Ashitha Soodlu

ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆ : ಶಾಶ್ವತಿ ಸಚಿನ್ ಜೈನ್ ಜಿಲ್ಲೆಯಲ್ಲಿ ಪ್ರಥಮ

ಸವಣೂರು : ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ  ಪುಣ್ಚಪ್ಪಾಡಿಯ ಶಾಶ್ವತಿ ಸಚಿನ್ ಜೈನ್ ಜಿಲ್ಲೆಯಲ್ಲಿಯೇ ಹೆಚ್ಚು ಅಂಕಪಡೆದು  ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಮಂಗಳೂರು ಸನಾತನ ನಾಟ್ಯಾಲಯದ ವಿದುಷಿ ಶಾರದಾ ಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರಿಂದ ತರಬೇತು ಪಡೆದುಕೊಂಡಿದ್ದಾರೆ. ಎಂಎಸ್ಸಿ,ಮೆಥಮೆಟಿಕ್ಸ್,ಸಂಗೀತದಲ್ಲೂ ಸೀನಿಯರ್ ಪದವಿ ಪಡೆದುಕೊಂಡಿರುವ ಇವರು ಕೂಚುಪುಡಿ ನೃತ್ಯ ತರಬೇತಿಯನ್ನೂ ಪಡೆದುಕೊಂಡಿರುವ ಇವರು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಗಣಿತ ಉಪನ್ಯಾಸಕಿಯಾಗಿದ್ದಾರೆ. ಇವರು ಪುಣ್ಚಪ್ಪಾಡಿ […]

ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆ : ಶಾಶ್ವತಿ ಸಚಿನ್ ಜೈನ್ ಜಿಲ್ಲೆಯಲ್ಲಿ ಪ್ರಥಮ Read More »

ಕರಾವಳಿ, ಕರ್ನಾಟಕ

ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಕಾಣಿಯೂರು: ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ೨೦೧೭-೧೮ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ವಠಾರದಲ್ಲಿ ನಡೆಯಿತು. ಸಂಘವು ೨೦೧೭-೧೮ನೇ ಸಾಲಿನಲ್ಲಿ ೧೩,೧೦,೮೧೫.೭೧ ಲಕ್ಷ ರೂ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ ೨೦ ಡಿವಿಡೆಂಡ್ ನೀಡಲು ಸಂಘ ನಿರ್ಧರಿಸಿದೆ.  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ ಸಂಘವು ಕಾರ್ಯವ್ಯಾಪ್ತಿಯಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದ್ದು, ನಮ್ಮ ಆಡಳಿತ ಮಂಡಳಿಯು ಪ್ರಾಮಾಣಿಕವಾಗಿ ಸಂಘವನ್ನು ಮುನ್ನಡೆಸಿದ್ದೇವೆ ಎಂಬ ತೃಪ್ತಿ

ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ Read More »

ಕರಾವಳಿ

ಅ.1 : ಕೃಷಿಕರಿಗೆ ಬ್ಯಾಂಕ್ ನೊಟೀಸ್ ವಿರೋಽಸಿ ಸವಣೂರಿನಲ್ಲಿ  ಪ್ರತಿಭಟನೆ

ಸವಣೂರು: ರಾಜ್ಯ ಸರಕಾರ ಸಾಲಮನ್ನಾ ಮಾಡಿ ರೈತರನ್ನು ಸಾಲಮುಕ್ತರನ್ನಾಗಿಸುವ ಪ್ರಕ್ರಿಯೆಯಲ್ಲಿರುವಾಗ ಜಿಲ್ಲೆಯಾದ್ಯಂತ ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮರುಪಾವತಿಸಲು ಅಡಕೆ ಬೆಳೆಗಾರರಿಗೆ ಲೀಗಲ್ ನೊಟೀಸ್ ಕಳುಹಿಸಲಾಗುತ್ತಿದ್ದು ಇದನ್ನು ಖಂಡಿಸಿ  ಅ.1ರಂದು  ಸವಣೂರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ   ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೊಟೀಸ್ ಮೂಲಕ ರೈತರನ್ನು  ಬೆದರಿಸುವ ತಂತ್ರ ಅನುಸರಿಸಲಾಗುತ್ತಿದೆ.ಎಚ್ಚರಿಕೆ ನೀಡುವ ಸಲುವಾಗಿ ಸವಣೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅ.1 : ಕೃಷಿಕರಿಗೆ ಬ್ಯಾಂಕ್ ನೊಟೀಸ್ ವಿರೋಽಸಿ ಸವಣೂರಿನಲ್ಲಿ  ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ನರಿಮೊಗರು : ಯುವತಿ ಮಂಡಲದಿಂದ  ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ

ನರಿಮೊಗರು  ; ಇಲ್ಲಿನ ಪ್ರಖ್ಯಾತಿ ಯುವತಿ ಮಂಡಲ ಪುರುಷರಕಟ್ಟೆ ಇದರ ವತಿಯಿಂದ ತಾಲೂಕು ಯುವಜನ ಒಕ್ಕೂಟ ಪುತ್ತೂರು ಮತ್ತು ನೆಹರು ಯುವಕೇಂದ್ರ ಮಂಗಳೂರು ಇದರ  ಸಹಕಾರದೊಂದಿಗೆ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಸ್ವಚ್ಛತೆ ಮಾಡಲಾಯಿತು.   ಪುರುಷರಕಟ್ಟೆ-ಶಾಂತಿಗೋಡು ರಸ್ತೆಯ ಬದಿಯಲ್ಲಿ ಇದ್ದ ಪ್ಲಾಸ್ಟಿಕ್, ಕಾಗದ, ಕಸ ಕಡ್ಡಿಗಳನ್ನು ತೆಗೆದು ಶುಚಿಗೊಳಿಸಿ-ಎಲ್ಲೆಂದರಲ್ಲಿ ಕಸವನ್ನು ಎಸೆಯದಂತೆ, ಪ್ಲಾಸ್ಟಿಕ್ ನ ಬಳಕೆ ಕಡಿಮೆ ಮಾಡುವಂತೆ ವಿನಂತಿಸಲಾಯಿತು.   ಈ ಸಂದರ್ಭ ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕಿ ಕು.ಜಿಸ್ಮಿತಾ ಕೆ.ಆರ್ ಸಹಕರಿಸಿದರು,

ನರಿಮೊಗರು : ಯುವತಿ ಮಂಡಲದಿಂದ  ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ Read More »

ಕರಾವಳಿ

ಪುತ್ತೂರು ತಾಲೂಕು ಮಟ್ಟದ ಭಾಷಣ ಸ್ಪರ್ಧೆ

ಪುತ್ತೂರು : ರಾಷ್ಟ್ರೀಯತೆ ಯ ಚಿಂತನೆ ಎಲ್ಲರಲ್ಲೂ ಬರಬೇಕು.ಪಕ್ಷ ,ಸರಕಾರದ ಕುರಿತು ಚಿಂತನೆ ಮಾಡುವ ಬದಲು ದೇಶದ ಕುರಿತು ಚಿಂತನೆ ಮಾಡಬೇಕು. ಭಾರತ ದೇಶದ ಬೆಳವಣಿಗೆ ಯುವಜನರ ಕೈಯಲ್ಲಿದೆ.ಸಾಂಸ್ಕೃತಿಕ, ಆದ್ಯಾತ್ಮಿಕತೆ ಹಾಗೂ ಮಾನವ ಸಂಪನ್ಮೂಲ ದಲ್ಲಿ ಅಗ್ರ ಸ್ಥಾನಿಯಾಗಿದೆ.ದೇಶದ ಕುರಿತು ಒಳ್ಳೆಯ ಭಾವನೆ ಇರಬೇಕು. ದಶವನ್ನು ಗೌರವಿಸುವನೋಭಾವ ಬೆಳೆಸಬೇಕು ಎಂದು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಲಿಯೋ ನೊರೊನ್ಹಾ ಹೇಳಿದರು. ಅವರು  ಪುತ್ತೂರು ಸಂತ ಫಿಲೋಮಿನಾ ಪದವಿ ಕಾಲೇಜಿನಲ್ಲಿ  ಭಾರತ ಸರಕಾರದ ಯುವ ಕಾರ್ಯ ಮತ್ತು

ಪುತ್ತೂರು ತಾಲೂಕು ಮಟ್ಟದ ಭಾಷಣ ಸ್ಪರ್ಧೆ Read More »

ಕರಾವಳಿ

ಕೊಲ್ಯೊಟ್ಟು : ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜನ್ಮದಿನಾಚರಣೆ

ಕಾಣಿಯೂರು :  ನೆಹರು ಯುವ ಕೇಂದ್ರ ಮಂಗಳೂರು,ತಾಲೂಕು ಯುವಜನ ಒಕ್ಕೂಟ ಪುತ್ತೂರು ಹಾಗೂ ಪ್ರಮುಖಿ ಮಹಿಳಾ ಮಂಡಲ ಕೊಲ್ಯೊಟ್ಟು ನೆಲ್ಯಾಡಿ ಇದರ ವತಿಯಿಂದ ಕೊಲ್ಯೊಟ್ಟು ಅಂಗನವಾಡಿ  ಕೇಂದ್ರದಲ್ಲಿ ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜನ್ಮದಿನಾಚರಣೆ ಮಂಗಳವಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸಂಪಾವತಿ ಮಾತನಾಡಿ, ಕ್ರೀಯಾಶೀಲತೆ ಮತ್ತು ವೈಚಾರಿಕತೆಯಿಂದ ಬದುಕಿದ ಪಂಡಿತ್ ದೀನ್ ದಯಾಳ್ ಉಪಾದ್ಯಾಯರು ಯಾವುದೇ ಸ್ಥಾನವನ್ನು ಬಯಸದೇ ಸಾಮಾನ್ಯ ವ್ಯಕ್ತಿಯಾಗಿಯೇ ಅಸಾಮಾನ್ಯ ಸಾಧನೆ ತೋರಿದವರು.ಅವರ ಜೀವನ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.

ಕೊಲ್ಯೊಟ್ಟು : ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜನ್ಮದಿನಾಚರಣೆ Read More »

ಕರಾವಳಿ, ಕರ್ನಾಟಕ

ಭರತ ನಾಟ್ಯ ಮನಸ್ವಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣ

ಸವಣೂರು : : ಕರ್ನಾಟಕ ರಾಜ್ಯ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಲಿಯವರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ  ಪುತ್ತೂರು ದರ್ಬೆ ಶ್ರೀ ಶಾರದಾ ಕಲಾ ಕೇಂದ್ರದ ಸುದರ್ಶನ್ ಭಟ್ ಅವರ ಶಿಷ್ಯೆ ದೀಪ್ತಿಯವರ ಶಿಷ್ಯೆ ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ೬ನೇ ತರಗತಿ ವಿದ್ಯಾರ್ಥಿನಿ ಮನಸ್ವಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಸವಣೂರು ಗ್ರಾ.ಪಂ.ಲೆಕ್ಕ ಸಹಾಯಕ ಎ.ಮನ್ಮಥ ಮತ್ತು ಪ್ರಮೀಳಾ ದಂಪತಿಯ ಪುತ್ರಿ.

ಭರತ ನಾಟ್ಯ ಮನಸ್ವಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣ Read More »

ಕರಾವಳಿ, ಕರ್ನಾಟಕ

ಬಂಬಿಲ  ಹಾಲು ಉತ್ಪಾದಕರ ಸ.ಸಂ.ವಾರ್ಷಿಕ ಸಭೆ

ಸವಣೂರು :ಪಾಲ್ತಾಡಿ ಗ್ರಾಮದ  ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ  ಟಿ.ಕೆ.ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು ವರದಿ ಸಾಲಿನಲ್ಲಿ ೧ ಕೋಟಿ ೩೯ ಲಕ್ಷದ ೧೫೭ ರೂ ವ್ಯವಹಾರ ಮಾಡಿದ್ದು,ಸಂಘವು ಹಾಲು ಉತ್ಪಾದಕರಿಂದ ೪ ಲಕ್ಷದ  ೪೪೦ ರೂಗಳ ಹಾಲು ಖರೀದಿಸಿ ಒಕ್ಕೂಟಕ್ಕೆ  ೪೩ ಲಕ್ಷದ  ೫ ಸಾವಿರದ ೯೦೭ ರೂ.ಗಳ ಹಾಲನ್ನು ಹಾಗೂ ಸ್ಥಳೀಯರಿಗೆ ೩೬ ಸಾವಿರದ ೭೮೭ ರೂ ಗೆ ಹಾಗೂ ಸ್ಯಾಂಪಲ್ ಹಾಲನ್ನು ೧೯

ಬಂಬಿಲ  ಹಾಲು ಉತ್ಪಾದಕರ ಸ.ಸಂ.ವಾರ್ಷಿಕ ಸಭೆ Read More »

ಕರಾವಳಿ

ಕಾಣಿಯೂರು : ಶ್ರೀ ಲಕ್ಷ್ಮೀನರಸಿಂಹ ಯುವಕಮಂಡಲದಿಂದ ಪ್ರತಿಭಾ ಪುರಸ್ಕಾರ

ಕಾಣಿಯೂರು : ಇಲ್ಲಿನ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆದ ೩೧ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತೀವರ್ಷದಂತೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ೨೦೧೭-೧೮ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಸರಕಾರಿ ಪದವಿ ಪೂರ್ವ ಕಾಲೇಜು ಕಾಣಿಯೂರು ಇಲ್ಲಿನ ವಿದ್ಯಾರ್ಥಿ ಚರಣ್ ಕುಮಾರ್ ಎಂ. ಹಾಗೂ ದ್ವಿತೀಯ ಸ್ಥಾನ ಪಡೆದ ಹರ್ಷಿತಾ ಕೆ.ಎಸ್. ಮತ್ತು ೭ ನೇ ತರಗತಿಯ ಅತ್ಯಽಕ ಅಂಕ

ಕಾಣಿಯೂರು : ಶ್ರೀ ಲಕ್ಷ್ಮೀನರಸಿಂಹ ಯುವಕಮಂಡಲದಿಂದ ಪ್ರತಿಭಾ ಪುರಸ್ಕಾರ Read More »

ಕರಾವಳಿ, ಕರ್ನಾಟಕ

ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆ  ಕು.ಕುಶಿತಾ.ಕೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ

ನರಿಮೊಗರು: ಕರ್ನಾಟಕ ಪೌಢಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಇವರು ಕಳೆದ ಮೇ ತಿಂಗಳಿನಲ್ಲಿ ನಡೆಸಿದ ಭರತನಾಟ್ಯ “ಜೂನಿಯರ್ ಗ್ರೇಡ್ ಪರೀಕೆ”ಯಲ್ಲಿ ಶ್ರೀ ಶಾರದಾ ಕಲಾ ಕೇಂದ್ರ ಭಕ್ತಕೋಡಿಯ ನೃತ್ಯ ಗುರು ವಿದ್ವಾನ್ ಗೋಪಾಲಕೃಷ  ವೀರಮಂಗಲ ಇವರ ಶಿಷ್ಯೆ ಕು.ಕುಶಿತಾ.ಕೆ ಶೇ.೯೦ ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿರುತ್ತಾರೆ. ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಇಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಗುರುಕುಲ ಸಂಗೀತ ಕಲಾಕೇಂದ್ರ ಪುರುಷರಕಟ್ಟೆಯಲ್ಲಿ ಸುಗಮ ಸಂಗೀತ ಅಭ್ಯಾಸ ಮಾಡುತ್ತಿರುತ್ತಾರೆ. ಹಾಗೆಯೇ ಜಿಲ್ಲಾ ಪ್ರಶಸ್ತಿ ಪುರಸ್ಕೃತ  ನರಿಮೊಗರು

ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆ  ಕು.ಕುಶಿತಾ.ಕೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ Read More »

ಕರಾವಳಿ
Scroll to Top