Ashitha Soodlu

ಪಂಜ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ➤ ಕಾರಿನಲ್ಲಿದ್ದವರು ಭಾರಿ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com.ಪಂಜ,ಆ.14:  ಇಲ್ಲಿನ ನೂತನ ಸಂತೆ ಮಾರುಕಟ್ಟೆಯ ಎದುರು ಮುಖ್ಯ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದು ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ  ಗುರುವಾರ ನಡೆದಿದೆ. ಕಾರು ವಿದ್ಯುತ್‌ ಕಂಬಕ್ಕೆ ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಮುರಿದಿದ್ದು ಕಾರು ಜಖಂಗೊಂಡಿದೆ.ಬಿಪಿನ್ ಜಾಕೆ ಎಂಬವರಿಗೆ ಸೇರಿದ ಕಾರಾಗಿದ್ದು ಅಪಘಾ್ತದಲ್ಲಿ ಕಾರಿನಲ್ಲಿದ್ದವರೆಲ್ಲರೂ  ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ, ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ಅಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗಿದೆ ದುರಸ್ತಿಗೆಂದು ವಿದ್ಯುತ್ ಸ್ಥಗಿತಗೊಳಿಸಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ಪಂಜ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ➤ ಕಾರಿನಲ್ಲಿದ್ದವರು ಭಾರಿ ಅಪಾಯದಿಂದ ಪಾರು Read More »

ಕರಾವಳಿ

ಅತ್ಯಾಚಾರಗೈದು ಅಪ್ರಾಪ್ತೆಯ ಗರ್ಭಿಣಿಯನ್ನಾಗಿಸಿದ ಆರೋಪ ➤ ಆರೋಪಿ ವಿರುದ್ಧ ಪೊಕ್ಸೋ ಕಾಯ್ದೆಯಡಿ ಕೇಸು ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಆ,14:  ಅತ್ಯಾಚಾರ ಎಸಗಿ ಅಪ್ರಾಪ್ತೆಯೊಬ್ಬಳನ್ನು ಗರ್ಭಿಣಿಯಾಗಿಸಿದ ಘಟನೆ ಬಡಗನ್ನೂರು ಎಂಬಲ್ಲಿ ನಡೆದಿದ್ದೂ ಆರೋಪಿಯನ್ನು ಬಂಧಿಸಲಾಗಿದೆ. ಬಡಗನ್ನೂರು ಗ್ರಾಮದ ಹರೀಶ್ ಎಂಬಾತ ಬಂಧಿತ ಆರೋಪಿ.   ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ. ವಿವಾಹವಾಗುವುದಾಗಿ ನಂಬಿಸಿ ಈತ ಆಕೆಯ ಮೇಲೆ ಬಲತ್ಕಾರ ನಡೆಸಿದರಿಂದ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಆರೋಪ ವ್ಯಕ್ತವಾಗಿದೆ. ಸಂತ್ರಸ್ತ ಬಾಲಕಿಯ ತಾಯಿ ಮತ್ತು ಆಶಾ ಕಾರ್ಯಕರ್ತೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಆರೋಪಿ ಹರೀಶ್ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ

ಅತ್ಯಾಚಾರಗೈದು ಅಪ್ರಾಪ್ತೆಯ ಗರ್ಭಿಣಿಯನ್ನಾಗಿಸಿದ ಆರೋಪ ➤ ಆರೋಪಿ ವಿರುದ್ಧ ಪೊಕ್ಸೋ ಕಾಯ್ದೆಯಡಿ ಕೇಸು ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು ವಿ.ವಿ ವ್ಯಾಪ್ತಿಯ ಪದವಿ ಮತ್ತು ಸ್ನಾತಕೋತ್ತರ ಪದವಿಯ ಪರೀಕ್ಷೆಗೆ ಡೇಟ್ ಫಿಕ್ಸ್

(ನ್ಯೂಸ್ ಕಡಬ) newskadaba.com.ಮಂಗಳೂರು,ಆ.14:  ಸರ್ಕಾರ ಮತ್ತು ಯುಜಿಸಿ ನಿರ್ದೇಶನ ಪ್ರಕಾರ ರಚಿಸಲಾದ ಮಾರ್ಗಸೂಚಿ ಅನ್ವಯ ಮಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿಯ 2019-20ನೇ ಸಾಲಿನ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಸೆ.16ರಿಂದ 30ರೊಳಗೆ ನಡೆಸಲಾಗುವುದು ಎಂದು ಕುಲಪತಿ ಪ್ರೊ.ಪಿ.ಯಸ್.ಯಡಪಡಿತ್ತಾಯ ತಿಳಿಸಿದ್ದಾರೆ. ಪರೀಕ್ಷೆಗೂ ಮೊದಲು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಿದ್ಧಪಡಿಸಲು ಅನುಕೂಲವಾಗುವಂತೆ ಸೆ.1ರಿಂದ 12ರ ತನಕ ಆನ್‌ಲೈನ್/ ಆಫ್‌ಲೈನ್ ತರಗತಿಗಳನ್ನು ನಡೆಸಲು ಅವಕಾಶ ಒದಗಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಇದುವರೆಗೆ ಶುಲ್ಕ ಪಾವತಿಸದ ಮತ್ತು ಪರೀಕ್ಷೆ ನೋಂದಣಿ

ಮಂಗಳೂರು ವಿ.ವಿ ವ್ಯಾಪ್ತಿಯ ಪದವಿ ಮತ್ತು ಸ್ನಾತಕೋತ್ತರ ಪದವಿಯ ಪರೀಕ್ಷೆಗೆ ಡೇಟ್ ಫಿಕ್ಸ್ Read More »

ಕರ್ನಾಟಕ

74ನೇ ಸ್ವಾತಂತ್ರ್ಯೋತ್ಸವ ➤ ದೆಹಲಿ ಕೆಂಪುಕೋಟೆಯಲ್ಲಿ ಬಿಗಿ ಭದ್ರತೆ

(ನ್ಯೂಸ್ ಕಡಬ) newskadaba.com ನವದೆಹಲಿ, ಆ,14:  74ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ದೆಹಲಿಯ ಕೆಂಪುಕೋಟೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅಂತರ ಕಾಯ್ದುಕೊಳ್ಳುವ ನಿಯಮ ಕಡ್ಡಾಯವಾಗಿ ಪಾಲಿಸಬೇಕಿದೆ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.   ಎನ್‌ಎಸ್‌ಜಿ ಸ್ನೈಪರ್‌ಗಳು, ವಿಶೇಷ ಭದ್ರತಾ ಕಮಾಂಡೊಗಳನ್ನು ಕೆಂಪುಕೋಟೆ ಸುತ್ತ ನಿಯೋಜಿಸಲಾಗುತ್ತಿದೆ. ಕೆಂಪುಕೋಟೆ ಸುತ್ತ 300 ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಅವುಗಳನ್ನು ಆಗಾಗ ಪರಿಶೀಲಿಸಲಾಗುತ್ತದೆ. ಸುಮಾರು 4,000 ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸಿಕೊಂಡೇ ಕಾರ್ಯನಿರ್ವಹಿಸಲಿದ್ದಾರೆ

74ನೇ ಸ್ವಾತಂತ್ರ್ಯೋತ್ಸವ ➤ ದೆಹಲಿ ಕೆಂಪುಕೋಟೆಯಲ್ಲಿ ಬಿಗಿ ಭದ್ರತೆ Read More »

ರಾಷ್ಟ್ರೀಯ ನ್ಯೂಸ್

ಪಾಣೆಮಂಗಳೂರು ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್ ನಿಂದ ಬೆಂಕಿಹಾಹುತಿಯಾದ ಬೇಕರಿ

(ನ್ಯೂಸ್ ಕಡಬ) newskadaba.com.ಬಂಟ್ವಾಳ,ಆ.14:  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೇಕರಿಯೊಂದು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಕಳೆದ ರಾತ್ರಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರುನಲ್ಲಿ ನಡೆದಿದೆ. ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿರುವ ರಾಜೇಶ್ ಎಂಬವರಿಗೆ ಸೇರಿದ ವಿಷ್ಣು ಬೇಕರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣ ಸುಟ್ಟು ಭಸ್ಮವಾಗಿದೆ.ರಾತ್ರಿ ಅಂಗಡಿ ಬಾಗಿಲು ಹಾಕಿ ಹೋದ ಬಳಿಕ ಮಧ್ಯ ರಾತ್ರಿ ವೇಳೆ ಈ ಘಟನೆ ನಡೆದಿದೆ. ಘಟನೆಯಲ್ಲಿ 10 ಲಕ್ಷ ರೂ.ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಕೆಲ ಸಮಯಗಳ

ಪಾಣೆಮಂಗಳೂರು ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್ ನಿಂದ ಬೆಂಕಿಹಾಹುತಿಯಾದ ಬೇಕರಿ Read More »

ಕರಾವಳಿ

ವಿವಿಧ ನಿಗಮಗಳ ಸೌಲಭ್ಯ ➤ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com  ಮಂಗಳೂರು, ಆ. 13, ಮಡಿವಾಳ, ಸವಿತಾ ಸಮಾಜ, ಉಪ್ಪಾರ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಆಭಿವೃದ್ದಿ ನಿಗಮಗಳ 2020-21 ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕವನ್ನು ನಿಗಮ ವಿಸ್ತರಿಸಿರುತ್ತದೆ. ಅರ್ಜಿ ಸಲ್ಲಿಸಲು ವಿಸ್ತರಿಸಿದ ಕೊನೆಯ ದಿನಾಂಕಗಳು ಇಂತಿವೆ: ಮಡಿವಾಳ ಅಭಿವೃದ್ಧಿ ನಿಗಮ – ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್ 31., ಸವಿತಾ ಸಮಾಜ ನಿಗಮ – ಅರ್ಜಿ ಸಲ್ಲಿಸಲು ಕೊನೆಯ ದಿನ ಸಪ್ಟೆಂಬರ್ 3., ಉಪ್ಪಾರ ನಿಗಮ

ವಿವಿಧ ನಿಗಮಗಳ ಸೌಲಭ್ಯ ➤ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ Read More »

ಕರಾವಳಿ

ಶಂಕು ಹುಳುಗಳು – ನಿರ್ವಹಣೆ ಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು ಆ. 13,  ಪ್ರಾಣಿ ಪ್ರಪಂಚದ ಕೀಟಗಳ ನಂತರ ಅತೀ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುವ ಶಂಕು ಹುಳುಗಳು ಮಣ್ಣು ಹಾಗೂ ನೀರಿನಲ್ಲಿ ವಾಸವಾಗಿರುತ್ತವೆ. ತರಕಾರಿ, ನೆಡುತೋಪು ಬೆಳೆಗಳು, ಅರಣ್ಯ ಹಾಗೂ ಹೊಲದ ಬೆಳೆಗಳನ್ನು ತಿಂದು ನಾಶ ಮಾಡುತ್ತಿರುತ್ತವೆ. ಈ ಹುಳುವಿನ ಚಟುವಟಿಕೆ ಅಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳುಗಳಲ್ಲಿ ಹೆಚ್ಚಿರುತ್ತದೆ. ಹಗಲಿನ ವೇಳೆಯಲ್ಲಿ ಎಲೆ ಮತ್ತು ಕಲ್ಲುಗಳ ಕೆಳಗೆ ಅವಿತುಕೊಳ್ಳುತ್ತವೆ. ರಾತ್ರಿಯ ವೇಳೆ ಫ್ರೌಢಾವಸ್ಥೆಯ ಹುಳುಗಳು ಹೊರಬಂದು ಹಣ್ಣು ಮತ್ತು ತರಕಾರಿಗಳನ್ನು ತಿಂದು ಹಾನಿ

ಶಂಕು ಹುಳುಗಳು – ನಿರ್ವಹಣೆ ಕ್ರಮ Read More »

ಕರಾವಳಿ, ಕರ್ನಾಟಕ

ಕಾನೂನು ಪ್ರಾಧಿಕಾರ : ಸ್ವಯಂ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com  ಮಂಗಳೂರು, ಆ. 13,  ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಯೊಜನೆ ಕಾರ್ಯಕ್ರಮಗಳು ಹಾಗೂ ಇತರೆ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅರೆಕಾಲಿಕ ಸ್ವಯಂ ಸೇವಕರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸ್ವಯಂ ಸೇವಕರು ಸಾಮಾಜಿಕ ಚಿಂತನೆ ಹಾಗೂ ಸಮಾಜಸೇವೆ ಮಾಡಬೇಕು ಎಂಬ ಇಚ್ಛೆಯುಳ್ಳ ವಿದ್ಯಾವಂತ ಯುವಕರು ಹಾಗೂ ಯುವತಿಯರು, ರಾಜಕೀಯೇತರ ಸೇವಾ ಮನೋಭಾವವುಳ್ಳವರು, ಸರ್ಕಾರೇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಿವೃತ್ತ ಶಿಕ್ಷಕರು, ಸಕಾರಿ ನೌಕರರು, ಅಂಗನವಾಡಿ ಆಶಾ

ಕಾನೂನು ಪ್ರಾಧಿಕಾರ : ಸ್ವಯಂ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಎಸ್.ಎಸ್.ಎಲ್.ಸಿ : ತುಳು ಭಾಷೆಯಲ್ಲಿ ಉತ್ತಮ ಸಾಧನೆ ದಾಖಲಿಸಿದ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com  ಮಂಗಳೂರು, ಆ. 13,  2019-20ರ ಶೈಕ್ಷಣಿಕ ಸಾಲಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 42 ಶಾಲೆಗಳಲ್ಲಿ 6, 7,  8, 9 ಮತ್ತು 10ನೇ ತರಗತಿಗಳಲ್ಲಿ ಒಟ್ಟು 2568 ವಿದ್ಯಾರ್ಥಿಗಳು ತುಳುವನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡಿರುತ್ತಾರೆ. ಈ ಪೈಕಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ 39 ಶಾಲೆಗಳ ಒಟ್ಟು 924 ವಿದ್ಯಾರ್ಥಿಗಳಲ್ಲಿ 917 ವಿದ್ಯಾರ್ಥಿಗಳು ಪಾಸಾಗಿದ್ದು ಶೇಕಡಾ 99% ಫಲಿತಾಂಶ ದಾಖಲಿಸಿದ್ದಾರೆ. 234 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದಿರುತ್ತಾರೆ.

ಎಸ್.ಎಸ್.ಎಲ್.ಸಿ : ತುಳು ಭಾಷೆಯಲ್ಲಿ ಉತ್ತಮ ಸಾಧನೆ ದಾಖಲಿಸಿದ ವಿದ್ಯಾರ್ಥಿಗಳು Read More »

ಕರಾವಳಿ, ಕರ್ನಾಟಕ

ಡಿ.ಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳಿಗೆ ದಾಖಲಾತಿ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.13, ಮಂಗಳೂರು ಆ. 13, 2020-21ನೇ ಸಾಲಿನಲ್ಲಿ ಡಿ.ಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ ಮತ್ತು ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಅರ್ಜಿ ಆಹ್ವಾನಿಸಲಾಗಿರುತ್ತದೆ. ಅರ್ಹ ಅಭ್ಯರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‍ಸೈಟ್ www.schooleducation.kar.nic.inನಲ್ಲಿರುವ ದಾಖಲಾತಿ ಅರ್ಜಿಯನ್ನು ಮುದ್ರಿಸಿಕೊಂಡು ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಿಸಿದ ಡಯಟ್‍ಗೆ ಸಲ್ಲಿಸಬೇಕು. ದಾಖಲಾತಿ ಅರ್ಜಿಗಳನ್ನು ಆಗಸ್ಟ್ 5

ಡಿ.ಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳಿಗೆ ದಾಖಲಾತಿ ಆರಂಭ Read More »

ಕರಾವಳಿ, ಕರ್ನಾಟಕ
Scroll to Top