ಪುರುಷರಕಟ್ಟೆಯಲ್ಲಿ ಸುಗಮ ಸಂಗೀತ ಅಭ್ಯಾಸ ಮಾಡುತ್ತಿರುತ್ತಾರೆ.ಜಿಲ್ಲಾ ಪ್ರಶಸ್ತಿ ಪುರಸ್ಕೃತ  ನರಿಮೊಗರು ಪ್ರಖ್ಯಾತಿ […]

ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆ ಕು.ಸ್ವಾತಿ ನರಿಮೊಗರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ Read More »

ಕರಾವಳಿ

ಓವರ್‌ಟೇಕ್ ಭರಾಟೆ: ಕೆಎಸ್‌ಆರ್‌ಟಿಸಿ ಬಸ್‌ – ಬೊಲೇರೋ ಢಿಕ್ಕಿ ► ಶಾಲಾ ವಿದ್ಯಾರ್ಥಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.19. ಓವರ್ ಟೇಕ್ ಮಾಡುವ ಭರದಲ್ಲಿ ಮಹೀಂದ್ರ ಬೊಲೇರೋ ವಾಹನವೊಂದು ಎದುರಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿಯಾದ ಘಟನೆ ಸೆ.19ರಂದು ಬೆಳಿಗ್ಗೆ ಮಾಣಿ-ಮೈಸೂರು ಹೆದ್ದಾರಿಯ ಕಾವು ಎಂಬಲ್ಲಿ ನಡೆದಿದೆ. ಸುಳ್ಯದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಮಹೀಂದ್ರ ಬೊಲೇರೋ(ಕೆಎ19ಡಿ2737) ವಾಹನ ಕಾವು ಬುಶ್ರಾ ಶಾಲೆಯ ಸಮೀಪ ಕಾರೊಂದನ್ನು ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್(ಕೆಎ21ಎಫ್0132)ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೊಲೇರೋ ನಜ್ಜುಗುಜ್ಜಾಗಿ ಬೊಲೇರೋದಲ್ಲಿದ್ದ ಬುಶ್ರಾ ಶಾಲಾ ವಿದ್ಯಾರ್ಥಿ ರಾಝಿಕ್(13.ವ) ಎಂಬವರಿಗೆ ಗಾಯವಾಗಿದೆ.

ಓವರ್‌ಟೇಕ್ ಭರಾಟೆ: ಕೆಎಸ್‌ಆರ್‌ಟಿಸಿ ಬಸ್‌ – ಬೊಲೇರೋ ಢಿಕ್ಕಿ ► ಶಾಲಾ ವಿದ್ಯಾರ್ಥಿಗೆ ಗಾಯ Read More »

ಕರಾವಳಿ, ಕರ್ನಾಟಕ

ಚೆನ್ನಾವರ : ಎಸ್.ಎಮ್.ಎ ಅಧ್ಯಕ್ಷ ಅರಿಯಡ್ಕ  ಅಬ್ದುಲ್ ರಹಿಮಾನ್ ಹಾಜಿಗೆ ಸಮ್ಮಾನ

ಸವಣೂರು : ಸುನ್ನೀ ಮೆನೇಜ್ಮೆಂಟ್ ಅಸೋಸಿಯೇಶನ್ (ಎಸ್ ಎಮ್ ಎ) ವಿಟ್ಲ ವಲಯ ಅಧ್ಯಕ್ಷರಾಗಿ ಆಯ್ಕೆಗೊಂಡ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕರವರನ್ನು ಎಸ್ ಎಮ್ ಎ ಬೈತಡ್ಕ ರಿಜಿನಲ್ ವತಿಯಿಂದ ಪಾಲ್ತಾಡಿ ಗ್ರಾಮದ ಚೆನ್ನಾವರ ಸಿರಾಜುಲ್ ಉಲೂಮ್ ಮದರಸ ಹಾಲ್ ನಲ್ಲಿ  ಸಮ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎಮ್ ಎ ಬೈತಡ್ಕ ರಿಜಿನಲ್ ಅಧ್ಯಕ್ಷ ಅಬ್ದುರ್ರಹ್ಮಾನ್ ನೆಲ್ಲಿಕಟ್ಟೆ ವಹಿಸಿದ್ದರು.ಅಬ್ದುಲ್ಲಾ ಅಹ್ಸನಿ ಮಾಡನ್ನೂರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ  ಚೆನ್ನಾವರ ಮುಹಿಯ್ಯುದ್ದಿನ್ ಜುಮಾ ಮಸೀದಿಯ ಜಮಾತ್ ಕಮಿಟಿ ಅಧ್ಯಕ್ಷ ಕರೀಮ್ ಹಾಜಿ,

ಚೆನ್ನಾವರ : ಎಸ್.ಎಮ್.ಎ ಅಧ್ಯಕ್ಷ ಅರಿಯಡ್ಕ  ಅಬ್ದುಲ್ ರಹಿಮಾನ್ ಹಾಜಿಗೆ ಸಮ್ಮಾನ Read More »

ಕರಾವಳಿ, ಕರ್ನಾಟಕ

ಸರ್ವೆಯ ವಿನುತಾ ಕೊಲೆ ಪ್ರಕರಣದಲ್ಲಿ ಸೈನೆಡ್ ಮೋಹನ್‌ಗೆ ಗಲ್ಲು ಶಿಕ್ಷೆ ವಿಧಿಸಿ’ ಸಂಪ್ಯ ಪೊಲೀಸರ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ಹೈಕೋರ್ಟ್

ಸವಣೂರು: ಸರ್ವೆಯ ವಿನುತಾರವರ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಸರಣಿ ಸ್ತ್ರೀ ಹಂತಕ ಸೈನೈಡ್ ಮೋಹನ್ ಕುಮಾರ್‌ಗೆ ಅಧೀನ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ಪ್ರಮಾಣವನ್ನು ಹೆಚ್ಚಿಸುವಂತೆ ಕೋರಿ ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ. ೨೦ಕ್ಕೂ ಅಧಿಕ ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಬಳಿಕ ದೈಹಿಕ ಸಂಪರ್ಕ ಬೆಳೆಸಿ ನಂತರ ಸೈನೆಡ್ ನೀಡಿ ಕೊಲೆ ಮಾಡಿ ಪರಾರಿಯಾಗುತ್ತಿದ್ದ ಪುತ್ತೂರು ತಾಲೂಕಿನ ವಿವಿಧ ಶಾಲೆಗಳಲ್ಲಿ ಶಿಕ್ಷಕನಾಗಿದ್ದ ಕನ್ಯಾನ ಮೂಲದ ಮೋಹನ್ ಕುಮಾರ್‌ಗೆ ಸರ್ವೆಯ

ಸರ್ವೆಯ ವಿನುತಾ ಕೊಲೆ ಪ್ರಕರಣದಲ್ಲಿ ಸೈನೆಡ್ ಮೋಹನ್‌ಗೆ ಗಲ್ಲು ಶಿಕ್ಷೆ ವಿಧಿಸಿ’ ಸಂಪ್ಯ ಪೊಲೀಸರ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ಹೈಕೋರ್ಟ್ Read More »

ಕರಾವಳಿ, ಕರ್ನಾಟಕ

ಸವಣೂರು : ಶಾರದೋತ್ಸವ ಆಮಂತ್ರಣ ಬಿಡುಗಡೆ

ಸವಣೂರು :ಇಲ್ಲಿನ ಶಾರದಾಂಬಾ ಸೇವಾ ಸಂಘದ ವತಿಯಿಂದ ಅ.18ರಂದು ವಿನಾಯಕ ಸಭಾಭವನದಲ್ಲಿ ನಡೆಯುವ ೧೪ನೇ  ವರ್ಷದ ಸಾರ್ವಜನಿಕ ಶ್ರೀಶಾರದೋತ್ಸವದ ಆಮಂತ್ರಣ ಬಿಡುಗಡೆ  ಸವಣೂರು ಪುದುಬೆಟ್ಟು ಚಂದ್ರನಾಥ ಬಸದಿಯಲ್ಲಿ ಸೆ.19ರಂದು ನಡೆಯಿತು. ಬಸದಿಯ ಅರ್ಚಕ ಶ್ರೇಯಾಂಸ ಕುಮಾರ್ ಇಂದ್ರ ಧಾರ್ಮಿಕ ವಿಽವಿಧಾನ ನೆರವೇರಿಸಿದರು. ಆಮಂತ್ರಣ ಬಿಡುಗಡೆ ಮಾಡಿದ ಶಾರದಾಂಬಾ ಸೇವಾ ಸಂಘದ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಮಾತನಾಡಿ, ಕಾರ್ಯಕ್ರಮದಲ್ಲಿ ಗಣಹೋಮ,ದೇವಿಯ ಪ್ರತಿಷ್ಟೆಯ ಬಳಿಕ ಭಜನ ಕಾರ್ಯಕ್ರಮ ಧಾರ್ಮಿಕ ಸಭೆ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಸ್ಕಿರಿ ಕುಡ್ಲ ತಂಡದ

ಸವಣೂರು : ಶಾರದೋತ್ಸವ ಆಮಂತ್ರಣ ಬಿಡುಗಡೆ Read More »

ಕರಾವಳಿ

ಔಷಧ ಸಿಂಪಡಣೆಗೆ ಸಿಗುತ್ತಿಲ್ಲ ಸುಣ್ಣ..!! ► ಕೊಳೆ ರೋಗದಿಂದಾಗಿ ಅಡಿಕೆಗೆ ಹಳದಿ ಬಣ್ಣ..!!

(ನ್ಯೂಸ್ ಕಡಬ) newskadaba.com ಸವಣೂರು, ಸೆ.16. ಕೊಳೆರೋಗ ಹೆಸರು ಕೇಳಿದರೇನೇ ಬೆಚ್ಚಿಬೀಳುತ್ತಾರೆ ಕರಾವಳಿಯ ಕೃಷಿಕರು. ಅಡಿಕೆಗೆ ಬರುವ ಅತ್ಯಂತ ಭಯಾನಕ ರೋಗದಲ್ಲಿ ಕೊಳೆರೋಗ ಒಂದಾಗಿದೆ. ಕೊಳೆರೋಗ ಬಾಧಿತ ಕೃಷಿಕರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕ ಸೆ.11. ಕೊನೆಯ ದಿನವಾಗಿದ್ದು, ಅವಧಿ ವಿಸ್ತರಿಸುವಂತೆ ಕೃಷಿಕರು ಒತ್ತಾಯಿಸಿದ್ದಾರೆ. ಅರ್ಜಿ ಸಲ್ಲಿಸಲು ಇನ್ನೂ ಹಲವು ಕೃಷಿಕರು ಬಾಕಿಯಾಗಿದ್ದು ಇದರಿಂದಾಗಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸುವಂತೆ ಕೃಷಿಕರು ಮನವಿ ಮಾಡಿದ್ದಾರೆ. ಸರಕಾರ ಸೇರಿದಂತೆ ವಿವಿಧ ಸಹಕಾರಿ ಸಂಘಗಳು, ರೈತಪರ ವಿಜ್ಞಾನಿಗಳು, ಚಿಂತಕರು ಕೊಳೆರೋಗದ

ಔಷಧ ಸಿಂಪಡಣೆಗೆ ಸಿಗುತ್ತಿಲ್ಲ ಸುಣ್ಣ..!! ► ಕೊಳೆ ರೋಗದಿಂದಾಗಿ ಅಡಿಕೆಗೆ ಹಳದಿ ಬಣ್ಣ..!! Read More »

ಕರಾವಳಿ

ಪುರುಷರಕಟ್ಟೆಯಲ್ಲಿ 18ನೇ ವರ್ಷದಸಾರ್ವಜನಿಕ ಗಣೇಶೋತ್ಸವ

ನರಿಮೊಗರು : ಇಲ್ಲಿನ ಪುರುಷರಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆ.೧೩ರಿಂದ ಸೆ.೧೫ರವರೆಗೆ ಪುರುಷರಕಟ್ಟೆಯ ಮಹಾಲಿಂಗೇಶ್ವರ ದೇವರ ಕಟ್ಟೆಯ ಎದುರು ನಡೆಯಲಿದೆ.

ಪುರುಷರಕಟ್ಟೆಯಲ್ಲಿ 18ನೇ ವರ್ಷದಸಾರ್ವಜನಿಕ ಗಣೇಶೋತ್ಸವ Read More »

ಕರಾವಳಿ

ಕಾಣಿಯೂರಿನಲ್ಲಿ  31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಕಾಣಿಯೂರು :ಇಲ್ಲಿನ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ವತಿಯಿಂದ 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಸೆ.13ಮತ್ತು ಸೆ.14 ರಂದು ನಡೆಯಿತು. ಸೆ.13ರಂದು ಬೆಳಿಗ್ಗೆ ಮಹಾಗಣಪತಿ ಪ್ರತಿಷ್ಠೆ ನಡೆದು ನಂತರ ಸಾರ್ವಜನಿಕ ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆ,  ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನದ ನಂತರ ಚುಕ್ಕಿ ರಂಗೋಲಿ ಸ್ಪರ್ಧೆ, ಗಣಪತಿ ದೇವರ ಚಿತ್ರ ಬಿಡಿಸುವ ಸ್ಪರ್ಧೆ, ಭಕ್ತಿ ಗೀತೆ ಸ್ಪರ್ಧೆ, ಚೀಟಿ ಎತ್ತಿ ಅಭಿನಯ ಮತ್ತು ಆಶುಬಾಷಣ ಸ್ಪರ್ಧೆ ನಡೆಯಲಿದೆ. ಸಂಜೆ ಭಜನಾ

ಕಾಣಿಯೂರಿನಲ್ಲಿ  31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ Read More »

ಕರಾವಳಿ

ಶಾಂತಿಮೊಗರು :  16ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಬೆಳಂದೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುದ್ಮಾರು ಇದರ ವತಿಯಿಂದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರದಲ್ಲಿ 16ನೇ ವರ್ಷದ ಶ್ರೀ ಗಣೇಶೋತ್ಸವವು ವಿಜ್ರಂಭಣೆಯಿಂದ ನಡೆಯಿತು. ಪುರೋಹಿತರಾದ ನರಸಿಂಹ ಪ್ರಸಾದ್ ಪಾಂಗಣ್ಣಾಯರು ವೈದಿಕ ಕಾರ್ಯ ನೆರವೇರಿಸಿದರು. ಪೂರ್ವಾಹ್ನ ಗಂಟೆ ೮ಕ್ಕೆ ಪಂಚಗವ್ಯ ಪುಣ್ಯಾಹ, ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ, ಗಣಹೋಮ, ಮಂಗಳಾರತಿ ನಡೆದು, ಬಳಿಕ ಶ್ರೀ ಶಾರದಾ ಭಜನಾ ಮಂಡಳಿ ಕೆಳಗಿನಕೇರಿ ಕೊಪ್ಪ ಹಾಗೂ ಶ್ರೀ ಸುಬ್ರಹ್ಮಣೇಶ್ವರ ಭಜನಾ ಮಂಡಳಿ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಶಾಂತಿಮೊಗರು :  16ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ Read More »

ಕರಾವಳಿ

ಸವಣೂರು; 36ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ 

ಸವಣೂರು,: ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಸವಣೂರು ವಿನಾಯಕ ಸಭಾಭವನದಲ್ಲಿ 36ನೇ ವರ್ಷದ ಶ್ರೀ ಗಣೇಶೋತ್ಸವವು ಸೆ.13 ಆರಂಭಗೊಂಡಿದ್ದು, ಸೆ.15ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಸೆ.13ರಂದು ಬೆಳಿಗ್ಗೆ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಧ್ವಜಾರೋಹಣ ಮಾಡಿದರು.ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉದ್ಯಮಿ ಎನ್.ಸುಂದರ ರೈ ಚಾಲನೆ ನೀಡಿದರು.ಈ ಸಂದರ್ಭ  ಸಮಿತಿ ಅಧ್ಯಕ್ಷ  ಶಿವರಾಮ ಗೌಡ ಮೆದು,ಕಾರ್ಯದರ್ಶಿ ಸುಧಾಕರ ರೈ ದೇವಸ್ಯ,ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ನಡುಬಲು,ರಾಘವ ಗೌಡ,ಕೋಶಾಽಕಾರಿ ರಾಮಕೃಷ್ಣ ಪ್ರಭು,ಗ್ರಾ.ಪಂ.ಸದಸ್ಯ ಸತೀಶ್ ಬಲ್ಯಾಯ,ಶ್ರವಣ ರಂಗ ಪ್ರತಿಷ್ಠಾನದ ಸಂಚಾಲಕ

ಸವಣೂರು; 36ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ  Read More »

ಕರಾವಳಿ
Scroll to Top